ಗೃಹ ವ್ಯವಹಾರಗಳ ಸಚಿವಾಲಯ
ರಾಷ್ಟ್ರೀಯ ಏಕತೆಯ ಸಂಕೇತ ಮತ್ತು ಬಲಿಷ್ಠ ಭಾರತದ ಶಿಲ್ಪಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುಣ್ಯತಿಥಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ
ಹಲವಾರು ಪ್ರತಿಕೂಲ ಸಂದರ್ಭಗಳ ಹೊರತಾಗಿಯೂ ಸರ್ದಾರ್ ಪಟೇಲ್ ಛಿದ್ರವಾಗಿದ್ದ ಸ್ವತಂತ್ರ ಭಾರತವನ್ನು ಒಗ್ಗೂಡಿಸಿದರು, ಅದಕ್ಕೆ ಬಲಿಷ್ಠ ರಾಷ್ಟ್ರದ ಭದ್ರ ಬುನಾದಿ ಹಾಕಿದರು
ಭಾರತ ಮಾತೆಯ ಭದ್ರತೆ, ಆಂತರಿಕ ಸ್ಥಿರತೆ ಮತ್ತು ಶಾಂತಿ ಸ್ಥಾಪನೆಯನ್ನು ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡ ದೇಶದ ಮೊದಲ ಗೃಹ ಸಚಿವರಾಗಿದ್ದ ಸರ್ದಾರ್ ಪಟೇಲ್
ಸಹಕಾರ ಚಳವಳಿಯ ಪುನರುಜ್ಜೀವನಕ್ಕೆ ಸ್ಫೂರ್ತಿ ನೀಡಿದ ಮತ್ತು ಮಹಿಳೆಯರು ಮತ್ತು ರೈತರ ಸಬಲೀಕರಣದ ಮೂಲಕ ಸ್ವಾವಲಂಬಿ ಭಾರತಕ್ಕೆ ಅಡಿಪಾಯ ಹಾಕಿದ ಸರ್ದಾರ್ ಪಟೇಲ್, ರಾಷ್ಟ್ರ ಮೊದಲು ಎನ್ನುವ ಹಾದಿಯಲ್ಲಿ ಮಾರ್ಗದರ್ಶಕ ನಕ್ಷತ್ರದಂತೆ ನಮ್ಮೆಲ್ಲರಿಗೂ ಮಾರ್ಗದರ್ಶನ ನೀಡುತ್ತಿದ್ದಾರೆ
प्रविष्टि तिथि:
15 DEC 2025 11:25AM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ, ರಾಷ್ಟ್ರೀಯ ಏಕತೆಯ ಸಂಕೇತ ಮತ್ತು ಬಲಿಷ್ಠ ಭಾರತದ ಶಿಲ್ಪಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುಣ್ಯತಿಥಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಶ್ರೀ ಅಮಿತ್ ಶಾ ತಮ್ಮ ಸಾಮಾಜಿಕ ಮಾಧ್ಯಮ ‘X’ಪೋಸ್ಟ್ ನಲ್ಲಿ ಹಲವು ಪ್ರತಿಕೂಲ ಸಂದರ್ಭಗಳ ಹೊರತಾಗಿಯೂ, ಸರ್ದಾರ್ ಪಟೇಲ್ ಛಿದ್ರವಾಗಿದ್ದ ಸ್ವತಂತ್ರ ಭಾರತವನ್ನು ಒಗ್ಗೂಡಿಸಿದರು, ಬಲಿಷ್ಠ ರಾಷ್ಟ್ರಕ್ಕೆ ಭದ್ರ ಬುನಾದಿಯನ್ನು ನೀಡಿದರು ಎಂದು ಹೇಳಿದ್ದಾರೆ. ದೇಶದ ಮೊದಲ ಗೃಹ ಸಚಿವರಾಗಿ ಸರ್ದಾರ್ ಪಟೇಲ್ ಅವರು ಭಾರತ ಮಾತೆಯ ಭದ್ರತೆ, ಆಂತರಿಕ ಸ್ಥಿರತೆ ಮತ್ತು ಶಾಂತಿ ಸ್ಥಾಪನೆಯನ್ನು ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡಿದ್ದರು ಎಂದು ಅವರು ಹೇಳಿದರು. ಸಹಕಾರಿ ಚಳವಳಿಯ ಪುನರುಜ್ಜೀವನಕ್ಕೆ ಸ್ಫೂರ್ತಿ ನೀಡಿದ ಮತ್ತು ಮಹಿಳೆಯರು ಮತ್ತು ರೈತರ ಸಬಲೀಕರಣದ ಮೂಲಕ ಸ್ವಾವಲಂಬಿ ಭಾರತಕ್ಕೆ ಅಡಿಪಾಯ ಹಾಕಿದ ಸರ್ದಾರ್ ಪಟೇಲ್, ರಾಷ್ಟ್ರವನ್ನು ಮೊದಲು ಎನ್ನುವ ಹಾದಿಯಲ್ಲಿ ನಮಗೆಲ್ಲರಿಗೂ ಮಾರ್ಗದರ್ಶಕ ನಕ್ಷತ್ರದಂತೆ ಮಾರ್ಗದರ್ಶನ ನೀಡುತ್ತಲೇ ಇರುತ್ತಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು.
*****
(रिलीज़ आईडी: 2204028)
आगंतुक पटल : 11
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Assamese
,
Bengali-TR
,
Bengali
,
Punjabi
,
Gujarati
,
Tamil
,
Malayalam