ಹಣಕಾಸು ಸಚಿವಾಲಯ
ಸ್ಥಿರತೆಯಿಂದ ಸದೃಢತೆವರೆಗೆ: ಹಣದುಬ್ಬರ ಇಳಿಕೆಯಾಗುವುದರೊಂದಿಗೆ ಬೆಳವಣಿಗೆಗೂ ವೇಗ
ಪ್ರಮುಖ ಹಣದುಬ್ಬರದಲ್ಲಿ ತೀವ್ರ ಕುಸಿತ ದಾಖಲಿಸಿದ ಭಾರತ; ಮೊದಲ ಮೂರು ತ್ರೈಮಾಸಿಕಗಳಲ್ಲಿ (ಏಪ್ರಿಲ್ ನಿಂದ ಡಿಸೆಂಬರ್ 2025) ದೇಶೀಯ ಹಣದುಬ್ಬರ ಸರಾಸರಿ ಶೇ.1.7
2026-27ರಲ್ಲಿ ಹಣದುಬ್ಬರವು ದುರ್ಬಲವಾಗಿರುತ್ತದೆಂದು 25-26 ಆರ್ಥಿಕ ಸಮೀಕ್ಷೆ ಹೇಳಿಕೆ
प्रविष्टि तिथि:
29 JAN 2026 2:16PM by PIB Bengaluru
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ 2025-26ರ ಆರ್ಥಿಕ ಸಮೀಕ್ಷೆಯಲ್ಲಿ ಏಪ್ರಿಲ್-ಡಿಸೆಂಬರ್ 2025 ರ ಸರಾಸರಿ ಹಣದುಬ್ಬರವು ಶೇ.1.7 ರಷ್ಟಾಗುವುದರೊಂದಿಗೆ ಸಿಪಿಐ ಸರಣಿಯ ಆರಂಭವಾದಾಗಿನಿಂದಲೂ ಭಾರತವು ಅತ್ಯಂತ ಕಡಿಮೆ ಹಣದುಬ್ಬರ ದರವನ್ನು ದಾಖಲಿಸಿದೆ ಎಂದು ಹೇಳಿದ್ದಾರೆ . ಚಿಲ್ಲರೆ ಹಣದುಬ್ಬರದಲ್ಲಿನ ಮಂದಗತಿಯು ಪ್ರಾಥಮಿಕವಾಗಿ ಆಹಾರ ಮತ್ತು ಇಂಧನ ಬೆಲೆಗಳಲ್ಲಿನ ಸಾಮಾನ್ಯ ಹಣದುಬ್ಬರ ಇಳಿಕೆ ಪ್ರವೃತ್ತಿಗೆ ಕಾರಣವಾಗಿದ್ದು, ಇದು ಒಟ್ಟಾರೆಯಾಗಿ ಭಾರತದ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಶೇ.52.7 ರಷ್ಟಿದೆ.
ಮುಖ್ಯವಾಗಿ ಸಮೀಕ್ಷೆಯಲ್ಲಿ, ಪ್ರಮುಖ ಉದಯೋನ್ಮುಖ ಮಾರುಕಟ್ಟೆಗಳು ಮತ್ತು ಅಭಿವೃದ್ಧಿಶೀಲ ಆರ್ಥಿಕತೆಗಳಲ್ಲಿ (EMDE ಗಳು) ಭಾರತವು 2025ರಲ್ಲಿ ಮುಖ್ಯ ಹಣದುಬ್ಬರದಲ್ಲಿ ಸುಮಾರು 1.8 ಶೇಕಡಾ ಅಂಕಗಳಷ್ಟು ತೀವ್ರ ಕುಸಿತವನ್ನು ದಾಖಲಿಸಿದೆ,ಎಂದು ಉಲ್ಲೇಖಿಸಲಾಗಿದೆ. ಮುಖ್ಯವಾಗಿ, ಈ ಹಣದುಬ್ಬರ ಇಳಿಕೆಯು 2026ರ ಮೊದಲ ಹಣಕಾಸು ವರ್ಷದಲ್ಲಿ ಶೇ.8ರಷ್ಟು ಸದೃಢ ಜಿಡಿಪಿ (GDP) ಬೆಳವಣಿಗೆಯೊಂದಿಗೆ ಘಟಿಸಿದ್ದು, ಇದು ಭಾರತದ ಸದೃಢ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳನ್ನು ಮತ್ತು ಬೆಳವಣಿಗೆಯನ್ನು ಉಳಿಸಿಕೊಳ್ಳುವ ಸಾಮರ್ಥ್ಯವನ್ನು ಒತ್ತಿಹೇಳುತ್ತದೆ. ಆದರೆ ಬೆಲೆ ಒತ್ತಡಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತದೆ ಅಥವಾ ಬೇರೆ ರೀತಿಯಲ್ಲಿ ಹೇಳುವುದಾದರೆ ಅಧಿಕವಾಗದಂತೆ ನಿಯಂತ್ರಿಸಿದೆ.
