ಸಂಪುಟ
ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಗೆ ಈಕ್ವಿಟಿ ಬೆಂಬಲವನ್ನು ಅನುಮೋದಿಸಿದ ಸಂಪುಟ ಸಭೆ
ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಗೆ ಸ್ಪರ್ಧಾತ್ಮಕ ದರಗಳಲ್ಲಿ ಹೆಚ್ಚುವರಿ ಸಂಪನ್ಮೂಲಗಳನ್ನು ಉತ್ಪಾದಿಸಲು ಸಾಧ್ಯವಾಗುವುದರಿಂದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂ.ಎಸ್.ಎಂ.ಇ.) ಸಕಾಲಿಕ ಸಾಲದ ಹರಿವು ಹೆಚ್ಚಾಗುತ್ತದೆ
ಸುಮಾರು 25.74 ಲಕ್ಷ ಹೊಸ ಎಂ.ಎಸ್.ಎಂ.ಇ. ಫಲಾನುಭವಿಗಳನ್ನು ಸೇರಿಸಲಾಗುವುದು
प्रविष्टि तिथि:
21 JAN 2026 12:17PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (ಎಸ್.ಐ.ಡಿ.ಬಿ.ಐ.) ಗೆ ರೂ. 5,000 ಕೋಟಿಗಳ ಈಕ್ವಿಟಿ ಬೆಂಬಲವನ್ನು ಅನುಮೋದಿಸಿದೆ.
ಒಟ್ಟಾರೆ ಮೂರು ಕಂತುಗಳಲ್ಲಿ ಹಣಕಾಸು ಸೇವೆಗಳ ಇಲಾಖೆಯು (ಡಿ.ಎಫ್.ಎಸ್.) 5000 ಕೋಟಿ ರೂ.ಗಳ ಈಕ್ವಿಟಿ ಬಂಡವಾಳವನ್ನು ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (ಎಸ್.ಐ.ಡಿ.ಬಿ.ಐ.) ಗೆ ನೀಡಲಿದೆ. ಇದರಲ್ಲಿ 2025-26ನೇ ಹಣಕಾಸು ವರ್ಷದಲ್ಲಿ 3,000 ಕೋಟಿ ರೂ.ಗಳ ಈಕ್ವಿಟಿ ಬಂಡವಾಳವನ್ನು 31.03.2025 ರಂತೆ ರೂ. 568.65/- ಪುಸ್ತಕ ಮೌಲ್ಯದಲ್ಲಿ ಈಕ್ವಿಟಿ ಪಡೆಯಲಿದೆ ಮತ್ತು 2026-27 ಮತ್ತು 2027-28ನೇ ಹಣಕಾಸು ವರ್ಷದಲ್ಲಿ ಪ್ರತಿಯೊಂದೂ ರೂ. 1,000 ಕೋಟಿ ರೂ.ಗಳ ಪುಸ್ತಕ ಮೌಲ್ಯದಲ್ಲಿ ಹಿಂದಿನ ಹಣಕಾಸು ವರ್ಷದ ಮಾರ್ಚ್ 31 ರ ಪುಸ್ತಕ ಮೌಲ್ಯದಲ್ಲಿ ಹೂಡಲಾಗುವುದು.
