ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗೀತಾ ಜಯಂತಿಯ ಪವಿತ್ರ ದಿನದಂದು ದೇಶವಾಸಿಗಳಿಗೆ ಶುಭ ಕೋರಿದ ಪ್ರಧಾನಮಂತ್ರಿ

प्रविष्टि तिथि: 01 DEC 2025 3:23PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಶ್ರೀಮದ್ ಭಗವದ್ಗೀತೆಗೆ ಸಂಬಂಧಿಸಿದ 'ಗೀತಾ ಜಯಂತಿ'ಯ ಪವಿತ್ರ ದಿನದಂದು ದೇಶಾದ್ಯಂತ ಎಲ್ಲಾ ಕುಟುಂಬಗಳ ಸದಸ್ಯರಿಗೆ ಶುಭಾಶಯ ಕೋರಿದ್ದಾರೆ. ಕರ್ತವ್ಯ ನಿರ್ವಹಣೆಯ ಕುರಿತು ಅಮೂಲ್ಯವಾದ ಸಂದೇಶಗಳಿಂದ ಕೂಡಿರುವ ಈ ದೈವಿಕ ಗ್ರಂಥವು ಭಾರತೀಯ ಕುಟುಂಬ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಜೀವನದಲ್ಲಿ ಅತ್ಯಂತ ವಿಶಿಷ್ಟ ಸ್ಥಾನವನ್ನು ಹೊಂದಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. “ಇದರ ದೈವಿಕ ಸಾರ ಪ್ರತಿ ಪೀಳಿಗೆಯನ್ನು ನಿಸ್ವಾರ್ಥ ಕ್ರಿಯೆಯ ಕಡೆಗೆ ಸ್ಫೂರ್ತಿ ನೀಡುತ್ತಲೇ ಇರುತ್ತವೆ’’  ಎಂದು ಶ್ರೀ ಮೋದಿ ಹೇಳಿದ್ದಾರೆ.

ಪ್ರಧಾನಮಂತ್ರಿ ತಮ್ಮ ಸಾಮಾಜಿಕ ಜಾಲತಾಣ ಪೋಸ್ಟ್ X ನಲ್ಲಿ ಹೀಗೆ ಹೇಳಿದ್ದಾರೆ.

“ಶ್ರೀಮದ್ ಭಗವದ್ಗೀತೆಯ ಪ್ರಕಟಣೆಗೆ ಸಂಬಂಧಿಸಿದ ಪವಿತ್ರ ದಿನವಾದ 'ಗೀತಾ ಜಯಂತಿ'ಯ ಶುಭ ಸಂದರ್ಭದಲ್ಲಿ ದೇಶಾದ್ಯಂತ ನನ್ನೆಲ್ಲಾ ಕುಟುಂಬದ ಸದಸ್ಯರಿಗೆ ಶುಭಾಶಯಗಳು. ಕರ್ತವ್ಯದ ಅಮೂಲ್ಯ ಸಂದೇಶಗಳಿಂದ ಕೂಡಿರುವ ಈ ದೈವಿಕ ಗ್ರಂಥವು ಭಾರತೀಯ ಕುಟುಂಬ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಜೀವನದಲ್ಲಿ ಬಹಳ ವಿಶೇಷ ಸ್ಥಾನವನ್ನು ಹೊಂದಿದೆ. ಅದರ ದೈವಿಕ ಸಾರ ಪ್ರತಿ ಪೀಳಿಗೆಯನ್ನು ನಿಸ್ವಾರ್ಥ ಕ್ರಿಯೆಗೆ ಪ್ರೇರೇಪಿಸುತ್ತಲೇ ಇರುತ್ತವೆ. ಜೈ ಶ್ರೀ ಕೃಷ್ಣ..!’’

 

*****


(रिलीज़ आईडी: 2197338) आगंतुक पटल : 6
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Bengali-TR , Assamese , Manipuri , Punjabi , Gujarati , Odia , Tamil , Telugu , Malayalam