ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕರ್ನಾಟಕದ ಉಡುಪಿಗೆ ಭೇಟಿ ನೀಡಿದ ಸಂದರ್ಭದ ಚಿತ್ರಗಳನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 28 NOV 2025 10:01PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕರ್ನಾಟಕದ ಉಡುಪಿಗೆ ಭೇಟಿ ಸಂದರ್ಭದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ ಅವರು, ವಿದ್ಯಾರ್ಥಿಗಳು, ಸನ್ಯಾಸಿಗಳು, ವಿದ್ವಾಂಸರು ಮತ್ತು ನಾಗರಿಕರು ಸೇರಿದಂತೆ ವಿವಿಧ ವಲಯಗಳ 100,000 ಜನರು ಒಟ್ಟಾಗಿ ಶ್ರೀಮದ್ ಭಗವದ್ ಗೀತೆ ಪಠಿಸಿದ “ಲಕ್ಷ ಕಂಠ ಗೀತಾ ಪಾರಾಯಣ” ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಪ್ರಧಾನಮಂತ್ರಿ ಶ್ರೀ ಕೃಷ್ಣ ಮಠದಲ್ಲಿ ಗರ್ಭಗುಡಿಯ ಮುಂಭಾಗದಲ್ಲಿರುವ ಸುವರ್ಣ ತೀರ್ಥ ಮಂಟಪವನ್ನು ಉದ್ಘಾಟಿಸಿದರು ಮತ್ತು ಪವಿತ್ರ ಕನಕನ ಕಿಂಡಿಗೆ ಕನಕ ಕವಚ (ಚಿನ್ನದ ಹೊದಿಕೆ) ಸಮರ್ಪಿಸಿದರು. ಈ ಕಿಂಡಿಯ ಮೂಲಕ ಭಗವಂತ ಕೃಷ್ಣನು ಸಂತ ಕನಕದಾಸರಿಗೆ ದಿವ್ಯ ದರ್ಶನ ನೀಡಿದ್ದ ಎಂಬ ನಂಬಿಕೆ ಇದೆ. ದರ್ಶನ. ವೇದಾಂತದ ದ್ವೈತ ಸಿದ್ಧಾಂತ ಪ್ರತಿಪಾದಕರಾದ ಶ್ರೀ ಮಧ್ವಾಚಾರ್ಯರು 800 ವರ್ಷಗಳ ಹಿಂದೆ ಉಡುಪಿಯ ಶ್ರೀಕೃಷ್ಣ ಮಠವನ್ನು ಸ್ಥಾಪಿಸಿದರು.

ಶ್ರೀ ಮೋದಿ ಅವರು ಎಕ್ಸ್ ನ ವಿವಿಧ ಪೋಸ್ಟ್ ಗಳಲ್ಲಿ ಹೀಗೆ ಹೇಳಿದ್ದಾರೆ:

"ಭಕ್ತಿ, ಕಲಿಕೆ ಮತ್ತು ಸಂಪ್ರದಾಯದ ತಾಣವಾದ ಉಡುಪಿಯಲ್ಲಿರುವುದು ಹರ್ಷದಾಯಕ. ಉಡುಪಿಯಲ್ಲಿ ನನಗೆ ದೊರೆತ ಸ್ವಾಗತ ಸದಾ ನೆನಪಿನಲ್ಲಿರಲಿದೆ. ಜನರಿಗೆ ನನ್ನ ಕೃತಜ್ಞತೆಗಳು."

 

“ಭಕ್ತಿ, ಕಲಿಕೆ ಮತ್ತು ಸಂಪ್ರದಾಯಕ್ಕೆ ಹೆಸರಾದ ಸ್ಥಳ ಉಡುಪಿಗೆ ಭೇಟಿ ನೀಡಿದ್ದು ಸಂತೋಷವಾಯಿತು. ಉಡುಪಿಯಲ್ಲಿ ನನಗೆ ದೊರೆತ ಸ್ವಾಗತ ಸದಾ ನೆನಪಿನಲ್ಲಿ ಉಳಿಯುತ್ತದೆ. ಜನತೆಗೆ ನನ್ನ ಕೃತಜ್ಞತೆಗಳು.”

