56ನೇ ಐ ಎಫ್ ಎಫ್ ಐ ನ ಕೊನೆಯ ಫೈರ್‌ಸೈಡ್ ಚಾಟ್ ಅನ್ನು ಭಾರಿ ಕುತೂಹಲದೊಂದಿಗೆ ಆರಂಭಿಸಿದ ಅಮಿರ್ ಖಾನ್
ಹಾಸ್ಯ, ವಾವ್ ಉದ್ಗಾರದೊಂದಿಗೆ ಐ ಎಫ್ ಎಫ್ ಐ 2025ರ ಅಂತಿಮ ಸಂಜೆಯನ್ನು ಪರಿಪೂರ್ಣವಾಗಿ ಕಟ್ಟಿಕೊಟ್ಟ ಮಿಸ್ಟರ್ ಫರ್ ಫೆಕ್ಷನಿಸ್ಟ್
“ನನ್ನ ಪ್ರೇಕ್ಷಕರನ್ನು ಮತ್ತು ನನ್ನನ್ನು ಅಚ್ಚರಿಗೊಳಿಸಲು ನಾನು ಇಷ್ಟಪಡುತ್ತೇನೆ”: ಅಮೀರ್ ಖಾನ್
ನಾನು ಸಂಪೂರ್ಣ ಚಲನಚಿತ್ರ ವ್ಯಕ್ತಿತ್ವ, ಕಾರ್ಯಕರ್ತನಲ್ಲ; ನನ್ನ ಪ್ರೇಕ್ಷಕರನ್ನು ರಂಜಿಸುವುದು ನನ್ನ ಮುಖ್ಯ ಉದ್ದೇಶ”: ಅಮೀರ್
“ನಾನು ಪ್ರಜ್ಞಾಪೂರ್ವಕವಾಗಿ ನಿರ್ದೇಶನ ತೆಗೆದುಕೊಳ್ಳಲು ನಿರ್ಧರಿಸಿದ ದಿನ, ನಾನು ಬಹುಶಃ ನಟನೆಯನ್ನು ನಿಲ್ಲಿಸುತ್ತೇನೆ”
56ನೇ ಆವೃತ್ತಿಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐ ಎಫ್ ಎಫ್ ಐ) ಕೊನೆಯ ಫೈರ್‌ಸೈಡ್ ಚಾಟ್ "ಸಾಮಾಜಿಕ ಪರಿವರ್ತನೆ ಮತ್ತು ಒಳಗೊಳ್ಳುವಿಕೆಯ ನಿರೂಪಣಾ ವಾಸ್ತುಶಿಲ್ಪಿ" ಎಂಬ ಶೀರ್ಷಿಕೆಯೊಂದಿಗೆ ನಡೆದ ಸಂವಾದಕ್ಕೆ ಖ್ಯಾತ ನಟ ಮತ್ತು ಚಲನಚಿತ್ರ ನಿರ್ಮಾಪಕ ಆಮಿರ್ ಖಾನ್ ಕಲಾ ಅಕಾಡೆಮಿಗೆ ಆಗಮಿಸಿದಾಗ ಸಂಭಾಗಣ ಸಂಪೂರ್ಣವಾಗಿ ತುಂಬಿತ್ತು ಮತ್ತು ಚಪ್ಪಾಳೆ ಮುಗಿಲುಮುಟ್ಟಿತ್ತು.

