ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಒಟಿಟಿ ಕಟೆಂಟ್ ಸಿ.ಬಿ.ಎಫ್.ಸಿ ವ್ಯಾಪ್ತಿಯಿಂದ ಹೊರಗೆ; ಐಟಿ ನಿಯಮಗಳ ಅಡಿಯಲ್ಲಿ ಮೂರು ಹಂತದ ಸಾಂಸ್ಥಿಕ ಕಾರ್ಯವಿಧಾನ ಜಾರಿಯಲ್ಲಿ
प्रविष्टि तिथि:
17 DEC 2025 2:51PM by PIB Bengaluru
ಸಾರ್ವಜನಿಕ ಪ್ರದರ್ಶನಕ್ಕಾಗಿ ಸಿನಿಮಾಟೋಗ್ರಾಫ್ ಚಲನಚಿತ್ರಗಳನ್ನು ಪರೀಕ್ಷಿಸಲು ಮತ್ತು ಪ್ರಮಾಣೀಕರಿಸಲು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ -ಸಿ.ಬಿ.ಎಫ್.ಸಿ)ಯನ್ನು ಸ್ಥಾಪಿಸಲಾಗಿದ್ದು, ಅದು ಸಿನಿಮಾಟೋಗ್ರಾಫ್ ಕಾಯಿದೆ 1952 ರಡಿಯಲ್ಲಿ ಸ್ಥಾಪಿಸಲಾದ ಶಾಸನಬದ್ಧ ಪ್ರಾಧಿಕಾರವಾಗಿದೆ.
ಒಟಿಟಿ ವಿಷಯ (ಕಂಟೆಂಟ್) ಮಾಹಿತಿ ತಂತ್ರಜ್ಞಾನ (ಇಂಟರ್ ಮೀಡಿಯರಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು 2021ರ ಭಾಗ IIIರ ನಿಬಂಧನೆಗಳ ಅಡಿಯಲ್ಲಿ ನಿಯಂತ್ರಿಸಲಾಗುತ್ತದೆ.
ನೀತಿ ಸಂಹಿತೆಯು ಒಟಿಟಿ ಪ್ಲಾಟ್‌ಫಾರ್ಮ್‌ಗಳು ಕಾನೂನಿನಿಂದ ನಿಷೇಧಿಸಲಾದ ಕಟೆಂಟ್ ಪ್ರಕಟಿಸುವುದನ್ನು ತಪ್ಪಿಸಬೇಕು ಮತ್ತು ನಿಯಮಗಳಲ್ಲಿನ ಮಾರ್ಗಸೂಚಿಗಳ ಪ್ರಕಾರ ಕಂಟೆಂಟ್ ಅನ್ನು ವಯಸ್ಸಿನ ಆಧಾರದ ವರ್ಗೀಕರಣವನ್ನು ಕೈಗೊಳ್ಳಬೇಕು ಎಂದು ಸೂಚಿಸುತ್ತದೆ.
ಈ ನಿಯಮಗಳು ವಿಷಯ(ಕಂಟೆಂಟ್)-ಸಂಬಂಧಿತ ಮಾನದಂಡಗಳ ಪಾಲನೆಯನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ಸಾರ್ವಜನಿಕ ಕುಂದುಕೊರತೆಗಳನ್ನು ಪರಿಹರಿಸಲು ಮೂರು ಹಂತದ ಸಾಂಸ್ಥಿಕ ಕಾರ್ಯವಿಧಾನವನ್ನು ಸಹ ವಿವರಿಸುತ್ತದೆ.
ಒಂದನೇ ಹಂತ: ಪ್ರಸಾರಕರು ಅಥವಾ ಪ್ರಕಾಶಕರಿಂದ ಸ್ವಯಂ ನಿಯಂತ್ರಣ
ಎರಡನೇ ಹಂತ: ಪ್ರಸಾರಕರ ಸ್ವಯಂ ನಿಯಂತ್ರಣ ಸಂಸ್ಥೆಗಳಿಂದ ಸ್ವಯಂ-ನಿಯಂತ್ರಣ
ಮೂರನೇ ಹಂತ: ಕೇಂದ್ರ ಸರ್ಕಾರದಿಂದ ಮೇಲ್ವಿಚಾರಣಾ ಕಾರ್ಯವಿಧಾನ
ಒಟಿಟಿ ವಿಷಯಕ್ಕೆ ಸಂಬಂಧಿಸಿದ ಕುಂದುಕೊರತೆಗಳನ್ನು ಪರಿಹಾರ ಕಾರ್ಯವಿಧಾನದ ಹಂತ-I ಅಂದರೆ ಪ್ರಸಾರಕ ಅಥವಾ ಪ್ರಕಾಶಕರ ಸ್ವಯಂ ನಿಯಂತ್ರಣದ ಅಡಿಯಲ್ಲಿ ಸೂಕ್ತ ಕ್ರಮಕ್ಕಾಗಿ ಸಂಬಂಧಪಟ್ಟ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ರವಾನಿಸಲಾಗುತ್ತದೆ, ಅದಕ್ಕೆ 2021ರ ಐಟಿ ನಿಯಮಗಳಡಿಯಲ್ಲಿ ಅವಕಾಶ ಒದಗಿಸಲಾಗಿದೆ.
ಈ ಮಾಹಿತಿಯನ್ನು ವಾರ್ತಾ ಮತ್ತು ಪ್ರಸಾರ ರಾಜ್ಯ ಖಾತೆ ಸಚಿವರಾದ ಡಾ. ಎಲ್. ಮುರುಗನ್ ಅವರು ಲೋಕಸಭೆಯಲ್ಲಿಂದು ಡಾ. ಎಂ. ಕೆ. ವಿಷ್ಣು ಪ್ರಸಾದ್ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವಾಗ ತಿಳಿಸಿದ್ದಾರೆ.
*****
(रिलीज़ आईडी: 2205211)
आगंतुक पटल : 10