ಪ್ರಧಾನ ಮಂತ್ರಿಯವರ ಕಛೇರಿ
'ಬೀಟಿಂಗ್ ರಿಟ್ರೀಟ್' ಸಮಾರಂಭವು ಭಾರತದ ಶ್ರೀಮಂತ ಮಿಲಿಟರಿ ಪರಂಪರೆಯ ಶಕ್ತಿಯನ್ನು ಪ್ರದರ್ಶಿಸುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.
ವಿಜಯದಲ್ಲಿ ಬುದ್ಧಿವಂತಿಕೆ ಮತ್ತು ಗೌರವದ ಮಹತ್ವ ಸಾರುವ ಸಂಸ್ಕೃತ ಸುಭಾಷಿತವನ್ನು ಪ್ರಧಾನಮಂತ್ರಿಯವರು ಹಂಚಿಕೊಂಡಿದ್ದಾರೆ
प्रविष्टि तिथि:
29 JAN 2026 9:51AM by PIB Bengaluru
'ಬೀಟಿಂಗ್ ರಿಟ್ರೀಟ್' ಸಮಾರಂಭವು ಗಣರಾಜ್ಯೋತ್ಸವ ಕಾರ್ಯಕ್ರಮದ ಮುಕ್ತಾಯವನ್ನು ಸಂಕೇತಿಸುತ್ತದೆ ಮತ್ತು ಭಾರತದ ಶ್ರೀಮಂತ ಮಿಲಿಟರಿ ಪರಂಪರೆಯ ಶಕ್ತಿಯನ್ನು ಪ್ರದರ್ಶಿಸುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. "ದೇಶದ ರಕ್ಷಣೆಗೆ ಸಮರ್ಪಿತವಾಗಿರುವ ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ನಮಗೆ ತುಂಬಾ ಹೆಮ್ಮೆ ಅನಿಸುತ್ತದೆ" ಎಂದು ಶ್ರೀ ಮೋದಿ ಬಣ್ಣಿಸಿದ್ದಾರೆ.
ಯೋಧನೊಬ್ಬ ಗೆಲುವಿನತ್ತ ಸಾಗುವಾಗ ಬುದ್ಧಿವಂತಿಕೆ ಮತ್ತು ಗೌರವವನ್ನು ಸಾರುವ ಸಂಸ್ಕೃತ ಸುಭಾಷಿತವನ್ನು ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಹಂಚಿಕೊಂಡಿದ್ದಾರೆ.
"एको बहूनामसि मन्य ईडिता विशं विशं युद्धाय सं शिशाधि।
अकृत्तरुक्त्वया युजा वयं द्युमन्तं घोषं विजयाय कृण्मसि॥"
ಈ ಸುಭಾಷಿತವು ಹೀಗೆ ಹೇಳುತ್ತದೆ, ವೀರ ಯೋಧ! ನಿಮ್ಮ ಸಿಟ್ಟು ಬುದ್ಧಿವಂತಿಕೆಯಿಂದ ಮಾರ್ಗದರ್ಶಿಸಲ್ಪಡಬೇಕು. ಸಾವಿರಾರು ಜನರ ನಡುವೆ ನೀನು ವೀರ. ಆಡಳಿತ ನಡೆಸಲು ಮತ್ತು ಗೌರವದಿಂದ ಹೋರಾಡಲು ನಿನ್ನ ಜನತೆಗೆ ಕಲಿಸು. ನಾವು ವಿಜಯದತ್ತ ಸಾಗುತ್ತಿರುವಾಗ ನಿಮ್ಮೊಂದಿಗೆ ಹುರಿದುಂಬಿಸಲು ನಾವು ಬಯಸುತ್ತೇವೆ!
ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ;
“आज शाम बीटिंग रिट्रीट का आयोजन होगा। यह गणतंत्र दिवस समारोहों के समापन का प्रतीक है। इसमें भारत की समृद्ध सैन्य विरासत की शक्ति दिखाई देगी। देश की रक्षा में समर्पित अपने सशस्त्र बलों पर हमें अत्यंत गर्व है।
एको बहूनामसि मन्य ईडिता विशं विशं युद्धाय सं शिशाधि।
अकृत्तरुक्त्वया युजा वयं द्युमन्तं घोषं विजयाय कृण्मसि॥"
******
(रिलीज़ आईडी: 2219921)
आगंतुक पटल : 11
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Assamese
,
Manipuri
,
Punjabi
,
Gujarati
,
Tamil
,
Telugu
,
Malayalam