ಚುನಾವಣಾ ಆಯೋಗ
ಭಾರತೀಯ ಚುನಾವಣಾ ಆಯೋಗದಿಂದ ECINet ಸುಧಾರಣೆಗೆ ನಾಗರಿಕರಿಂದ ಜನವರಿ 10 ರೊಳಗೆ ಸಲಹೆ ಆಹ್ವಾನ
प्रविष्टि तिथि:
03 JAN 2026 2:29PM by PIB Bengaluru
- ಭಾರತೀಯ ಚುನಾವಣಾ ಆಯೋಗವು ಎಲ್ಲಾ ನಾಗರಿಕರು ECINet ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು, ಈ ಅ್ಯಪ್ ನ 'ಸಲಹೆಯನ್ನು ಸಲ್ಲಿಸಿ (ಸಬ್ಮಿಟ್ ಎ ಸಜೆಷನ್)' ಟ್ಯಾಬ್ ಮೂಲಕ, ಈ ಅಪ್ಲಿಕೇಶನ್ ಅನ್ನು ಸುಧಾರಿಸಲು ತಮ್ಮ ಸಲಹೆಗಳನ್ನು ನೀಡುವಂತೆ ನಾಗರಿಕರಿಗೆ ಆಹ್ವಾನ ನೀಡಿದೆ. ನಾಗರಿಕರು ತಮ್ಮ ಸಲಹೆಗಳನ್ನು ನೀಡಲು 2026ರ ಜನವರಿ 10 ರವರೆಗೆ ಅವಕಾಶವಿದೆ.
- ಹೊಸ ECINet ಅಪ್ಲಿಕೇಶನ್ ನ ಪ್ರಾಯೋಗಿಕ ಆವೃತ್ತಿಗಳಲ್ಲಿ ಉತ್ತಮ ಮತದಾರರ ಸೇವೆಗಳು, ಮತದಾನದ ಶೇಕಡಾವಾರು ಪ್ರವೃತ್ತಿಗಳ ತ್ವರಿತ ಲಭ್ಯತೆ ಹಾಗೂ ಮತದಾನ ಮುಕ್ತಾಯವಾದ 72 ಗಂಟೆಗಳ ಒಳಗೆ ಸೂಚ್ಯಂಕ ಕಾರ್ಡ್ ಗಳ ಪ್ರಕಟಣೆ ಸಿಗಲಿದೆ. ಈ ಹಿಂದೆ, ಈ ಪ್ರಕಟಣೆಯು ಹಲವು ಅಥವಾ ತಿಂಗಳ ನಂತರ ಸಿಗುತ್ತಿತ್ತು. ಬಿಹಾರ ವಿಧಾನಸಭಾ ಚುನಾವಣೆ 2025 ಮತ್ತು ಉಪಚುನಾವಣೆಗಳ ಸಂದರ್ಭದಲ್ಲಿ ಈ ಅಪ್ಲಿಕೇಶನ್ ನ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ.
- ಸಿಇಒಗಳು, ಡಿಇಒಗಳು, ಇ ಆರ್ ಒ ಗಳು, ವೀಕ್ಷಕರು ಮತ್ತು ಕ್ಷೇತ್ರ ಅಧಿಕಾರಿಗಳು ನೀಡುವ ಪ್ರತಿಕ್ರಿಯೆ ಆಧರಿಸಿ ಈ ವೇದಿಕೆಯನ್ನು ನಿರಂತರವಾಗಿ ಸುಧಾರಿಸಲಾಗುತ್ತಿದೆ ಮತ್ತು ಪರಿಷ್ಕರಿಸಲಾಗುತ್ತಿದೆ. ಬಳಕೆದಾರರ ಸಲಹೆಗಳನ್ನು ಪರಿಶೀಲಿಸಲಾಗುತ್ತಿದ್ದು ವೇದಿಕೆಯನ್ನು ಹೆಚ್ಚು ಬಳಕೆದಾರ ಸ್ನೇಹಿಯನ್ನಾಗಿ ಮಾಡಲು ಇನ್ನಷ್ಟು ಮೇಲ್ದರ್ಜೆಗೇರಿಸಲಾಗುತ್ತದೆ. ಈ ತಿಂಗಳು ECINet ವೇದಿಕೆಯ ಅಧಿಕೃತ ಬಿಡುಗಡೆಯಾಗಲಿದೆ.
- ಮುಖ್ಯ ಚುನಾವಣಾ ಆಯುಕ್ತರಾದ ಶ್ರೀ ಜ್ಞಾನೇಶ್ ಕುಮಾರ್ ಹಾಗೂ ಚುನಾವಣಾ ಆಯುಕ್ತರಾದ ಡಾ. ಸುಖಬೀರ್ ಸಿಂಗ್ ಸಂಧು ಮತ್ತು ಡಾ. ವಿವೇಕ್ ಜೋಶಿ ಅವರ ನೇತೃತ್ವದಲ್ಲಿ ಕೈಗೊಂಡ ಆಯೋಗದ ಪ್ರಮುಖ ಉಪಕ್ರಮಗಳಲ್ಲಿ ECINet ಕೂಡ ಸೇರಿದೆ. ECINet ಅಪ್ಲಿಕೇಶನ್ ಬಗ್ಗೆ 2025ರ ಮೇ 04 ರಂದು ಘೋಷಿಸಿದ ನಂತರ ಅದರ ಅಭಿವೃದ್ಧಿಯ ಕೆಲಸ ಪ್ರಾರಂಭವಾಗಿದೆ.
- ECINet ಅಪ್ಲಿಕೇಶನ್ ನಾಗರಿಕರಿಗಾಗಿ ಒಂದು ಏಕೀಕೃತ ಅಪ್ಲಿಕೇಶನ್ ಆಗಿದ್ದು, ಇದು ಹಿಂದಿನ ಚುನಾವಣೆ ಸಂಬಂಧಿತ 40 ಪ್ರತ್ಯೇಕ ಅಪ್ಲಿಕೇಶನ್ ಗಳು / ಜಾಲತಾಣಗಳಾದ ವೋಟರ್ ಹೆಲ್ಪ ಲೈನ್ ಅಪ್ಲಿಕೇಶನ್ (VHA), cVIGIL, ಸಕ್ಷಮ್, ಪೋಲಿಂಗ್ ಟ್ರೆಂಡ್ಸ್ (ವೋಟರ್ ಟರ್ನ್ ಔಟ್ ಅಪ್ಲಿಕೇಶನ್), ನೋ ಯುವರ್ ಕ್ಯಾಂಡಿಡೇಟ್ (KYC) ಅಪ್ಲಿಕೇಶನ್ ಗಳನ್ನು ಒಂದೇ ವೇದಿಕೆಗೆ ಸಂಯೋಜಿಸಲಿದೆ. ಅಪ್ಲಿಕೇಶನ್ Google Play ಸ್ಟೋರ್ ಮತ್ತು Apple ಆಪ್ ಸ್ಟೋರ್ ಎರಡರಲ್ಲೂ ಲಭ್ಯವಿದೆ.
*****
(रिलीज़ आईडी: 2211305)
आगंतुक पटल : 11