ಗೃಹ ವ್ಯವಹಾರಗಳ ಸಚಿವಾಲಯ
ಮಾಜಿ ಪ್ರಧಾನಮಂತ್ರಿ, ರೈತರ ಮಹಾನ್ ನಾಯಕ ಮತ್ತು ಭಾರತ ರತ್ನ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನದಂದು ಅವರಿಗೆ ಗೌರವ ನಮನ ಸಲ್ಲಿಸಿದ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ
ಚೌಧರಿ ಚರಣ್ ಸಿಂಗ್ ಅವರ ಜೀವನವು ಕೃಷಿ ವ್ಯವಸ್ಥೆಯ ಉನ್ನತಿ, ರೈತರ ಕಲ್ಯಾಣ ಮತ್ತು ಸಮಾಜ ಸೇವೆಗಾಗಿ ಮುಡಿಪಾಗಿತ್ತು
ಅವರು ಧೈರ್ಯದಿಂದ ರೈತರು ಮತ್ತು ಕೃಷಿಯನ್ನು ಆಡಳಿತದ ಕೇಂದ್ರದಲ್ಲಿ ಇರಿಸಿದರು ಮತ್ತು ತುರ್ತು ಪರಿಸ್ಥಿತಿ ಮತ್ತು ಸರ್ವಾಧಿಕಾರ ಆಡಳಿತವನ್ನು ಕಿತ್ತೊಗೆಯುವಲ್ಲಿ ಮಹತ್ವದ ಪಾತ್ರ ವಹಿಸಿದರು
प्रविष्टि तिथि:
23 DEC 2025 11:27AM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಮಾಜಿ ಪ್ರಧಾನಮಂತ್ರಿ, ಮಹಾನ್ ರೈತ ನಾಯಕ ಮತ್ತು ಭಾರತ ರತ್ನ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನದಂದು ಅವರಿಗೆ ಗೌರವ ನಮನ ಸಲ್ಲಿಸಿದರು.
ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು 'ಎಕ್ಸ್' ನಲ್ಲಿ ಈ ಸಂಬಂಧ ಹಂಚಿಕೊಂಡಿದ್ದು, ಮಾಜಿ ಪ್ರಧಾನಮಂತ್ರಿ, ರೈತರ ಮಹಾನ್ ನಾಯಕ ಮತ್ತು ಭಾರತ ರತ್ನ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನದಂದು ಅವರಿಗೆ ಗೌರವ ನಮನಗಳು. ಚೌಧರಿ ಚರಣ್ ಸಿಂಗ್ ಅವರ ಜೀವನವು ಕೃಷಿ ವ್ಯವಸ್ಥೆಯ ಉನ್ನತಿ, ರೈತರ ಕಲ್ಯಾಣ ಮತ್ತು ಸಮಾಜ ಸೇವೆಗಾಗಿ ಮುಡಿಪಾಗಿತ್ತು ಎಂದು ಅವರು ಹೇಳಿದರು. ಅವರು ಧೈರ್ಯದಿಂದ ರೈತರು ಮತ್ತು ಕೃಷಿಯನ್ನು ಆಡಳಿತದ ಕೇಂದ್ರದಲ್ಲಿ ಇರಿಸಿದರು ಮತ್ತು ತುರ್ತು ಪರಿಸ್ಥಿತಿ ಮತ್ತು ಸರ್ವಾಧಿಕಾರ ಆಡಳಿತವನ್ನು ಕಿತ್ತೊಗೆಯುವಲ್ಲಿ ಮಹತ್ವದ ಪಾತ್ರ ವಹಿಸಿದರು.
*****
(रिलीज़ आईडी: 2207644)
आगंतुक पटल : 6