ಹಣಕಾಸು ಸಚಿವಾಲಯ
azadi ka amrit mahotsav

ವ್ಯಾಪಾರ ನೀತಿಗಳಲ್ಲಿನ ನಿರಂತರ ಬದಲಾವಣೆಗಳು ಮತ್ತು ಜಾಗತಿಕ ಪರಿಸ್ಥಿತಿಯಲ್ಲಿನ ಅನಿಶ್ಚಿತತೆಗಳ ಮಧ್ಯೆ, ಭಾರತದ ಷೇರು ಮಾರುಕಟ್ಟೆಗಳು ನಿಯಂತ್ರಿತ ಆದರೆ ಚೇತರಿಕೆಯ  ಕಾರ್ಯಕ್ಷಮತೆಯನ್ನು ಪ್ರದರ್ಶಿಸಿವೆ: ಆರ್ಥಿಕ ಸಮೀಕ್ಷೆ 2025-26


ಏಪ್ರಿಲ್-ಡಿಸೆಂಬರ್ 2025ರಲ್ಲಿ ನಿಫ್ಟಿ 50 ಮತ್ತು ಬಿಎಸ್ಇ ಸೆನ್ಸೆಕ್ಸ್  ಕ್ರಮವಾಗಿ ಸುಮಾರು 11.1% ಮತ್ತು 10.1% ಗಳಿಕೆಯನ್ನು ತೋರಿಸಿವೆ

ಸೆಕ್ಯುರಿಟೀಸ್ ಮಾರ್ಕೆಟ್ಸ್ ಕೋಡ್, 2025 – ಶೇರು ಮಾರುಕಟ್ಟೆಯ ನಿಯಂತ್ರಣವನ್ನು ಬಲಪಡಿಸುವತ್ತ  ಒಂದು ಪ್ರಮುಖ ಹೆಜ್ಜೆ

2026ರ ಹಣಕಾಸು ವರ್ಷದಲ್ಲಿ ಡಿಸೆಂಬರ್ 2025 ರವರೆಗೆ 235 ಲಕ್ಷ ಡಿಮ್ಯಾಟ್ ಖಾತೆಗಳನ್ನು ಸೇರಿಸಲಾಗಿದ್ದು, ಒಟ್ಟು ಸಂಖ್ಯೆಯನ್ನು 21.6 ಕೋಟಿ ಮೀರಿದೆ

ಸೆಪ್ಟೆಂಬರ್ 2025 ರಲ್ಲಿ ಡಿಮ್ಯಾಟ್ ಖಾತೆ ಹೊಂದಿರುವ ವಿಶಿಷ್ಟ ಹೂಡಿಕೆದಾರರ ಸಂಖ್ಯೆ 12 ಕೋಟಿ ದಾಟಿದೆ, ಅವರಲ್ಲಿ ಸುಮಾರು ನಾಲ್ಕನೇ ಒಂದು ಭಾಗ ಮಹಿಳೆಯರಾಗಿದ್ದಾರೆ 

ಡಿಸೆಂಬರ್ 2025ರ ಹೊತ್ತಿಗೆ ಮ್ಯೂಚುಯಲ್ ಫಂಡ್ಗಳಲ್ಲಿ 5.9 ಕೋಟಿ ವಿಶಿಷ್ಟ ಹೂಡಿಕೆದಾರರು ಇರುವರು, ಇದರಲ್ಲಿ ಟೈರ್-I ಮತ್ತು ಟೈರ್ -II ನಗರಗಳಲ್ಲದ 3.5 ಕೋಟಿ ಹೂಡಿಕೆದಾರರು ಸೇರಿದ್ದಾರೆ.

ಎಸ್ ಐ ಪಿ ಕೊಡುಗೆಗಳಲ್ಲಿ ವಿಶಿಷ್ಟ ಹೂಡಿಕೆದಾರರ ಮೂಲವು 2020 ವರ್ಷದಲ್ಲಿ ಸುಮಾರು 3.1 ಕೋಟಿಯಿಂದ 2025 ವರ್ಷದ ವೇಳೆಗೆ 11 ಕೋಟಿಗೆ ವೇಗವಾಗಿ  ವಿಸ್ತರಿಸಿದೆ

ಭಾರತದ ಕಾರ್ಪೊರೇಟ್ ಬಾಂಡ್ ಮಾರುಕಟ್ಟೆಯು ಆರ್ಥಿಕ ವರ್ಷ 2015 ಮತ್ತು 2025 ರ ನಡುವೆ ವಾರ್ಷಿಕ ಸುಮಾರು 12% ದರದಲ್ಲಿ ಬೆಳೆದಿದೆ 

ಅಸ್ಥಿರವಾದ ವಿದೇಶಿ ಬಂಡವಾಳ ಹರಿವುಗಳ ನಡುವೆ ಡಿಐಐಎಸ್  ಬೆಂಬಲದಿಂದ ಮಾರುಕಟ್ಟೆಗಳು ಹೂಡಿಕೆ ಹೊರಹರಿವಿನಿಂದ ವಿದೇಶಿ ಸಮತೋಲನ ಕಂಡಿದೆ.

