ಐ.ಎಫ್.ಎಫ್.ಐ 2025ರಲ್ಲಿ, ತ್ರಿಬೇಣಿ ರೈ ಅವರ ಶೇಪ್ ಆಫ್ ಮೊಮೊಸ್ ಸಿಕ್ಕಿಂ ಜನರ ದೈನಂದಿನ ಜೀವನವನ್ನು ಪ್ರಮುಖವಾಗಿ ತೋರಿಸುತ್ತದೆ
ಸಿಕ್ಕಿಂ ಚಲನಚಿತ್ರ ನಿರ್ಮಾಪಕಿ ತ್ರಿಬೇಣಿ ರೈ ತಮ್ಮ ತವರು ರಾಜ್ಯದಲ್ಲಿ 'ನವೋದಯ ಚಲನಚಿತ್ರೋದ್ಯಮ'ದ ಸವಾಲುಗಳನ್ನು ಉಲ್ಲೇಖಿಸುತ್ತಾರೆ
#ಐ.ಎಫ್.ಎಫ್.ಐವುಡ್, 28 ನವೆಂಬರ್ 2025
ಸಿಕ್ಕಿಂ ರಾಜ್ಯದ ಚಲನಚಿತ್ರ ನಿರ್ಮಾಪಕಿ ತ್ರಿಬೇಣಿ ರೈ ಅವರ ಸ್ಮರಣಶೀಲ ಚೊಚ್ಚಲ ಚಲನಚಿತ್ರವಾದ ಶೇಪ್ ಆಫ್ ಮೊಮೊಸ್ ಅನ್ನು ನವೆಂಬರ್ 27, 2025ರ ಗುರುವಾರ 56ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ ) ದಲ್ಲಿ ಭಾರತೀಯ ಪನೋರಮಾ ವಿಭಾಗದ ಅಡಿಯಲ್ಲಿ ಪ್ರದರ್ಶಿಸಲಾಯಿತು. ಪ್ರದರ್ಶನ ಮುಗಿದ ನಂತರ, ನಿರ್ದೇಶಕಿ ತ್ರಿಬೇಣಿ ರೈ, ನಿರ್ಮಾಪಕ ಮತ್ತು ಸಹ-ಲೇಖಕ ಕಿಸ್ಲೇ ಮತ್ತು ಪ್ರಮುಖ ನಟ ಗೌಮಯ ಗುರುಂಗ್ ಅವರು ಐ.ಎಫ್.ಎಫ್.ಐ ಮೈದಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಕೋಲ್ಕತ್ತಾದ ಸತ್ಯಜಿತ್ ರೇ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ (ಎಸ್.ಆರ್.ಎಫ್.ಟಿ.ಐ) ಹಳೆಯ ವಿದ್ಯಾರ್ಥಿನಿಯಾದ ತ್ರಿಬೇಣಿ ರೈ ಅವರು ಪೂರ್ವ ಹಿಮಾಲಯದ ಸಾಂಸ್ಕೃತಿಕ ಮತ್ತು ಭೌಗೋಳಿಕ ಸ್ಥಳಗಳಲ್ಲಿನ ಮಹಿಳೆಯರ ಅನುಭವಗಳ ಸೂಕ್ಷ್ಮ ಅನ್ವೇಷಣೆಗೆ ಹೆಸರುವಾಸಿಯಾಗಿದ್ದಾರೆ. ಸಿಕ್ಕಿಂನ ಸಾಂಸ್ಕೃತಿಕ ನೆಲದಲ್ಲಿ ಬೇರೂರಿರುವ ಕಥೆಯನ್ನು ಹೊಂದಿರುವ ಅವರ ಚೊಚ್ಚಲ ಚಿತ್ರ 'ಶೇಪ್ ಆಫ್ ಮೊಮೊಸ್', ಈ ವಿಷಯಾಧಾರಿತ ಪ್ರಯಾಣವನ್ನು ಮುಂದುವರಿಸುತ್ತದೆ.