ಪರಿಣಾಮ:
5000 ಕೋಟಿ ರೂಪಾಯಿಗಳ ಇಕ್ವಿಟಿ ಬಂಡವಾಳ ಹೂಡಿಕೆಯ ನಂತರ, ಆರ್ಥಿಕ ನೆರವು ಪಡೆಯುವ ಎಂಎಸ್‌ಎಂಇಗಳ ಸಂಖ್ಯೆಯು ಹಣಕಾಸು ವರ್ಷ 2025ರ ಅಂತ್ಯದ ವೇಳೆಗೆ ಇದ್ದ 76.26 ಲಕ್ಷದಿಂದ ಹಣಕಾಸು ವರ್ಷ 2028ರ ಅಂತ್ಯದ ವೇಳೆಗೆ 102 ಲಕ್ಷಕ್ಕೆ ಏರುವ ನಿರೀಕ್ಷೆಯಿದೆ (ಅಂದಾಜು 25.74 ಲಕ್ಷ ಹೊಸ ಎಂಎಸ್‌ಎಂಇ ಫಲಾನುಭವಿಗಳು ಸೇರ್ಪಡೆಯಾಗಲಿದ್ದಾರೆ). ಎಂಎಸ್‌ಎಂಇ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಇತ್ತೀಚಿನ ಮಾಹಿತಿಯ ಪ್ರಕಾರ (30.09.2025 ರಂತೆ), 6.90 ಕೋಟಿ ಎಂಎಸ್‌ಎಂಇಗಳಿಂದ 30.16 ಕೋಟಿ ಉದ್ಯೋಗ ಸೃಷ್ಟಿಯಾಗಿದೆ (ಅಂದರೆ ಪ್ರತಿ ಎಂಎಸ್‌ಎಂಇ ಇಂದ 4.37 ವ್ಯಕ್ತಿಗಳಿಗೆ ಉದ್ಯೋಗ ಸೃಷ್ಟಿ). ಈ ಸರಾಸರಿಯನ್ನು ಪರಿಗಣಿಸಿದರೆ, ಹಣಕಾಸು ವರ್ಷ 2027-28ರ ಅಂತ್ಯದ ವೇಳೆಗೆ ಸೇರ್ಪಡೆಯಾಗಲಿರುವ 25.74 ಲಕ್ಷ ಹೊಸ ಎಂಎಸ್‌ಎಂಇ ಫಲಾನುಭವಿಗಳಿಂದ 1.12 ಕೋಟಿ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅಂದಾಜಿಸಲಾಗಿದೆ.
ಹಿನ್ನೆಲೆ:
ಮುಂದಿನ ಐದು ವರ್ಷಗಳಲ್ಲಿ ನಿರ್ದೇಶಿತ ಕ್ರೆಡಿಟ್ ಮತ್ತು ಆ ಪೋರ್ಟ್ಫೋಲಿಯೊದಲ್ಲಿ ನಿರೀಕ್ಷಿತ ಬೆಳವಣಿಗೆಯ ಮೇಲೆ ಕೇಂದ್ರೀಕರಿಸಿ, ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (ಎಸ್.ಐ.ಡಿ.ಬಿ.ಐ.) ಇದರ ಬ್ಯಾಲೆನ್ಸ್ ಶೀಟ್ ನಲ್ಲಿರುವ ಅಪಾಯ-ತೂಕದ ಸ್ವತ್ತುಗಳು ಗಮನಾರ್ಹವಾಗಿ ಏರಿಕೆಯಾಗುವ ನಿರೀಕ್ಷೆಯಿದೆ. ಈ ಹೆಚ್ಚಳವು ಅದೇ ಮಟ್ಟದ ಬಂಡವಾಳ-ಅಪಾಯ-ತೂಕದ ಆಸ್ತಿ ಅನುಪಾತವನ್ನು (ಸಿ.ಆರ್.ಎ.ಆರ್.) ಉಳಿಸಿಕೊಳ್ಳಲು ಹೆಚ್ಚಿನ ಬಂಡವಾಳದ ಅಗತ್ಯವಿರುತ್ತದೆ. ಸ್ಟಾರ್ಟ್-ಅಪ್ ಗಳಿಗೆ ನೀಡಲಾಗುವ ಸಾಹಸೋದ್ಯಮ ಸಾಲದೊಂದಿಗೆ, ಸಾಲದ ಹರಿವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (ಎಸ್.ಐ.ಡಿ.ಬಿ.ಐ.) ಸಂಸ್ಥೆಯು ಅಭಿವೃದ್ಧಿಪಡಿಸುತ್ತಿರುವ ಡಿಜಿಟಲ್ ಮತ್ತು ಡಿಜಿಟಲ್-ಸಕ್ರಿಯಗೊಳಿಸಿದ ಮೇಲಾಧಾರ-ಮುಕ್ತ ಕ್ರೆಡಿಟ್ ಉತ್ಪನ್ನಗಳು ಅಪಾಯ-ತೂಕದ ಸ್ವತ್ತುಗಳನ್ನು ಮತ್ತಷ್ಟು ಹೆಚ್ಚಿಸುತ್ತವೆ, ಆರೋಗ್ಯಕರವಾದ ಬಂಡವಾಳ-ಅಪಾಯ-ತೂಕದ ಆಸ್ತಿ ಅನುಪಾತ (ಸಿ.ಆರ್.ಎ.ಆರ್.) ಅನ್ನು ಪೂರೈಸಲು ಸಂಸ್ಥೆಗೆ ಇನ್ನೂ ಹೆಚ್ಚಿನ ಬಂಡವಾಳದ ಅಗತ್ಯವಿರುತ್ತದೆ.