ಜಾಗತಿಕ ಹಣಕಾಸು ಕೇಂದ್ರಗಳ ಸೂಚ್ಯಂಕದಲ್ಲಿ ಗಿಫ್ಟ್ ನಗರವು ಒಂಬತ್ತು ಸ್ಥಾನಗಳ ಏರಿಕೆ ಕಂಡಿದ್ದು, 120 ಹಣಕಾಸು ಕೇಂದ್ರಗಳಲ್ಲಿ 43 ಸ್ಥಾನಗಳನ್ನು ತಲುಪಿದೆ

प्रविष्टि तिथि: 29 JAN 2026 2:12PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ 2025-26ರ ಆರ್ಥಿಕ ಸಮೀಕ್ಷೆಯು, ವ್ಯಾಪಾರ ನೀತಿಗಳಲ್ಲಿನ ನಿರಂತರ ಬದಲಾವಣೆಗಳು ಮತ್ತು ಉಲ್ಬಣಗೊಂಡ ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳ ನಡುವೆಯೂ, ಭಾರತದ ಷೇರು ಮಾರುಕಟ್ಟೆಗಳು ನಿಯಂತ್ರಿತ   ಆದರೆ ಚೇತರಿಕೆಯ  ಕಾರ್ಯಕ್ಷಮತೆಯ ಹಂತವನ್ನು ಪ್ರದರ್ಶಿಸಿವೆ ಎಂದು ಹೇಳುತ್ತದೆ, ಇದು ಬೆಂಬಲಿತ ನೀತಿಗಳು, ಸ್ಥೂಲ ಆರ್ಥಿಕ ಪರಿಸ್ಥಿತಿಗಳು ಮತ್ತು ನಿರಂತರ ದೇಶದ ಹೂಡಿಕೆದಾರರ ಭಾಗವಹಿಸುವಿಕೆಯನ್ನು ತೋರಿಸುತ್ತದೆ. ವೈಯಕ್ತಿಕ ಆದಾಯ ತೆರಿಗೆ ಕಡಿತ, ಜಿ ಎಸ್ ಟಿ   ಪರಿಷ್ಕರಣೆ, ಹಣಕಾಸು ನೀತಿಯ ಸಡಿಲಿಕೆ ಮತ್ತು ಹಣದುಬ್ಬರ ಕಡಿಮೆಯಾಗುವುದು, ಹಾಗೆಯೇ ಎರಡನೇ ತ್ರೈಮಾಸಿಕ ಆರ್ಥಿಕ ವರ್ಷ26 ರಲ್ಲಿ ಸುಧಾರಿತ ಕಾರ್ಪೊರೇಟ್ ಕಾರ್ಯಕ್ಷಮತೆ ಸೇರಿದಂತೆ ಹಲವು ಕ್ರಮಗಳ ಸರಣಿಯು 2025-26ರ ಹಣಕಾಸು ವರ್ಷದಲ್ಲಿ ಮಾರುಕಟ್ಟೆಯನ್ನು ಬೆಂಬಲಿಸಿತು ಎಂದು ಸಮೀಕ್ಷೆ ಹೇಳುತ್ತದೆ.

ಭಾರತದ ಹಣಕಾಸು ಪರಿಸರ ವ್ಯವಸ್ಥೆಯ ಬಲ

2025ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ನಿಫ್ಟಿ 50 ಮತ್ತು ಬಿಎಸ್ಇ ಸೆನ್ಸೆಕ್ಸ್ ಕ್ರಮವಾಗಿ ಸರಿಸುಮಾರು 11.1% ಮತ್ತು 10.1% ರಷ್ಟು ಲಾಭವನ್ನು ದಾಖಲಿಸಿವೆ.  ಆರ್ಥಿಕ ವರ್ಷ26 ರಲ್ಲಿ (ಡಿಸೆಂಬರ್ 2025 ರವರೆಗೆ) ಪ್ರಾಥಮಿಕ (ನೂತನ) ಮಾರುಕಟ್ಟೆಗಳು ಚೇತರಿಕೆ ಮತ್ತು ಉತ್ಸಾಹಭರಿತವಾಗಿದ್ದವು,   ಸಾರ್ವಜನಿಕ ಷೇರು ಮಾರಾಟಗಳು (ಐಪಿಒಗಳು) ವಿತರಣೆಯಲ್ಲಿ ಜಗತ್ತನ್ನು ಮುನ್ನಡೆಸಿದವು.  ಆರ್ಥಿಕ ವರ್ಷ 26 ರಲ್ಲಿ (ಡಿಸೆಂಬರ್ 2025 ರವರೆಗೆ) ಐಪಿಒ ಸಂಪುಟಗಳು ಆರ್ಥಿಕ ವರ್ಷ 25ಕ್ಕಿಂತಲೂ  20% ಹೆಚ್ಚಾಗಿದೆ ಮತ್ತು ಕ್ರೋಢೀಕರಿಸಿದ ಮೊತ್ತವು ಆರ್ಥಿಕ ವರ್ಷ 25 ರ ಅನುಗುಣವಾದ ಅವಧಿಗಿಂತ 10% ಹೆಚ್ಚಾಗಿದೆ. ಆರ್ಥಿಕ ವರ್ಷ 26 ರಲ್ಲಿ (ಡಿಸೆಂಬರ್ 2025 ರವರೆಗೆ) ಐಪಿಒ  ಚಟುವಟಿಕೆಯ ಗಮನಾರ್ಹ ಲಕ್ಷಣವೆಂದರೆ ಆಫರ್ ಫಾರ್ ಸೇಲ್ (OFS) ಘಟಕಗಳ ಪ್ರಾಮುಖ್ಯತೆ, ಅಲ್ಲಿ ಅಸ್ತಿತ್ವದಲ್ಲಿರುವ ಷೇರುದಾರರು ಕಂಪನಿಯು ಹೊಸ ಷೇರುಗಳನ್ನು ನೀಡುವ ಬದಲು ತಮ್ಮ ಪಾಲನ್ನು ಮಾರಾಟ ಮಾಡುತ್ತಾರೆ.

ಎಸ್ ಎಂ ಇ ಮಾರುಕಟ್ಟೆ ಪಟ್ಟಿಗಳು: ಆರ್ಥಿಕ ವರ್ಷ 26 ರಲ್ಲಿ (ಡಿಸೆಂಬರ್ 2025 ರವರೆಗೆ) ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಸ್ ಎಂ ಇ) ಷೇರು ಮಾರುಕಟ್ಟೆ ಪಟ್ಟಿಯ ಎಸ್ ಎಂ ಇ ಪಟ್ಟಿಗಳ ಸಂಖ್ಯೆ ಆರ್ಥಿಕ ವರ್ಷ 25 ರಲ್ಲಿ 190 ರಿಂದ (ಡಿಸೆಂಬರ್ 2024 ರವರೆಗೆ) 217 ಕ್ಕೆ ಏರಿದೆ. ಕ್ರೋಢೀಕರಿಸಿದ ಮೊತ್ತವು ₹7,453 ಕೋಟಿಗಳಿಂದ ₹9,635 ಕೋಟಿಗಳಿಗೆ ಏರಿದೆ. ಆರಂಭವಾದಾಗಿನಿಂದ, 1,380 ಕ್ಕೂ ಹೆಚ್ಚು ಕಂಪನಿಗಳು ಬಿಎಸ್ ಇ ಮತ್ತು ಎನ್ ಎಸ್ ಇನ ಎಸ್ ಎಂಇ ಪ್ಲಾಟ್ಫಾರ್ಮ್ಗಳಲ್ಲಿ ಪಟ್ಟಿ ಮಾಡಲ್ಪಟ್ಟಿವೆ.  ಪ್ರಾಥಮಿಕ ಮಾರುಕಟ್ಟೆಗಳ ಮೂಲಕ ಸಂಪನ್ಮೂಲಗಳ ನಿರಂತರ ಕ್ರೋಢೀಕರಣ ಮತ್ತು ಎಸ್ ಎಂ ಇ ಪ್ಲಾಟ್ಫಾರ್ಮ್ಗಳ ಮೂಲಕ ಉದಯೋನ್ಮುಖ ಉದ್ಯಮಗಳ ವ್ಯಾಪಕ ಭಾಗವಹಿಸುವಿಕೆಯು ಭಾರತದ ಬಂಡವಾಳ ಮಾರುಕಟ್ಟೆಗಳ ಹೆಚ್ಚುತ್ತಿರುವ ವಿಸ್ತಾರ ಮತ್ತು ಆಧುನೀಕರಣವನ್ನು ಸೂಚಿಸುತ್ತದೆ.

ಸೆಕ್ಯುರಿಟೀಸ್ ಮಾರ್ಕೆಟ್ಸ್ ಕೋಡ್ (ಎಸ್ ಎಂ ಸಿ): ಸೆಕ್ಯುರಿಟೀಸ್ ಮಾರ್ಕೆಟ್ಸ್ ಕೋಡ್, 2025, ಕಾನೂನು ಚೌಕಟ್ಟನ್ನು ಕ್ರೋಢೀಕರಿಸುವ ಮತ್ತು ಶೇರು  ಮಾರುಕಟ್ಟೆ ನಿಯಂತ್ರಣದ ಅಡಿಪಾಯವನ್ನು ಬಲಪಡಿಸುವ ಕಡೆಗೆ ಒಂದು ಪ್ರಮುಖ ಹೆಜ್ಜೆಯನ್ನು ತೋರಿಸುತ್ತದೆ. ಸಂಹಿತೆಯು ಮಂಡಳಿಯ ಸಂಯೋಜನೆ, ಸ್ವಾತಂತ್ರ್ಯ, ಸಂಘರ್ಷ ನಿರ್ವಹಣೆ, ಪಾರದರ್ಶಕತೆ, ನಿಯಂತ್ರಕ ಸ್ಯಾಂಡ್ಬಾಕ್ಸಿಂಗ್ (ಚೌಕಟ್ಟು), ಹೂಡಿಕೆದಾರರ ರಕ್ಷಣೆ, ಮಾರುಕಟ್ಟೆ ಮೂಲಸೌಕರ್ಯ ಸಂಸ್ಥೆಗಳ ಆಡಳಿತ (ಎಂ ಐ ಐಗಳು) ಮತ್ತು ವ್ಯವಹಾರ ಮಾಡುವ ಸುಲಭತೆಯಂತಹ ವಿಷಯಗಳನ್ನು ವ್ಯಾಪಿಸಿದೆ ಎಂದು ಆರ್ಥಿಕ ಸಮೀಕ್ಷೆಯು ಎತ್ತಿ ತೋರಿಸುತ್ತದೆ. ಮೊದಲ ಬಾರಿಗೆ, ಈ ಸಂಹಿತೆಯು ಎಂಐಐಗಳು, ಸ್ಟಾಕ್ ಎಕ್ಸ್ಚೇಂಜ್ಗಳು, ಕ್ಲಿಯರಿಂಗ್ ಕಾರ್ಪೊರೇಷನ್ಗಳು, ಠೇವಣಿಗಳು ಮತ್ತು ಇತರವುಗಳನ್ನು ಸ್ಪಷ್ಟವಾದ ಶಾಸನಬದ್ಧ ನೆಲೆಗೆ ತರುತ್ತದೆ, ಅವುಗಳನ್ನು ಪ್ರಮುಖ ಸಾರ್ವಜನಿಕ ಕಾರ್ಯಗಳನ್ನು ನಿರ್ವಹಿಸುವ ಘಟಕಗಳಾಗಿ ಔಪಚಾರಿಕವಾಗಿ  ಅಂಗೀಕರಿಸುತ್ತದೆ.