ತಮ್ಮ ಚೊಚ್ಚಲ ಚಿತ್ರದ ನಿರ್ಮಾಣದ ಬಗ್ಗೆ ಮಾತನಾಡುತ್ತಾ, ತ್ರಿಬೇಣಿ ಈ ಪ್ರಕ್ರಿಯೆಯನ್ನು ಸವಾಲಿನ ಮತ್ತು ಹೆಚ್ಚು ಪ್ರತಿಫಲದಾಯಕವಾಗಿತ್ತು ಎಂದು ಬಣ್ಣಿಸಿದರು. ಸಿಕ್ಕಿಂ ಚಲನಚಿತ್ರೋದ್ಯಮ ಇನ್ನೂ ಶೈಶವಾವಸ್ಥೆಯಲ್ಲಿದ್ದರೂ ಇಲ್ಲಿ ಚಲನಚಿತ್ರ ನಿರ್ಮಾಣವು ಮೂಲಸೌಕರ್ಯ ಮಿತಿಗಳೊಂದಿಗೆ ಬರುತ್ತದೆ . ವೃತ್ತಿಪರ ಕ್ಯಾಮೆರಾ ವ್ಯವಸ್ಥೆಗಳನ್ನು ಸಹ ಕೋಲ್ಕತ್ತಾ, ಕಠ್ಮಂಡು ಅಥವಾ ಗುವಾಹಟಿಯಂತಹ ನಗರಗಳಿಂದ ಪಡೆಯಬೇಕಾಗುತ್ತದೆ. ಈ ಅಡೆತಡೆಗಳ ಹೊರತಾಗಿಯೂ, ಶೇಪ್ ಆಫ್ ಮೊಮೊಸ್ ಈಗಾಗಲೇ ಬುಸಾನ್ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಉತ್ಸವಗಳಿಗೆ ಸಾಗಿ ಬಂದಿದೆ, ಈ ಅನುಭವವನ್ನು ಅವರು "ತೃಪ್ತಿದಾಯಕ " ಎಂದು ಬಣ್ಣಿಸಿದ್ದಾರೆ.
ಮದುವೆಗಳಿಂದ ಹಿಡಿದು ಅಂತ್ಯಕ್ರಿಯೆಗಳವರೆಗೆ ಎಲ್ಲಾ ಸಂದರ್ಭಗಳಲ್ಲಿ ಹಂಚಿಕೊಳ್ಳಲಾದ ಆಹಾರವಾಗಿರುವ ಸಿಕ್ಕಿಂನ ಮೊಮೊಗಳು ಸಾಂಸ್ಕೃತಿಕವಾಗಿ ಎಲ್ಲೆಡೆ ಇರುವುದರಿಂದ ಚಿತ್ರದ ಶೀರ್ಷಿಕೆ ಸೆಳೆಯುತ್ತದೆ ಎಂದು ತ್ರಿಬೇಣಿ ರೈ ತಿಳಿಸಿದರು. "ಇದು ನಾನು ಬಂದ ಜನರ ದೈನಂದಿನ ಜೀವನ ಮತ್ತು ಭಾವನೆಗಳನ್ನು ಪ್ರತಿನಿಧಿಸುತ್ತದೆ" ಎಂದು ಅವರು ಹೇಳಿದರು.
ಸ್ವತಂತ್ರ ಧ್ವನಿಗಳು, ಹಂಚಿಕೊಂಡ ದೃಷ್ಟಿ
ನಿರ್ಮಾಪಕ ಮತ್ತು ಸಹ-ಲೇಖಕ ಕಿಸ್ಲೇ, ಚಲನಚಿತ್ರ ಶಾಲೆಯ ಪದವೀಧರರು, ಚಿತ್ರದ ಬಗ್ಗೆ ತ್ರಿಬೇಣಿಯವರ ಮೊದಲ ಕರಡಿನಲ್ಲಿಯೇ ಹುದುಗಿರುವ ದೃಢೀಕರಣವನ್ನು ಶ್ಲಾಘಿಸಿದರು, ಇದು ಅವರ ವೈಯಕ್ತಿಕ ಅನುಭವಗಳನ್ನು ಆಧರಿಸಿದೆ. ಸಿಕ್ಕಿಂನಂತಹ ಪ್ರದೇಶಗಳ ಚಲನಚಿತ್ರಗಳು ಮುಖ್ಯವಾಹಿನಿಯ ಭಾರತೀಯ ಸಿನಿಮಾಗಳಲ್ಲಿ ಕಡಿಮೆ ಪ್ರಾತಿನಿಧ್ಯವನ್ನು ಹೊಂದಿವೆ ಅಥವಾ ಕಿರಿದಾದ ಸ್ಟೀರಿಯೊಟೈಪ್ಗಳ ಮೂಲಕ ಪ್ರಸ್ತುತಪ ಡಿಸಲ್ಪಡುತ್ತವೆ ಎಂದು ಅವರು ತಿಳಿಸಿದರು. "ಇಂತಹ ಕತೆಗಳು ಬೆಳಕಿಗೆ ಬರಬೇಕು" ಎಂದು ಅವರು ಹೇಳಿದರು, ಐ.ಎಫ್.ಎಫ್.ಐನಲ್ಲಿ ಅವರ ಚಿತ್ರದ ಆಯ್ಕೆಯು "ಬಹಳ ತೃಪ್ತಿದಾಯಕ" ಎಂದು ಭಾವಿಸುತ್ತೇವೆ, ಇದು ಚಲನಚಿತ್ರ ನಿರ್ಮಾಣದ ವಿದ್ಯಾರ್ಥಿ ದಿನಗಳಿಂದಲೂ ಪೋಷಿಸಿಕೊಂಡ ಕನಸಾಗಿತ್ತು ಎಂದರು.
