ಪ್ರಧಾನ ಮಂತ್ರಿಯವರ ಕಛೇರಿ
ಯುವ ಶಕ್ತಿಯ ಮೇಲೆ ಸ್ವಾಮಿ ವಿವೇಕಾನಂದರಿಗೆ ಇದ್ದ ನಂಬಿಕೆಯನ್ನು ಸಾರುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡ ಪ್ರಧಾನಮಂತ್ರಿ
प्रविष्टि तिथि:
12 JAN 2026 10:11AM by PIB Bengaluru
ರಾಷ್ಟ್ರ ನಿರ್ಮಾಣದ ಅತ್ಯಂತ ಶಕ್ತಿಶಾಲಿ ಅಡಿಪಾಯ ಎಂದರೆ ಅದು ಯುವಶಕ್ತಿ ಎಂದು ಸ್ವಾಮಿ ವಿವೇಕಾನಂದರು ಬಲವಾಗಿ ನಂಬಿದ್ದರು ಎಂದು ಸಾರುವ ಸಂಸ್ಕೃತ ಸುಭಾಷಿತವನ್ನು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ. ಭಾರತೀಯ ಯುವಜನರು ತಮ್ಮ ಉತ್ಸಾಹ ಮತ್ತು ತೀವ್ರ ಆಸಕ್ತಿಯ ಮೂಲಕ ಪ್ರತಿಯೊಂದು ಮಹತ್ವಾಕಾಂಕ್ಷೆಯನ್ನೂ ಸಾಕಾರಗೊಳಿಸಬಹುದು ಎಂಬ ಸಂದೇಶವನ್ನು ಈ ಸುಭಾಷಿತ ಸಾರುತ್ತದೆ:
"अङ्गणवेदी वसुधा कुल्या जलधिः स्थली च पातालम्।
वल्मीकश्च सुमेरुः कृतप्रतिज्ञस्य वीरस्य॥"
ಈ ಸುಭಾಷಿತದ ಅರ್ಥವೆಂದರೆ, ಧೈರ್ಯಶಾಲಿಗಳು ಮತ್ತು ದೃಢಸಂಕಲ್ಪ ಹೊಂದಿರುವವರಿಗೆ ಸಂಪೂರ್ಣ ಭೂಮಿ ತಮ್ಮ ಮನೆಯ ಅಂಗಳದಂತಿರುತ್ತದೆ; ಸಮುದ್ರಗಳು ಸಣ್ಣ ಹೊಂಡಗಳಂತೆ ಕಾಣುತ್ತವೆ; ಆಕಾಶದೆತ್ತರ ಮಹಾ ಪರ್ವತಗಳು ಮಣ್ಣಿನ ಗುಡ್ಡೆಗಳಂತೆ ತೋರುತ್ತವೆ. ದೃಢವಾದ ಇಚ್ಛಾಶಕ್ತಿ ಇರುವವರಿಗೆ ಈ ಲೋಕದಲ್ಲಿ ಅಸಾಧ್ಯವೆಂಬುದೇ ಇಲ್ಲ.
ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆದುಕೊಂಡಿದ್ದಾರೆ:
“स्वामी विवेकानंद का मानना था कि युवा शक्ति ही राष्ट्र-निर्माण की सबसे सशक्त आधारशिला है। भारतीय युवा अपने जोश और जुनून से हर संकल्प को साकार कर सकते हैं।
अङ्गणवेदी वसुधा कुल्या जलधिः स्थली च पातालम्।
वल्मीकश्च सुमेरुः कृतप्रतिज्ञस्य वीरस्य॥"
*****
(रिलीज़ आईडी: 2213729)
आगंतुक पटल : 7
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Bengali
,
Bengali-TR
,
Assamese
,
Gujarati
,
Tamil
,
Telugu
,
Malayalam