ಸಂವಾದ ಗೋಷ್ಠಿಯನ್ನು ನಿರ್ವಹಣೆಯನ್ನು ಖ್ಯಾತ ಚಲನಚಿತ್ರ ವಿಮರ್ಶಕ ಬಾರಧ್ವಜ್ ರಂಗನ್, ದಂತಕಥೆಯ ನಟ ಧರ್ಮೇಂದ್ರ ಅವರಿಗೆ ಗೌರವ ಸಲ್ಲಿಸುತ್ತಾ ಗೋಷ್ಠಿಯನ್ನು ಆರಂಭಿಸಿದರು. ಆಮಿರ್ ಹೀಗೆ ಹೇಳಿದರು, "ನಾನು ಧರಂಜಿ ಅವರನ್ನು ನೋಡುತ್ತಾ ಬೆಳೆದೆ. ಭಾರತೀಯ ಚಿತ್ರರಂಗದ ಹೀ-ಮ್ಯಾನ್ ಎಂದು ಪ್ರಶಂಸಿಸಲ್ಪಟ್ಟಿದ್ದರೂ ಅವರು ಪ್ರಣಯ, ಹಾಸ್ಯ ಮತ್ತು ನಾಟಕ ಸೇರಿದಂತೆ ಎಲ್ಲಾ ಪ್ರಕಾರಗಳಲ್ಲಿಯೂ ಸಮಾನ ನಟಿಸುವ ಅದ್ಭುತ ನಟರಾಗಿದ್ದರು;. ಅವರು ಸೌಮ್ಯ ದೈತ್ಯ ಮತ್ತು ಅತ್ಯುತ್ತಮ ನಟ. ಭಾಷೆಯ ಮೇಲಿನ ಅವರ ಪಾಂಡಿತ್ಯ, ಸಹಜ ಘನತೆ ಮತ್ತು ಕಲಾವಿದನಾಗಿ ಅಸಾಧಾರಣ ವ್ಯಾಪ್ತಿ ಅವರನ್ನು ಸ್ವತಃ ಒಂದು ಸಂಸ್ಥೆಯನ್ನಾಗಿ ಮಾಡಿತು. ಅವರ ನಿಧನವು ವೈಯಕ್ತಿಕವಾಗಿ ಆಳವಾದ ಮತ್ತು ಕಲಾತ್ಮಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ." ಎಂದರು.

ತದನಂತರ ಕ್ರಮೇಣ 'ಆಮಿರ್ ಖಾನ್ ಶೋ' ಮುಂದಿನ ಒಂದೂವರೆ ಗಂಟೆಗಳ ಕಾಲ ತೆರೆದುಕೊಳ್ಳುತ್ತಾ ಹೋಯಿತು; ಅವರ ಜೀವನಪರ್ಯಂತ ಕಥೆಗಳ ಮೇಲಿನ ಪ್ರೀತಿಯಲ್ಲಿ ಅವರ ಪ್ರಯಾಣವು ಹೇಗೆ ಬೇರೂರಿದೆ ಎಂಬುದರ ಚಿತ್ರಣದೊಂದಿಗೆ ಆರಂಭವಾಯಿತು. ಬಾಲ್ಯದಿಂದಲೂ, ಅವರ ಅಜ್ಜಿ ಹೇಳಿದ ಕಥೆಗಳು ಮತ್ತು ರೇಡಿಯೊದಲ್ಲಿ ಹವಾ ಮಹಲ್‌ನ ಮಾಂತ್ರಿಕತೆಯಿಂದ ಅವರು ಆಕರ್ಷಿತರಾದರು ಎಂದು ಅವರು ಒಪ್ಪಿಕೊಂಡರು - ಅವರ ಸೃಜನಶೀಲ ಪ್ರವೃತ್ತಿಯನ್ನು ರೂಪಿಸಿದ ರಚನೆಯ ಕ್ಷಣಗಳು. "ನಾನು ಸದಾ ಕಥೆಗಳತ್ತ ಆಕರ್ಷಿತನಾಗಿದ್ದೇನೆ. ಅವು ನನ್ನ ಬಾಲ್ಯದ ದೊಡ್ಡ ಭಾಗವಾಗಿದ್ದವು, ಮತ್ತು ಆ ಆಕರ್ಷಣೆಯು ನಾನು ನಟನಾಗಿ ಮಾಡಿದ ಪ್ರತಿಯೊಂದು ಆಯ್ಕೆಗೆ ಮಾರ್ಗದರ್ಶನ ನೀಡಿದೆ" ಎಂದು ಅವರು ನೆನಪಿಸಿಕೊಂಡರು.
