ಸಂಪುಟ
azadi ka amrit mahotsav

ದೆಹಲಿ ಮೆಟ್ರೋದ ಐದನೇ ಹಂತ (ಎ) ಯೋಜನೆಯ ಭಾಗವಾಗಿ ಮೂರು ಹೊಸ ಕಾರಿಡಾರ್‌ಗಳಿಗೆ ಕೇಂದ್ರ ಸಂಪುಟ ಅನುಮೋದನೆ

प्रविष्टि तिथि: 24 DEC 2025 3:25PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ರಾಷ್ಟ್ರ ರಾಜಧಾನಿಯೊಳಗಿನ ಸಂಪರ್ಕವನ್ನು ಮತ್ತಷ್ಟು ವೃದ್ಧಿಸುವ ಉದ್ದೇಶದಿಂದ ದೆಹಲಿ ಮೆಟ್ರೋದ ಹಂತ - V(A) ಯೋಜನೆಯ ಭಾಗವಾಗಿ 16.076 ಕಿ.ಮೀ.ಗಳನ್ನು ಒಳಗೊಂಡ ಮೂರು ಹೊಸ ಕಾರಿಡಾರ್‌ಗಳಿಗೆ ಅನುಮೋದನೆ ನೀಡಿದೆ - 1. ಆರ್.ಕೆ. ಆಶ್ರಮ ಮಾರ್ಗದಿಂದ ಇಂದ್ರಪ್ರಸ್ಥ (9.913 ಕಿ.ಮೀ), 2. ಐಜಿಡಿ ವಿಮಾನ ನಿಲ್ದಾಣ ಟಿ-1 ಗೆ ಏರೋಸಿಟಿ (2.263 ಕಿ.ಮೀ) 3. ತುಘಲಕಾಬಾದ್‌ನಿಂದ ಕಾಳಿಂದಿ ಕುಂಜ್ (3.9 ಕಿ.ಮೀ). ದೆಹಲಿ ಮೆಟ್ರೋದ ಹಂತ - V(A) ಯೋಜನೆಯ ಒಟ್ಟು ಯೋಜನಾ ವೆಚ್ಚ ರೂ.12014.91 ಕೋಟಿಯಾಗಿದ್ದು, ದನ್ನು ಭಾರತ ಸರ್ಕಾರ, ದೆಹಲಿ ಸರ್ಕಾರ ಮತ್ತು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಪಡೆಯಲಾಗುವುದು.

ಸೆಂಟ್ರಲ್ ವಿಸ್ಟಾ ಕಾರಿಡಾರ್ ಎಲ್ಲಾ ಕರ್ತವ್ಯ ಭವನಗಳಿಗೆ ಸಂಪರ್ಕವನ್ನು ಒದಗಿಸುತ್ತದೆ, ಇದರಿಂದಾಗಿ ಈ ಪ್ರದೇಶದ ಕಚೇರಿಗೆ ಹೋಗುವವರು ಮತ್ತು ಸಂದರ್ಶಕರಿಗೆ ಮನೆ ಬಾಗಿಲಿಗೆ ಸಂಪರ್ಕವನ್ನು ಒದಗಿಸುತ್ತದೆ. ಈ ಸಂಪರ್ಕದಿಂದಾಗಿ ಪ್ರತಿದಿನ ಸುಮಾರು 60 ಸಾವಿರ ಕಚೇರಿಗೆ ಹೋಗುವವರು ಮತ್ತು 2 ಲಕ್ಷ ವೀಕ್ಷಕರು ಇದರ ಪ್ರಯೋಜನ ಪಡೆಯಲಿದ್ದಾರೆ. ಈ ಕಾರಿಡಾರ್‌ಗಳು ಮಾಲಿನ್ಯ ಮತ್ತು ಬಳಸಿದರೆ ಬರಿದಾಗುವ ಇಂಧನಗಳ ಬಳಕೆಯನ್ನು ಮತ್ತಷ್ಟು ತಗ್ಗಿಸುವುದರಿಂದ ಜೀವನ ಸುಲಭವಾಗುತ್ತದೆ.