ನೇಪಾಳಿ ಭಾಷೆಯ ಸಿನಿಮಾದಲ್ಲಿ ಮಹಿಳಾ ದೃಷ್ಟಿಕೋನ
ನಾಯಕಿ ಗೌಮಯ ಗುರುಂಗ್ ಅವರು ಮಹಿಳಾ ದೃಷ್ಟಿಕೋನದಿಂದ ಹೇಳಲಾದ ಚಿತ್ರದ ಭಾಗವಾಗಿರುವುದಕ್ಕೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರು. ಇದು ಅವರ ಐದು ವರ್ಷಗಳ ಅನುಭವದ ಹೊರತಾಗಿಯೂ ನೇಪಾಳಿ ಚಲನಚಿತ್ರೋದ್ಯಮದಲ್ಲಿ ಅಪರೂಪವೆಂದು ಅವರು ಹೇಳಿದರು. ಮುಖ್ಯ ಪಾತ್ರದ ಆಂತರಿಕ ಪ್ರಪಂಚವನ್ನು ಚಿತ್ರಿಸುವಲ್ಲಿ ವ್ಯಕ್ತಿನಿಷ್ಠ ಮತ್ತು ವಸ್ತುನಿಷ್ಠ ವಿಧಾನಗಳ ಮಿಶ್ರಣವನ್ನು ಅವರು ಶ್ಲಾಘಿಸಿದರು.
ವಿತರಣಾ ಸವಾಲುಗಳು ಮತ್ತು ಸಮುದಾಯ ನಿರ್ಮಾಣ
ಈ ಪ್ರದೇಶದಿಂದ ಸ್ವತಂತ್ರ ಚಲನಚಿತ್ರಗಳನ್ನು ವಿತರಿಸುವ ಮತ್ತು ಮಾರಾಟ ಮಾಡುವ ಸವಾಲುಗಳನ್ನು ತಂಡವು ತಿಳಿಸಿತು. ನೇಪಾಳಿ ಮಾತನಾಡುವ ಪ್ರೇಕ್ಷಕರು ಪ್ರಬಲವಾಗಿರುವ ಸಿಕ್ಕಿಂ, ಉತ್ತರ ಬಂಗಾಳ, ಮೇಘಾಲಯ, ಅಸ್ಸಾಂನ ಮತ್ತು ಡೆಹ್ರಾಡೂನ್ ಪ್ರದೇಶಗಳಲ್ಲಿ ಶೇಪ್ ಆಫ್ ಮೊಮೊಸ್ ಬಿಡುಗಡೆಯಾಗಲಿದೆ. ಹೆಚ್ಚುವರಿಯಾಗಿ, ಈ ಚಿತ್ರವು ಇಟಲಿಯಲ್ಲಿಯೂ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ ಎಂದು ತ್ರಿಬೇಣಿ ತಿಳಿಸಿದರು.
