ಗೃಹ ವ್ಯವಹಾರಗಳ ಸಚಿವಾಲಯ
ಸ್ವಾತಂತ್ರ್ಯವೀರ ಸಾವರ್ಕರ್ ರಚಿಸಿದ 'ಸಾಗರ ಪ್ರಾಣ ತಳಮಳಲಾ' ಕವಿತೆಗೆ 115 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಶ್ರೀ ವಿಜಯಪುರಂನಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ದೇಶಿಸಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಭಾಷಣ
ಆರ್‌ಎಸ್‌ಎಸ್ ಸರಸಂಘಚಾಲಕ್ ಡಾ. ಮೋಹನ್ ಭಾಗವತ್ ಅವರು ವೀರ್ ಸಾವರ್ಕರ್ ಅವರ ಪ್ರತಿಮೆ ಅನಾವರಣ ಮಾಡುತ್ತಿರುವುದು, ಅವರ ಸಿದ್ಧಾಂತವನ್ನು ಮುಂದುವರೆಸುವ ಸವಿನೆನಪಿನ ಸಂಗತಿಯಾಗಿದೆ
ವೀರ್ ಸಾವರ್ಕರ್ ಅವರು ಸಾಂಸ್ಕೃತಿಕ ರಾಷ್ಟ್ರೀಯತೆಗೆ ಹಾಕಿದ ಭದ್ರ ಅಡಿಪಾಯವೇ ಪ್ರಧಾನಮಂತ್ರಿ ಮೋದಿ ಅವರ ನೇತೃತ್ವದಲ್ಲಿ ದೇಶ ಇಂದು ಸಾಧಿಸುತ್ತಿರುವ ಪ್ರಗತಿಗೆ ಹಾದಿಯಾಗಿದೆ
ವೀರ್ ಸಾವರ್ಕರ್ ಅವರ 'ಸಾಗರ ಪ್ರಾಣ ತಾಳಮಲಾಲ' ಕವಿತೆಯು ದೇಶಭಕ್ತಿ ಅಭಿವ್ಯಕ್ತಿಯ ಪರಾಕಾಷ್ಠೆಯಾಗಿದೆ
ವೀರ್ ಸಾವರ್ಕರ್ ಅವರ ಈ ಪ್ರತಿಮೆಯು ಯುವಜನರಲ್ಲಿ ಮಾತೃಭೂಮಿಯ ಬಗ್ಗೆ ಕರ್ತವ್ಯ, ರಾಷ್ಟ್ರೀಯ ಏಕತೆ ಮತ್ತು ಸಮೃದ್ಧ ರಾಷ್ಟ್ರ ನಿರ್ಮಿಸುವ ಸಂಕಲ್ಪವನ್ನು ಬಲಪಡಿಸುತ್ತದೆ
ಭಯದ ಬಗ್ಗೆ ಸಂಪೂರ್ಣವಾಗಿ ತಿಳಿದಿದ್ದರೂ, ವೀರ್ ಸಾವರ್ಕರ್ ಜಿ ಭಯವನ್ನು ಜಯಿಸುವ ಧೈರ್ಯ ಹೊಂದಿದ್ದ ನಂಬಿಕೆಯು ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ.
