ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸರ್ ಮಾರ್ಕ್ ಟುಲ್ಲಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಮಂತ್ರಿ 

प्रविष्टि तिथि: 25 JAN 2026 7:11PM by PIB Bengaluru

ಪತ್ರಿಕೋದ್ಯಮದ ಶ್ರೇಷ್ಠ ಧ್ವನಿಯಾಗಿದ್ದ ಸರ್ ಮಾರ್ಕ್ ಟುಲ್ಲಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ಭಾರತ ಮತ್ತು ಅದರ ಜನರೊಂದಿಗೆ ಸರ್ ಮಾರ್ಕ್ ಟುಲ್ಲಿ ಅವರ ಗಾಢವಾದ ಸಂಪರ್ಕವು ಅವರ ಕೃತಿಗಳಲ್ಲಿ ಸ್ಪಷ್ಟವಾಗಿ ಪ್ರತಿಫಲಿಸುತ್ತದೆ ಎಂದು ಪ್ರಧಾನಮಂತ್ರಿ ಅವರು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ. ಸರ್ ಮಾರ್ಕ್ ಅವರ ವರದಿಗಾರಿಕೆ ಮತ್ತು ಒಳನೋಟಗಳು ಸಾರ್ವಜನಿಕ ಚರ್ಚೆಯಲ್ಲಿ ಶಾಶ್ವತವಾದ ಗುರುತು ಬಿಟ್ಟಿವೆ ಎಂದು ಅವರು ಹೇಳಿದ್ದಾರೆ.

ಸರ್ ಮಾರ್ಕ್ ಟುಲ್ಲಿ ಅವರ ಅಗಲಿಕೆ ನಿಟ್ಟಿನಲ್ಲಿ ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಪ್ರಧಾನಮಂತ್ರಿಯವರು ತಮ್ಮ ಸಂತಾಪ ಸೂಚಿಸಿದರು.

ಪ್ರಧಾನಮಂತ್ರಿ ಅವರು ಎಕ್ಸ್ ತಾಣದಲ್ಲಿ ಈ ರೀತಿ  ಬರೆದಿದ್ದಾರೆ;

“ಪತ್ರಿಕೋದ್ಯಮದ ಶ್ರೇಷ್ಠ ಧ್ವನಿಯಾಗಿದ್ದ ಸರ್ ಮಾರ್ಕ್ ಟುಲ್ಲಿ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಭಾರತ ಮತ್ತು ನಮ್ಮ ರಾಷ್ಟ್ರದ ಜನರೊಂದಿಗಿನ ಅವರ ಸಂಪರ್ಕವು ಅವರ ಕೃತಿಗಳಲ್ಲಿ ಪ್ರತಿಫಲಿಸುತ್ತದೆ. ಅವರ ವರದಿಗಾರಿಕೆ ಮತ್ತು ಒಳನೋಟಗಳು ಸಾರ್ವಜನಿಕ ಚರ್ಚೆಯಲ್ಲಿ ಶಾಶ್ವತವಾದ ಹೆಗ್ಗುರುತು ಬಿಟ್ಟಿವೆ. ಅವರ ಕುಟುಂಬ, ಸ್ನೇಹಿತರು ಮತ್ತು ಅನೇಕ ಅಭಿಮಾನಿಗಳಿಗೆ ಸಂತಾಪ ಸೂಚಿಸುತ್ತೇನೆ.”

 

*****


(रिलीज़ आईडी: 2218859) आगंतुक पटल : 6
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Bengali , Bengali-TR , Manipuri , Punjabi , Gujarati , Odia , Telugu , Malayalam , Malayalam