ಬಂಡವಾಳ ಮಾರುಕಟ್ಟೆಗಳಲ್ಲಿ ಚಿಲ್ಲರೆ ಭಾಗವಹಿಸುವಿಕೆಯನ್ನು ವಿಸ್ತರಿಸುವುದು

ಆರ್ಥಿಕ ವರ್ಷ 26 (ಡಿಸೆಂಬರ್ 2025 ರವರೆಗೆ) ಅವಧಿಯಲ್ಲಿ, 235 ಲಕ್ಷ ಡಿಮ್ಯಾಟ್ ಖಾತೆಗಳನ್ನು ಸೇರಿಸಲಾಯಿತು, ಇದು ಒಟ್ಟು ಸಂಖ್ಯೆಯನ್ನು 21.6 ಕೋಟಿಯನ್ನೂ ಮೀರಿಸಿತ್ತು. ಸೆಪ್ಟೆಂಬರ್ 2025 ರಲ್ಲಿ ಡಿಮ್ಯಾಟ್ ಖಾತೆ ಹೊಂದಿರುವ ವಿಶಿಷ್ಟ ಹೂಡಿಕೆದಾರರ ಸಂಖ್ಯೆ 12 ಕೋಟಿ ದಾಟಿದೆ, ಅವರಲ್ಲಿ ಸುಮಾರು ನಾಲ್ಕನೇ ಒಂದು ಭಾಗ ಮಹಿಳೆಯರಾಗಿದ್ದಾರೆ . ಮ್ಯೂಚುವಲ್ ಫಂಡ್ ಉದ್ಯಮವು ಸಹ ವಿಸ್ತರಿಸಿತು, ಡಿಸೆಂಬರ್ 2025 ರ ಅಂತ್ಯದಲ್ಲಿ 5.9 ಕೋಟಿ ಅನನ್ಯ ಹೂಡಿಕೆದಾರರು ಇದ್ದರು, ಅದರಲ್ಲಿ 3.5 ಕೋಟಿ (ನವೆಂಬರ್ 2025 ರ ಹೊತ್ತಿಗೆ) ಟೈಯರ್-I ಮತ್ತು ಟೈಯರ್-II ಅಲ್ಲದ ನಗರಗಳಿಂದ ಬಂದವರಾಗಿದ್ದಾರೆ.

ಒಂದು ಕಾಲದಲ್ಲಿ ಮನೆಯ  ಹಣಕಾಸಿಗೆ ಪೂರಕವಾಗಿದ್ದ ಈಕ್ವಿಟಿ ಹೂಡಿಕೆಗಳು, ವಿಶಾಲ ಭಾಗವಹಿಸುವಿಕೆ ಮತ್ತು ಹೆಚ್ಚು ವೈವಿಧ್ಯಮಯ ಪ್ರವೇಶ ಮಾರ್ಗಗಳಿಂದ ಬೆಂಬಲಿತವಾದ ಆರ್ಥಿಕ ಸಂಪತ್ತಿನ ಗಮನಾರ್ಹ ಅಂಶವಾಗಿ ಮಾರ್ಪಟ್ಟಿವೆ ಎಂದು ಆರ್ಥಿಕ ಸಮೀಕ್ಷೆಯು ಮತ್ತಷ್ಟು ಎತ್ತಿ ತೋರಿಸುತ್ತದೆ. ಈಕ್ವಿಟಿ ಮಾರುಕಟ್ಟೆಗಳಲ್ಲಿ ವ್ಯಕ್ತಿಗಳ ನೇರ ಪಾಲು ಕ್ರಮೇಣವಾಗಿ ಹೆಚ್ಚಾಗಿದ್ದು, ಆರ್ಥಿಕ ವರ್ಷ14 ರಲ್ಲಿ ಕೇವಲ 8 ಪ್ರತಿಶತಕ್ಕಿಂತ ಕಡಿಮೆ ಇದ್ದದ್ದು ಸೆಪ್ಟೆಂಬರ್ 2025 ರ ಹೊತ್ತಿಗೆ ಸರಿಸುಮಾರು ಶೇಕಡಾ 9.6ಕ್ಕೆ ತಲುಪಿತು, ಪರೋಕ್ಷ ಪಾಲು ಅದೇ ಅವಧಿಯಲ್ಲಿ ಸುಮಾರು ಮೂರು ಪಟ್ಟು ಹೆಚ್ಚಾಗಿ, ಶೇಕಡಾ 9.2ಕ್ಕೆ ತಲುಪಿತು.

ವಾರ್ಷಿಕ ಮನೆಯ ಹಣಕಾಸು ಉಳಿತಾಯದಲ್ಲಿ ಈಕ್ವಿಟಿ ಮತ್ತು ಮ್ಯೂಚುವಲ್ ಫಂಡ್ ಗಳ ಪಾಲು ಆರ್ಥಿಕ ವರ್ಷ 12 ರಲ್ಲಿ ಶೇಕಡಾ 2 ರಿಂದ ಆರ್ಥಿಕ ವರ್ಷ 25 ರಲ್ಲಿ ಶೇಕಡಾ 15.2 ಕ್ಕಿಂತ ಹೆಚ್ಚಾಗಿದೆ. ಈ ಬದಲಾವಣೆಯು ಎಸ್ ಐ ಪಿ  ಕೊಡುಗೆಗಳಲ್ಲಿ ಸ್ಥಿರವಾದ ಏರಿಕೆಯೊಂದಿಗೆ ಹೊಂದಿಕೆಯಾಗಿದೆ, ಸರಾಸರಿಮಾಸಿಕ ಎಸ್ ಐ ಪಿ  ಹರಿವು ಆರ್ಥಿಕ ವರ್ಷ 17 ರಲ್ಲಿ ₹4,000 ಕೋಟಿಗಿಂತ ಕಡಿಮೆಯಿತ್ತು, ಆರ್ಥಿಕ ವರ್ಷ 26 ರಲ್ಲಿ (ಏಪ್ರಿಲ್-ನವೆಂಬರ್) ರೂ.28,000 ಕೋಟಿಗಿಂತ ಏಳು ಪಟ್ಟು ಹೆಚ್ಚಾಗಿತ್ತು. ಕೋವಿಡ್  ಕಾಲಘಟ್ಟದ  ನಂತರದ ಆರಂಭಿಕ ವರ್ಷಗಳಲ್ಲಿ ವಿಶಿಷ್ಟ ಹೂಡಿಕೆದಾರರ ಸಂಖ್ಯೆ ತೀವ್ರವಾಗಿ ಹೆಚ್ಚಾಯಿತು, ಆರ್ಥಿಕ ವರ್ಷ 20 ರಲ್ಲಿ ಸುಮಾರು 3.1 ಕೋಟಿಯಿಂದ ಆರ್ಥಿಕ ವರ್ಷ 25 ರ ವೇಳೆಗೆ 11 ಕೋಟಿಗೆ ಏರಿತು.

