ಹಣಕಾಸು ಸಚಿವಾಲಯ
ಅನಿಶ್ಚಿತ ಜಾಗತಿಕ ಭೌಗೋಳಿಕ ಸನ್ನಿವೇಶದ ಹೊರತಾಗಿಯೂ ಭಾರತದ ವಿತ್ತೀಯ ಮತ್ತು ಹಣಕಾಸು ವಲಯಗಳು ಬಲಿಷ್ಠವಾಗಿವೆ: ಆರ್ಥಿಕ ಸಮೀಕ್ಷೆ 2025-26
ಸಾಮಾಜಿಕ ಗುರಿಗಳೊಂದಿಗೆ ಸ್ಥೂಲ ಆರ್ಥಿಕ ಉದ್ದೇಶಗಳನ್ನು ಸಮತೋಲನಗೊಳಿಸುವುದರಿಂದ, ಭಾರತದ ವಿತ್ತೀಯ ನೀತಿಯು ಬೆಲೆ ಸ್ಥಿರತೆ ಮತ್ತು ಆರ್ಥಿಕ ಬಲವನ್ನು ಕಾಯ್ದುಕೊಂಡು ಅಂತರ್ಗತ ಬೆಳವಣಿಗೆಯನ್ನು ಉತ್ತೇಜಿಸುತ್ತದೆ
ಆರ್‌ಬಿಐ ನ ಚುರುಕಾದ ನಿರ್ವಹಣೆಯು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾಕಷ್ಟು ದ್ರವ್ಯತೆ ಖಚಿತಪಡಿಸಿ, ಆರ್ಥಿಕತೆಯ ಉತ್ಪಾದಕ ಅವಶ್ಯಕತೆಗಳನ್ನು ಪೂರೈಸುತ್ತದೆ
प्रविष्टि तिथि:
29 JAN 2026 2:12PM by PIB Bengaluru
ಹೆಚ್ಚಿದ ಜಾಗತಿಕ ಅನಿಶ್ಚಿತತೆ, ಭೌಗೋಳಿಕ ರಾಜಕೀಯ ಸನ್ನಿವೇಶ ಮತ್ತು ತ್ವರಿತ ತಾಂತ್ರಿಕ ಪರಿವರ್ತನೆಯ ಈ ಸಂದರ್ಭದಲ್ಲಿ, ಭಾರತದ ವಿತ್ತೀಯ ಮತ್ತು ಹಣಕಾಸು ವಲಯಗಳು ಆರ್ಥಿಕ ವರ್ಷ '26ರಲ್ಲಿ (ಏಪ್ರಿಲ್-ಡಿಸೆಂಬರ್ 2025) ದೃಢವಾದ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿವೆ. ಈ ಕಾರ್ಯಕ್ಷಮತೆಗೆ ಕಾರ್ಯತಂತ್ರದ ನೀತಿ ಕ್ರಮಗಳು ಮತ್ತು ಹಣಕಾಸು ಮಧ್ಯವರ್ತಿ ಮಾರ್ಗಗಳಲ್ಲಿ ರಚನಾತ್ಮಕ ಸ್ಥಿತಿಸ್ಥಾಪಕತ್ವವು ಬೆಂಬಲ ನೀಡಿವೆ. ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ 2025-26ರ ಆರ್ಥಿಕ ಸಮೀಕ್ಷೆಯು ಇದನ್ನು ಉಲ್ಲೇಖಿಸಿದೆ.
