ಪ್ರಧಾನ ಮಂತ್ರಿಯವರ ಕಛೇರಿ
ಸಂವಿಧಾನ ಸದನದ ಕೇಂದ್ರ ಸಭಾಂಗಣದಲ್ಲಿ ನಡೆದ ಸಂವಿಧಾನ ದಿನಾಚರಣೆಯಲ್ಲಿ ಪ್ರಧಾನಮಂತ್ರಿ ಅವರು ಭಾಗವಹಿಸಿದರು
Posted On:
26 NOV 2025 9:39PM by PIB Bengaluru
ಇಂದು ಮುಂಜಾನೆ, ನವದೆಹಲಿಯ ಸಂವಿಧಾನ ಸದನದ ಐತಿಹಾಸಿಕ ಕೇಂದ್ರ ಸಭಾಂಗಣದಲ್ಲಿ ನಡೆದ ಸಂವಿಧಾನ ದಿನಾಚರಣೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ, ಭಾರತದ ಸಂವಿಧಾನವನ್ನು ರಚಿಸಿದವರ ದೃಷ್ಟಿಕೋನವನ್ನು ಪ್ರಧಾನಮಂತ್ರಿ ಅವರು ನೆನಪಿಸಿಕೊಂಡರು ಮತ್ತು ಸಾಂವಿಧಾನಿಕ ಆದರ್ಶಗಳನ್ನು ಬಲಪಡಿಸುವ ರಾಷ್ಟ್ರದ ಸಾಮೂಹಿಕ ಜವಾಬ್ದಾರಿಯ ಬಗ್ಗೆ ಪುನರುಚ್ಚರಿಸಿದರು.
ಎಕ್ಸ್ ಪೋಸ್ಟ್ ನಲ್ಲಿ ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ:
"ಇಂದು ಬೆಳಿಗ್ಗೆ, ನಾನು ನವದೆಹಲಿಯ ಸಂವಿಧಾನ ಸದನದ ಐತಿಹಾಸಿಕ ಕೇಂದ್ರ ಸಭಾಂಗಣದಲ್ಲಿ ನಡೆದ ಸಂವಿಧಾನ ದಿನಾಚರಣೆಯಲ್ಲಿ ಭಾಗವಹಿಸಿದೆನು. ನಮ್ಮ ಸಂವಿಧಾನ ರಚನೆಕಾರರ ದೃಷ್ಟಿಕೋನವನ್ನು ನೆನಪಿಸಿಕೊಂಡೆವು ಮತ್ತು ಸಂವಿಧಾನದ ಆದರ್ಶಗಳನ್ನು ಬಲಪಡಿಸುವ ನಮ್ಮ ಸಾಮೂಹಿಕ ಜವಾಬ್ದಾರಿಯನ್ನು ಪುನರುಚ್ಚರಿಸಲಾಯಿತು"
****
(Release ID: 2195160)
Visitor Counter : 3