ಪ್ರಧಾನ ಮಂತ್ರಿಯವರ ಕಛೇರಿ
ವಿಶಾಖ ಸಂಸ್ಕರಣಾಗಾರದಲ್ಲಿ ಮೇಲ್ದರ್ಜೆ ಸೌಲಭ್ಯದ ಕಾರ್ಯಾರಂಭಕ್ಕೆ ಪ್ರಧಾನಮಂತ್ರಿ ಶ್ಲಾಘಿಸಿದ್ದಾರೆ
प्रविष्टि तिथि:
06 JAN 2026 8:42AM by PIB Bengaluru
ಆಂಧ್ರಪ್ರದೇಶದ ವಿಶಾಖ ಸಂಸ್ಕರಣಾಗಾರದಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನ (HPCL) ಮೇಲ್ದರ್ಜೆ ಸೌಲಭ್ಯ (RUF) ಯಶಸ್ವಿಯಾಗಿ ಕಾರ್ಯಾರಂಭ ಮಾಡಿರುವುದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ, ಇದು ಇಂಧನ ಭದ್ರತೆ ಮತ್ತು ಸ್ವಾವಲಂಬನೆಯತ್ತ ಭಾರತದ ಪಯಣದಲ್ಲಿ ನಿರ್ಣಾಯಕ ಹೆಜ್ಜೆ ಎಂದು ಬಣ್ಣಿಸಿದ್ದಾರೆ.
ಆತ್ಮನಿರ್ಭರ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿ ಇಂಧನ ಸ್ವಾವಲಂಬನೆ ಹೆಚ್ಚಿಸುವ ರಾಷ್ಟ್ರದ ಪ್ರಯತ್ನಗಳಿಗೆ ಈ ಅತ್ಯಾಧುನಿಕ ಸೌಲಭ್ಯವು ವೇಗವನ್ನು ನೀಡುತ್ತದೆ ಎಂದು ಪ್ರಧಾನ ಮಂತ್ರಿ ಹೇಳಿದ್ದಾರೆ.
ಕೇಂದ್ರ ಸಚಿವರಾದ ಶ್ರೀ ಹರ್ದೀಪ್ ಸಿಂಗ್ ಪುರಿ ಅವರ ಎಕ್ಸ್ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಪ್ರಧಾನಮಂತ್ರಿ ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ:
"ಈ ಅತ್ಯಾಧುನಿಕ ಸೌಲಭ್ಯವು ಇಂಧನ ಭದ್ರತೆಯನ್ನು ಹೆಚ್ಚಿಸುವ ನಮ್ಮ ಪ್ರಯತ್ನಗಳಿಗೆ ವೇಗವನ್ನು ನೀಡುತ್ತದೆ, ಹೀಗಾಗಿ ಈ ವಲಯ ಆತ್ಮನಿರ್ಭರವಾಗುತ್ತಿದೆ' ಎಂದು ಖುಷಿ ಹಂಚಿಕೊಂಡಿದ್ದಾರೆ.
@HardeepSPuri”
*****
(रिलीज़ आईडी: 2211709)
आगंतुक पटल : 12
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Manipuri
,
Bengali
,
Bengali-TR
,
Assamese
,
Punjabi
,
Gujarati
,
Odia
,
Tamil
,
Telugu
,
Malayalam