ಪರಿಪೂರ್ಣತೆಯ ವ್ಯಕ್ತಿ ತನ್ನ ವಿಶಿಷ್ಟ ಶೈಲಿಯಲ್ಲಿ ಸಿನಿಮಾದ ಬಗೆಗಿನ ತನ್ನ ವಿಧಾನವು ಎಂದಿಗೂ ಲೆಕ್ಕಾಚಾರದಿಂದ ಕೂಡಿಲ್ಲ ಎಂಬುದನ್ನು ವಿವರಿಸಿದರು; ಅದು ಸದಾ ಸಹಜ ಪ್ರವೃತ್ತಿಯಿಂದ ಕೂಡಿದೆ: "ನಾನು ನನ್ನನ್ನು ಪುನರಾವರ್ತಿಸಲು ಸಾಧ್ಯವಿಲ್ಲ. ನಾನು ಒಂದು ನಿರ್ದಿಷ್ಟ ರೀತಿಯ ಚಲನಚಿತ್ರವನ್ನು ಮಾಡಿದ ನಂತರ, ನಾನು ಮುಂದುವರಿಯಲು ಬಯಸುತ್ತೇನೆ. ತಾಜಾ, ವಿಶಿಷ್ಟ ಮತ್ತು ಸೃಜನಾತ್ಮಕವಾಗಿ ರೋಮಾಂಚನಕಾರಿ ಎಂದು ಭಾವಿಸುವ ಕಥೆಗಳನ್ನು ನಾನು ಹುಡುಕುತ್ತೇನೆ’’ ಎಂದರು.
ಸಿನೆಮಾದ ಬಗೆಗಿನ ತಮ್ಮ ಸಹಜ ಪ್ರವೃತ್ತಿಯ ವಿಧಾನದ ಬಗ್ಗೆ ಅವರು ಸ್ವಲ್ಪ ಹೆಚ್ಚು ಬೆಳಕು ಚೆಲ್ಲಿದರು. ಉದ್ಯಮದಲ್ಲಿ ಅನೇಕರು ಸಾಹಸ, ಹಾಸ್ಯ ಅಥವಾ ಬಾಕ್ಸ್ ಆಫೀಸ್‌ನಲ್ಲಿ ಪ್ರದರ್ಶನ ನೀಡುವ ಯಾವುದಾದರೂ ಒಂದರ ನಡುವಿನ ಪ್ರವೃತ್ತಿಯನ್ನು ಊಹಿಸಲು ಪ್ರಯತ್ನಿಸುತ್ತಿದ್ದರೂ, ತಾವು ಮಾತ್ರ ಎಂದಿಗೂ ಆ ರೀತಿಯಲ್ಲಿ ಕೆಲಸ ಮಾಡಿಲ್ಲ ಎಂದು ಅವರು ಪುನರುಚ್ಚರಿಸಿದರು. "ನಾನು ಕಥೆಯ ಮೇಲಿನ ನನ್ನ ಭಾವನಾತ್ಮಕ ಉತ್ಸಾಹವನ್ನು ಆಧರಿಸಿ ಚಲನಚಿತ್ರಗಳನ್ನು ಆಯ್ಕೆ ಮಾಡುತ್ತೇನೆ, ಅದು ಸಂಪೂರ್ಣವಾಗಿ ರೂಢಿಗೆ ವಿರುದ್ಧವಾಗಿದ್ದರೂ ಸಹ," ಅವರು ಹೇಳಿದರು. "ನನ್ನ ಹೆಚ್ಚಿನ ನಿರ್ಧಾರಗಳು ಉದ್ಯಮದ ಮಾನದಂಡಗಳ ಪ್ರಕಾರ ಅಪ್ರಾಯೋಗಿಕವಾಗಿವೆ. ನಾವು ಲಗಾನ್ ಮಾಡಿದಾಗ, ಜಾವೇದ್ ಸಾಬ್ ಕೂಡ ನಮಗೆ ಹಾಗೆ ಮಾಡದಂತೆ ಸಲಹೆ ನೀಡಿದರು. ಎಲ್ಲಾ ತಾರ್ಕಿಕವಾಗಿ, ನಾನು ಸ್ಟಾರ್ ಆಗಬಾರದಿತ್ತು - ನಾನು ಪ್ರತಿಯೊಂದು ನಿಯಮವನ್ನು ಮುರಿದೆ. ಆದರೆ ಹೇಗೋ, ಜನರೊಂದಿಗೆ ಸಂಪರ್ಕ ಹೊಂದಿದ ಆ ಅಸಾಂಪ್ರದಾಯಿಕ ಆಯ್ಕೆಗಳು ಮತ್ತು ನಾನು ತುಂಬಾ ಕೃತಜ್ಞನಾಗಿದ್ದೇನೆ" ಎಂದು ಅವರು ಹೇಳಿದರು.