ವೀರ್ ಸಾವರ್ಕರ್ ಅವರ ಅಂತ್ಯವಿಲ್ಲದ, ಸಾಗರದಂತಹ ವ್ಯಕ್ತಿತ್ವವನ್ನು ಯಾವುದೇ ಪುಸ್ತಕ, ಕವಿತೆ ಅಥವಾ ಚಲನಚಿತ್ರದಲ್ಲಿ ಸೆರೆಹಿಡಿಯುವುದು ಕಷ್ಟ
ಸಹಜ ದೇಶಭಕ್ತಿ, ಸಾಮಾಜಿಕ ಸುಧಾರಣೆ, ಕರ್ತೃತ್ವ ಮತ್ತು ಯೋಧ ಮನೋಭಾವದಂತಹ ಗುಣಗಳನ್ನು ಹೊಂದಿದ್ದ ವೀರ್ ಸಾವರ್ಕರ್ ಅವರಂತಹ ವ್ಯಕ್ತಿತ್ವವು ಯುಗ ಯುಗಗಳಿಗೊಮ್ಮೆ ಮಾತ್ರ ಜನಿಸುತ್ತದೆ
ಹಿಂದುತ್ವದ ಸದೃಢ ನಂಬಿಕೆಯಲ್ಲಿ ಬೇರೂರಿರುವ ಸಾವರ್ಕರ್ ಅವರ ಜೀವನವು ಆಧುನಿಕತೆ ಮತ್ತು ಸಂಪ್ರದಾಯದ ಅಸಾಧಾರಣ ಮಿಶ್ರಣವಾಗಿದೆ
ಸಾವರ್ಕರ್ ಜಿ ಹಿಂದೂ ಸಮಾಜದ ಎಲ್ಲಾ ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡಿದರು
ಭಾರತ ಮಾತೆಯ ಸೇವೆಯಲ್ಲಿ ಸ್ವಯಂ ತ್ಯಾಗದ ಬಯಕೆ ಹೊಂದಿದ್ದ ಸಾವರ್ಕರ್ ಜಿ ಅವರಂತಹ ವ್ಯಕ್ತಿತ್ವಗಳು ನಿಜಕ್ಕೂ ಅಪರೂಪ
2 ಬಾರಿ ಜೀವಾವಧಿ ಶಿಕ್ಷೆ ಅನುಭವಿಸಿದರೂ, ಮಾತೃಭೂಮಿಯನ್ನು ವೈಭವೀಕರಿಸಲು ಸಾಹಿತ್ಯ ರಚಿಸಿದ ಸಾವರ್ಕರ್ ಅವರನ್ನು ಮೀರಿಸಲು ಬೇರೆ ಯಾರಿಂದಲೂ ಸಾಧ್ಯವಿಲ್ಲ
ಅಂಡಮಾನ್-ನಿಕೋಬಾರ್ ದ್ವೀಪಗಳು ತಪೋಭೂಮಿಯಾಗಿದ್ದು, ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ಶ್ರಮ, ತ್ಯಾಗ, ಸಮರ್ಪಣೆ ಮತ್ತು ಅಚಲ ದೇಶಭಕ್ತಿಯ ಮೂಲಕ ನಿರ್ಮಿಸಲಾಗಿದೆ
ಅಂಡಮಾನ್-ನಿಕೋಬಾರ್ ದ್ವೀಪಗಳನ್ನು 'ಶಹೀದ್' ಮತ್ತು 'ಸ್ವರಾಜ್' ಎಂದು ಹೆಸರಿಸುವ ಮೂಲಕ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸುಭಾಷ್ ಚಂದ್ರ ಬೋಸ್ ಅವರ ಕನಸನ್ನು ನನಸಾಗಿಸಿದ್ದಾರೆ
ದೇಶದ ಯುವಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಭಾರತವನ್ನು ಸುರಕ್ಷಿತ ಮತ್ತು ಸಮೃದ್ಧಗೊಳಿಸುವ ಗುರಿಯೊಂದಿಗೆ ಮುನ್ನಡೆದಾಗ ಮಾತ್ರ ವೀರ್ ಸಾವರ್ಕರ್ ಅವರ ಭಾರತದ ದೃಷ್ಟಿಕೋನ ನನಸಾಗುತ್ತದೆ
प्रविष्टि तिथि:
12 DEC 2025 8:40PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಸ್ವಾತಂತ್ರ್ಯವೀರ ಸಾವರ್ಕರ್ ರಚಿಸಿದ 'ಸಾಗರ ಪ್ರಾಣ ತಳಮಳಲಾ' ಕಾವ್ಯವು 115 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಶ್ರೀ ವಿಜಯಪುರಂನಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ದ ಸರಸಂಘಚಾಲಕ್ ಶ್ರೀ ಮೋಹನ್ ಭಾಗವತ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಲೆಫ್ಟಿನೆಂಟ್ ಗವರ್ನರ್ ಅಡ್ಮಿರಲ್ (ನಿವೃತ್ತ) ಶ್ರೀ ಡಿ.