ವಿವರಗಳು:

ಆರ್‌ಕೆ ಆಶ್ರಮ ಮಾರ್ಗ - ಇಂದ್ರಪ್ರಸ್ಥ ವಿಭಾಗವು ಬೊಟಾನಿಕಲ್ ಗಾರ್ಡನ್ - ಆರ್‌ಕೆ ಆಶ್ರಮ ಮಾರ್ಗ ಕಾರಿಡಾರ್‌ನ ವಿಸ್ತರಣೆಯಾಗಲಿದೆ. ಇದು ಸದ್ಯ ಮರು ಅಭಿವೃದ್ಧಿ ಹಂತದಲ್ಲಿರುವ ಸೆಂಟ್ರಲ್ ವಿಸ್ಟಾ ಪ್ರದೇಶಕ್ಕೆ ಮೆಟ್ರೋ ಸಂಪರ್ಕವನ್ನು ಒದಗಿಸುತ್ತದೆ. ಏರೋಸಿಟಿ - ಐಜಿಡಿ ವಿಮಾನ ನಿಲ್ದಾಣ ಟರ್ಮಿನಲ್ 1 ಮತ್ತು ತುಘಲಕಾಬಾದ್ - ಕಾಳಿಂದಿ ಕುಂಜ್ ವಿಭಾಗಗಳು ಏರೋಸಿಟಿ - ತುಘಲಕಾಬಾದ್ ಕಾರಿಡಾರ್‌ನ ವಿಸ್ತರಣೆಯಾಗಿರುತ್ತವೆ ಮತ್ತು ತುಘಲಕಾಬಾದ್, ಸಾಕೇತ್, ಕಾಳಿಂದಿ ಕುಂಜ್ ಮುಂತಾದ ಪ್ರದೇಶಗಳಲ್ಲಿ ರಾಷ್ಟ್ರ ರಾಜಧಾನಿಯ ದಕ್ಷಿಣ ಭಾಗಗಳೊಂದಿಗೆ ವಿಮಾನ ನಿಲ್ದಾಣದ ಸಂಪರ್ಕವನ್ನು ವೃದ್ಧಿಸುತ್ತದೆ. ಈ ವಿಸ್ತರಣೆಗಳು 13 ನಿಲ್ದಾಣಗಳನ್ನು ಒಳಗೊಂಡಿರುತ್ತವೆ. ಈ 10 ನಿಲ್ದಾಣಗಳಲ್ಲಿ ನೆಲದಾಳದಲ್ಲಿರುತ್ತವೆ ಮತ್ತು 03 ನಿಲ್ದಾಣಗಳು ಎತ್ತರಿಸಿದ ಮಾರ್ಗದಲ್ಲಿರಲಿವೆ.

ಕಾಮಗಾರಿ ಪೂರ್ಣಗೊಂಡ ನಂತರ, ಕಾರಿಡಾರ್ -1 ಅಂದರೆ ಆರ್.ಕೆ. ಆಶ್ರಮ ಮಾರ್ಗದಿಂದ ಇಂದ್ರಪ್ರಸ್ಥಕ್ಕೆ (9.913 ಕಿ.ಮೀ) ಪಶ್ಚಿಮ, ಉತ್ತರ ಮತ್ತು ಹಳೆಯ ದೆಹಲಿಯ ಮಧ್ಯ ದೆಹಲಿಯೊಂದಿಗೆ ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಇತರ ಎರಡು ಕಾರಿಡಾರ್‌ಗಳಾದ ಏರೋಸಿಟಿಯಿಂದ ಐಜಿಡಿ ವಿಮಾನ ನಿಲ್ದಾಣ ಟಿ -1 (2.263 ಕಿ.ಮೀ) ಮತ್ತು ತುಘಲಕಾಬಾದ್‌ನಿಂದ ಕಾಳಿಂದಿ ಕುಂಜ್ (3.9 ಕಿ.ಮೀ) ಕಾರಿಡಾರ್‌ಗಳು ದಕ್ಷಿಣ ದೆಹಲಿಯನ್ನು ದೇಶೀಯ ವಿಮಾನ ನಿಲ್ದಾಣ ಟರ್ಮಿನಲ್ -1 ನೊಂದಿಗೆ ಸಾಕೇತ್, ಚತ್ತರ್‌ಪುರ ಇತ್ಯಾದಿಗಳ ಮೂಲಕ ಸಂಪರ್ಕಿಸುತ್ತವೆ, ಇದು ರಾಷ್ಟ್ರೀಯ ರಾಜಧಾನಿಯೊಳಗಿನ ಸಂಪರ್ಕವನ್ನು ಮಹತ್ತರವಾಗಿ ಹೆಚ್ಚಿಸುತ್ತದೆ.

