ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಚೈತನ್ಯ, ಉತ್ಸಾಹ ಮತ್ತು ಸಂಭ್ರಮದ ಹಬ್ಬವಾದ 'ಮಕರ ಸಂಕ್ರಾಂತಿ'ಯ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ
ಗೃಹ ಸಚಿವರು ಕರ್ನಾಟಕದ ಜನತೆಗೆ ಮಕರ ಸಂಕ್ರಾಂತಿಯ ಶುಭಾಶಯಗಳನ್ನು; ಆಂಧ್ರಪ್ರದೇಶ ಮತ್ತು ತೆಲಂಗಾಣದ ಜನತೆಗೆ ಭೋಗಿ, ಸಂಕ್ರಾಂತಿ ಮತ್ತು ಕನುಮ ಶುಭಾಶಯಗಳನ್ನು; ಗುಜರಾತ್ ಜನತೆಗೆ ಉತ್ತರಾಯಣ ಹಾಗೂ ಅಸ್ಸಾಂ ಜನತೆಗೆ ಮಾಘ ಬಿಹು ಶುಭಾಶಯಗಳನ್ನು ತಿಳಿಸಿದ್ದಾರೆ
ಈ ಹಬ್ಬವು ನಿಮ್ಮೆಲ್ಲರ ಜೀವನದಲ್ಲಿ ಅಪಾರ ಸಂತೋಷ ಮತ್ತು ಸಮೃದ್ಧಿಯನ್ನು ತರಲಿ
ಭೋಗಿ, ಸಂಕ್ರಾಂತಿ ಮತ್ತು ಕನುಮ ಹಬ್ಬದ ಸಂಭ್ರಮವು ಪ್ರತಿ ಮನೆಯಲ್ಲೂ ಸಮೃದ್ಧಿ, ಸಂತೋಷ ಮತ್ತು ಉತ್ತಮ ಆರೋಗ್ಯ ನೀಡಲಿ
ಎಲ್ಲರ ಕ್ಷೇಮಕ್ಕಾಗಿ ನಾನು ಭಗವಾನ್ ಸೂರ್ಯನಾರಾಯಣನಲ್ಲಿ ಪ್ರಾರ್ಥಿಸುತ್ತೇನೆ
ಈ ಸುಗ್ಗಿ ಹಬ್ಬವು ನಮ್ಮ ಏಕತೆಯನ್ನು ಬಲಪಡಿಸಲಿ ಮತ್ತು ಎಲ್ಲರಿಗೂ ಸಮೃದ್ಧಿ, ಉತ್ತಮ ಆರೋಗ್ಯ ಮತ್ತು ಸಂತೋಷ ನೀಡಲಿ
प्रविष्टि तिथि:
14 JAN 2026 3:10PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಭಾರತದ ಜನತೆಗೆ ಚೈತನ್ಯ, ಉತ್ಸಾಹ ಮತ್ತು ಸಂಭ್ರಮದಿಂದ ತುಂಬಿರುವ ಮಕರ ಸಂಕ್ರಾಂತಿಯ ಶುಭಾಶಯಗಳನ್ನು ಕೋರಿದ್ದಾರೆ. ಇದರೊಂದಿಗೆ ಕರ್ನಾಟಕದ ಜನತೆಗೆ ಮಕರ ಸಂಕ್ರಾಂತಿ; ಆಂಧ್ರಪ್ರದೇಶ ಮತ್ತು ತೆಲಂಗಾಣದ ಜನತೆಗೆ ಭೋಗಿ, ಸಂಕ್ರಾಂತಿ ಮತ್ತು ಕನುಮ; ಗುಜರಾತ್ ಜನತೆಗೆ ಉತ್ತರಾಯಣ ಹಾಗೂ ಅಸ್ಸಾಂ ಜನತೆಗೆ ಮಾಘ ಬಿಹು - ಹೀಗೆ ಪ್ರಾದೇಶಿಕ ಹಬ್ಬಗಳ ವಿಶೇಷ ಶುಭಾಶಯಗಳನ್ನು ಸಲ್ಲಿಸಿದ್ದಾರೆ.