ಅಮೀರ್ ತನ್ನ ಚಲನಚಿತ್ರ ಆಯ್ಕೆಗಳು ಸಂಪೂರ್ಣವಾಗಿ ಪ್ರವೃತ್ತಿಯಿಂದ ನಡೆಸಲ್ಪಡುತ್ತವೆ ಎಂದು ಉಲ್ಲೇಖಿಸಿದರು. "ನಾನು ಎಂದಿಗೂ ಮುಂದೆ ಯಾವ ಸಾಮಾಜಿಕ ವಿಷಯವನ್ನು ತಿಳಿಸಬೇಕೆಂದು ಯೋಚಿಸಿ ಚಲನಚಿತ್ರವನ್ನು ಆಯ್ಕೆ ಮಾಡುವುದಿಲ್ಲ. ನನ್ನನ್ನು ರೋಮಾಂಚನಗೊಳಿಸುವ ಸ್ಕ್ರಿಪ್ಟ್‌ಗಳನ್ನು ಮಾತ್ರ ನಾನು ಹುಡುಕುತ್ತೇನೆ. ಒಂದು ಉತ್ತಮ ಸ್ಕ್ರಿಪ್ಟ್ ಸಾಮಾಜಿಕ ಸಂದೇಶವನ್ನು ಹೊಂದಿದ್ದರೆ, ಅದು ಬೋನಸ್ - ಆರಂಭಿಕ ಹಂತವಲ್ಲ" ಎಂದು ಅವರು ಹೇಳಿದರು.
ತಮ್ಮ ಹಲವು ಚಿತ್ರಗಳಲ್ಲಿನ ಸಾಮಾಜಿಕವಾಗಿ ಪ್ರತಿಧ್ವನಿಸುವ ವಿಷಯಗಳನ್ನು ಪ್ರತಿಬಿಂಬಿಸುತ್ತಾ, ಆಮಿರ್, "ಇದು ಉದ್ದೇಶಪೂರ್ವಕವಾಗಿ ಕಾಣಿಸಬಹುದು, ಆದರೆ ಅದು ಅಲ್ಲ. ಆ ಕಥೆಗಳು ನನಗೆ ಸ್ವಾಭಾವಿಕವಾಗಿ ಬಂದವು. ಬಹುಶಃ ನಾನು ಸಂಪರ್ಕ ಸಾಧಿಸುವ ರೀತಿಯ ವಸ್ತು ಅದು, ಮತ್ತು ಬಹುಶಃ ನಾನು ಅಸಾಧಾರಣ ಸ್ಕ್ರಿಪ್ಟ್‌ಗಳನ್ನು ಪಡೆಯುವ ಅದೃಷ್ಟಶಾಲಿಯಾಗಿರಬಹುದು’’ ಎಂದರು.
ತಮ್ಮ ಮಹತ್ವದ ಚಿತ್ರಗಳ ಹಿಂದಿನ ಬರಹಗಾರರಿಗೆ ಅವರು ಹೃದಯಪೂರ್ವಕವಾಗಿ ಮನ್ನಣೆ ನೀಡಿದರು: "ಅದು ತಾರೆ ಜಮೀನ್ ಪರ್, 3 ಈಡಿಯಟ್ಸ್, ದಂಗಲ್, ಅಥವಾ ಲಾಪಾಟಾ ಲೇಡೀಸ್ ಆಗಿರಲಿ, ಆ ಚಿತ್ರಗಳಿಗೆ ಬರಹಗಾರರು ಉತ್ತಮ ಅಡಿಪಾಯ ಹಾಕಿದರು. ಅವರು ಪ್ರಪಂಚಗಳು ಮತ್ತು ಪಾತ್ರಗಳನ್ನು ಸೃಷ್ಟಿಸಿದರು - ನನ್ನನ್ನು ಪ್ರೇರೇಪಿಸಿದ ಸ್ಕ್ರಿಪ್ಟ್‌ಗಳ ಕಡೆಗೆ ನಾನು ಆಕರ್ಷಿತನಾದೆ." ಆ ಪಾತ್ರಗಳತ್ತ ಹಿಂತಿರುಗಿ ನೋಡಿದಾಗ, ಬಹುಮುಖ ನಟನೆ ಗೋಚರವಾಗುತ್ತಿದೆ, "ನನ್ನ ಅನೇಕ ಚಿತ್ರಗಳು ಸಾಮಾಜಿಕ ಸಮಸ್ಯೆಗಳನ್ನು ತಿಳಿಸುತ್ತವೆ, ಆದರೆ ಅದು ಉದ್ದೇಶಪೂರ್ವಕವಾಗಿ ಸೇರಿಸಿದ್ದಲ್ಲ’’ ಎಂದರು.
