ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸ್ಥಾಪಕರು ಮತ್ತು ಮಹಾನ್ ಸಮಾಜ ಸುಧಾರಕರು, ಭಾರತ ರತ್ನ ಮಹಾಮನ ಪಂಡಿತ್ ಮದನ್ ಮೋಹನ್ ಮಾಳವೀಯ ಅವರ ಜನ್ಮ ವಾರ್ಷಕೋತ್ಸವದಂದು ಅವರಿಗೆ ಗೌರವ ಸಲ್ಲಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ


ಸಾಮಾಜಿಕ ಸುಧಾರಣೆಗೆ ಶಿಕ್ಷಣ ಮೂಲಭೂತ ತತ್ವವೆಂದು ಪರಿಗಣಿಸಿ,  ಬನಾರಸ್ ಹಿಂದೂ ವಿಶ್ವವಿದ್ಯಾಲಯ ಸ್ಥಾಪನೆಯ ಮೂಲಕ ಭಾರತೀಯ ಸಾಂಸ್ಕೃತಿಕ ಮೌಲ್ಯಗಳ ಆಧಾರದ ಮೇಲೆ ಆಧುನಿಕ ಶಿಕ್ಷಣ ಅನುಸರಿಸಲು ಯುವಕರನ್ನು ಪ್ರೇರೇಪಿಸಿದ

ಪತ್ರಿಕಾ ಮಾಧ್ಯಮವನ್ನು ರಾಷ್ಟ್ರ ನಿರ್ಮಾಣದ ಮಾಧ್ಯಮವನ್ನಾಗಿ ಮಾಡುವಲ್ಲಿ ಅವರ ಕೊಡುಗೆ ಮಹತ್ವದ್ದು

ಅಸ್ಪೃಶ್ಯತೆ ನಿರ್ಮೂಲನೆಗೆ ಮಹಾಮಾನ ಅವರ ಜೀವಮಾನದ ಬದ್ಧತೆ ಮತ್ತು ಅವರ ರೈತ ಸ್ನೇಹಿ ಉಪಕ್ರಮಗಳು ಸದಾ  ಸ್ಮರಣೀಯ

ಪ್ರಕಟಣಾ ದಿನಾಂಕ: 25 DEC 2025 12:07PM by PIB Bengaluru

ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸ್ಥಾಪಕರು ಮತ್ತು ಮಹಾನ್ ಸಮಾಜ ಸುಧಾರಕರು ಭಾರತ ರತ್ನ ಮಹಾಮನ ಪಂಡಿತ್ ಮದನ್ ಮೋಹನ್ ಮಾಳವೀಯ ಅವರ ಜನ್ಮ ವಾರ್ಷಿಕೋತ್ಸವ ದಿನವಾದ ಇಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಮಾಳವೀಯ ಅವರಿಗೆ ಗೌರವ ಸಲ್ಲಿಸಿದರು.

ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ತಮ್ಮ ಸಾಮಾಜಿಕ ಜಾಲತಾಣ ‘X’ ಪೋಸ್ಟ್‌ನಲ್ಲಿ,  ಶಿಕ್ಷಣವನ್ನು ಸಾಮಾಜಿಕ ಸುಧಾರಣೆಯ ಮೂಲಭೂತ ತತ್ವವೆಂದು ಪರಿಗಣಿಸಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸ್ಥಾಪನೆಯ ಮೂಲಕ ಭಾರತೀಯ ಸಾಂಸ್ಕೃತಿಕ ಮೌಲ್ಯಗಳ ಆಧಾರದ ಮೇಲೆ ಆಧುನಿಕ ಶಿಕ್ಷಣವನ್ನು ಅನುಸರಿಸಲು ಮಾಳವೀಯ ಅವರು ಯುವಕರನ್ನು ಪ್ರೇರೇಪಿಸಿದ್ದರು ಎಂದು ಹೇಳಿದ್ದಾರೆ. ರಾಷ್ಟ್ರ ನಿರ್ಮಾಣಕ್ಕಾಗಿ ಪತ್ರಿಕಾ ಮಾಧ್ಯಮವನ್ನು ಒಂದು ಮಾಧ್ಯಮವನ್ನಾಗಿ ಮಾಡುವಲ್ಲಿ ಮಹಾಮನ ಅವರು ಕೊಡುಗೆ ಮಹತ್ವದ್ದಾಗಿದೆ ಎಂದು ಅವರು ಹೇಳಿದರು. ಅಸ್ಪೃಶ್ಯತೆ ನಿರ್ಮೂಲನೆಗೆ ಮಹಾಮನ ಅವರ ಜೀವಮಾನದ ಬದ್ಧತೆ ಮತ್ತು ಅವರ ರೈತ ಸ್ನೇಹಿ ಉಪಕ್ರಮಗಳು ಸದಾ ಸ್ಮರಣೀಯ.

 

*****


(ಪ್ರಕಟಣೆ ಐ.ಡಿ.: 2208500) ವಿಸಿಟರ್ ಕೌಂಟರ್ : 45
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Bengali-TR , Assamese , Punjabi , Gujarati , Tamil , Telugu , Malayalam