 

"ಉಡುಪಿಯು ಧರ್ಮ, ಸಹಾನುಭೂತಿ ಮತ್ತು ಸಾಮಾಜಿಕ ಔನ್ನತ್ಯದಲ್ಲಿ ಆಳವಾಗಿ ಬೇರೂರಿರುವ ಸ್ಥಳವಾಗಿದೆ."

 

"ಬಡವರಿಗೆ ಸಹಾಯ ಮಾಡುವ ಮಾರ್ಗವನ್ನು ಭಗವಾನ್ ಶ್ರೀ ಕೃಷ್ಣ ನಮಗೆ ಬೋಧಿಸಿದ್ದು, ಆ ಮನೋಭಾವವೇ ಆಯುಷ್ಮಾನ್ ಭಾರತ್, ಪ್ರಧಾನಮಂತ್ರಿ ಆವಾಸ್ ಯೋಜನೆ ಮೊದಲಾದ ನಮ್ಮ ವಿವಿಧ ಉಪಕ್ರಮಗಳಿಗೆ ಸ್ಫೂರ್ತಿ ನೀಡಿದೆ."

 

"ನಮ್ಮ ವರ್ತಮಾನ ಮತ್ತು ಭವಿಷ್ಯದ ಒಳಿತಿಗಾಗಿ ಗೀತೆಯಿಂದ ಪ್ರೇರಿವಾದ ಈ ಒಂಭತ್ತು ಸಂಕಲ್ಪಗಳನ್ನು ತೆಗೆದುಕೊಳ್ಳುವಂತೆ ನಾನು ನಿಮ್ಮೆಲ್ಲರಲ್ಲೂ ವಿನಮ್ರ ಪೂರ್ವಕವಾಗಿ ಮನವಿ ಮಾಡುತ್ತೇನೆ..."

 

"ಲಕ್ಷ ಕಂಠಗೀತೆಯ ಭವ್ಯ ಮತ್ತು ದೈವಿಕ ಪಠಣವು ಎಲ್ಲರಲ್ಲೂ ಚೈತನ್ಯ ಮತ್ತು ಅಪಾರ ಭಕ್ತಿ ತುಂಬಿತು. ಈ ಬೃಹತ್ ಸಮಾವೇಶದಲ್ಲಿ ಏಕಕಂಠದಿಂದ ಗೀತೆಯ ಪಠಣಕ್ಕೆ ಸಾಕ್ಷಿಯಾದುದು ಮರೆಯಲಾಗದ ಕ್ಷಣವಾಗಿದೆ."

 

"ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದು ವಿಶೇಷವಾಗಿತ್ತು. ಗೀತಾ ಪಾರಾಯಣವು ಮರೆಯಲಾಗದ ಅನುಭೂತಿಯಾಗಿದೆ. ಸುವರ್ಣ ತೀರ್ಥ ಮಂಟಪ ಉದ್ಘಾಟಿಸಿ ಕನಕನ ಕಿಂಡಿಗೆ ಕನಕ ಕವಚ ಸಮರ್ಪಿಸಿದೆ. ಕನಕನ ಕಿಂಡಿಯ ಮೂಲಕ ಭಗವಾನ್ ಶ್ರೀಕೃಷ್ಣನಿಗೆ ಪ್ರಾರ್ಥನೆ ಸಲ್ಲಿಸಿದೆ. ಶ್ರೀ ಕನಕದಾಸರಿಗೆ ಗೌರವ ನಮನ ಸಲ್ಲಿಸಿ ಧನ್ಯನಾದೆ."

 

"ಉಡುಪಿಯ ಶ್ರೀ ಕೃಷ್ಣ ಮಠದ ಕೆಲವು ದೃಶ್ಯಗಳು ಇಲ್ಲಿವೆ."