ಸೆಬಿಯ  ಇತ್ತೀಚಿನ ಉಪಕ್ರಮಗಳು

ನಿಯಂತ್ರಕ ಸಮಗ್ರತೆಯನ್ನು ಬಲಪಡಿಸುವ, ಮಾರುಕಟ್ಟೆ ಕಾರ್ಯಾಚರಣೆಗಳನ್ನು ಸುವ್ಯವಸ್ಥಿತಗೊಳಿಸುವ ಮತ್ತು ಹೂಡಿಕೆದಾರರ ರಕ್ಷಣೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಸೆಬಿ ಸಮಗ್ರ ಉಪಕ್ರಮಗಳನ್ನು ಕೈಗೊಂಡಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸುತ್ತದೆ. ಒಟ್ಟಾರೆಯಾಗಿ, ಈ ಕ್ರಮಗಳು ಸೆಕ್ಯುರಿಟೀಸ್ ಮಾರುಕಟ್ಟೆಯ ಪ್ರಮುಖ ವಿಭಾಗಗಳಲ್ಲಿ ಸುಧಾರಿತ ಪರಿಶೀಲನೆ, ಬಹಿರಂಗಪಡಿಸುವಿಕೆ, ಪ್ರವೇಶಿಸಲು ಸಾಧ್ಯವಾಗುವಿಕೆ ಮತ್ತು ಅಪಾಯದ ಕಣ್ಗಾವಲು ಮೂಲಕ ಮಾರುಕಟ್ಟೆ ವಿಶ್ವಾಸವನ್ನು ಬಲಪಡಿಸುವಾಗ, ಭಾರತದಲ್ಲಿ ಪಾರದರ್ಶಕ, ಚೇತರಿಕೆ ಮತ್ತು ಅಂತರ್ಗತ ಬಂಡವಾಳ ಮಾರುಕಟ್ಟೆ ಪರಿಸರ ವ್ಯವಸ್ಥೆಯನ್ನು ಬೆಳೆಸುವ ಸೆಬಿ ಯ ಬದ್ಧತೆಯನ್ನು ಒತ್ತಿಹೇಳುತ್ತವೆ.

ಹೂಡಿಕೆದಾರರ ರಕ್ಷಣೆ ಮತ್ತು ಸಬಲೀಕರಣ:  ಸೆಬಿ ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸುವ ಎಲ್ಲಾ ಸೆಬಿ -ನೋಂದಾಯಿತ ಮಧ್ಯವರ್ತಿಗಳಿಗೆ ಹೊಸ ಯುಪಿಐ ವಿಳಾಸ ರಚನೆಯನ್ನು ಕಡ್ಡಾಯಗೊಳಿಸಿದೆ, ಇದು ಅಕ್ಟೋಬರ್ 1, 2025 ರಿಂದ ಜಾರಿಗೆ ಬರುತ್ತದೆ.

ನಿಯಂತ್ರಕ ಚೌಕಟ್ಟನ್ನು ಬಲಪಡಿಸುವುದು ಮತ್ತು ಕಾರ್ಯಾಚರಣೆಯ ದಕ್ಷತೆಯಲ್ಲಿ ಸುಧಾರಣೆ: ಗಿಫ್ಟ್-ಐಎಫ್ ಎಸ್ ಸಿಯಲ್ಲಿ ಸೆಕ್ಯುರಿಟೀಸ್ ಮಾರುಕಟ್ಟೆ-ಸಂಬಂಧಿತ ಚಟುವಟಿಕೆಗಳನ್ನು ಪ್ರತ್ಯೇಕ ವ್ಯವಹಾರ ಘಟಕದ ಅಡಿಯಲ್ಲಿ ಕೈಗೊಳ್ಳುವಲ್ಲಿ ಸೆಬಿ ನೋಂದಾಯಿತ ಸ್ಟಾಕ್ ಬ್ರೋಕರ್ ಗಳಿಗೆ ಅನುಕೂಲವಾಗುವಂತೆ, ನಿರ್ದಿಷ್ಟ ಸೆಬಿ ಅನುಮೋದನೆಯನ್ನು ಪಡೆಯುವ ಅಗತ್ಯವನ್ನು ತೆಗೆದುಹಾಕಲಾಗಿದೆ.

ಸಾಲ ಮಾರುಕಟ್ಟೆ

ಭಾರತದ ಕಾರ್ಪೊರೇಟ್ ಬಾಂಡ್ ಮಾರುಕಟ್ಟೆ ಪ್ರಭಾವಶಾಲಿ ಬೆಳವಣಿಗೆಯನ್ನು ಪ್ರದರ್ಶಿಸಿದೆ, ಬಾಕಿ ಇರುವ ಸಾಲಪತ್ರ ವಿತರಣೆಗಳು ಆರ್ಥಿಕ ವರ್ಷ 15 ರಲ್ಲಿ ₹17.5 ಟ್ರಿಲಿಯನ್ನಿಂದ ಆರ್ಥಿಕ ವರ್ಷ 25 ರಲ್ಲಿ ₹53.6 ಟ್ರಿಲಿಯನ್ಗೆ ಹೆಚ್ಚಾಗಿದ್ದು, ವಾರ್ಷಿಕವಾಗಿ ಸುಮಾರು ಶೇಕಡಾ 12 ರಷ್ಟು ಬೆಳೆಯುತ್ತಿದೆ.  ಆರ್ಥಿಕ ವರ್ಷ25 ರಲ್ಲಿ ಒಟ್ಟು ₹9.9 ಟ್ರಿಲಿಯನ್, ಇದುವರೆಗೆ ಅತಿ ಹೆಚ್ಚು ಹೊಸ ವಿತರಣೆಗಳನ್ನು ದಾಖಲಿಸಲಾಗಿದೆ, 