"ನಾನು ಸಂಪೂರ್ಣ ಚಲನಚಿತ್ರ ವ್ಯಕ್ತಿತ್ವ, ಕಾರ್ಯಕರ್ತನಲ್ಲ. ನನ್ನ ಮುಖ್ಯ ಉದ್ದೇಶ ನನ್ನ ಪ್ರೇಕ್ಷಕರನ್ನು ರಂಜಿಸುವುದು ಎಂದ ಅವರು ಅಪ್ಪಟ ಪ್ರಾಮಾಣಿಕತೆಯಿಂದ ಮಾತು ಮುಕ್ತಾಯಗೊಳಿಸಿದರು.

ಒಂದು ಪ್ರಮುಖ ಅಂಶವೆಂದರೆ, ಆಮಿರ್ ಖಾನ್ ತಮ್ಮ ಮುಂಬರುವ ಯೋಜನೆಗಳನ್ನು ಬಹಿರಂಗಪಡಿಸುತ್ತಾ, ”ನಾನು ನಿರ್ಮಿಸುತ್ತಿರುವ ಲಾಹೋರ್ 1947, ಹ್ಯಾಪಿ ಪಟೇಲ್ ಮತ್ತು ಇತರ ಕೆಲವು ಯೋಜನೆಗಳನ್ನು ಪೂರ್ಣಗೊಳಿಸಿದ ನಂತರ, ಮುಂದಿನ ಕೆಲವು ತಿಂಗಳುಗಳಲ್ಲಿ ಅವೆಲ್ಲದರ ಕೆಲಸವು ಮುಗಿಯುತ್ತದೆ. ಅದರ ನಂತರ, ನಾನು ನನ್ನ ಗಮನವನ್ನು ಸಂಪೂರ್ಣವಾಗಿ ನಿರ್ಮಾಣದಿಂದ ನಟನೆಗೆ ಕೇಂದ್ರೀಕರಿಸುತ್ತೇನೆ’’ ಎಂದು ಹೇಳಿದರು.
ಅವರು ವೇದಿಕೆಯಿಂದ ಒಂದು ಪ್ರಮುಖ ಸಾಂಸ್ಥಿಕ ಬದಲಾವಣೆಯನ್ನು ಘೋಷಿಸಿದರು: "ಇಲ್ಲಿಂದ, ನಾನು ಕೇಳುವ ಯಾವುದೇ ಸ್ಕ್ರಿಪ್ಟ್ ನನಗೆ ನಟನಾಗಿ ಮಾತ್ರ ಇರುತ್ತದೆ. ಇದು ಗಮನಾರ್ಹ ಬದಲಾವಣೆಯಾಗಿದೆ, ಆದರೆ ಮತ್ತೆ ನಟನೆಗೆ ನನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳಲು ಸೂಕ್ತ ಸಮಯ’’ ಎಂದು ಹೇಳಿದರು.
ಮುಂದೆ ಏನಾಗುತ್ತದೆ ಎಂಬುದರ ಕುರಿತು, ಆಮಿರ್ ”ನಾನು ಈಗ ಹೊಸ ಸ್ಕ್ರಿಪ್ಟ್‌ಗಳನ್ನು ಕೇಳುತ್ತಿದ್ದೇನೆ. ಹಲವು ನನ್ನನ್ನು ರೋಮಾಂಚನಗೊಳಿಸಿವೆ - ನಿರ್ದಿಷ್ಟವಾಗಿ ಎರಡು ಅಥವಾ ಮೂರು - ಆದರೆ ನಾನು ಇನ್ನೂ ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿದ್ದೇನೆ’’ ಎಂದರು.