ವಿತರಣೆ ಮತ್ತು ಪ್ರಚಾರದಲ್ಲಿನ ಅಡೆತಡೆಗಳನ್ನು ನಿವಾರಿಸಲು ಸಿಕ್ಕಿಂನಲ್ಲಿ ಸಮಾನ ಮನಸ್ಕ ಸ್ವತಂತ್ರ ಚಲನಚಿತ್ರ ನಿರ್ಮಾಪಕರ ಬೆಂಬಲ ಜಾಲದ ಅಗತ್ಯವನ್ನು ಅವರು ತಿಳಿಸಿದರು.
ಸಿಕ್ಕಿಂನ ಉದಯೋನ್ಮುಖ ಚಲನಚಿತ್ರ ಸಂಸ್ಕೃತಿಗೆ ಒಂದು ಮೈಲಿಗಲ್ಲು
ಸಿಕ್ಕಿಂನ ಮೊದಲ ಮಹಿಳಾ ಚಲನಚಿತ್ರ ನಿರ್ಮಾಪಕಿ ಎಂದು ಗುರುತಿಸಿಕೊಳ್ಳುವ ತ್ರಿಬೇಣಿ ರೈ, ರಾಜ್ಯದಲ್ಲಿ ಚಲನಚಿತ್ರ ಸಂಸ್ಕೃತಿಯ ನಿಧಾನಗತಿಯ ಹೊರಹೊಮ್ಮುವಿಕೆಯ ಬಗ್ಗೆ ತಿಳಿಸಿದರು. ಸೀಮಿತ ಪ್ರವೇಶ, ಸಂಪನ್ಮೂಲಗಳು ಮತ್ತು ಮೂಲಸೌಕರ್ಯದೊಂದಿಗೆ, ಚಲನಚಿತ್ರ ನಿರ್ಮಾಣವು ಸವಾಲಿನ ಅನ್ವೇಷಣೆಯಾಗಿ ಉಳಿದಿದೆ. ಆದರೂ, ಯುವ ಸಿಕ್ಕಿಂ ಚಲನಚಿತ್ರ ವಿದ್ಯಾರ್ಥಿಗಳಲ್ಲಿ ಬೆಳೆಯುತ್ತಿರುವ ಉತ್ಸಾಹವನ್ನು ಅವರು ಗಮನಿಸುತ್ತಾರೆ, ಅವರಲ್ಲಿ ಹಲವರು ಶೇಪ್ ಆಫ್ ಮೊಮೊಸ್ನಲ್ಲಿ ದೈನಂದಿನ ಜೀವನದ ಚಿತ್ರಣದೊಂದಿಗೆ ಗುರುತಿಸಿಕೊಂಡಿದ್ದಾರೆ.
ಮುಖ್ಯವಾಹಿನಿಯ ಹಿಂದಿ ಸಿನೆಮಾದಲ್ಲಿ ಮತ್ತು ಕೆಲವು ವೆಬ್ ಸರಣಿಗಳಲ್ಲಿಯೂ ಸಹ, ಈಶಾನ್ಯವನ್ನು ಹೆಚ್ಚಾಗಿ ವಿಲಕ್ಷಣಗೊಳಿಸಲಾಗುತ್ತದೆ ಅಥವಾ ಮಾದಕವಸ್ತು ಸಂಬಂಧಿತ ನಿರೂಪಣೆಗಳ ದೃಷ್ಟಿಯ ಮೂಲಕ ಚಿತ್ರಿಸಲಾಗುತ್ತದೆ ಎಂದು ತ್ರಿಬೇಣಿ ರೈ ಹೇಳಿದರು, "ಸಿಕ್ಕಿಂನ ದೈನಂದಿನ ಜನರು ಪ್ರಮುಖವಾಗಿರುವ ಕಥೆಯನ್ನು ನಾನು ಹೇಳಲು ಬಯಸಿದ್ದೆ - ಅಲ್ಲಿ ನಾವು ನಮ್ಮದೇ ಆದ ಕಥೆಗಳ ನಾಯಕರು."