ಅನಿಶ್ಚಿತತೆಯ ಈ ಸಂದರ್ಭದಲ್ಲಿ ಸವಾಲುಗಳನ್ನು ಎದುರಿಸಲು ನಿಯಂತ್ರಕ ನಾವೀನ್ಯತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆ ನಿರ್ಣಾಯಕವಾಗಿವೆ ಎಂದು ಈ ಆರ್ಥಿಕ ಸಮೀಕ್ಷೆಯು ಉಲ್ಲೇಖಿಸುತ್ತದೆ. ಇದಲ್ಲದೆ, ದೇಶೀಯ ಹಣಕಾಸಿನ ನವೀನ ಮತ್ತು ಸಮಗ್ರ ಮಾರ್ಗಗಳನ್ನು ಬಳಸಿಕೊಳ್ಳುವುದು ಅವಶ್ಯಕ ಎಂದು ಅದು ಹೇಳುತ್ತದೆ, ಏಕೆಂದರೆ ಇವು ಅಸ್ಥಿರ ಜಾಗತಿಕ ಹಣಕಾಸಿನ ಅನಿಶ್ಚಿತತೆಗಳ ವಿರುದ್ಧ ಬಫರ್ ಆಗಿ ಕಾರ್ಯನಿರ್ವಹಿಸುತ್ತವೆ.
ಈ ಪ್ರಸ್ತುತ ಸಂದರ್ಭದಲ್ಲಿ, ಭಾರತದ ಹಣಕಾಸು ನಿಯಂತ್ರಕವು ಈ ಕಡ್ಡಾಯದ ಸ್ಪಷ್ಟ ಗುರುತಿಸುವಿಕೆಯನ್ನು ಪ್ರದರ್ಶಿಸುತ್ತದೆ ಎಂದು ದಾಖಲೆಯು ತಿಳಿಸುತ್ತದೆ, ಮೇ 2025 ರಲ್ಲಿ ಹೊರಡಿಸಲಾದ ನಿಯಮಗಳ ರಚನೆಗಾಗಿ RBI ನ ಹೆಗ್ಗುರುತಿನ ಚೌಕಟ್ಟಿನಿಂದ ಇದು ಸಾಕ್ಷಿಭೂತವಾಗಿದೆ. ಈ ಚೌಕಟ್ಟು ನಿಯಂತ್ರಣ-ನಿರ್ಮಾಣಕ್ಕೆ ಪಾರದರ್ಶಕ, ಸಲಹಾ ಮತ್ತು ಪ್ರಭಾವ-ಚಾಲಿತ ಹಣಕಾಸು ನಿರ್ವಹಣೆ ಮತ್ತು ಹಣಕಾಸು ಮಧ್ಯವರ್ತಿ ವಿಧಾನವನ್ನು ಪೂರಕಗೊಳಿಸುತ್ತದೆ.
ಭಾರತದ ವಿತ್ತೀಯ ನಿರ್ವಹಣೆಯ ವಿಧಾನವು ಸಾಮಾಜಿಕ ಗುರಿಗಳೊಂದಿಗೆ ಸ್ಥೂಲ ಆರ್ಥಿಕ ಉದ್ದೇಶಗಳನ್ನು ಸಮತೋಲನಗೊಳಿಸುತ್ತದೆ ಎಂದು ಆರ್ಥಿಕ ಸಮೀಕ್ಷೆಯು ದಾಖಲಿಸುತ್ತದೆ. ಇದಲ್ಲದೆ, ಹಣಕಾಸು ವಲಯದ ನಿಯಂತ್ರಣದ ಗುಣಮಟ್ಟವು ಆರ್ಥಿಕ ಸ್ಥಿತಿಸ್ಥಾಪಕತ್ವ ಮತ್ತು ನಿರಂತರ ಬೆಳವಣಿಗೆಯ ನಿರ್ಣಾಯಕ ಅಂಶವಾಗಿ ಹೊರಹೊಮ್ಮಿದೆ. ಬೆಲೆ ಸ್ಥಿರತೆಯನ್ನು ಕಾಪಾಡಿಕೊಳ್ಳುವ, ಆರ್ಥಿಕ ಸ್ಥಿರತೆಯನ್ನು ಬೆಂಬಲಿಸುವ ಮತ್ತು ಸಮಗ್ರ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ, ವಿತ್ತೀಯ ನೀತಿಯು ದೇಶದಲ್ಲಿ ಸುಸ್ಥಿರ ಅಭಿವೃದ್ಧಿ ಮತ್ತು ಆರ್ಥಿಕ ಸಮೃದ್ಧಿಯ ಪ್ರಮುಖ ಸಕ್ರಿಯಗೊಳಿಸುವಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಮೀಕ್ಷೆಯು ಹೇಳುತ್ತದೆ.