ಭಾರತದ ಸಾವರಿನ್ ರೇಟಿಂಗ್ ಅನ್ನು ಅಪ್‌ಗ್ರೇಡ್ ಮಾಡುವಾಗ ಜಾಗತಿಕ ರೇಟಿಂಗ್ ಏಜೆನ್ಸಿಗಳು ಭಾರತದ ಹಣದುಬ್ಬರ ನಿರ್ವಹಣೆಯ ವಿಶ್ವಾಸಾರ್ಹತೆ ಮತ್ತು ಪರಿಣಾಮಕಾರಿತ್ವವನ್ನು ಸಹ ಒಪ್ಪಿಕೊಂಡಿವೆ. ಎಸ್ ಅಂಡ್ ಪಿ ವಿಶ್ಲೇಷಿಸಿರುವಂತೆ “ಹಣದುಬ್ಬರ ಗುರಿ ಬದಲಾಯಿಸಲು ಹಣಕಾಸು ನೀತಿ ಸುಧಾರಣೆಗಳಿಂದ ಲಾಭವಾಗಿದೆ. ಹಣದುಬ್ಬರ ನಿರೀಕ್ಷೆಗಳು ಒಂದು ದಶಕದ ಹಿಂದೆ ಇದ್ದಕ್ಕಿಂತ ಉತ್ತಮವಾಗಿವೆ. 2008 ಮತ್ತು 2014 ರ ನಡುವೆ, ಭಾರತದ ಹಣದುಬ್ಬರವು ಹಲವು ಸಂದರ್ಭಗಳಲ್ಲಿ ಎರಡಂಕಿಗಳನ್ನು ತಲುಪಿದೆ. ಕಳೆದ ಮೂರು ವರ್ಷಗಳಲ್ಲಿ, ಜಾಗತಿಕ ಇಂಧನ ಬೆಲೆಗಳಲ್ಲಿನ ಏರಿಳಿತ ಮತ್ತು ಪೂರೈಕೆ ವಲಯಗಳಲ್ಲಿ ಆಘಾತಗಳ ಹೊರತಾಗಿಯೂ, ಸಿಪಿಐ ಬೆಳವಣಿಗೆಯು ಸರಾಸರಿ ಶೇ.5.5 ರಷ್ಟಿತ್ತು. ಇತ್ತೀಚಿನ ತಿಂಗಳುಗಳಲ್ಲಿ, ಅದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗುರಿ ವ್ಯಾಪ್ತಿಯ ಶೇ.2 ರಿಂದ 6 ಕೆಳ ಮಿತಿಯಲ್ಲಿಯೇ ಇತ್ತು. ತೀವ್ರವಾದ ದೇಶೀಯ ಬಂಡವಾಳ ಮಾರುಕಟ್ಟೆಯೊಂದಿಗೆ ಈ ಬೆಳವಣಿಗೆಗಳು, ವಿತ್ತೀಯ ಸ್ಥಿತಿಗತಿಗಳಿಗೆ ಹೆಚ್ಚು ಸ್ಥಿರ ಮತ್ತು ಬೆಂಬಲಿದ ವಾತಾವರಣವನ್ನು ಪ್ರತಿಬಿಂಬಿಸುತ್ತವೆ."