ಪೂರ್ಣ ಪತ್ರಿಕಾಗೋಷ್ಠಿಯನ್ನು ವೀಕ್ಷಿಸಿ:
ಐ.ಎಫ್.ಎಫ್.ಐ ಬಗ್ಗೆ
1952ರಲ್ಲಿ ಪ್ರಾರಂಭವಾದ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ) ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಆಚರಣೆಯಾಗಿ ಬೆಳೆದು ನಿಂತಿದೆ. ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್.ಎಫ್.ಡಿ.ಸಿ), ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಭಾರತ ಸರ್ಕಾರ ಮತ್ತು ಗೋವಾ ರಾಜ್ಯ ಸರ್ಕಾರ, ಗೋವಾ ಮನರಂಜನಾ ಸೊಸೈಟಿ (ಇ.ಎಸ್.ಜಿ) ಜಂಟಿಯಾಗಿ ಆಯೋಜಿಸಿರುವ ಈ ಉತ್ಸವವು ಜಾಗತಿಕ ಸಿನಿಮೀಯ ಶಕ್ತಿ ಕೇಂದ್ರವಾಗಿ ಬೆಳೆದಿದೆ - ಅಲ್ಲಿ ಪುನಃಸ್ಥಾಪಿಸಲಾದ ಕ್ಲಾಸಿಕ್ ಗಳ ಜೊತೆಗೆ ದಿಟ್ಟ ಪ್ರಯೋಗಗಳ ಚಿತ್ರಗಳು ಮತ್ತು ಅನುಭವಿ ದಂತಕಥೆಗಳು ನಿರ್ಭೀತ ಮೊದಲ ಬಾರಿಗೆ ಬರುವವರೊಂದಿಗೆ ಸ್ಥಳವನ್ನು ಹಂಚಿಕೊಳ್ಳುತ್ತಾರೆ. ಐಎಫ್ಎಫ್ ಐ ಅನ್ನು ನಿಜವಾಗಿಯೂ ಪ್ರಜ್ವಲಿಸುವಂತೆ ಮಾಡುವುದು ಅದರ ವಿದ್ವತ್ ಮಿಶ್ರಣ - ಅಂತಾರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್ ಕ್ಲಾಸ್ಗಳು, ಗೌರವಗಳು ಮತ್ತು ಹೆಚ್ಚಿನ ಚೈತನ್ಯದ ವೇವ್ಸ್ ಫಿಲ್ಮ್ ಬಜಾರ್, ಅಲ್ಲಿ ಕಲ್ಪನೆಗಳು, ಒಪ್ಪಂದಗಳು ಮತ್ತು ಸಹಯೋಗಗಳು ನಡೆಯುತ್ತವೆ. ನವೆಂಬರ್ 20 ರಿಂದ 28 ರವರೆಗೆ ಗೋವಾದ ಬೆರಗುಗೊಳಿಸುವ ಕರಾವಳಿ ಹಿನ್ನೆಲೆಯಲ್ಲಿ ಪ್ರದರ್ಶಿಸಲಾದ 56ನೇ ಆವೃತ್ತಿಯು ಭಾಷೆಗಳು, ಪ್ರಕಾರಗಳು, ನಾವೀನ್ಯತೆಗಳು ಮತ್ತು ಧ್ವನಿಗಳ ಅದ್ಭುತ ವರ್ಣಪಟಲದ ಭರವಸೆ ನೀಡುತ್ತದೆ - ಇದು ವಿಶ್ವ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ತಲ್ಲೀನಗೊಳಿಸುವ ಆಚರಣೆಯಾಗಿದೆ.
ಹೆಚ್ಚಿನ ಮಾಹಿತಿಗಾಗಿ, ಇಲ್ಲಿ ಕ್ಲಿಕ್ ಮಾಡಿ:
ಐ.ಎಫ್.ಎಫ್.ಐ ಜಾಲತಾಣ: https://www.iffigoa.org/
ಪಿಐಬಿ ನ ಐ.ಎಫ್.ಎಫ್.ಐ ಮೈಕ್ರೋಸೈಟ್: https://www.pib.gov.in/iffi/56/
PIB IFFIWood ಪ್ರಸಾರ ಚಾನೆಲ್:
https://whatsapp.com/channel/0029VaEiBaML2AU6gnzWOm3F
ಎಕ್ಸ್ ಪೋಸ್ಟ್ ಕೊಂಡಿ: https://x.com/PIB_Panaji/status/1991438887512850647?s=20
ಹ್ಯಾಂಡಲ್ ಗಳು: @IFFIGoa, @PIB_India, @PIB_Panaji
****
रिलीज़ आईडी:
2196046
| Visitor Counter:
6