ಕಡ್ಡಾಯ ಮಟ್ಟಕ್ಕಿಂತ ಹೆಚ್ಚಿನ ಆರೋಗ್ಯಕರ ಸಿ.ಆರ್.ಎ.ಆರ್. ಉಳಿಸಿಕೊಳ್ಳಲು, ಕ್ರೆಡಿಟ್ ರೇಟಿಂಗ್ ಅನ್ನು ರಕ್ಷಿಸುವುದು ಒಂದು ಪ್ರಮುಖ ಅಂಶವಾಗಿದೆ. ಆರೋಗ್ಯಕರ ಸಿ.ಆರ್.ಎ.ಆರ್.ಅನ್ನು ನಿರ್ವಹಿಸುವ ಮೂಲಕ ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (ಎಸ್.ಐ.ಡಿ.ಬಿ.ಐ.) ಹೆಚ್ಚುವರಿ ಷೇರು ಬಂಡವಾಳದ ಒಳಹರಿವಿನಿಂದ ಪ್ರಯೋಜನ ಪಡೆಯುತ್ತದೆ. ಹೆಚ್ಚುವರಿ ಬಂಡವಾಳದ ಈ ಒಳಹರಿವು ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (ಎಸ್.ಐ.ಡಿ.ಬಿ.ಐ.) ಸಂಸ್ಥೆಗೆ ನ್ಯಾಯಯುತ ಬಡ್ಡಿದರಗಳಲ್ಲಿ ಸಂಪನ್ಮೂಲಗಳನ್ನು ಉತ್ಪಾದಿಸಲು ಅನುವು ಮಾಡಿಕೊಡುತ್ತದೆ, ಇದರಿಂದಾಗಿ ಸ್ಪರ್ಧಾತ್ಮಕ ವೆಚ್ಚದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂ.ಎಸ್.ಎಂ.ಇ.) ಸಾಲದ ಹರಿವನ್ನು ಹೆಚ್ಚಿಸುತ್ತದೆ. ಪ್ರಸ್ತಾವಿತ ಇಕ್ವಿಟಿ ಇನ್ಫ್ಯೂಷನ್ ಕಂತು ಕಂತಾಗಿ ಅಥವಾ ಹಂತ ಹಂತವಾಗಿ ಮಾಡುವುದರಿಂದ ಮುಂದಿನ ಮೂರು ವರ್ಷಗಳಲ್ಲಿ ಹೆಚ್ಚಿನ ಒತ್ತಡದ ಸನ್ನಿವೇಶದಲ್ಲಿ 10.50% ಕ್ಕಿಂತ ಹೆಚ್ಚು ಮತ್ತು ಪಿಲ್ಲರ್ 1 ಮತ್ತು ಪಿಲ್ಲರ್ 2 ಅಡಿಯಲ್ಲಿ 14.50% ಕ್ಕಿಂತ ಹೆಚ್ಚು ಸಿ.ಆರ್.ಎ.ಆರ್. ಅನುಪಾತವನ್ನು ನಿರ್ವಹಿಸಲು ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (ಎಸ್.ಐ.ಡಿ.ಬಿ.ಐ. ) ಸಂಸ್ಥೆಗೆ ಈ ಮೂಲಕ ಸಾಧ್ಯವಾಗುತ್ತದೆ.
*****
(रिलीज़ आईडी: 2216770)
आगंतुक पटल : 30
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Bengali-TR
,
Assamese
,
Punjabi
,
Gujarati
,
Odia
,
Tamil
,
Telugu
,
Malayalam