ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಜನವರಿ 8 ರಿಂದ 11 ರವರೆಗೆ ಸೋಮನಾಥದಲ್ಲಿ ಆಚರಿಸಲಾಗುತ್ತಿರುವ “ಸೋಮನಾಥ ಸ್ವಾಭಿಮಾನ ಪರ್ವ”ದಲ್ಲಿ ಭಾಗವಹಿಸುವಂತೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ದೇಶದ ಜನತೆಗೆ ಮನವಿ ಮಾಡಿದ್ದಾರೆ


ಸೋಮನಾಥ ದೇವಾಲಯದ ಮೇಲೆ ನಡೆದ ಮೊದಲ ದಾಳಿಗೆ ಸಾವಿರ ವರ್ಷಗಳು ತುಂಬಿದ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು “ಸೋಮನಾಥ ಸ್ವಾಭಿಮಾನ ಪರ್ವ”ವನ್ನು ಆಚರಿಸಲು ನಿರ್ಧರಿಸಿದ್ದಾರೆ ಎಂದು ಶ್ರೀ ಅಮಿತ್ ಶಾ ಅವರು ತಿಳಿಸಿದ್ದಾರೆ

ಸನಾತನ ಸಂಸ್ಕೃತಿಯ ನಿರಂತರತೆ ಮತ್ತು ಚೇತರಿಸಿಕೊಳ್ಳುವ ಸಾಮರ್ಥ್ಯದ ಸಂದೇಶವನ್ನು ಮುಂದಿನ ಪೀಳಿಗೆಗೆ ತಲುಪಿಸಲು “ಸೋಮನಾಥ ಸ್ವಾಭಿಮಾನ ಪರ್ವ”ವನ್ನು ಆಚರಿಸಲಾಗುತ್ತಿದೆ

ಸೋಮನಾಥ ಮಹಾದೇವ ದೇವಾಲಯವು ಒಂದು ಜ್ಯೋತಿರ್ಲಿಂಗ ಮಾತ್ರವಲ್ಲದೆ, ಸನಾತನ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ವೈಭವದ ಅಮರ ಪರಂಪರೆಯಾಗಿದೆ

ಕಳೆದ ಸಾವಿರ ವರ್ಷಗಳಲ್ಲಿ ಸೋಮನಾಥ ಮಹಾದೇವ ದೇವಾಲಯವು ಹಲವಾರು ದಾಳಿಗಳನ್ನು ಎದುರಿಸಿದೆ, ಆದರೆ ಪ್ರತಿ ಬಾರಿಯೂ ಅದು ಮತ್ತೆ ಎದ್ದು ನಿಂತಿದೆ

ಸೋಮನಾಥ ಮಹಾದೇವ ದೇವಾಲಯವು ನಮ್ಮ ನಾಗರಿಕತೆಯ ಅಮರತ್ವದ ಸಂಕೇತವಾಗಿದೆ ಮತ್ತು ಎಂದಿಗೂ ಸೋಲೊಪ್ಪದ ಅಚಲ ಇಚ್ಛಾಶಕ್ತಿಯ ಪ್ರತೀಕವಾಗಿದೆ.

ಸೋಮನಾಥ ಮಹಾದೇವ ದೇವಾಲಯವನ್ನು ಅಳಿಸಿಹಾಕಲು ಪ್ರಯತ್ನಿಸಿದವರೇ ಕುರುಹಿಲ್ಲದಂತೆ ನಾಶವಾಗಿದ್ದಾರೆ, ಆದರೆ ಇಂದು ದೇವಾಲಯವು ಇನ್ನಷ್ಟು ವೈಭವ ಮತ್ತು ಭವ್ಯತೆಯೊಂದಿಗೆ ಅಚಲವಾಗಿ ನಿಂತಿದೆ

प्रविष्टि तिथि: 08 JAN 2026 7:46PM by PIB Bengaluru

ಜನವರಿ 8 ರಿಂದ 11 ರವರೆಗೆ ಸೋಮನಾಥದಲ್ಲಿ ಆಚರಿಸಲಾಗುತ್ತಿರುವ “ಸೋಮನಾಥ ಸ್ವಾಭಿಮಾನ ಪರ್ವ”ದಲ್ಲಿ ಭಾಗವಹಿಸುವಂತೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ದೇಶದ ಜನತೆಗೆ ಮನವಿ ಮಾಡಿದ್ದಾರೆ.

