ಸಂವಿಧಾನದ ಪೀಠಿಕೆಯನ್ನು ಪಠಿಸುವ ಮೂಲಕ ಐ.ಎಫ್.ಎಫ್.ಐನಲ್ಲಿ ಸಂವಿಧಾನ ದಿನವನ್ನು ಆಚರಿಸಿದ ಪಿ.ಐ.ಬಿ ಅಧಿಕಾರಿಗಳು ಐ.ಎಫ್.ಎಫ್.ಐನಲ್ಲಿ ಸಂವಿಧಾನ ದಿನವನ್ನು ಆಚರಿಸಿದರು
ನವೆಂಬರ್ 26ರಂದು ರಾಷ್ಟ್ರವ್ಯಾಪಿ ಆಚರಿಸಲಾದ ಸಂವಿಧಾನ ದಿನದ ಸಂದರ್ಭದಲ್ಲಿ, ವಾರ್ತಾ ಶಾಖೆಯ (ಪಿ.ಐ.ಬಿ) ಅಧಿಕಾರಿಗಳು 56ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ) ನಲ್ಲಿನಡೆದ ವಿಧ್ಯುಕ್ತ ಆಚರಣೆಯಲ್ಲಿ ಭಾಗವಹಿಸಿದರು. ಈ ವರ್ಷ ರಾಷ್ಟ್ರವು ಸಂವಿಧಾನದ 75ನೇ ವರ್ಷವನ್ನು ಆಚರಿಸುತ್ತಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿಐಬಿ ಮಹಾನಿರ್ದೇಶಕಿ ಶ್ರೀಮತಿ ಸ್ಮಿತಾ ವತ್ಸ್ ಶರ್ಮಾ ಮತ್ತು ಭಾರತೀಯ ಸಮೂಹ ಸಂವಹನ ಸಂಸ್ಥೆ (ಐ.ಐ.ಎಂ.ಸಿ) ಉಪಕುಲಪತಿ ಡಾ. ಪ್ರಜ್ಞಾ ಪಾಲಿವಾಲ್ ಗೌರ್ ವಹಿಸಿದ್ದರು.

ಸಮಾರಂಭದ ಭಾಗವಾಗಿ ಅಧಿಕಾರಿಗಳು ಸಾಮೂಹಿಕವಾಗಿ ಭಾರತದ ಸಂವಿಧಾನದ ಪೀಠಿಕೆಯನ್ನು ಪಠಿಸಿದರು. ಅದರ ಮೌಲ್ಯಗಳನ್ನು ಎತ್ತಿ ಹಿಡಿಯುವ ತಮ್ಮ ಬದ್ಧತೆಯನ್ನು ದೃಢಪಡಿಸಿದರು. ಸಮಾರಂಭವು ಈ ಮಾತುಗಳೊಂದಿಗೆ ಪ್ರಾರಂಭವಾಯಿತು:
‘‘ನಾವು, ಭಾರತದ ಜನರು, ಭಾರತವನ್ನು ಸಾರ್ವಭೌಮ ಸಮಾಜವಾದಿ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸಲು ಮತ್ತು ಅದರ ಎಲ್ಲಾ ನಾಗರಿಕರಿಗೆ ಭದ್ರಪಡಿಸಲು ಗಂಭೀರವಾಗಿ ನಿರ್ಧರಿಸಿದ್ದೇವೆ.’’

ಈ ಆಚರಣೆಯು ಉತ್ಸವದಲ್ಲಿಉಪಸ್ಥಿತರಿದ್ದ ಮಾಧ್ಯಮ ಮತ್ತು ಸಂವಹನ ವೃತ್ತಿಪರರಲ್ಲಿ ಸಾಂವಿಧಾನಿಕ ಜವಾಬ್ದಾರಿ, ನಾಗರಿಕ ಕರ್ತವ್ಯ ಮತ್ತು ರಾಷ್ಟ್ರೀಯ ಏಕತೆಯ ಮನೋಭಾವವನ್ನು ಬಿಂಬಿಸಿತು.
ಸಂವಿಧಾನ ಮತ್ತು ಅದರ ಮಾರ್ಗದರ್ಶಿ ತತ್ವಗಳ ಬಗ್ಗೆ ರಾಷ್ಟ್ರದ ನಿರಂತರ ಗೌರವವನ್ನು ಪ್ರತಿಧ್ವನಿಸುವ ‘‘ಜೈ ಹಿಂದ್’’ ಎಂಬ ದೇಶಭಕ್ತಿಯ ಘೋಷಣೆಯನ್ನು ಪ್ರತಿಧ್ವನಿಸುವ ಮೂಲಕ ಸಮಾರಂಭವು ಮುಕ್ತಾಯಗೊಂಡಿತು.
*****
Release ID:
2195065
| Visitor Counter:
3