ಜಾಗತಿಕ ಹಣದುಬ್ಬರ ಬೆಳವಣಿಗೆಗಳು
ಈ ವರ್ಷ ಮುಂದುವರಿದ, ಉದಯೋನ್ಮುಖ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳಲ್ಲಿ ಹಣದುಬ್ಬರದಲ್ಲಿ ವಿಸ್ತೃತವಾದ ಮತ್ತು ನಿರಂತರ ಮಿತಿಗೊಳಿಸುವಿಕೆಯನ್ನು ಜಗತ್ತು ಕಂಡಿದೆ. ಜಾಗತಿಕ ಹಣದುಬ್ಬರವು ಸಿವೈ 2022 ರಲ್ಲಿ ಗರಿಷ್ಠ ಶೇ.8.7 ರಿಂದ ಸಿವೈ 2025 ರಲ್ಲಿ ಶೇಕಡ 4.2 ಕ್ಕೆ ಇಳಿದಿದೆ.
ರಷ್ಯಾ-ಉಕ್ರೇನ್ ಯುದ್ಧದ ಹೊರತಾಗಿಯೂ ಪ್ರಮುಖ ಸೇವೆಗಳ ಹಣದುಬ್ಬರವನ್ನು ಮಧ್ಯಮಗೊಳಿಸುವುದು, ಪ್ರಮುಖ ಸರಕುಗಳ ಬೆಲೆಗಳಲ್ಲಿ ನಿರಂತರ ನಕಾರಾತ್ಮಕ ಹಣದುಬ್ಬರ, ಇಂಧನ ಮತ್ತು ಆಹಾರ ಬೆಲೆಗಳನ್ನು ಕೈಗೆಟುಕಟುವಂತೆ ಮಾಡುವುದು ಮುಂತಾದ ಇಳಿಕೆ ಪ್ರವೃತ್ತಿಗಳಿಂದ ಅಮೆರಿಕಾ ಮತ್ತು ಯೂರೋ ಪ್ರದೇಶವು ತನ್ನ ಪ್ರಮುಖ ಹಣದುಬ್ಬರದಲ್ಲಿ ಸ್ವಲ್ಪ ಮಿತಿಯನ್ನು ಕಂಡಿದೆ.
ತೈಲ ಮತ್ತು ಆಹಾರ ಬೆಲೆಗಳಲ್ಲಿನ ಸಾಮಾನ್ಯ ಕುಸಿತ ಮತ್ತು ಪ್ರಮುಖ ಸರಕುಗಳಲ್ಲಿನ ಹಣದುಬ್ಬರವನ್ನು ಇಳಿಕೆಯಾಗಿರುವುದರಿಂದ ಜಾಗತಿಕ ಹಣದುಬ್ಬರ ಒತ್ತಡಗಳು ನಿಯಂತ್ರಿಸಲ್ಪಟ್ಟವು. ಹೆಚ್ಚಿನ ಇಡಿಎಂಇ ಗಳಲ್ಲಿ ಆರ್ಥಿಕ ಬೆಳವಣಿಗೆಯು ಇಡಿಎಂಇ ಸರಾಸರಿ ಶೇ.4.2 ಕ್ಕಿಂತ ಕಡಿಮೆಯಿದ್ದರೂ ಸಹ ಹಣದುಬ್ಬರದ ಫಲಿತಾಂಶಗಳು ದೇಶಗಳಲ್ಲಿ ವ್ಯಾಪಕವಾಗಿ ಬದಲಾಗುತ್ತಿದ್ದವು. ಬ್ರೆಜಿಲ್‌ನಲ್ಲಿ, 2025 ರಲ್ಲಿ ಹಣದುಬ್ಬರವು ಶೇ.5.2ಕ್ಕೆ ಏರಿತು. ರಷ್ಯಾ ನಿರಂತರವಾಗಿ ಹೆಚ್ಚಿನ ಹಣದುಬ್ಬರದೊಂದಿಗೆ ಜಿಡಿಪಿ ಬೆಳವಣಿಗೆಯನ್ನು ತಗ್ಗಿಸಿತು, ಅದಕ್ಕೆ ವ್ಯತಿರಿಕ್ತವಾಗಿ, ಮಲೇಷ್ಯಾ, ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್ ಸೇರಿದಂತೆ ಹಲವಾರು ಪ್ರಮುಖ ಆಗ್ನೇಯ ಏಷ್ಯಾದ ಆರ್ಥಿಕತೆಗಳಲ್ಲಿ ಹಣದುಬ್ಬರವು ಮಧ್ಯಮ ಮಟ್ಟ ತಲುಪಿದವು, ಇದರಿಂದಾಗಿ ಆಮದು ಮಾಡಿಕೊಂಡ ಸರಕುಗಳ ವೆಚ್ಚಗಳು ಗಮನಾರ್ಹವಾಗಿ ಕಡಿಮೆಯಾಗಿವೆ. ಚೀನಾವು ಈ ವರ್ಷದಲ್ಲಿ ಗಮನಾರ್ಹ ಹಣದುಬ್ಬರವಿಳಿತವನ್ನು ಅನುಭವಿಸಿತು, ಇದಕ್ಕೆ ದುರ್ಬಲ ದೇಶೀಯ ಬೇಡಿಕೆ, ಸುಂಕದ ನಿಯಮಗಳಿಂದ ಉಂಟಾಗುವ ರಫ್ತು ಒತ್ತಡಗಳು ಕಾರಣವಾಗಿವೆ.
ಪ್ರಮುಖ ಇಡಿಎಂಇ ಗಳಲ್ಲಿ, ಭಾರತವು ಪ್ರಮುಖ ಹಣದುಬ್ಬರದಲ್ಲಿ ತೀವ್ರ ಕುಸಿತವನ್ನು ದಾಖಲಿಸಿದ್ದು, ಇದು ಸುಮಾರು ಶೇ.1.8 ರಷ್ಟಿದೆ. ಪ್ರಮುಖವಾಗಿ ಈ ಹಣದುಬ್ಬರವಿಳಿತವು 2025-26 ರ ಮೊದಲಾರ್ಧದಲ್ಲಿ ಶೇ.8 ರಷ್ಟು ಸದೃಢವಾದ ಜಿಡಿಪಿ ಬೆಳವಣಿಗೆಯೊಂದಿಗೆ ಘಟಿಸಿದೆ, ಇದು ಭಾರತದ ಸದೃಢ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳನ್ನು ಮತ್ತು ಬೆಲೆ ಒತ್ತಡಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಾಗ ಬೆಳವಣಿಗೆಯನ್ನು ಉಳಿಸಿಕೊಳ್ಳುವ ಸಾಮರ್ಥ್ಯವನ್ನು ಒತ್ತಿಹೇಳುತ್ತದೆ.

ದೇಶೀಯ ಹಣದುಬ್ಬರ
ಕಳೆದ ನಾಲ್ಕು ವರ್ಷಗಳಲ್ಲಿ ಸಿಪಿಐ ನಿಂದ ಅಳೆಯಲ್ಪಟ್ಟ ಸರಾಸರಿ ಚಿಲ್ಲರೆ ಹಣದುಬ್ಬರವು ಸ್ಪಷ್ಟವಾದ ಇಳಿಕೆಯ ಪಥವನ್ನು ಅನುಸರಿಸಿದೆ 2022–23ರಲ್ಲಿ ಶೇ.6.7 ರಿಂದ 2025ರ ಡಿಸೆಂಬರ್ ವರೆಗೆ ಶೇ.1.7 ಕ್ಕೆ ಸ್ಥಿರವಾಗಿ ಇಳಿದಿದೆ.