ಕೆ. ಜೋಶಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಮಾತನಾಡಿ, ವೀರ್ ಸಾವರ್ಕರ್ ತಮ್ಮ ಜೀವನದ ಅತ್ಯಂತ ಕಠಿಣ ಅವಧಿಯನ್ನು ಇಲ್ಲಿ ಕಳೆದ ಕಾರಣ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಇಂದು ಎಲ್ಲಾ ಭಾರತೀಯರಿಗೆ ಯಾತ್ರಾ ಸ್ಥಳವಾಗಿದೆ ಮಾರ್ಪಟ್ಟಿದೆ. ಈ ಸ್ಥಳವು ನಮ್ಮ ಸ್ವಾತಂತ್ರ್ಯ ಹೋರಾಟದ ಮತ್ತೊಬ್ಬ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ಸ್ಮರಣೆಯೊಂದಿಗೂ ಸಂಬಂಧ ಹೊಂದಿದೆ. ಆಜಾದ್ ಹಿಂದ್ ಫೌಜ್ ಭಾರತವನ್ನು ಸ್ವತಂತ್ರಗೊಳಿಸಲು ಪ್ರಯತ್ನಿಸಿದಾಗ, ಅವರು ಮೊದಲು ಬಿಡುಗಡೆ ಮಾಡಿದ ಸ್ಥಳ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು,ಇಲ್ಲಿ ಸುಭಾಷ್ ಚಂದ್ರ ಬೋಸ್ ಸಹ 2 ದಿನಗಳ ಕಾಲ ತಂಗಿದ್ದರು. ಈ ದ್ವೀಪಗಳ ಗುಂಪಿಗೆ 'ಶಹೀದ್' ಮತ್ತು 'ಸ್ವರಾಜ್' ಎಂದು ಹೆಸರಿಸಲು ಸೂಚಿಸಿದವರು ಸುಭಾಷ್ ಚಂದ್ರ ಬೋಸ್. ಈ ಸಲಹೆಯನ್ನು ಪ್ರಧಾನಿಯಾದ ನಂತರ ವಾಸ್ತವಕ್ಕೆ ತಂದವರು ಶ್ರೀ ನರೇಂದ್ರ ಮೋದಿ ಎಂದರು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಕೇವಲ ದ್ವೀಪ ಸಮೂಹವಲ್ಲ, ಆದರೆ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ತಪಸ್ಸು, ಸಮರ್ಪಣೆ ಮತ್ತು ಅಚಲ ದೇಶಭಕ್ತಿಯಿಂದ ರೂಪುಗೊಂಡ ಪವಿತ್ರ ಭೂಮಿಯಾಗಿದೆ. ಈ ಪವಿತ್ರ ಭೂಮಿಯಲ್ಲಿ ವೀರ್ ಸಾವರ್ಕರ್ ಅವರ ಆಳೆತ್ತರದ ಪ್ರತಿಮೆ ಉದ್ಘಾಟಿಸಿರುವುದು ಸ್ಮರಣೀಯ ಸಂದರ್ಭವಾಗಿದೆ. ಈ ಉದ್ಘಾಟನೆಯನ್ನು ಸಾವರ್ಕರ್ ಅವರ ಸಿದ್ಧಾಂತವನ್ನು ನಿಜವಾಗಿಯೂ ಮುಂದಕ್ಕೆ ಕೊಂಡೊಯ್ಯುವ ಕೆಲಸವನ್ನು ಆರ್ ಎಸ್ಎಸ್ ಸಂಘಟನೆಯ ಸರಸಂಘಚಾಲಕ್ ಶ್ರೀ ಮೋಹನ್ ಭಾಗವತ್ ಮಾಡಿದ್ದಾರೆ. ಈ ಭೂಮಿ ಮತ್ತು ವೀರ್ ಸಾವರ್ಕರ್ ಅವರ ಸ್ಮರಣೆ ನಿಜಕ್ಕೂ ಪವಿತ್ರವಾಗಿದೆ, ಶ್ರೀ ಮೋಹನ್ ಭಾಗವತ್ ಅವರು ಈ ಪ್ರತಿಮೆ ಅನಾವರಣಗೊಳಿಸಿರುವುದು ಈ ಸಂದರ್ಭವನ್ನು ಹೆಚ್ಚು ಸ್ಮರಣೀಯವಾಗಿಸುತ್ತದೆ ಎಂದು ಅಮಿತ್ ಶಾ ಹೇಳಿದರು.

