ಜಲ ಶಕ್ತಿ ಸಚಿವಾಲಯ
azadi ka amrit mahotsav

ಸ್ವಚ್ಛ ಭಾರತ ಮಿಷನ್-ಗ್ರಾಮೀಣ ಅಡಿಯಲ್ಲಿ ನವೀನ ಮಲ ಕೆಸರು ನಿರ್ವಹಣಾ ಮಾದರಿಗಳ ಕುರಿತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಂವಾದ ನಡೆಸಿದ ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್. ಪಾಟೀಲ್


ಎಸ್‌ಬಿಎಂ(ಜಿ) ಅಡಿಯಲ್ಲಿ ಸಮುದಾಯ ನೇತೃತ್ವದ ಎಫ್‌ಎಸ್‌ಎಂ ಉಪಕ್ರಮಗಳನ್ನು ಶ್ಲಾಘಿಸಿದ ಜಲಶಕ್ತಿ ಸಚಿವರಾದ ಸಿ.ಆರ್. ಪಾಟೀಲ್; ಎಲ್ಲೆಡೆ ವಿಸ್ತರಿಸಬಹುದಾದ ಮತ್ತು ಸುಸ್ಥಿರ ಗ್ರಾಮೀಣ ನೈರ್ಮಲ್ಯ ಪರಿಹಾರಗಳಿಗೆ ಕರೆ

प्रविष्टि तिथि: 07 JAN 2026 11:16AM by PIB Bengaluru

ದೇಶದಲ್ಲಿ ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಅಡಿಯಲ್ಲಿ ಜಾರಿಗೆ ತರಲಾಗುತ್ತಿರುವ ಮಲ ಕೆಸರು ನಿರ್ವಹಣೆ (ಎಫ್ ಎಸ್ ಎಂ) ನ ವಿವಿಧ ಮಾದರಿಗಳ ಕುರಿತು ಚರ್ಚಿಸಲು ಜಲಶಕ್ತಿ ಸಚಿವಾಲಯವು 2026ರ ಜನವರಿ 6 ರಂದು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ವಿವಿಧ ಜಿಲ್ಲೆಗಳೊಂದಿಗೆ ವರ್ಚುವಲ್ ಸಂವಾದವನ್ನು ಆಯೋಜಿಸಿತ್ತು.

ಈ ಸಂವಾದದ ಅಧ್ಯಕ್ಷತೆಯನ್ನು ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ.ಆರ್. ಪಾಟೀಲ್ ವಹಿಸಿದ್ದರು. ಜಲಶಕ್ತಿ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯದರ್ಶಿ ಶ್ರೀ ಅಶೋಕ್ ಕೆ.ಕೆ. ಮೀನಾ ಮತ್ತು ಎಸ್ ಬಿಎಂ(ಜಿ)ಯ ಜಂಟಿ ಕಾರ್ಯದರ್ಶಿ ಮತ್ತು ಮಿಷನ್ ನಿರ್ದೇಶಕಿ ಶ್ರೀಮತಿ ಐಶ್ವರ್ಯ ಸಿಂಗ್ ಸಂವಾದದಲ್ಲಿ ಭಾಗವಹಿಸಿದ್ದರು. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಸ್ವಸಹಾಯ ಗುಂಪು ಸದಸ್ಯರು,  ಪಂಚಾಯತ್ ಸದಸ್ಯರು ಮತ್ತು ರಾಜ್ಯ ಮಿಷನ್ ನಿರ್ದೇಶಕರು ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ನೋಡಲ್ ಇಲಾಖೆಗಳ ಹಿರಿಯ ಅಧಿಕಾರಿಗಳು ವರ್ಚುವಲ್ ರೂಪದಲ್ಲಿ  ಭಾಗವಹಿಸಿದ್ದರು.