 

“ಉಡುಪಿಯು ಧರ್ಮ, ಸಹಾನುಭೂತಿ ಮತ್ತು ಸಾಮಾಜಿಕ ಉನ್ನತಿಯಲ್ಲಿ ಆಳವಾಗಿ ಬೇರೂರಿರುವ ಸ್ಥಳ.”

 

 “ಗೀತೆಯಿಂದ ಪ್ರೇರಿತರಾಗಿ, ನಮ್ಮ ವರ್ತಮಾನ ಮತ್ತು ಭವಿಷ್ಯದ ಒಳಿತಿಗಾಗಿ ಈ ಒಂಭತ್ತು ಸಂಕಲ್ಪಗಳನ್ನು ಮಾಡುವಂತೆ ನಾನು ನಿಮ್ಮೆಲ್ಲರನ್ನು ವಿನಮ್ರವಾಗಿ ಕೋರುತ್ತೇನೆ…”

 

“ಭಗವಾನ್ ಶ್ರೀ ಕೃಷ್ಣ ಬಡವರಿಗೆ ಸಹಾಯ ಮಾಡುವ ಮಾರ್ಗವನ್ನು ನಮಗೆ ಕಲಿಸಿದ್ದಾರೆ. ಆ ಮನೋಭಾವವೇ ಆಯುಷ್ಮಾನ್ ಭಾರತ್, ಪ್ರಧಾನಮಂತ್ರಿ ಆವಾಸ್ ಯೋಜನೆ ಮತ್ತು ಇನ್ನೂ ನಮ್ಮ ಅನೇಕ ಉಪಕ್ರಮಗಳಿಗೆ ಸ್ಫೂರ್ತಿಯಾಗಿದೆ.”

 

“ಗೀತೆಯ ಭವ್ಯ ಮತ್ತು ದಿವ್ಯ ಲಕ್ಷ ಕಂಠ ಪಠಣವು ಎಲ್ಲರಲ್ಲೂ ಶಕ್ತಿ ಮತ್ತು ಆಳವಾದ ಭಕ್ತಿಯನ್ನು ತುಂಬಿತು. ಇಷ್ಟೊಂದು ದೊಡ್ಡ ಜನಸಮೂಹವು ಏಕಸ್ವರದಲ್ಲಿ ಗೀತಾ ಪಠಣ ಮಾಡುವುದನ್ನು ನೋಡುವುದು ಮರೆಯಲಾಗದ ಕ್ಷಣವಾಗಿತ್ತು.”

 

“ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಇಂದಿನ ಭೇಟಿ ಅತ್ಯಂತ ವಿಶೇಷವಾಗಿತ್ತು. ಗೀತಾ ಪಠಣವು ಅವಿಸ್ಮರಣೀಯ ಅನುಭವವಾಗಿತ್ತು. ಸುವರ್ಣ ತೀರ್ಥ ಮಂಟಪವನ್ನು ಉದ್ಘಾಟಿಸಿ, ಕನಕನ ಕಿಂಡಿಗೆ ಕನಕ ಕವಚವನ್ನು ಸಮರ್ಪಿಸಲಾಯಿತು. ಕನಕನ ಕಿಂಡಿಯಿಂದ ಶ್ರೀ ಕೃಷ್ಣ ಪರಮಾತ್ಮನಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಶ್ರೀ ಕನಕದಾಸರಿಗೆ ನಮನ ಸಲ್ಲಿಸುವುದು ಕೂಡ ಒಂದು ಗೌರವವಾಗಿತ್ತು.”

 

“ಉಡುಪಿಯ ಶ್ರೀ ಕೃಷ್ಣ ಮಠದ ಕೆಲವು ನೋಟಗಳು ಇಲ್ಲಿವೆ.”

 

****


(ಪ್ರಕಟಣೆ ಐ.ಡಿ.: 2196335) ವಿಸಿಟರ್ ಕೌಂಟರ್ : 56