ಇಂದು ಅನಾವರಣಗೊಂಡ ಪ್ರತಿಮೆಯು ಹಲವು ವರ್ಷಗಳ ಕಾಲ ವೀರ್ ಸಾವರ್ಕರ್ ಅವರ ತ್ಯಾಗ, ಸಂಕಲ್ಪ ಮತ್ತು ಭಾರತ ಮಾತೆಯ ಮೇಲಿನ ಅಚಲ ಭಕ್ತಿಯ ಸಂಕೇತವಾಗಿ ಉಳಿಯುತ್ತದೆ. ಮುಂಬರುವ ದಶಕಗಳವರೆಗೆ, ಈ ಪ್ರತಿಮೆಯು ಭವಿಷ್ಯದ ಪೀಳಿಗೆಗೆ ಸಾವರ್ಕರ್ ಅವರ ಜೀವನ ಪಾಠಗಳನ್ನು ಕಲಿಯಲು ಪ್ರೇರಣೆ ನೀಡುತ್ತದೆ. ಈ ಸ್ಥಳವು ಯುವ ಜನರಿಗೆ ವೀರ್ ಸಾವರ್ಕರ್ ನೀಡಿದ ಕರೆಯನ್ನು ಆಂತರಿಕಗೊಳಿಸುವ ಪ್ರಮುಖ ಕೇಂದ್ರವಾಗಲಿದೆ. ಯುವ ಜನರಿಗೆ ಸಾವರ್ಕರ್ ಅವರ ಧೈರ್ಯದ ಸಂದೇಶ, ಮಾತೃಭೂಮಿಯ ಬಗ್ಗೆ ಅವರ ಕರ್ತವ್ಯ ಪ್ರಜ್ಞೆ, ಅವರ ದೃಢನಿಶ್ಚಯದ ಗುಣಗಳು ಮತ್ತು ರಾಷ್ಟ್ರೀಯ ಏಕತೆ, ಭದ್ರತೆ ಮತ್ತು ಸಮೃದ್ಧ ರಾಷ್ಟ್ರದ ದೃಷ್ಟಿಕೋನವನ್ನು ತಿಳಿಸಲು ಇದು ಮಹತ್ವದ ಸ್ಥಳವಾಗಲಿದೆ. ವೀರ್ ಸಾವರ್ಕರ್ ಅವರ 'ಸಾಗರ ಪ್ರಾಣ ತಳಮಳಲಾ' ಕವಿತೆಯು ದೇಶಭಕ್ತಿ ವ್ಯಕ್ತಪಡಿಸುವ ಪರಾಕಾಷ್ಠೆಯಾಗಿದೆ. ಸಾವರ್ಕರ್ ಅವರ ಒಂದು ವಾಕ್ಯ ಅವರ ಅನುಯಾಯಿಗಳಿಗೆ ಬಹಳ ಮುಖ್ಯವಾಗಿದೆ. 'ಶೌರ್ಯ ಎಂದರೆ ಭಯದ ಅನುಪಸ್ಥಿತಿಯಲ್ಲ, ಅದು ಭಯದ ಮೇಲಿನ ವಿಜಯ.' ಭಯವನ್ನು ಅರಿಯದವರು ಧೈರ್ಯಶಾಲಿಗಳು, ಆದರೆ ನಿಜವಾದ ನಾಯಕರು ಭಯವನ್ನು ತಿಳಿದಿರುವವರು ಮತ್ತು ಅದನ್ನು ಜಯಿಸುವ ಧೈರ್ಯ ಹೊಂದಿರುವವರು. ವೀರ್ ಸಾವರ್ಕರ್ ಈ ಸತ್ಯವನ್ನು ತಮ್ಮ ಜೀವನದಲ್ಲಿ ಸಾಕಾರಗೊಳಿಸಿದರು ಎಂದರು.