ದೇಶದ ನಾನಾ ಭಾಗಗಳಿಂದ ಯಶಸ್ವಿ ಮತ್ತು ಎಲ್ಲೆಡೆ ವಿಸ್ತರಿಸಬಹುದಾದ ಎಫ್ ಎಸ್ ಎಂ ಮಾದರಿಗಳನ್ನು ಹಂಚಿಕೊಳ್ಳುವುದು,  ಎಫ್ ಎಸ್ ಎಂ ನ ವಿವಿಧ ಅಂಶಗಳ ಕುರಿತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಜಿಲ್ಲೆಗಳ ನಡುವೆ ಪರಸ್ಪರ ಕಲಿಕೆಯನ್ನು ಬಲಪಡಿಸುವುದು ಮತ್ತು ಶೌಚಾಲಯ ನಿರ್ಮಾಣವನ್ನು ಮೀರಿ ಸುರಕ್ಷಿತ ನೈರ್ಮಲ್ಯ ವ್ಯವಸ್ಥೆಗಳ ಮಹತ್ವವನ್ನು ಬಲಪಡಿಸುವುದು, ಸಂಪೂರ್ಣ ನೈರ್ಮಲ್ಯ ಮೌಲ್ಯ ಸರಣಿಯ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುವುದು ಈ ಸಂವಾದದ ಉದ್ದೇಶವಾಗಿತ್ತು.

ಗುಜರಾತ್, ಸಿಕ್ಕಿಂ, ಮಧ್ಯಪ್ರದೇಶ, ಕರ್ನಾಟಕ, ಒಡಿಶಾ, ಲಡಾಖ್ ಮತ್ತು ತ್ರಿಪುರದ ಪ್ರತಿನಿಧಿಗಳು ತಮ್ಮ ತಳಮಟ್ಟದ  ಅನುಭವಗಳನ್ನು ಹಂಚಿಕೊಂಡರು ಮತ್ತು ಸ್ಥಳದಲ್ಲೇ ಸಂಸ್ಕರಣಾ ಮಾದರಿಗಳು, ಸಮುದಾಯ ಪರಿಹಾರಗಳು, ಮಲ ಕೆಸರು ಸಂಸ್ಕರಣಾ ಘಟಕದ (ಎಫ್ ಎಸ್ ಟಿಪಿಗಳ) ಸುಸ್ಥಿರತೆಯನ್ನು ಖಾತ್ರಿಪಡಿಸಿಕೊಳ್ಳಲು ಎಸ್ ಎಚ್ ಜಿ ಗಳು ಮತ್ತು ಪಂಚಾಯತ್‌ಗಳೊಂದಿಗೆ ಪರಿಣಾಮಕಾರಿ ಒ&ಎಂ ಅನ್ನು ಖಾತ್ರಿಪಡಿಸಿಕೊಳ್ಳಲು ಮಾಡಿದ ಮಧ್ಯಸ್ಥಿಕೆಗಳು, ಎಫ್ ಎಸ್ ಎಂ ಗಾಗಿ ನಗರ-ಗ್ರಾಮೀಣ ಸಂಪರ್ಕಗಳನ್ನು ಒಳಗೊಂಡ ತಮ್ಮ ಮಾದರಿಗಳನ್ನು ಪ್ರಸ್ತುತಪಡಿಸಿದರು. ಸಂಸ್ಕರಿಸಿದ ಮಲ ಕೆಸರು ಮತ್ತು ತ್ಯಾಜ್ಯನೀರಿನ ಸುರಕ್ಷಿತ ಸಂಗ್ರಹಣೆ, ಸಾಗಣೆ, ಸಂಸ್ಕರಣೆ ಮತ್ತು ಮರುಬಳಕೆಗಾಗಿ ಮಾಡಿದ ಪ್ರಯತ್ನಗಳನ್ನು ಚರ್ಚಿಸಲಾಯಿತು. ಸ್ವಚ್ಛತೆಯನ್ನು ಖಾತ್ರಿಪಡಿಸಿಕೊಳ್ಳುವುದರ ಜೊತೆಗೆ ಸಮುದಾಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿಗೆ ಹಲವು ಮಾದರಿಗಳು ಮಾರ್ಗಗಳನ್ನು ಒದಗಿಸಿದವು.