“ಪ್ರೇಕ್ಷಕರಲ್ಲಿ ಯಾರಾದರೂ ಚಲನಚಿತ್ರ ನಿರ್ಮಾಪಕರು ನಿಮಗೆ ಒಂದು ಯೋಜನೆಯನ್ನು ಪ್ರಸ್ತಾಪಿಸಲು ಬಯಸಿದರೆ, ಅವರು ಹೇಗೆ ಸಂಪರ್ಕಿಸಬೇಕು" ಎಂದು ಶ್ರೀ ರಂಗನ್ ಅಮಿರ್ ಅವರನ್ನು ಕೇಳಿದಾಗ, ಅದಕ್ಕೆ ನೇರ ಉತ್ತರರ ನೀಡಿ “ವರು ನನ್ನ ವ್ಯವಸ್ಥಾಪಕರನ್ನು ಸಂಪರ್ಕಿಸಿ ನಿರೂಪಣೆಗಾಗಿ ಸಮಯವನ್ನು ಕೋರಬಹುದು ಅಥವಾ ಸ್ಕ್ರಿಪ್ಟ್ ಅನ್ನು ಕಳುಹಿಸಬಹುದು. ಕೆಲವೊಮ್ಮೆ ನಾನು ಸ್ಕ್ರಿಪ್ಟ್ ಓದಲು ಇಷ್ಟಪಡುತ್ತೇನೆ, ಮತ್ತು ಕೆಲವೊಮ್ಮೆ ನಾನು ಅದನ್ನು ಕೇಳಲು ಇಷ್ಟಪಡುತ್ತೇನೆ - ಆದ್ದರಿಂದ ಎರಡೂ ವಿಧಾನಗಳು ಕೆಲಸ ಮಾಡುತ್ತವೆ’’ ಎಂದರು.
ಅಮೀರ್ ಖಾನ್ ಅವರ ನಿರ್ದೇಶನದ ಪ್ರಯಾಣದ ಭವಿಷ್ಯವಾಣಿಗಳೊಂದಿಗೆ ಫೈರ್ ಸೈಡ್ ಚಾಟ್ ಮುಕ್ತಾಯಗೊಂಡಿತು.
“ನಿರ್ದೇಶನ ವಾಸ್ತವವಾಗಿ ನನಗೆ ಹೆಚ್ಚಿನ ಪ್ರೀತಿ. ಚಲನಚಿತ್ರ ನಿರ್ಮಾಣವು ನನಗೆ ಹೆಚ್ಚು ಇಷ್ಟವಾಗುತ್ತದೆ. ನಾನು ಒಮ್ಮೆ ನಿರ್ದೇಶನ ಮಾಡಿದ್ದೇನೆ, ಆದರೆ ಅದು ಬಿಕ್ಕಟ್ಟಿನಿಂದ ಹೊರಬಂದಿತು - ಆದ್ದರಿಂದ ಅದು ನಿಜವಾಗಿಯೂ ಯೋಜಿತ ನಡೆಯೆಂದು ಪರಿಗಣಿಸಲ್ಪಡುವುದಿಲ್ಲ. ಆದರೆ ನಾನು ಪ್ರಜ್ಞಾಪೂರ್ವಕವಾಗಿ ನಿರ್ದೇಶನವನ್ನು ತೆಗೆದುಕೊಳ್ಳಲು ನಿರ್ಧರಿಸಿದ ದಿನ, ನಾನು ಬಹುಶಃ ನಟನೆಯನ್ನು ನಿಲ್ಲಿಸುತ್ತೇನೆ, ಏಕೆಂದರೆ ಅದು ನನ್ನನ್ನು ಸಂಪೂರ್ಣವಾಗಿ ನುಂಗುತ್ತದೆ. ಅದಕ್ಕಾಗಿಯೇ ನಾನು ಈಗ ಆ ನಿರ್ಧಾರವನ್ನು ವಿಳಂಬ ಮಾಡುತ್ತಿದ್ದೇನೆ’’ ಎಂದರು.
ಗೋಷ್ಠಿಯ ಕೊನೆಯಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಜು ಆಮೀರ್ ಖಾನ್ ಅವರನ್ನು ಸನ್ಮಾನಿಸಿದರು.