ಮಾರ್ಚ್ 2025 ರ ಹೊತ್ತಿಗೆ, ಕಾರ್ಪೊರೇಟ್ ಬಾಂಡ್ ಮಾರುಕಟ್ಟೆಯು ದೇಶದ ಜಿಡಿಪಿ (ಒಟ್ಟು ಆಂತರಿಕ ಉತ್ಪನ್ನ) ಶೇಕಡಾ 15-16 ರಷ್ಟಿದೆ ಮತ್ತು ಕಾರ್ಪೊರೇಟ್ ಬಾಂಡ್ ನಿಧಿಸಂಗ್ರಹಣೆ ಈಗ ಬ್ಯಾಂಕ್ ಕ್ರೆಡಿಟ್ಗೆ ಪೂರಕವಾಗಿದೆ. ಆರ್ಥಿಕ ವರ್ಷ26 ರಲ್ಲಿ, ಏಪ್ರಿಲ್-ಡಿಸೆಂಬರ್ 2025 ರಲ್ಲಿ ಪ್ರಾಥಮಿಕ ಮಾರುಕಟ್ಟೆಯಿಂದ ಒಟ್ಟು ಸಂಪನ್ಮೂಲ ಕ್ರೋಢೀಕರಣದಲ್ಲಿ ಸಾಲ ಮಾರುಕಟ್ಟೆಯು ಶೇಕಡಾ 63 ಕ್ಕಿಂತ ಹೆಚ್ಚು ಪಾಲನ್ನು ಹೊಂದಿತ್ತು. ಬಾಂಡ್ ಮಾರುಕಟ್ಟೆಯ ಅಭಿವೃದ್ಧಿಗಾಗಿ ನಿಯಂತ್ರಕ ಅಧಿಕಾರಿಗಳು ಗಣನೀಯ ಸುಧಾರಣೆಗಳನ್ನು ಕೈಗೊಂಡಿದ್ದಾರೆ.  ಸೆಬಿಯು ಕೋಟಾ ಪ್ಲಾಟ್ ಫಾರಂ ಅನ್ನು ಪರಿಚಯಿಸಿತು, ಇದು ಚಿಲ್ಲರೆ ಸುಲಭಲಭ್ಯತೆಯನ್ನು ಸುಗಮಗೊಳಿಸುವುದು, ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳಿಗೆ ಆಡಳಿತ ಮಾನದಂಡಗಳನ್ನು ಬಲಪಡಿಸುವುದು ಮತ್ತು ವಿತರಣಾ ಮಾನದಂಡಗಳನ್ನು ಸರಳಗೊಳಿಸುವುದು.

ವಿದೇಶಿ ಪೋರ್ಟ್ ಪೋಲಿಯೋ ಹೂಡಿಕೆ

ಆರ್ಥಿಕ ವರ್ಷ26 ರಲ್ಲಿ ಭಾರತದ ವಿದೇಶಿ ಪೋರ್ಟ್ ಪೋಲಿಯೋ ಹೂಡಿಕೆ (ಎಫ್ ಪಿ ಐ) ಪ್ರವೃತ್ತಿಗಳು  ಚಂಚಲತೆಯನ್ನು ಪ್ರದರ್ಶಿಸುತ್ತವೆ. ಆರ್ಥಿಕ ವರ್ಷ 26ರ ತ್ರೈಮಾಸಿಕ1ರಲ್ಲಿ   ಸಮಯದಲ್ಲಿ, ಎಫ್ ಪಿ ಒ ಗಳು ಭಾರತೀಯ ಷೇರುಗಳ ನಿವ್ವಳ ಖರೀದಿದಾರರು ಮತ್ತು ಸಾಲ ಉಪಕರಣಗಳ ನಿವ್ವಳ ಮಾರಾಟಗಾರರಾಗಿದ್ದರು. ಇದಕ್ಕೆ ವ್ಯತಿರಿಕ್ತವಾಗಿ, ಆರ್ಥಿಕ ವರ್ಷ 26ರ ತ್ರೈಮಾಸಿಕ2 ಮತ್ತು ತ್ರೈಮಾಸಿಕ3ರಲ್ಲಿ, ಅವರು ಷೇರುಗಳ ನಿವ್ವಳ ಖರೀದಿದಾರರಿಂದ ನಿವ್ವಳ ಮಾರಾಟಗಾರರಾಗಿ ಪರಿವರ್ತನೆಗೊಂಡರು, ಜೊತೆಗೆ ಸಾಲ ಉಪಕರಣಗಳ ನಿವ್ವಳ ಖರೀದಿದಾರರಾಗಿದ್ದರು. ಒಟ್ಟಾರೆಯಾಗಿ, ಎಫ್ ಪಿ ಐಗಳು ಏಪ್ರಿಲ್ ನಿಂದ ಡಿಸೆಂಬರ್ 2025 ರವರೆಗೆ ಭಾರತೀಯ ಸಾಲಪತ್ರಗಳ ನಿವ್ವಳ ಮಾರಾಟಗಾರರಾಗಿದ್ದರು. ಸೆಬಿ ಯ ಎಫ್ ಪಿ ಐ ಹೂಡಿಕೆ ಮಾನದಂಡಗಳನ್ನು ಸಡಿಲಗೊಳಿಸುವುದು ಮತ್ತು ಪ್ರಸ್ತುತ ನಡೆಯುತ್ತಿರುವ ಭಾರತ-ಯುಎಸ್ ವ್ಯಾಪಾರ ಚರ್ಚೆಗಳಿಂದ ಬೆಂಬಲಿತವಾಗಿದೆ, ಭಾರತದ ಸಾಲ ಮಾರುಕಟ್ಟೆಗೆ FPI ಒಳಹರಿವಿನ ನಿರೀಕ್ಷೆಯು ಸಕಾರಾತ್ಮಕವಾಗಿ ಉಳಿದಿದೆ. ಡಿಸೆಂಬರ್ 31, 2025 ರ ಹೊತ್ತಿಗೆ, ಎಫ್ ಪಿ ಐಗಳ ವಶದಲ್ಲಿರುವ ಆಸ್ತಿ ಮೂಲವು ₹81.4 ಲಕ್ಷ ಕೋಟಿಗಳಾಗಿದ್ದು, ಮಾರ್ಚ್ 31, 2025 ಕ್ಕಿಂತ 10.4%ರಷ್ಟು ಹೆಚ್ಚಳವಾಗಿದೆ.