2025–26ರ ಮೊದಲಾರ್ಧದಲ್ಲಿ ಹಣದುಬ್ಬರವು ಏಪ್ರಿಲ್ 2025 ರಲ್ಲಿ ಶೇ. 3.2 ರಿಂದ ಸೆಪ್ಟೆಂಬರ್ 2025 ರಲ್ಲಿ ಶೇ. 1.4 ಕ್ಕೆ ತೀವ್ರವಾಗಿ ಇಳಿದಿದೆ, ಆ ಅವಧಿಯಲ್ಲಿ ಸರಾಸರಿ ಶೇ. 2.2ರಷ್ಟು ಇಳಿಕೆಯಾಗಿದೆ. 2025ರ ಅಕ್ಟೋಬರ್ ನಲ್ಲಿ ಹಣದುಬ್ಬರವು ಶೇ.0.3 ಕ್ಕೆ ಇಳಿದಿದೆ - ಪ್ರಸ್ತುತ CPI (2012=100) ಸರಣಿಯಲ್ಲಿ ಅತ್ಯಂತ ಕಡಿಮೆ ಇದೆ. ಈ ಹಣದುಬ್ಬರವು ಪ್ರಾಥಮಿಕವಾಗಿ ಆಹಾರ ಪದಾರ್ಥಗಳಿಂದ ಮುನ್ನಡೆಸಲ್ಪಟ್ಟಿದ್ದು, ಇದು ಅನುಕೂಲಕರ ಹವಾಮಾನ ಪರಿಸ್ಥಿತಿಗಳು ಮತ್ತು ಪೂರೈಕೆಯನ್ನು ಹೆಚ್ಚಿಸಿದ ಹೆಚ್ಚಿನ ಉತ್ಪಾದನೆಯನ್ನು ಪ್ರತಿಬಿಂಬಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಆಹಾರ ಮತ್ತು ಇಂಧನದಂತಹ ವಲಯಗಳನ್ನು ಹೊರತುಪಡಿಸಿದ ಕೋರ್ ಹಣದುಬ್ಬರವು ತುಲನಾತ್ಮಕವಾಗಿ ಸ್ಥಿರವಾಗಿದೆ ಮತ್ತು ಈ ಅವಧಿಯಲ್ಲಿ ಸಾಧಾರಣ ಏರಿಕೆಯನ್ನು ತೋರಿಸಿದೆ, ಅಕ್ಟೋಬರ್ 2024 ರಲ್ಲಿ ಶೇ.3.8 ರಿಂದ 2025ರ ಡಿಸೆಂಬರ್ ಶೇ.4.62 ಕ್ಕೆ ಏರಿದೆ.
ಮೂಲ ಹಣದುಬ್ಬರದ ಹೆಚ್ಚಳವು ಸರಾಸರಿಯಲ್ಲಿ ಹೆಚ್ಚಾಗಿ ಅಮೂಲ್ಯ ಲೋಹಗಳಾದ ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿನ ತೀವ್ರ ಏರಿಕೆಯಿಂದ ಉಂಟಾಗಿದ್ದು, ಇದು ಹೆಚ್ಚಿದ ಜಾಗತಿಕ ಅನಿಶ್ಚಿತತೆ ಮತ್ತು ಸುರಕ್ಷಿತೆ ಆಧರಿಸಿದ ಬೇಡಿಕೆಯ ನಡುವೆ ಜೀವಿತಾವಧಿಯ ಗರಿಷ್ಠ ಮಟ್ಟವನ್ನು ತಲುಪಿದೆ. ಈ ಅಂಶಗಳನ್ನು ಹೊರತುಪಡಿಸಿದಾಗ ಮೂಲ ಹಣದುಬ್ಬರವು ಕ್ಷೀಣಿಸುತ್ತಿರುವ ಪಥವನ್ನು ಪ್ರದರ್ಶಿಸುತ್ತದೆ, ಇದು ಮುಖ್ಯ ಹಣದುಬ್ಬರದಲ್ಲಿನ ಮಿತಿಯನ್ನು ವಿಶಾಲವಾಗಿ ಪ್ರತಿಬಿಂಬಿಸುತ್ತದೆ.