ಎಕ್ಸ್ (X) ಪೋಸ್ಟ್‌ನಲ್ಲಿ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು, “ಚೈತನ್ಯ, ಉತ್ಸಾಹ ಮತ್ತು ಶಕ್ತಿಯ ಹಬ್ಬವಾದ 'ಮಕರ ಸಂಕ್ರಾಂತಿ'ಯ ಸಂದರ್ಭದಲ್ಲಿ ಎಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳು. ಈ ಹಬ್ಬವು ನಿಮ್ಮೆಲ್ಲರ ಜೀವನದಲ್ಲಿ ಅಪಾರ ಸಂತೋಷ ಮತ್ತು ಸಮೃದ್ಧಿಯನ್ನು ತರಲಿ” ಎಂದು ತಿಳಿಸಿದ್ದಾರೆ.
ಮತ್ತೊಂದು ಎಕ್ಸ್ (X) ಪೋಸ್ಟ್‌ನಲ್ಲಿ ಶ್ರೀ ಅಮಿತ್ ಶಾ ಅವರು, “ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಕರ್ನಾಟಕದ ನಮ್ಮ ಸಹೋದರ ಸಹೋದರಿಯರಿಗೆ ಶುಭಾಶಯಗಳು. ಈ ಪವಿತ್ರ ಹಬ್ಬವು ಹೊಸ ಚೈತನ್ಯವನ್ನು ತರಲಿ ಮತ್ತು ನಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸಲಿ, ಎಲ್ಲರ ಕ್ಷೇಮ ಮತ್ತು ಸಮೃದ್ಧಿಗಾಗಿ ನಾನು ಪ್ರಾರ್ಥಿಸುತ್ತೇನೆ,” ಎಂದಿದ್ದಾರೆ.
ಗೃಹ ಸಚಿವರು ಇನ್ನೊಂದು ಪೋಸ್ಟ್‌ನಲ್ಲಿ ಹೀಗೆ ಹೇಳಿದ್ದಾರೆ, “ನಮ್ಮ ತೆಲುಗು ಸಹೋದರ ಸಹೋದರಿಯರಿಗೆ ಮಕರ ಸಂಕ್ರಾಂತಿಯ ಶುಭಾಶಯಗಳು. ಭೋಗಿ, ಸಂಕ್ರಾಂತಿ ಮತ್ತು ಕನುಮ ಹಬ್ಬದ ಸಂಭ್ರಮವು ಪ್ರತಿ ಮನೆಯಲ್ಲೂ ಸಮೃದ್ಧಿ, ಸಂತೋಷ ಮತ್ತು ಉತ್ತಮ ಆರೋಗ್ಯದ ಹರಕೆಯನ್ನು ನೀಡಲಿ.”
ಮತ್ತೊಂದು ಪೋಸ್ಟ್‌ನಲ್ಲಿ ಶ್ರೀ ಅಮಿತ್ ಶಾ ಅವರು ಉತ್ತರಾಯಣದ ಶುಭ ಸಂದರ್ಭದಲ್ಲಿ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತಾ, ಎಲ್ಲರ ಕ್ಷೇಮಕ್ಕಾಗಿ ಭಗವಾನ್ ಸೂರ್ಯನಾರಾಯಣನಲ್ಲಿ ಪ್ರಾರ್ಥಿಸುವುದಾಗಿ ಹೇಳಿದ್ದಾರೆ.
ಅಸ್ಸಾಂನ ಜನತೆಗೆ ಮಾಘ ಬಿಹು ಶುಭಾಶಯಗಳನ್ನು ಕೋರಿದ ಗೃಹ ಸಚಿವರು ತಮ್ಮ ಮತ್ತೊಂದು ಎಕ್ಸ್ ಪೋಸ್ಟ್‌ನಲ್ಲಿ, “ಅಸ್ಸಾಂನ ನಮ್ಮೆಲ್ಲಾ ಸಹೋದರ ಸಹೋದರಿಯರಿಗೆ ಮಾಘ ಬಿಹು ಹಬ್ಬದ ಶುಭಾಶಯಗಳು. ಈ ಸುಗ್ಗಿ ಹಬ್ಬವು ನಮ್ಮ ಏಕತೆಯನ್ನು ಬಲಪಡಿಸಲಿ ಮತ್ತು ಎಲ್ಲರಿಗೂ ಸಮೃದ್ಧಿ, ಉತ್ತಮ ಆರೋಗ್ಯ ಮತ್ತು ಸಂತೋಷ ನೀಡಲಿ” ಎಂದು ತಿಳಿಸಿದ್ದಾರೆ.
*****
(रिलीज़ आईडी: 2214618)
आगंतुक पटल : 6