ದೇಶದ ಸಾಂಸ್ಥಿಕ ಹೂಡಿಕೆದಾರರಿಂದ  ಎಫ್ ಪಿ ಐಗಳ  ಸಮತೋಲನ

ವಿದೇಶಿ ಬಂಡವಾಳ ಹರಿವಿನ ಅಸ್ಥಿರತೆಯ ಮಧ್ಯೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿ ಐ ಐ ಗಳು), ವಿಶೇಷವಾಗಿ ಮ್ಯೂಚುವಲ್ ಫಂಡ್ಗಳು ಮತ್ತು ವಿಮಾ ಕಂಪನಿಗಳು, ವಿದೇಶಿ ಹೂಡಿಕೆ ಹೊರಹರಿವಿನ ಚಂಚಲತೆಯನ್ನು ಸಮತೋಲನಗೊಳಿಸಿವೆ ಮತ್ತು ಮಾರುಕಟ್ಟೆಗಳಿಗೆ ಅಗತ್ಯವಾದ ಬೆಂಬಲವನ್ನು ಒದಗಿಸಿವೆ. ನಿರಂತರ ಖರೀದಿಯೊಂದಿಗೆ, ಸೆಪ್ಟೆಂಬರ್ 30, 2025 ರ ಹೊತ್ತಿಗೆ, ಎನ್ ಎಸ್ ಇ -ಪಟ್ಟಿಮಾಡಿದ ಷೇರುಗಳಲ್ಲಿ ಡಿ ಐ ಐ ಮಾಲೀಕತ್ವವು 18.7% ರಷ್ಟಿದೆ.

ಡಿ ಐ ಐಗಳು ಭಾರತೀಯ ಷೇರುಗಳಲ್ಲಿ ನಿವ್ವಳ ಖರೀದಿದಾರರಾಗಿ ತಮ್ಮ ಸ್ಥಾನವನ್ನು ಸ್ಥಿರವಾಗಿ ಉಳಿಸಿಕೊಂಡಿವೆ, ಎಫ್ ಪಿ ಐ ಮಾರಾಟವನ್ನು ಪರಿಣಾಮಕಾರಿಯಾಗಿ ಎದುರಿಸುತ್ತಿವೆ ಮತ್ತು ದೇಶೀಯ ಮಾರುಕಟ್ಟೆಯ ಬಲವನ್ನು ಬಲಪಡಿಸುತ್ತಿವೆ. ಡಿ ಐ ಐಗಳ ಪಾಲು (ಹಿಡುವಳಿಗಳ ಮೌಲ್ಯದಿಂದ) ಆರ್ಥಿಕ ವರ್ಷ 25ರ ತ್ರೈಮಾಸಿಕ4ರಲ್ಲಿ ಮೊದಲ ಬಾರಿಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಗಿಂತ (ಎಫ್ ಪಿ ಐ) ಮೀರಿದೆ ಮತ್ತು ಈಗ ಆರ್ಥಿಕ ವರ್ಷ 26ರ ತ್ರೈಮಾಸಿಕ2ರಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.

ಆರ್ಥಿಕ ವರ್ಷ 26ರ ತ್ರೈಮಾಸಿಕ2ರಲ್ಲಿ ಮ್ಯೂಚುವಲ್ ಫಂಡ್ ಗಳ ಪಾಲು (ಹಿಡುವಳಿಗಳ ಮೌಲ್ಯದಿಂದ) ಸಾರ್ವಕಾಲಿಕ ಗರಿಷ್ಠ ಶೇಕಡಾ10.9ರಷ್ಟನ್ನು  ತಲುಪಿತು. ಆದ್ದರಿಂದ, ಭಾರತೀಯ ಬಂಡವಾಳ ಮಾರುಕಟ್ಟೆಯಲ್ಲಿ ಎಫ್ ಐ ಐ ಗಳು ಪ್ರಮುಖವಾಗಿ ಉಳಿದಿದ್ದರೂ, ಡಿ ಐ ಐ ಗಳು, ಚಿಲ್ಲರೆ ಹೂಡಿಕೆದಾರರು ಮತ್ತು ಹೆಚ್ಚಿನ ನಿವ್ವಳ ಮೌಲ್ಯದ ವ್ಯಕ್ತಿಗಳು, ಮಾರುಕಟ್ಟೆ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ ಎಫ್ ಐಐ ಗಳು ತೆಗೆದುಕೊಂಡ ನಿರ್ಧಾರಗಳಿಗೆ ಬಲವಾದ ಪ್ರತಿಯಾದ  ಸಮತೋಲನದ ಪಾತ್ರವನ್ನು ವಹಿಸುತ್ತಿದ್ದಾರೆ.