ಆಹಾರ ಹಣದುಬ್ಬರ ಇಳಿಕೆಗೆ ಚಾಲನಾಶಕ್ತಿ
ಆಹಾರ ಹಣದುಬ್ಬರವು ವರ್ಷವಿಡೀ ಸ್ಥಿರವಾದ ಕುಸಿತವನ್ನು ಕಂಡಿದ್ದು, 2025ರ ಜೂನ್ ನಿಂದ ಹಣದುಬ್ಬರವಿಳಿತದ ಆಯಾಮವನ್ನು ಪ್ರವೇಶಿಸಿದೆ. ತರಕಾರಿ ಬೆಲೆಗಳಲ್ಲಿನ ನಿರಂತರ ಮತ್ತು ತೀವ್ರ ಕುಸಿತವು ಪ್ರಮುಖವಾಗಿ ಈ ನಿಯಂತ್ರಣಕ್ಕೆ ಕಾರಣವಾಗಿದ್ದು, ಇದು ವರ್ಷದ ಬಹುಪಾಲು ಕಾಲ ತೀವ್ರವಾಗಿ ನಕಾರಾತ್ಮಕವಾಗಿ ಉಳಿದಿದ್ದು, ಸುಮಾರು ಒಂಬತ್ತು ತಿಂಗಳುಗಳಿಂದ ದ್ವಿದಳ ಧಾನ್ಯಗಳ ಹಣದುಬ್ಬರದಲ್ಲಿ ನಿರಂತರ ಕುಸಿತ ಕಂಡುಬಂದಿದೆ. ಒಟ್ಟಾರೆ, ಸಕಾಲಿಕ ವ್ಯಾಪಾರ ನೀತಿ ನಿರ್ಧಾರಗಳು, ಕಾರ್ಯತಂತ್ರದ ಬಫರ್ ಸ್ಟಾಕ್ ನಿರ್ವಹಣೆ ಮತ್ತು ಉದ್ದೇಶಿತ ಮಾರುಕಟ್ಟೆ ಮಧ್ಯಸ್ಥಿಕೆಗಳು ದ್ವಿದಳ ಧಾನ್ಯಗಳ ಬೆಲೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅನುವು ಮಾಡಿಕೊಟ್ಟಿವೆ, ಕಳೆದೊಂದು ದಶಕದಲ್ಲಿ ಚಿಲ್ಲರೆ ಬೆಲೆಯ ಏರಿಳಿತವು ಮಾರ್ಡರೇಟ್ (ಮಧ್ಯಮ) ಆಗಿದೆ.
ಆಹಾರ ವಲಯದಲ್ಲಿ, ಮೊಟ್ಟೆ, ಮಾಂಸ ಮತ್ತು ಮೀನುಗಳಂತಹ ಪ್ರೋಟೀನ್ ಯುಕ್ತ ಆಹಾರ ಪದಾರ್ಥಗಳ ಬೆಲೆಗಳು ಕೆಲವು ತಿಂಗಳುಗಳ ಕಾಲ ಕಡಿಮೆಯಾಗಿದ್ದವು, ಆದರೆ ನಂತರದ ತಿಂಗಳುಗಳಲ್ಲಿ ಶೀಘ್ರದಲ್ಲೇ ಚೇತರಿಸಿಕೊಂಡವು. ಆದರೂ ಹಾಲಿನ ಉತ್ಪನ್ನಗಳ ಹಣದುಬ್ಬರವು ಸುಮಾರು ಶೇ.2.6 ರಷ್ಟಲ್ಲಿ ಸ್ಥಿರವಾಗಿತ್ತು.
ತೋಟಗಾರಿಕಾ ಉತ್ಪನ್ನಗಳ ಬೆಲೆಗಳು ತೀವ್ರವಾಗಿ ಕುಸಿದವು. ಆಲೂಗಡ್ಡೆ, ಈರುಳ್ಳಿ, ಟೊಮೆಟೊ ಮತ್ತು ಬೆಳ್ಳುಳ್ಳಿ ಬೆಲೆಗಳಲ್ಲಿ ಏರಿಳಿಕೆ ವಿಶೇಷವಾಗಿ ಕಂಡುಬಂದಿದ್ದು, ಬೆಲೆ 20 ರಿಂದ 40hmb ನಡುವೆ ಕುಸಿತ ಕಂಡುಬಂದಿದೆ.
ಆಹಾರ ತೈಲದ ಮೇಲಿನ ಮೂಲ ಕಸ್ಟಮ್ಸ್ ಸುಂಕದಲ್ಲಿನ ಕಡಿತವು 2025ರ ಆಗಸ್ಟ್ ನಿಂದ ಖಾದ್ಯ ತೈಲ ಹಣದುಬ್ಬರದ ವೇಗವನ್ನು ತಗ್ಗಿಸಿದೆ.