ಇಂದು ಇಲ್ಲಿ ಕಾಫಿ ಟೇಬಲ್ ಪುಸ್ತಕ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಸಾವರ್ಕರ್ ಅವರ ಎಲ್ಲಾ ಗುಣಗಳನ್ನು ಸಂಕ್ಷಿಪ್ತವಾಗಿ ತಿಳಿಸುವ ಪ್ರಯತ್ನ ಮಾಡಲಾಗಿದೆ. ಇಂದು ಸಾವರ್ಕರ್ ಅವರ ವಿಚಾರಗಳನ್ನು ಮುಂದಕ್ಕೆ ಕೊಂಡೊಯ್ದ ಅನೇಕ ಜನರನ್ನು ಇಲ್ಲಿ ಗೌರವಿಸಲಾಗಿದೆ. ಸಾಗರವನ್ನು ತಡೆಯಲು ಯಾರಿಗೂ ಹೇಗೆ ಸಾಧ್ಯವಿಲ್ಲವೋ ಹಾಗೆಯೇ, ಸಾವರ್ಕರ್ ಅವರ ಗುಣಗಳು, ಅವರ ಜೀವನದ ಎತ್ತರ ಮತ್ತು ಅವರ ಬಹುಮುಖಿ ವ್ಯಕ್ತಿತ್ವವನ್ನು ಪುಸ್ತಕ, ಚಲನಚಿತ್ರ ಅಥವಾ ಕವಿತೆಯಲ್ಲಿ ಸೆರೆಹಿಡಿಯುವುದು ಅತ್ಯಂತ ಕಷ್ಟ. ವಿವಿಧ ಹಂತಗಳಲ್ಲಿ ಮಾಡಿದ ಹಲವಾರು ಪ್ರಯತ್ನಗಳು ಸಾವರ್ಕರ್ ಅವರನ್ನು ಭವಿಷ್ಯದ ಪೀಳಿಗೆಗೆ ಅರ್ಥ ಮಾಡಿಕೊಳ್ಳಲು ಬಹಳ ಮುಖ್ಯವಾದ ಮಾರ್ಗವನ್ನು ಒದಗಿಸಿವೆ. ಒಬ್ಬ ವ್ಯಕ್ತಿಯ ಅಸ್ತಿತ್ವವು ದೇಹದಿಂದ ಮಾತ್ರವಲ್ಲ, ಅವರು ಅನುಸರಿಸುವ ಸಿದ್ಧಾಂತ, ಅವರ ಆತ್ಮವು ಶ್ರೇಷ್ಠವೆಂದು ಪರಿಗಣಿಸುವ ಸಂಸ್ಕೃತಿ ಮತ್ತು ಅವರ ಕಾರ್ಯಗಳಿಂದ ಕೂಡ ರೂಪುಗೊಳ್ಳುತ್ತದೆ. ಹಾಗಾಗಿ,ಭಾರತ ಮಾತ್ರ ವೀರ್ ಸಾವರ್ಕರ್ ಅವರ ಈ 3 ಗುಣಗಳನ್ನು ನಿಜವಾಗಿಯೂ ಗುರುತಿಸಬಲ್ಲದು ಎಂದು ಅಮಿತ್ ಶಾ ಹೇಳಿದರು.