ಗಿಫ್ಟ್ ಸಿಟಿ

ನವೆಂಬರ್ 30, 2025 ರ ಹೊತ್ತಿಗೆ, ಗಿಫ್ಟ್ ಸಿಟಿ ಬಲವಾದ ಬೆಳವಣಿಗೆಯ ತೀವ್ರತೆಯನ್ನು  ತೋರಿಸಿದೆ, ವಿವಿಧ ವರ್ಗಗಳಲ್ಲಿ 1,034 ಕ್ಕೂ ಹೆಚ್ಚು ದೇಶೀಯ ಮತ್ತು ಅಂತರರಾಷ್ಟ್ರೀಯ ಘಟಕಗಳನ್ನು ನೋಂದಾಯಿಸಲಾಗಿದೆ. ಒಂದು ವರ್ಷದೊಳಗೆ, ಗಿಫ್ಟ್ ಸಿಟಿ ಜಾಗತಿಕ ಹಣಕಾಸು ಕೇಂದ್ರಗಳ ಸೂಚ್ಯಂಕದಲ್ಲಿ (ಜಿ ಎಫ್ ಸಿ ಐ) ಒಂಬತ್ತು ಸ್ಥಾನಗಳಷ್ಟು ಮೇಲೇರಿ, 120 ಹಣಕಾಸು ಕೇಂದ್ರಗಳಲ್ಲಿ 43 ನೇ ಸ್ಥಾನವನ್ನು ತಲುಪಿದೆ. ಫಿನ್ ಟೆಕ್ ನಿರ್ದಿಷ್ಟ ಶ್ರೇಯಾಂಕದಲ್ಲಿ, ಗಿಫ್ಟ್ ಸಿಟಿ ಹತ್ತು ಸ್ಥಾನಗಳಿಂದ ಸುಧಾರಿಸಿದೆ, ಇದು ಫಿನ್ ಟೆಕ್ಗಳು, ಶೈಕ್ಷಣಿಕ ಪಾಲುದಾರಿಕೆಗಳು ಮತ್ತು ನಾವೀನ್ಯತೆ ಕೇಂದ್ರಗಳಿಗೆ ಮೀಸಲಾದ ನಿಯಂತ್ರಕ ಚೌಕಟ್ಟಿನ ಮೂಲಕ ಮಾಡಿದ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ.

ಮುಕ್ತಾಯ

ಶತಮಾನದ ಮಧ್ಯಭಾಗದ ವೇಳೆಗೆ ಭಾರತವು ವಿಕಸಿತ ಭಾರತ ಆಗಬೇಕೆಂಬ ಆಕಾಂಕ್ಷೆಯು ಹಣಕಾಸಿನ ಬಗ್ಗೆ ಮೂಲಭೂತ ಪುನರ್ವಿಮರ್ಶೆಯನ್ನು ಬಯಸುತ್ತದೆ ಎಂದು ಆರ್ಥಿಕ ಸಮೀಕ್ಷೆಯು ತಿಳಿಸುತ್ತದೆ, ಇದು ಕೇವಲ ಹಣಕಾಸು ಆಗಿ ಮಾತ್ರವಲ್ಲದೆ ಆರ್ಥಿಕ ಪರಿವರ್ತನೆಯ ಶಿಲ್ಪಿಯೂ ಆಗಿದೆ. ನಿರಂತರ ಬೆಳವಣಿಗೆಗೆ ಹಣಕಾಸು ಒದಗಿಸಲು, ಭಾರತವು ದೀರ್ಘಕಾಲೀನ ಬಂಡವಾಳ ಮಾರುಕಟ್ಟೆಗಳನ್ನು ಬಲಪಡಿಸಬೇಕು. ನಿಯಂತ್ರಕ ಆಧುನೀಕರಣ ಮತ್ತು ಹೂಡಿಕೆದಾರರ ರಕ್ಷಣೆಗೆ ಸೆಬಿ ಸಮಾನಾಂತರ ಬದ್ಧತೆಯನ್ನು ಪ್ರದರ್ಶಿಸಿದೆ. 2025 ರಲ್ಲಿ ವಿಶ್ವ ಹಣಕಾಸು ಸಂಸ್ಥೆ ಮತ್ತು ವಿಶ್ವಬ್ಯಾಂಕ್ ಜಂಟಿಯಾಗಿ ನಡೆಸಿದ ಹಣಕಾಸು ವಲಯ ಮೌಲ್ಯಮಾಪನ ಕಾರ್ಯಕ್ರಮದ (ಎಫ್ ಎಸ್ ಎ ಪಿ) ಮೂಲಕ ನಿಯಂತ್ರಕ ಗುಣಮಟ್ಟದಲ್ಲಿನ ವ್ಯವಸ್ಥಿತ ಏರಿಕೆಯು ಅಂತರರಾಷ್ಟ್ರೀಯ ಮೌಲ್ಯೀಕರಣವನ್ನು ಪಡೆದುಕೊಂಡಿದೆ. ಎರಡೂ ವರದಿಗಳು ಕ್ಯಾಲೆಂಡರ್ ವರ್ಷ 2017 ರಲ್ಲಿ ಜಿಡಿಪಿ ಯ 144% ರಿಂದ ಕ್ಯಾಲೆಂಡರ್ ವರ್ಷ 2024 ರಲ್ಲಿ 175% ಕ್ಕೆ ವಿಸ್ತರಿಸುತ್ತಿರುವ ಬಂಡವಾಳ ಮಾರುಕಟ್ಟೆಗಳ ಬಗ್ಗೆ ತಿಳಿಸಿವೆ.

 

*****


(रिलीज़ आईडी: 2220226) आगंतुक पटल : 2
इस विज्ञप्ति को इन भाषाओं में पढ़ें: English , Urdu , हिन्दी , Malayalam