ಹಂತ - V (ಎ) ಯೋಜನೆಯ ಈ ಮೆಟ್ರೋ ವಿಸ್ತರಣೆಗಳು ಮಧ್ಯ ದೆಹಲಿ ಮತ್ತು ದೇಶೀಯ ವಿಮಾನ ನಿಲ್ದಾಣದಲ್ಲಿ ದೆಹಲಿ ಮೆಟ್ರೋ ಜಾಲದ ವ್ಯಾಪ್ತಿಯನ್ನು ವಿಸ್ತರಿಸುತ್ತದೆ, ಇದರಿಂದಾಗಿ ಆರ್ಥಿಕತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಮೆಜೆಂಟಾ ಲೈನ್ ಮತ್ತು ಗೋಲ್ಡನ್ ಲೈನ್‌ನ ಈ ವಿಸ್ತರಣೆಗಳು ರಸ್ತೆಗಳಲ್ಲಿನ ದಟ್ಟಣೆಯನ್ನು ಕಡಿಮೆ ಮಾಡುತ್ತದೆ; ಹಾಗಾಗಿ ಮೋಟಾರು ವಾಹನಗಳಿಂದ ಉಂಟಾಗುವ ಮಾಲಿನ್ಯವನ್ನು ತಗ್ಗಿಸಲು ಸಹಾಯ ಮಾಡುತ್ತದೆ.

ಆರ್‌ಕೆ ಆಶ್ರಮ ಮಾರ್ಗ - ಇಂದ್ರಪ್ರಸ್ಥ ವಿಭಾಗದಲ್ಲಿ ಬರಲಿರುವ ನಿಲ್ದಾಣಗಳು: ಆರ್.ಕೆ. ಆಶ್ರಮ ಮಾರ್ಗ, ಶಿವಾಜಿ ಕ್ರೀಡಾಂಗಣ, ಕೇಂದ್ರ ಸಚಿವಾಲಯ, ಕರ್ತವ್ಯ ಭವನ, ಇಂಡಿಯಾ ಗೇಟ್, ಯುದ್ಧ ಸ್ಮಾರಕ – ಹೈಕೋರ್ಟ್, ಬರೋಡಾ ಹೌಸ್‌, ಭಾರತ್ ಮಂಟಪ ಮತ್ತು ಇಂದ್ರಪ್ರಸ್ಥ.

ಆರ್‌ಕೆ ಆಶ್ರಮ ಮಾರ್ಗ - ಇಂದ್ರಪ್ರಸ್ಥ ವಿಭಾಗವು ಬೊಟಾನಿಕಲ್ ಗಾರ್ಡನ್ - ಆರ್‌ಕೆ ಆಶ್ರಮ ಮಾರ್ಗ ಕಾರಿಡಾರ್‌ನ ವಿಸ್ತರಣೆಯಾಗಲಿದೆ. ಇದು ಪ್ರಸ್ತುತ ಪುನರಾಭಿವೃದ್ಧಿ ಹಂತದಲ್ಲಿರುವ ಸೆಂಟ್ರಲ್ ವಿಸ್ಟಾ ಪ್ರದೇಶಕ್ಕೆ ಮೆಟ್ರೋ ಸಂಪರ್ಕವನ್ನು ಒದಗಿಸುತ್ತದೆ. ಏರೋಸಿಟಿ - ಐಜಿಡಿ ವಿಮಾನ ನಿಲ್ದಾಣ ಟರ್ಮಿನಲ್ 1 ಮತ್ತು ತುಘಲಕಾಬಾದ್ - ಕಾಳಿಂದಿ ಕುಂಜ್ ವಿಭಾಗಗಳು ಏರೋಸಿಟಿ - ತುಘಲಕಾಬಾದ್ ಕಾರಿಡಾರ್‌ನ ವಿಸ್ತರಣೆಯಾಗಿರುತ್ತವೆ ಮತ್ತು ತುಘಲಕಾಬಾದ್, ಸಾಕೇತ್, ಕಾಳಿಂದಿ ಕುಂಜ್ ಮುಂತಾದ ಪ್ರದೇಶಗಳಲ್ಲಿ ರಾಷ್ಟ್ರ ರಾಜಧಾನಿಯ ದಕ್ಷಿಣ ಭಾಗಗಳೊಂದಿಗೆ ವಿಮಾನ ನಿಲ್ದಾಣದ ಸಂಪರ್ಕವನ್ನು ಹೆಚ್ಚಿಸುತ್ತದೆ. ಈ ವಿಸ್ತರಣೆಗಳು 13 ನಿಲ್ದಾಣಗಳನ್ನು ಒಳಗೊಂಡಿರುತ್ತವೆ. ಈ 10 ನಿಲ್ದಾಣಗಳಲ್ಲಿ ನೆಲದಾಳದಲ್ಲಿರುತ್ತವೆ ಮತ್ತು 03 ನಿಲ್ದಾಣಗಳು ಎತ್ತರಿಸಿದ ನಿಲ್ದಾಣದಲ್ಲಿರುತ್ತವೆ.