ಇಂದು ದೇಶಕ್ಕಾಗಿ ಯಾರೂ ಅಮರರಾಗುವ ಅಥವಾ ಹುತಾತ್ಮರಾಗುವ ಅಗತ್ಯವಿಲ್ಲ, ಆದರೆ ದೇಶಕ್ಕಾಗಿ ಬದುಕುವ ಅವಶ್ಯಕತೆ ಇನ್ನೂ ಇದೆ, ಆಗ ಮಾತ್ರ ನಾವು ಸಾವರ್ಕರ್ ಹೊಂದಿದ್ದ ದೂರದೃಷ್ಟಿಯ ಭಾರತವನ್ನು ನಿರ್ಮಿಸಬಹುದು. ನಮ್ಮ ಯುವಕರು ಸಾವರ್ಕರ್ ಕಲ್ಪಿಸಿಕೊಂಡಿದ್ದ ಭಾರತವನ್ನು ನಿರ್ಮಿಸಲು ಬಯಸಿದರೆ, ಅವರು ಸಾವರ್ಕರ್ ಅವರ ಸ್ಫೂರ್ತಿಗೆ ಅನುಗುಣವಾಗಿ ತಮ್ಮ ಕೆಲಸದ ಕ್ಷೇತ್ರಗಳಲ್ಲಿ ತಮ್ಮ ಜೀವನ್ನು ನಡೆಸಬೇಕು, ಸುರಕ್ಷಿತ ಮತ್ತು ಅತ್ಯಂತ ಸಮೃದ್ಧ ಭಾರತ ನಿರ್ಮಿಸುವುದು ಅವರ ಗುರಿಯಾಗಿರಬೇಕು. ಸಾವರ್ಕರ್ ಅವರ ಜೀವನ ನೋಡಿದಾಗ, ಅಂತಹ ವ್ಯಕ್ತಿ ಮುಂದಿನ ಶತಮಾನಗಳವರೆಗೆ ಭೂಮಿಯ ಮೇಲೆ ಮತ್ತೆ ಕಾಣಿಸಿಕೊಳ್ಳುವುದಿಲ್ಲ ಎಂದು ಅನಿಸುತ್ತದೆ. ಸಾವರ್ಕರ್ ಜಿ ಒಬ್ಬ ಬರಹಗಾರ, ಹೋರಾಟಗಾರ, ಜನ್ಮಜಾತ ದೇಶಭಕ್ತ, ಮಹಾನ್ ಸಾಮಾಜಿಕ ಸುಧಾರಕ ಮತ್ತು ಅತ್ಯಂತ ಶ್ರೇಷ್ಠ ಲೇಖಕ ಮತ್ತು ಕವಿ ಆಗಿದ್ದರು. ಸಾವರ್ಕರ್ ಜಿ ಗದ್ಯ ಮತ್ತು ಕಾವ್ಯ ಎರಡರಲ್ಲೂ ಪ್ರವೀಣರಾಗಿದ್ದರು, ಅಂತಹ ಸಾಹಿತಿಗಳು ಸಿಗುವುದು ಬಹಳ ಅಪರೂಪ. ವೀರ್ ಸಾವರ್ಕರ್ ಜಿ ನಮ್ಮ ಭಾಷೆಗಳಿಗೆ ಕೊಡುಗೆ ನೀಡಿರುವ 600ಕ್ಕೂ ಹೆಚ್ಚು ಪದಗಳಿವೆ, ನಮ್ಮ ಶಬ್ದಕೋಶವನ್ನು ಉತ್ಕೃಷ್ಟಗೊಳಿಸಲು ಅವರು ಕೊಡುಗೆ ನೀಡಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು.