ಸೋಮನಾಥ ದೇವಾಲಯದ ಮೇಲೆ ನಡೆದ ಮೊದಲ ದಾಳಿಗೆ ಒಂದು ಸಾವಿರ ವರ್ಷಗಳು ತುಂಬಿದ ಸಂದರ್ಭದಲ್ಲಿ, ನಮ್ಮ ಮುಂದಿನ ಪೀಳಿಗೆಗೆ ಸನಾತನ ಸಂಸ್ಕೃತಿಯ ನಿರಂತರತೆ ಮತ್ತು ಚೇತರಿಸಿಕೊಳ್ಳುವ ಸಾಮರ್ಥ್ಯದ ಸಂದೇಶವನ್ನು ತಲುಪಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು “ಸೋಮನಾಥ ಸ್ವಾಭಿಮಾನ ಪರ್ವ”ವನ್ನು ಆಚರಿಸಲು ನಿರ್ಧರಿಸಿದ್ದಾರೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಇಂದು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ʻಎಕ್ಸ್ʼ ನಲ್ಲಿನ ಈ ಕುರಿತು ಪೋಸ್ಟ್‌ ಮಾಡಿರುವ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು, “ಸೋಮನಾಥ ಮಹಾದೇವ ದೇವಾಲಯವು ಜ್ಯೋತಿರ್ಲಿಂಗಗಳಲ್ಲಿ ಒಂದಷ್ಟೇ ಅಲ್ಲ, ಅದು ಸನಾತನ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ವೈಭವದ ಅವಿಚ್ಛಿನ್ನ ಪರಂಪರೆಯಾಗಿದೆ. ಕಳೆದ ಸಾವಿರ ವರ್ಷಗಳಲ್ಲಿ, ಈ ದೇವಾಲಯವು ಹಲವಾರು ದಾಳಿಗಳನ್ನು ಎದುರಿಸಿದೆ, ಆದರೂ ಪ್ರತಿ ಬಾರಿಯೂ ಇದು ಮತ್ತೆ ಎದ್ದು ನಿಂತಿದೆ. ಇದು ನಮ್ಮ ನಾಗರಿಕತೆಯ ಅಮರತ್ವ ಮತ್ತು ಎಂದಿಗೂ ಸೋಲೊಪ್ಪದ ಅಚಲ ಇಚ್ಛಾಶಕ್ತಿಯ ಸಂಕೇತವಾಗಿದೆ. ಇದನ್ನು ಅಳಿಸಿಹಾಕಲು ಪ್ರಯತ್ನಿಸಿದವರು ಕುರುಹಿಲ್ಲದಂತೆ ಮಾಯವಾಗಿದ್ದಾರೆ, ಆದರೆ ದೇವಾಲಯವು ಇಂದು ಇನ್ನಷ್ಟು ಹೆಚ್ಚಿನ ಭವ್ಯತೆಯೊಂದಿಗೆ ಅಚಲವಾಗಿ ನಿಂತಿದೆ. ಸೋಮನಾಥ ದೇವಾಲಯದ ಇತಿಹಾಸವು ನಮಗೆ ಕಲಿಸುವುದೇನೆಂದರೆ, ಇಂತಹ ದಾಳಿಗಳು ಹಾನಿಯನ್ನುಂಟುಮಾಡಬಹುದು, ಆದರೆ ಅವು ನಮ್ಮನ್ನು ನಾಶಪಡಿಸಲು ಸಾಧ್ಯವಿಲ್ಲ - ಏಕೆಂದರೆ ಪ್ರತಿ ಬಾರಿಯೂ ಇನ್ನಷ್ಟು ಹೆಚ್ಚಿನ ವೈಭವ ಮತ್ತು ದೈವಿಕತೆಯೊಂದಿಗೆ ಮತ್ತೆ ಪುಟಿದೇಳುವುದು ಸನಾತನ ಸಂಸ್ಕೃತಿಯ ಅಂತರ್ಗತ ಸ್ವಭಾವವಾಗಿದೆ. ಸೋಮನಾಥ ದೇವಾಲಯದ ಮೇಲಿನ ಮೊದಲ ದಾಳಿಗೆ ಒಂದು ಸಾವಿರ ವರ್ಷಗಳು ತುಂಬಿದ ಸಂದರ್ಭದಲ್ಲಿ, ಸನಾತನ ಸಂಸ್ಕೃತಿಯ ಅಖಂಡ ನಿರಂತರತೆ ಮತ್ತು ಚೇತರಿಸಿಕೊಳ್ಳುವ ಶಕ್ತಿಯ ಸಂದೇಶವು ಮುಂದಿನ ಪೀಳಿಗೆಗೆ ತಲುಪಲಿ ಎಂಬ ಉದ್ದೇಶದಿಂದ ಪ್ರಧಾನಮಂತ್ರಿ ಶ್ರೀ ಮೋದಿ ಅವರು ‘ಸೋಮನಾಥ ಸ್ವಾಭಿಮಾನ ಪರ್ವ’ವನ್ನು ಆಚರಿಸಲು ನಿರ್ಧರಿಸಿದ್ದಾರೆ. ಈ ಪವಿತ್ರ ದೇವಾಲಯದ ಟ್ರಸ್ಟಿಯಾಗಿರುವುದು ನನ್ನ ಸೌಭಾಗ್ಯವಾಗಿದೆ. ಇಂದಿನಿಂದ ಜನವರಿ 11 ರವರೆಗೆ ಆಯೋಜಿಸಲಾಗಿರುವ #SomnathSwabhimanParv ನಲ್ಲಿ ಪಾಲ್ಗೊಳ್ಳುವಂತೆ ನಾನು ಎಲ್ಲಾ ಸಹ ನಾಗರಿಕರಲ್ಲಿ ಮನವಿ ಮಾಡುತ್ತೇನೆ.” 

 

*****

 


(रिलीज़ आईडी: 2212652) आगंतुक पटल : 20
इस विज्ञप्ति को इन भाषाओं में पढ़ें: Odia , Assamese , English , Urdu , Marathi , हिन्दी , Punjabi , Gujarati , Tamil , Telugu