ಸಂವಾದದ ವೇಳೆ, ರಾಜ್ಯಗಳು ದೇಶಾದ್ಯಂತದ ನವೀನ ಮತ್ತು ವಿಸ್ತರಿಸಬಹುದಾದ ಎಫ್ ಎಸ್ ಎಂ ಮಾದರಿಗಳನ್ನು ಪ್ರಸ್ತುತಪಡಿಸಿದವು. ಒಡಿಶಾದ ಖೋರ್ಧಾ ಜಿಲ್ಲೆಯಿಂದ ಒಂದು ಗಮನಾರ್ಹ ಉದಾಹರಣೆ ಹೊರಹೊಮ್ಮಿತು, ಅಲ್ಲಿ ತೃತೀಯ ಲಿಂಗಿಗಳ ನೇತೃತ್ವದ ಸ್ವ-ಸಹಾಯ ಗುಂಪು (ಎಸ್ ಎಚ್ ಜಿ) ತಮ್ಮ ಎಫ್ ಎಸ್ ಟಿಪಿ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ನಡೆಸುತ್ತಿದೆ. ಈ ಉಪಕ್ರಮವು ನೈರ್ಮಲ್ಯ ಸೇವಾ ವಿತರಣೆಯು ಹೇಗೆ ಸಮಗ್ರ ಮತ್ತು ಸುಸ್ಥಿರವಾಗಿರಬಹುದು ಎಂಬುದನ್ನು ಪ್ರದರ್ಶಿಸುತ್ತದೆ, ಇದೇ ವೇಳೆ ತೃತೀಯ ಲಿಂಗಿಗಳು  ಟ್ರಾನ್ಸ್ಜೆಂಡರ್) ಸಮುದಾಯದ ಸದಸ್ಯರಿಗೆ ಘನತೆಯ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುತ್ತದೆ. ಅಗತ್ಯ ಸೇವೆಗಳಿಗೆ ಸಮಾನ ಲಭ್ಯತೆಯನ್ನು ಮುನ್ನಡೆಸುವಲ್ಲಿ, ಸಾಮಾಜಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸುವಲ್ಲಿ ಮತ್ತು ಸಮಾಹದ ತಲಮಟ್ಟದಲ್ಲಿರುವ ಗುಂಪುಗಳಲ್ಲಿ ಆರ್ಥಿಕ ಸಬಲೀಕರಣವನ್ನು ಬಲಪಡಿಸುವಲ್ಲಿ ಸಮುದಾಯ ನೇತೃತ್ವದ ಉದ್ಯಮಗಳ ಶಕ್ತಿಯನ್ನು ಈ ಮಾದರಿ ಎತ್ತಿ ತೋರಿಸುತ್ತದೆ.

ಇತರ ಎಫ್ ಎಸ್ ಎಂ ಮಾದರಿಗಳು ಸೇರಿವೆ: ಗುಜರಾತ್‌ನ ಡಾಂಗ್ ಜಿಲ್ಲೆಯ ದೂರದ ಬುಡಕಟ್ಟು ಪ್ರದೇಶಗಳಲ್ಲಿ ಅವಳಿ-ಪಿಟ್ ಶೌಚಾಲಯಗಳ ದೊಡ್ಡ ಪ್ರಮಾಣದ ಅಳವಡಿಕೆ; ದೂರದ, ಗುಡ್ಡಗಾಡು ಪ್ರದೇಶಗಳಲ್ಲಿ ಎಫ್ ಎಸ್ ಎಂ ಅನುಸರಣೆಯನ್ನು ಖಾತ್ರಿಪಡಿಸಿಕೊಳ್ಳಲು ಸಿಕ್ಕಿಂನ ಮಂಗನ್ ಜಿಲ್ಲೆಯಲ್ಲಿ ಸಿಂಗಲ್-ಪಿಟ್ ಅನ್ನು ಅವಳಿ-ಪಿಟ್ ಶೌಚಾಲಯಗಳಿಗೆ ಮರುಹೊಂದಿಸಲು ಕೇಂದ್ರೀಕೃತ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ; ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಕಾಲಿಬಿಲ್ಲೊಡ್ ಗ್ರಾಮ ಪಂಚಾಯತ್‌ನಲ್ಲಿ ಭಾರತದ ಮೊದಲ ಗ್ರಾಮೀಣ ಎಫ್ ಎಸ್ ಟಿಪಿ ಅಲ್ಲಿ ಆರ್ಥಿಕ ಸಂಪನ್ಮೂಲಗಳಿಗೆ ಸೇರಿಸಲು ಎಂಆರ್ ಎಫ್ f  ಜೊತೆಗೆ ಸಂಸ್ಕರಿಸಿದ ತ್ಯಾಜ್ಯದಲ್ಲಿ ಮೀನು ಕೃಷಿಯ ನವೀನ ಪ್ರಯೋಗವನ್ನು ಮಾಡಲಾಗುತ್ತಿದೆ; ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಕ್ಲಸ್ಟರ್ ಆಧಾರಿತ ಎಫ್ ಎಸ್ ಟಿಪಿ ಮಾದರಿ, ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ ಸ್ವಸಹಾಯ ಗುಂಪುಗಳ ಬಲವಾದ ಒಳಗೊಳ್ಳುವಿಕೆ; ಲಡಾಖ್‌ನ ಲೇಹ್ ಜಿಲ್ಲೆಯ ತೀವ್ರ ಶೀತ, ಶುಷ್ಕ ಮತ್ತು ಮುಂಚೂಣಿ ಪ್ರದೇಶಗಳಲ್ಲಿ ಪರಿಸರ ಸ್ನೇಹಿ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ ಮತ್ತು ತ್ರಿಪುರಾದ ಗೋಮತಿ ಜಿಲ್ಲೆಯಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು, ಸಮುದಾಯ ಕೂಟಗಳು ಮತ್ತು ಜಾತ್ರೆಗಳಿಗೆ ಮೊಬೈಲ್ ಬಯೋ-ಶೌಚಾಲಯಗಳ ನಿಯೋಜನೆ, ಇದನ್ನು ಸ್ವಾವಲಂಬಿ, ಸ್ಥಳೀಯ ಸ್ವಸಹಾಯ ಗುಂಪು ನೇತೃತ್ವದ ಕಾರ್ಯಾಚರಣೆ ಮತ್ತು ನಿರ್ವಹಣೆಯ ಮೂಲಕ ನಿರ್ವಹಿಸಲಾಗುತ್ತಿದೆ.