ಐ ಎಫ್ ಎಫ್ ಐ ಕುರಿತು
1952ರಲ್ಲಿ ಆರಂಭವಾದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ ಎಫ್ ಎಫ್ ಐ) ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಉತ್ಸವವಾಗಿ ಮುಂಚೂಣಿಯಲ್ಲಿ ನಿಂತಿದೆ. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯಡಿ ಬರುವ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್ ಎಫ್ ಡಿ ಸಿ) ಮತ್ತು ಗೋವಾ ರಾಜ್ಯ ಸರ್ಕಾರ, ಗೋವಾ ಮನರಂಜನಾ ಸೊಸೈಟಿ (ಇ ಎಸ್ ಜಿ) ಜಂಟಿಯಾಗಿ ಆಯೋಜಿಸಿರುವ ಈ ಉತ್ಸವವು ಜಾಗತಿಕ ಸಿನಿಮಾದ ಶಕ್ತಿ ಕೇಂದ್ರವಾಗಿ ಬೆಳೆದಿದೆ - ಅಲ್ಲಿ ಪುನಃಸ್ಥಾಪಿಸಲಾದ ಕ್ಲಾಸಿಕ್‌ಗಳು ದಿಟ್ಟ ಪ್ರಯೋಗಗಳನ್ನು ಒಳಗೊಂಡಿವೆ ಮತ್ತು ಕಲಾವಿದ ದಿಗ್ಗಜರು ಭಯವಿಲ್ಲದ ಮೊದಲ ಬಾರಿಗೆ ಬರುವವರೊಂದಿಗೆ ಜಾಗವನ್ನು ಹಂಚಿಕೊಳ್ಳುತ್ತಾರೆ. ಐ ಎಫ್ ಎಫ್ ಐ ನಿಜವಾಗಿಯೂ ಮಿಂಚುವಂತೆ ಮಾಡುವುದು ಅದರಲ್ಲಿನ ಅಂತಾರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್‌ಕ್ಲಾಸ್‌ಗಳು, ಗೌರವಗಳು ಮೊದಲಾದ ಅದ್ಭುತ ಸಮ್ಮಿಶ್ರಣಗಳು ಮತ್ತು ಅಧಿಕ ಶಕ್ತಿಯ ವೇವ್ಸ್ ಫಿಲ್ಮ್ ಬಜಾರ್, ಅಲ್ಲಿ ಕಲ್ಪನೆಗಳು, ಒಪ್ಪಂದಗಳು ಮತ್ತು ಸಹಯೋಗಗಳು ಹೊಸ ಎತ್ತರಕ್ಕೆ ಏರುತ್ತವೆ. ನವೆಂಬರ್ 20ರಿಂದ 28ರವರೆಗೆ ಗೋವಾದ ಬೆರಗುಗೊಳಿಸುವ ಕರಾವಳಿ ಹಿನ್ನೆಲೆಇರುವ ವೇದಿಕೆಯಲ್ಲಿ ಪ್ರದರ್ಶಿಸಲಾಗುತ್ತಿರುವ 56ನೇ ಆವೃತ್ತಿಯ ಚಲನಚಿತ್ರೋತ್ಸವದಲ್ಲಿ ನಾನಾ ಭಾಷೆಗಳ, ಪ್ರಕಾರಗಳ, ನಾವೀನ್ಯತೆಗಳ ಮತ್ತು ಧ್ವನಿಗಳ ಬೆರಗುಗೊಳಿಸುವ ವರ್ಣಪಟಲಕ್ಕೆ ಭರವಸೆ ನೀಡುವ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ- ಇದು ಜಾಗತಿಕ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ಸಂಭ್ರಮದ ಆಚರಣೆಯಾಗಿದೆ.
For more information, click on:
IFFI Website: https://www.iffigoa.org/
PIB’s IFFI Microsite: https://www.pib.gov.in/iffi/56/
PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F
X Post Link: https://x.com/PIB_Panaji/status/1991438887512850647?s=20
X Handles: @IFFIGoa, @PIB_India, @PIB_Panaji
*****
रिलीज़ आईडी:
2195878
| Visitor Counter:
3