ಮೂಲ ಹಣದುಬ್ಬರ
ಕಳೆದ ಎರಡು ವರ್ಷಗಳಿಂದೀಚೆಗೆ ಬಟ್ಟೆ ಮತ್ತು ಪಾದರಕ್ಷೆಗಳು, ವಸತಿ, ಆರೋಗ್ಯದಲ್ಲಿ ಹಣದುಬ್ಬರ ಕ್ರಮೇಣ ಕಡಿಮೆಯಾಗುತ್ತಿದೆ. ಆದರೆ ಸಾರಿಗೆ ಮತ್ತು ಸಂವಹನದಲ್ಲಿ ಏರಿಕೆಯಾಗುತ್ತಿದೆ. ಈ ಹಣದುಬ್ಬರವು ಸರಕುಗಳ ಮಾರುಕಟ್ಟೆಗಳಲ್ಲಿ ಸರಾಗಗೊಳಿಸುವ ಇನ್ಪುಟ್ ವೆಚ್ಚಗಳು, ಸುಧಾರಿತ ಪೂರೈಕೆ ಪರಿಸ್ಥಿತಿಗಳು ಮತ್ತು ಬೆಲೆಗಳು ಹೆಚ್ಚಾಗಿ ಹೊಂದಿಕೊಳ್ಳುವ ಸ್ಪರ್ಧಾತ್ಮಕ ಒತ್ತಡಗಳನ್ನು ಪ್ರತಿಬಿಂಬಿಸುತ್ತದೆ. ಇದಕ್ಕೆ ವಿರುದ್ಧವಾಗಿ ಸಾರಿಗೆ ಮತ್ತು ಸಂವಹನ ಹಣದುಬ್ಬರವು ಸರಾಸರಿ ಕಡಿಮೆಯಾಗಿದೆ.ಆದರೆ ಎಪಿಸೋಡಿಕ್ ಚಲನೆಗಳನ್ನು ಪ್ರದರ್ಶಿಸುತ್ತದೆ. ಈ ಅಲ್ಪಾವಧಿಯ ಏರಿಳಿತಗಳು ದರಗಳು, ಇಂಧನ-ಸಂಬಂಧಿತ ಸೇವೆಗಳು ಮತ್ತು ಟೆಲಿಕಾಂ ಬೆಲೆಯಲ್ಲಿನ ಬದಲಾವಣೆಗಳಂತಹ ನಿರ್ದಿಷ್ಟ ಉಪ-ಘಟಕಗಳಿಂದ ನಡೆಸಲ್ಪಡುತ್ತವೆ. ಆದರೂ 2025ರ ಜೂನ್ ನಿಂದ ಸಾರಿಗೆ ಮತ್ತು ಸಂವಹನ ವಲಯದಲ್ಲಿ ಹಣದುಬ್ಬರ ಕಡಿತದ ಪ್ರವೃತ್ತಿಗಳು ಕಾಣಿಸಿಕೊಂಡಿವೆ.
ಹಣದುಬ್ಬರ: ಪ್ರಾದೇಶಿಕ ಚಿತ್ರಣ
ರಾಜ್ಯ ಮಟ್ಟದ ಹಣದುಬ್ಬರಗಳು ಆರ್‌ಬಿಐನ ಹಣದುಬ್ಬರ ಸಹಿಷ್ಣುತೆಯ ಮಿತಿಯೊಳಗೆ ಉಳಿದಿದ್ದರೂ ಸಹ ಪ್ರಾದೇಶಿಕ ಹಣದುಬ್ಬರ ಮಾದರಿಗಳು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಏರಿಳಿತಗಳನ್ನು ಬಹಿರಂಗಪಡಿಸುತ್ತವೆ. ಅದಕ್ಕೆ ಕಾರಣ ಬಳಕೆಯ ಬುಟ್ಟಿಯಲ್ಲಿ ಹೆಚ್ಚಿನ ಆಹಾರ ತೂಕವಿರುವುದು. ಹಿಂದಿನ ವರ್ಷಗಳಿಗಿಂತ (2023, 2024) ಭಿನ್ನವಾಗಿ, ಗ್ರಾಮೀಣ ಹಣದುಬ್ಬರವು ನಗರ ಹಣದುಬ್ಬರಕ್ಕಿಂತ ಕಡಿಮೆ ಇದ್ದು, ಇದರಿಂದಾಗಿ ಗ್ರಾಮೀಣ ಒತ್ತಡ ಮತ್ತಷ್ಟು ಕಡಿಮೆಯಾಗಿದೆ.