ಹಣದುಬ್ಬರ ಕಡಿತಕ್ಕೆ ಪ್ರತಿಕ್ರಿಯೆಯಾಗಿ, ಭಾರತೀಯ ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಸಮಿತಿಯು ರೆಪೋ ದರವನ್ನು ಕಡಿಮೆ ಮಾಡಿತು, ಆದರೆ ನಗದು ಮೀಸಲು ಅನುಪಾತ (CRR) ಕಡಿತ ಮತ್ತು ಮುಕ್ತ ಮಾರುಕಟ್ಟೆ ಕಾರ್ಯಾಚರಣೆಗಳ (OMO) ಮೂಲಕ ಹೆಚ್ಚು ಕಾಲ ಬಾಳುವ ದ್ರವ್ಯತೆಯನ್ನು ವೃದ್ದಿಸಿತು ಎಂದು ಸಮೀಕ್ಷೆಯು ತಿಳಿಸುತ್ತದೆ. ಈ ಕಡಿತಗಳು ಸಾಲದ ಹರಿವು, ಹೂಡಿಕೆ ಮತ್ತು ಒಟ್ಟಾರೆ ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದವು. ಇದಲ್ಲದೆ, ಈ ಕ್ರಮಗಳು ಸಾಲ ದರಗಳಿಗೆ ಪರಿಣಾಮಕಾರಿಯಾಗಿ ಅನ್ವಯಿಸಲ್ಪಟ್ಟಿದ್ದು, ನಿಗದಿತ ವಾಣಿಜ್ಯ ಬ್ಯಾಂಕುಗಳ ಸರಾಸರಿ ಸಾಲ ದರಗಳು ಕಡಿಮೆಯಾಗುತ್ತಿವೆ, ಇದು ಹಣಕಾಸು ನೀತಿಯ ನಿಜವಾದ ವಿಸ್ತರಣಾ ನಿಲುವನ್ನು ಪ್ರತಿಬಿಂಬಿಸುತ್ತದೆ.
2026ನೇ ಹಣಕಾಸು ವರ್ಷದಾದ್ಯಂತ, RBI ತನ್ನ ದ್ರವ್ಯತೆ ನಿರ್ವಹಣೆಯನ್ನು ನಿಭಾಯಿಸುವಲ್ಲಿ ಎಚ್ಚರಿಕೆವಹಿಸಿ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾಕಷ್ಟು ದ್ರವ್ಯತೆ ಕಾಯ್ದುಕೊಂಡಿದೆ ಎಂದು ಸಮೀಕ್ಷೆ ಗಮನಿಸುತ್ತದೆ. ಈ ಪೂರ್ವಭಾವಿ ವಿಧಾನವು ಹಣ ಮತ್ತು ಸಾಲ ಮಾರುಕಟ್ಟೆಗಳಿಗೆ ಪರಿಣಾಮಕಾರಿ ಪ್ರಸರಣವನ್ನು ಸುಗಮಗೊಳಿಸಿ, ಆರ್ಥಿಕತೆಯ ಉತ್ಪಾದಕ ಅವಶ್ಯಕತೆಗಳನ್ನು ಪೂರೈಸಿದೆ. ಹೆಚ್ಚುವರಿ ದ್ರವ್ಯತೆ ಪರಿಸ್ಥಿತಿಗಳ ನಡುವೆಯೂ ನಿಗದಿತ ವಾಣಿಜ್ಯ ಬ್ಯಾಂಕುಗಳ (SCBs) ಸಾಲ ಮತ್ತು ಠೇವಣಿ ದರಗಳಿಗೆ ಹಣಕಾಸು ನೀತಿ ಪ್ರಸರಣವು ಬಲಿಷ್ಠವಾಗಿದೆ.