ಈ ಸಂವಾದದಲ್ಲಿ ನೇರವಾಗಿ ತಳಮಟ್ಟದಲ್ಲಿ ಅನುಷ್ಠಾನಗೊಳಿಸುತ್ತಿರುವ ಸಮುದಾಯಗಳ ಸದಸ್ಯರು ಒಳಗೊಂಡಿದ್ದರು ಮತ್ತು ಅವರು ಗೌರವಾನ್ವಿತ ಕೇಂದ್ರ ಜಲಶಕ್ತಿ ಸಚಿವ ಶ್ರೀ ಸಿ.ಆರ್. ಪಾಟೀಲ್ ಅವರೊಂದಿಗೆ ತಮ್ಮ ಕ್ಷೇತ್ರ ಮಟ್ಟದ ಅನುಭವಗಳನ್ನು ಹಂಚಿಕೊಂಡರು. ಸಂವಾದದಲ್ಲಿ ಭಾಗವಹಿಸುವವರ ಸ್ಥಳೀಯ ಭಾಷೆಗಳಲ್ಲಿ ಸಂವಹನವನ್ನು ಸಹ ಪ್ರೋತ್ಸಾಹಿಸಲಾಯಿತು, ಇದು ಅವರಿಗೆ ಆರಾಮದಾಯಕವಾಗುವಂತೆ ಮಾಡಿತು ಮತ್ತು ಉತ್ಸಾಹದಿಂದ ಅನುಭವಗಳನ್ನು ಹಂಚಿಕೆಗೆ ನೆರವಾಯಿತು.