111 ಕಿಮೀ ಮತ್ತು 83 ನಿಲ್ದಾಣಗಳನ್ನು ಒಳಗೊಂಡಿರುವ ಹಂತ-IV ರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ, ಮತ್ತು ಇಂದಿನಂತೆ, ಹಂತ-IV (3 ಆದ್ಯತೆ) ಕಾರಿಡಾರ್‌ಗಳ ನಾಗರಿಕ ನಿರ್ಮಾಣದ ಸುಮಾರು ಶೇ.80.43ರಷ್ಟು ಪೂರ್ಣಗೊಂಡಿದೆ. ಹಂತ-IV (3 ಆದ್ಯತೆ) ಕಾರಿಡಾರ್‌ಗಳು ಡಿಸೆಂಬರ್ 2026 ರ ವೇಳೆಗೆ ಹಂತಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ.

ದೆಹಲಿ ಮೆಟ್ರೋ ದಿನಕ್ಕೆ ಇಂದು ಸರಾಸರಿ 65 ಲಕ್ಷ ಪ್ರಯಾಣಿಕರ ಪ್ರಯಾನ ಮಾಡುತ್ತಿದ್ದಾರೆ. ಈವರೆಗೆ ದಾಖಲಾದ ಗರಿಷ್ಠ ಪ್ರಯಾಣಿಕರ ಪ್ರಯಾಣ 2025ರ ಆಗಸ್ಟ್ 08 ರಂದು 81.87 ಲಕ್ಷ ಪ್ರಯಾಣಿಸಿದ್ದಾರೆ, ದೆಹಲಿ ಮೆಟ್ರೋ ಎಂಆರ್ ಟಿಎಸ್ ನ ಪ್ರಮುಖ ನಿಯತಾಂಕಗಳಲ್ಲಿ ಅಂದರೆ ಸಮಯಪಾಲನೆ, ವಿಶ್ವಾಸಾರ್ಹತೆ ಮತ್ತು ಸುರಕ್ಷತೆಯಲ್ಲಿ ಶ್ರೇಷ್ಠತೆಯ ಸಂಕೇತವಾಗುವ  ಮೂಲಕ ನಗರದ ಜೀವನಾಡಿಯಾಗಿದೆ.

ದೆಹಲಿ ಮತ್ತು ಎನ್.ಸಿ.ಆರ್ ನಲ್ಲಿ ಡಿ.ಎಂ.ಆರ್.ಸಿ ಸುಮಾರು 395 ಕಿ.ಮೀ ಉದ್ದದ ಒಟ್ಟು 12 ಮೆಟ್ರೋ ಮಾರ್ಗಗಳನ್ನು 289 ನಿಲ್ದಾಣಗಳೊಂದಿಗೆ ನಿರ್ವಹಿಸುತ್ತಿದೆ. ದೆಹಲಿ ಮೆಟ್ರೋ ಇಂದು ಭಾರತದಲ್ಲಿ ಅತಿದೊಡ್ಡ ಮೆಟ್ರೋ ಜಾಲವನ್ನು ಹೊಂದಿದೆ ಮತ್ತು ವಿಶ್ವದ ಅತಿದೊಡ್ಡ ಮೆಟ್ರೋಗಳಲ್ಲಿ ಒಂದಾಗಿದೆ.

 

*****

 


(रिलीज़ आईडी: 2208127) आगंतुक पटल : 15
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Punjabi , Gujarati , Odia , Tamil , Telugu , Malayalam