ಒಂದು ವರ್ಷದ ಹಿಂದೆ ಸುಮಾರು ಶೇ. 9% ರಿಂದ ಪ್ರಸ್ತುತ ಶೇ. 12% ಕ್ಕೆ ಏರಿದ - ಹಣದ ಬೆಳವಣಿಗೆಯಲ್ಲಿನ ಸಕಾರಾತ್ಮಕ ಪ್ರವೃತ್ತಿಯು ಬ್ಯಾಂಕುಗಳು ನಗದು ಮೀಸಲು ಅನುಪಾತದ ಕಡಿತದಿಂದ ಬಿಡುಗಡೆಯಾದ ದ್ರವ್ಯತೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿವೆ ಎಂದು ಸೂಚಿಸುತ್ತದೆ ಎಂಬುದನ್ನು ಈ ಸಮೀಕ್ಷೆಯು ಉಲ್ಲೇಖಿಸುತ್ತದೆ. ಅದಲ್ಲದೆ, RBI ನ ಮುಕ್ತ ಮಾರುಕಟ್ಟೆ ಕಾರ್ಯಾಚರಣೆಯ ಖರೀದಿಗಳು ವ್ಯವಸ್ಥೆಗೆ ಬಾಳಿಕೆ ಬರುವ ದ್ರವ್ಯತೆಯನ್ನು ತುಂಬಿವೆ, ಇದು ಆರ್ಥಿಕ ವರ್ಷ '26 ರ (8 ಜನವರಿ 2026 ರವರೆಗೆ) ಅವಧಿಯಲ್ಲಿ ಸರಾಸರಿ ₹1.89 ಲಕ್ಷ ಕೋಟಿ ಹೆಚ್ಚುವರಿಯನ್ನು ಪ್ರತಿನಿಧಿಸುತ್ತದೆ, ಇದನ್ನು ದ್ರವ್ಯತೆ ಹೊಂದಾಣಿಕೆ ಸೌಲಭ್ಯದ (LAF) ಅಡಿಯಲ್ಲಿ ನಿವ್ವಳ ಮೂಲದಿಂದ ಮಾಪನ ಮಾಡಲಾಗುತ್ತದೆ.
ಹಣಕಾಸು ವಲಯದ ನಿಯಮಗಳನ್ನು ರೂಪಿಸಲು RBI ನ ಹೆಗ್ಗುರುತಿನ ಚೌಕಟ್ಟಿನ ಅಡಿಯಲ್ಲಿ ಮೀಸಲಾದ ನಿಯಂತ್ರಕ ಪರಿಶೀಲನಾ ಕೋಶಕ್ಕೆ ಸಮೀಕ್ಷೆಯು ಮತ್ತಷ್ಟು ಪ್ರಾಧಾನ್ಯತೆಯನ್ನು ನೀಡುತ್ತದೆ. ಪ್ರತಿ ಐದರಿಂದ ಏಳು ವರ್ಷಗಳಿಗೊಮ್ಮೆ ಪ್ರತಿಯೊಂದು ನಿಯಂತ್ರಣವನ್ನು ವ್ಯವಸ್ಥಿತವಾಗಿ ಪರಿಶೀಲಿಸುವ ಕಾರ್ಯವನ್ನು ಈ ಕೋಶಕ್ಕೆ ವಹಿಸಲಾಗಿದೆ. ಇಂತಹ ಕ್ರಮಗಳು ಪ್ರತಿಕ್ರಿಯಾತ್ಮಕ ನಿಯಂತ್ರಣದಿಂದ ವಿಕಸನಗೊಳ್ಳುತ್ತಿರುವ ಮಾರುಕಟ್ಟೆ ಪರಿಸ್ಥಿತಿಗಳು ಮತ್ತು ಜಾಗತಿಕ ಅತ್ಯುತ್ತಮ ಅಭ್ಯಾಸಗಳಿಗೆ ಕ್ರಿಯಾತ್ಮಕವಾಗಿ ಪ್ರತಿಕ್ರಿಯಿಸುವ ಪೂರ್ವಭಾವಿ, ನಿರೀಕ್ಷಿತ ಆಡಳಿತಕ್ಕೆ ಮಾದರಿ ಬದಲಾವಣೆಯನ್ನು ಸೂಚಿಸುತ್ತವೆ.
*****
(रिलीज़ आईडी: 2220533)
आगंतुक पटल : 5