ಗೌರವಾನ್ವಿತ ಜಲಶಕ್ತಿ ಸಚಿವ ಶ್ರೀ ಸಿ.ಆರ್. ಪಾಟೀಲ್, ಸ್ವಚ್ಛ ಭಾರತಕ್ಕೆ ಕೊಡುಗೆ ನೀಡುವುದಲ್ಲದೆ, ಆದಾಯ ಮತ್ತು ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವ ನವೀನ ಮಾದರಿಗಳನ್ನು ಪ್ರದರ್ಶಿಸಿದ್ದಕ್ಕಾಗಿ ಭಾಗವಹಿಸಿದವರನ್ನು ಶ್ಲಾಘಿಸಿದರು. ಈ ಹಲವು ಉಪಕ್ರಮಗಳನ್ನು ಕಷ್ಟಕರ ಭೌಗೋಳಿಕ ಪ್ರದೇಶಗಳಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದ ಅವರು, ಇದು ಸವಾಲಿನ ಸಂದರ್ಭಗಳು ಶಾಶ್ವತ ಪರಿಹಾರಗಳನ್ನು ಪ್ರೇರೇಪಿಸುತ್ತವೆ ಎಂಬುದನ್ನು ಸಾಬೀತುಪಡಿಸುತ್ತದೆ. ಎಫ್‌ಎಸ್‌ಎಂ ಸುಸ್ಥಿರ ಗ್ರಾಮೀಣ ನೈರ್ಮಲ್ಯದ ಪ್ರಮುಖ ಅಂಶವಾಗಿದೆ ಮತ್ತು ಸಂಪೂರ್ಣ ಸ್ವಚ್ಛತಾವನ್ನು ಖಾತ್ರಿಪಡಿಸುವುದರ ಜೊತೆಗೆ ಸಾರ್ವಜನಿಕ ಆರೋಗ್ಯ ಮತ್ತು ಸ್ವಚ್ಛ ಪರಿಸರದ ರಕ್ಷಣೆಗೆ ಇದು ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದರು. ಎಫ್‌ಎಸ್‌ಎಂ ಪರಿಹಾರಗಳನ್ನು ಕಾರ್ಯಸಾಧ್ಯ, ಎಲ್ಲರನ್ನೂ ಒಳಗೊಂಡ ಮತ್ತು ದೀರ್ಘಕಾಲೀನವಾಗಿಸಲು ಸಮುದಾಯದ ಪಾಲ್ಗೊಳ್ಳುವಿಕೆ,  ಸ್ವಸಹಾಯ ಸಂಘಗಳು, ಪಂಚಾಯತ್‌ಗಳು ಮತ್ತು ವಿವಿಧ ಪಾಲುದಾರರ ಒಳಗೊಳ್ಳುವಿಕೆ ಮತ್ತು ಸಂದರ್ಭ-ನಿರ್ದಿಷ್ಟ, ಅಗತ್ಯ ಆಧಾರಿತ ಮತ್ತು ಸೂಕ್ತವಾದ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದರು. ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ, ರಾಷ್ಟ್ರವ್ಯಾಪಿ ಸ್ವಚ್ಛತಾ ಆಂದೋಲನವು ಅಭೂತಪೂರ್ವ ವೇಗವನ್ನು ಪಡೆದುಕೊಂಡಿದೆ, ಗಾಂಧೀಜಿಯವರ ಸ್ವಚ್ಛತೆ ಮತ್ತು ಸಾಮೂಹಿಕ ಪಾಲ್ಗೊಳ್ಳುವಿಕೆಯ ನಿಜವಾದ ಸಂದೇಶವನ್ನು ದೇಶದ ಪ್ರತಿಯೊಂದು ಮೂಲೆ ಮೂಲೆಗೂ ಕೊಂಡೊಯ್ಯುತ್ತದೆ ಎಂದು ಅವರು ಹೇಳಿದರು.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅಭಿವೃದ್ಧಿಪಡಿಸಿದ ನವೀನ, ಸಮುದಾಯ-ನೇತೃತ್ವದ ಮತ್ತು ಎಲ್ಲವನ್ನೂ ಒಳಗೊಂಡ ಮಾದರಿಗಳ ತಾಂತ್ರಿಕ ಬೆಂಬಲ, ಸಾಮರ್ಥ್ಯ ವೃದ್ಧಿ ಮತ್ತು ಪ್ರಚಾರದ ಮೂಲಕ ಎಸ್‌ಬಿಎಂ(ಜಿ) ಅಡಿಯಲ್ಲಿ ಗ್ರಾಮೀಣ ಭಾರತದಾದ್ಯಂತ ಎಫ್‌ಎಸ್‌ಎಂಗಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಾಡುತ್ತಿರುವ ಕಾರ್ಯವನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ಸಚಿವಾಲಯ ಪುನರುಚ್ಚರಿಸಿತು.

 

*****


(रिलीज़ आईडी: 2212031) आगंतुक पटल : 13
इस विज्ञप्ति को इन भाषाओं में पढ़ें: English , Urdu , हिन्दी , Bengali , Bengali-TR , Punjabi , Gujarati , Odia , Tamil , Telugu