ವೀರ್ ಸಾವರ್ಕರ್ ಅವರ ಜೀವನವು ಹಿಂದುತ್ವದಲ್ಲಿ ಸದೃಢವಾದ ಭಕ್ತಿ ಹೊಂದಿತ್ತು, ಅದು ಆಧುನಿಕವಾಗಿದ್ದರೂ ಅದನ್ನು ಮುಂದುವರೆಸಿಕೊಂಡು ಹೋಗುವ ಸಂಪ್ರದಾಯಗಳನ್ನು ಎತ್ತಿಹಿಡಿಯಿತು. ಅಸ್ಪೃಶ್ಯತೆಯ ನಿರ್ಮೂಲನೆಗೆ ವೀರ್ ಸಾವರ್ಕರ್ ನೀಡಿದ ಕೊಡುಗೆಗಾಗಿ ಈ ದೇಶವು ಸಾವರ್ಕರ್ ಅವರನ್ನು ಎಂದಿಗೂ ಗೌರವಿಸಲಿಲ್ಲ. ಆ ಸಮಯದಲ್ಲಿ ಹಿಂದೂ ಸಮಾಜದಲ್ಲಿ ಪ್ರಚಲಿತದಲ್ಲಿದ್ದ ಎಲ್ಲಾ ಸಾಮಾಜಿಕ ಅನಿಷ್ಟಗಳ ವಿರುದ್ಧ ಸಾವರ್ಕರ್ ಹೋರಾಡಿದರು. ಸಮಾಜದ ವಿರೋಧ ಎದುರಿಸುತ್ತಿದ್ದರೂ ಸಹ ಮುಂದುವರಿಯುತ್ತಿದ್ದರು. ಇದೇ ಕಾರಣಕ್ಕಾಗಿ ವೀರ್ ಸಾವರ್ಕರ್ ಜೀವನ ತ್ಯಾಗ ಮಾಡಿದರು. ಎರಡು ಜೀವಮಾನಗಳು ಸೇರಿಕೊಂಡರೂ ಸಹ, ಮಾತೃಭೂಮಿ ವೈಭವೀಕರಿಸಲು ಸಾಹಿತ್ಯ ರಚಿಸಿದ ಸಾವರ್ಕರ್ ಅವರನ್ನು ಮೀರಿಸಲು ಯಾವುದೇ ದೊಡ್ಡ ದೇಶಭಕ್ತ ಹುಟ್ಟಿ ಬರಲು ಸಾಧ್ಯವಿಲ್ಲ ಎಂದು ಅಮಿತ್ ಶಾ ಹೇಳಿದರು.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇಂದು ನಡೆಸುತ್ತಿರುವ ಸಾಂಸ್ಕೃತಿಕ ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ವೀರ್ ಸಾವರ್ಕರ್ ಅಂದೇ ಸ್ಥಾಪಿಸಿದ್ದರು. ಭಾರತೀಯ ಉಪಖಂಡದ ಸಾಂಸ್ಕೃತಿಕ ಮೌಲ್ಯಗಳು, ಸಂಪ್ರದಾಯಗಳು ಮತ್ತು ಇತಿಹಾಸದಿಂದ ಉದ್ಭವಿಸುವ ಅಂತಹ ಸಾಮೂಹಿಕ ಗುರುತನ್ನು ಉತ್ತೇಜಿಸಲು ಅನೇಕ ಜನರು ಕೆಲಸ ಮಾಡಿದ್ದಾರೆ, ಅವರಲ್ಲಿ ವೀರ್ ಸಾವರ್ಕರ್ ಈ ಕಲ್ಪನೆಯ ಅತ್ಯಂತ ಶ್ರೇಷ್ಠ ಭಕ್ತರಾಗಿದ್ದರು. ಶಿಕ್ಷಣದ ಮೂಲಕ ನಮ್ಮ ದೇಶದ ಮೇಲೆ ಶಾಶ್ವತ ಗುಲಾಮಗಿರಿಯ ಹೊರೆ ಮತ್ತು ಮನಸ್ಥಿತಿಯನ್ನು ಹೇರಲು ಬ್ರಿಟಿಷರು ಯಾವಾಗಲೂ ಪ್ರಯತ್ನಿಸಿದ್ದರು, ಅದಕ್ಕಾಗಿಯೇ ಅವರು 1857ರ ಸ್ವಾತಂತ್ರ್ಯ ಸಂಗ್ರಾಮವನ್ನು "ದಂಗೆ" ಎಂದು ಕರೆದರು. 1857ರ ಸ್ವಾತಂತ್ರ್ಯ ಸಂಗ್ರಾಮವನ್ನು "ದಂಗೆ" ಎಂದು ಕರೆಯುವ ಬದಲು ಅದನ್ನು ಸ್ವಾತಂತ್ರ್ಯ ಸಂಗ್ರಾಮ ಎಂದು ಹೆಸರಿಸಿದ ಮತ್ತು ಆ ಮೂಲಕ ದೇಶದ ನಿಜವಾದ ಚೈತನ್ಯವನ್ನು ಮುನ್ನಡೆಸಿದ ಏಕೈಕ ವ್ಯಕ್ತಿ ವೀರ್ ಸಾವರ್ಕರ್ ಎಂದು ಅಮಿತ್ ಶಾ ಬಣ್ಣಿಸಿದರು.
