ಪ್ರಧಾನ ಮಂತ್ರಿಯವರ ಕಛೇರಿ
ಅಸೋಮ್ ದಿವಸ್ ಸಂದರ್ಭದಲ್ಲಿ ಅಸ್ಸಾಂ ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿ
प्रविष्टि तिथि:
02 DEC 2025 3:47PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಸ್ಸಾಂನ ಸಹೋದರಿಯರು ಮತ್ತು ಸಹೋದರರಿಗೆ ಅಸೋಮ್ ದಿವಸ್ ಸಂದರ್ಭದಲ್ಲಿ ಶುಭಾಶಯಗಳನ್ನು ಕೋರಿದ್ದಾರೆ. ಸ್ವರ್ಗದೇವ್ ಚಾವೊಲುಂಗ್ ಸುಕಾಫಾ ಅವರ ದೃಷ್ಟಿಕೋನವನ್ನು ಈಡೇರಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸಲು ಇಂದು ಒಂದು ಸಂದರ್ಭವಾಗಿದೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು. "ಕಳೆದ ಕೆಲವು ವರ್ಷಗಳಿಂದ, ಕೇಂದ್ರ ಮತ್ತು ಅಸ್ಸಾಂನ ಎನ್.ಡಿ.ಎ ಸರ್ಕಾರಗಳು ಅಸ್ಸಾಂನ ಪ್ರಗತಿಯನ್ನು ಹೆಚ್ಚಿಸಲು ದಣಿವರಿಯದೆ ಶ್ರಮಿಸುತ್ತಿವೆ. ಭೌತಿಕ ಮತ್ತು ಸಾಮಾಜಿಕ ಮೂಲಸೌಕರ್ಯಗಳನ್ನು ಹೆಚ್ಚಿಸುವಲ್ಲಿ ಗಮನಾರ್ಹ ದಾಪುಗಾಲು ಹಾಕಲಾಗಿದೆ. ತೈ-ಅಹೋಮ್ ಸಂಸ್ಕೃತಿ ಮತ್ತು ತೈ ಭಾಷೆಯನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದು ಅಸ್ಸಾಂನ ಯುವಕರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ", ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು.
ಪ್ರಧಾನಮಂತ್ರಿ ಅವರು ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ:
"ಅಸ್ಸಾಂನ ನನ್ನ ಸಹೋದರಿಯರು ಮತ್ತು ಸಹೋದರರಿಗೆ ಅಸೋಮ್ ದಿವಸ್ ನ ಶುಭಾಶಯಗಳು.
ಸ್ವರ್ಗದೇವ್ ಚಾವೊಲುಂಗ್ ಸುಕಾಫಾ ಅವರ ದೃಷ್ಟಿಯನ್ನು ಈಡೇರಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸಲು ಇಂದು ಒಂದು ಸಂದರ್ಭವಾಗಿದೆ. ಕಳೆದ ಕೆಲವು ವರ್ಷಗಳಿಂದ, ಕೇಂದ್ರ ಮತ್ತು ಅಸ್ಸಾಂನ ಎನ್ ಡಿಎ ಸರ್ಕಾರಗಳು ಅಸ್ಸಾಂನ ಪ್ರಗತಿಯನ್ನು ಹೆಚ್ಚಿಸಲು ದಣಿವರಿಯದೆ ಕೆಲಸ ಮಾಡುತ್ತಿವೆ. ಭೌತಿಕ ಮತ್ತು ಸಾಮಾಜಿಕ ಮೂಲಸೌಕರ್ಯಗಳನ್ನು ಹೆಚ್ಚಿಸುವಲ್ಲಿ ಗಮನಾರ್ಹ ದಾಪುಗಾಲು ಹಾಕಲಾಗಿದೆ.
ತೈ-ಅಹೋಮ್ ಸಂಸ್ಕೃತಿ ಮತ್ತು ತೈ ಭಾಷೆಯನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದು ಅಸ್ಸಾಂನ ಯುವಕರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ."
*****
(रिलीज़ आईडी: 2198054)
आगंतुक पटल : 4
इस विज्ञप्ति को इन भाषाओं में पढ़ें:
Tamil
,
English
,
Urdu
,
Marathi
,
हिन्दी
,
Bengali
,
Bengali-TR
,
Assamese
,
Manipuri
,
Punjabi
,
Gujarati
,
Odia
,
Telugu
,
Malayalam