ಬಾಹ್ಯ ನೋಟ
2027ನೇ ಹಣಕಾಸು ವರ್ಷಕ್ಕೆ ಆರ್ ಬಿಐ ಮತ್ತು ಐಎಂಎಫ್ ಎರಡೂ ಹಣದುಬ್ಬರದಲ್ಲಿ ಮಧ್ಯಮ ಏರಿಕೆಯನ್ನು ನಿರೀಕ್ಷಿಸುತ್ತಿವೆ. ಆದರೂ ಇದು ಎಂಪಿಸಿ ಯ ಶೇ.2 ರಿಂದ 6 ಗುರಿ ವ್ಯಾಪ್ತಿಯಲ್ಲಿ ಉಳಿಯುವ ನಿರೀಕ್ಷೆಯಿದೆ. ಆರ್ಥಿಕ ಸಮೀಕ್ಷೆಯು ಇದೇ ರೀತಿ ಹಣಕಾಸು ವರ್ಷ 26 ಕ್ಕೆ ಹೋಲಿಸಿದರೆ ಸ್ವಲ್ಪ ಹೆಚ್ಚಿನ ಹೆಡ್‌ಲೈನ್ ಮತ್ತು ಮೂಲ ಹಣದುಬ್ಬರವನ್ನು (ಅಮೂಲ್ಯ ಲೋಹಗಳನ್ನು ಹೊರತುಪಡಿಸಿ) ನಿರೀಕ್ಷಿಸುತ್ತದೆ. ಆದರೂ ಸಹ ಹಣದುಬ್ಬರದ ಒತ್ತಡಗಳು ನಿಯಂತ್ರಣದಲ್ಲಿ ಉಳಿಯುವ ನಿರೀಕ್ಷೆಯಿದೆ.
ಸಮೀಕ್ಷೆಯ ಮುನ್ನೋಟವು ಅನುಕೂಲಕರವಾಗಿಯೇ ಇದೆ, ಹಣದುಬ್ಬರವು ಗುರಿ ವ್ಯಾಪ್ತಿಯಲ್ಲಿ ಉಳಿಯುವ ಮುನ್ಸೂಚನೆಗಳು, ಸದೃಢ ಕೃಷಿ ಉತ್ಪಾದನೆ, ಸ್ಥಿರವಾದ ಜಾಗತಿಕ ಸರಕು ಬೆಲೆಗಳು ಮತ್ತು ನಿರಂತರ ನೀತಿ ಜಾಗರೂಕತೆಯಿಂದ ಬೆಂಬಲಿತವಾಗಿವೆ. ಆದರೂ ಕರೆನ್ಸಿ ಏರಿಳಿತಗಳು, ಮೂಲ ಲೋಹದ ಬೆಲೆ ಏರಿಕೆಗಳು ಮತ್ತು ಜಾಗತಿಕ ಅನಿಶ್ಚಿತತೆಗಳಿಂದ ಅಪಾಯಗಳನ್ನು ಇದು ಎಚ್ಚರಿಸುತ್ತದೆ, ಇದು ನಿರಂತರ ಮೇಲ್ವಿಚಾರಣೆ ಮತ್ತು ಹೊಂದಾಣಿಕೆಯ ನೀತಿ ಪ್ರತಿಕ್ರಿಯೆಗಳನ್ನು ಖಾತ್ರಿಪಡಿಸುತ್ತದೆ.
*****
(रिलीज़ आईडी: 2220159)
आगंतुक पटल : 5