ಇಂದು ನಾವು ಸ್ವತಂತ್ರರಾಗಿದ್ದೇವೆ ಮತ್ತು ದೀರ್ಘ ಪ್ರಯಾಣದ ನಂತರ ದೇಶವು ಈ ಹಂತವನ್ನು ತಲುಪಿದೆ. ಪ್ರಧಾನ ಮಂತ್ರಿ ಮೋದಿ ನೇತೃತ್ವದಲ್ಲಿ ಸರ್ಕಾರ ಕಳೆದ ಸುಮಾರು 12 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ದೇಶವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿದಾಗ, ಪ್ರಧಾನ ಮಂತ್ರಿ ಮೋದಿ ಅವರು 5 ಸಂಕಲ್ಪಗಳನ್ನು(ಪಂಚ ಪ್ರಾಣ) ನೀಡಿದರು, ಅವುಗಳಲ್ಲಿ ಒಂದು ದೇಶವು ಮುಂದುವರಿಯಲು ಗುಲಾಮಗಿರಿ ಅವಧಿಯ ಎಲ್ಲಾ ನೆನಪುಗಳನ್ನು ತೊಡೆದುಹಾಕುವುದಾಗಿದೆ. 2047 ಆಗಸ್ಟ್ 15ರ ವೇಳೆಗೆ, ನಾವೆಲ್ಲರೂ ಒಟ್ಟಾಗಿ ಎಲ್ಲಾ ಕ್ಷೇತ್ರಗಳಲ್ಲೂ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಶ್ರೇಷ್ಠ ಭಾರತ ನಿರ್ಮಿಸಬೇಕು, ಪ್ರಧಾನಿ ಮೋದಿ ಅವರ ಈ ಕರೆ ಇಂದು 140 ಕೋಟಿ ಜನರ ಸಂಕಲ್ಪವಾಗಿದೆ. 140 ಕೋಟಿ ಜನರು ಒಂದೇ ದಿಕ್ಕಿನಲ್ಲಿ ಮುನ್ನಡೆದಾಗ, ನಾವು 140 ಕೋಟಿ ಹೆಜ್ಜೆಗಳಿಂದ ಮುನ್ನಡೆಯುತ್ತೇವೆ. ಈ ಶಕ್ತಿಯೇ ಶ್ರೇಷ್ಠ ಭಾರತವನ್ನು ಸೃಷ್ಟಿಸುತ್ತದೆ, ಭಾರತವು ಸುರಕ್ಷಿತ, ಸಮೃದ್ಧ, ಸುಸಂಸ್ಕೃತ ಮತ್ತು ವಿದ್ಯಾವಂತವಾಗುತ್ತದೆ. "ವೀರ್" ಎಂಬ ಬಿರುದನ್ನು ವೀರ್ ಸಾವರ್ಕರ್ ಅವರಿಗೆ ಯಾವುದೇ ಸರ್ಕಾರ ನೀಡಿಲ್ಲ, ಬದಲಾಗಿ ದೇಶದ ಪ್ರತಿಯೊಬ್ಬ ನಾಗರಿಕರು ನೀಡಿದ್ದಾರೆ ಎಂದು ಅಮಿತ್ ಶಾ ತಿಳಿಸಿದರು.
*****
(रिलीज़ आईडी: 2203535)
आगंतुक पटल : 10