iffi banner

ಎರಡು ಚಲನಚಿತ್ರಗಳು, ಒಂದು ಹೃದಯ ಬಡಿತ: ಐ ಎಫ್ ಎಫ್ ಐ 2025ರಲ್ಲಿ ಗುರುತು ಮತ್ತು ಭರವಸೆ ಕಂಡುಕೊಂಡ  'ಫ್ರಾಂಕ್' ಮತ್ತು 'ಲಿಟಲ್ ಟ್ರಬಲ್ ಗರ್ಲ್ಸ್' ನಿರ್ಮಾಪಕರು


ಒಂದು ಚಲನಚಿತ್ರವು ನಿಮ್ಮನ್ನು ಬದಲಾಯಿಸುತ್ತದೆ; ಅದು ನಿಮ್ಮ ಜೀವನವಾಗುತ್ತದೆ ಮತ್ತು ನೀವು ನಂಬುವುದನ್ನು ಅದು ರೂಪಿಸುತ್ತದೆ: 'ಫ್ರಾಂಕ್' ನಿರ್ಮಾಪಕ ಐವೊ ಫೆಲ್ಟ್

ಪ್ರತಿಯೊಬ್ಬ ಯುವಕರು ಒಂದೇ ರೀತಿಯ ಯುದ್ಧ ಎದುರಿಸುತ್ತಾರೆ; ಅದು ಜಗತ್ತು ಅವರಿಂದ ಏನನ್ನು ನಿರೀಕ್ಷಿಸುತ್ತದೆ ಮತ್ತು ಅವರು ನಿಜವಾಗಿಯೂ ಯಾರಾಗಲು ಬಯಸುತ್ತಾರೆಂಬುದರ ನಡುವೆ: 'ಲಿಟಲ್ ಟ್ರಬಲ್ ಗರ್ಲ್ಸ್' ನಿರ್ಮಾಪಕ ಮಿಹೆಕ್ ಸೆರ್ನೆಕ್

ಗೋವಾದ ಸಮುದ್ರ ತಂಗಾಳಿ ಐ.ಎಫ್.ಎಫ್.ಐ ವೇದಿಕೆಯ ಮೂಲಕ ಬೀಸುತ್ತಿದ್ದಂತೆ ಮತ್ತು ಕ್ಯಾಮೆರಾಗಳು ನಕ್ಷತ್ರಗಳಂತೆ ಹೊಳೆಯುತ್ತಿದ್ದಂತೆ, ಫ್ರಾಂಕ್ ಮತ್ತು ಲಿಟಲ್ ಟ್ರಬಲ್ ಗರ್ಲ್ಸ್  ಚಿತ್ರಗಳು ಇಂದು ವೇದಿಕೆಯನ್ನು ಬೆಳಗಿಸಿದವು. ಅವು ಮಾಧ್ಯಮ ಸಭಾಂಗಣವನ್ನು ಭಾವನೆ, ಪ್ರತಿಬಿಂಬ, ಹಾಸ್ಯ ಮತ್ತು ಸಂಪೂರ್ಣ ಸಿನಿಮೀಯ ಮ್ಯಾಜಿಕ್‌ನ ರೋಮಾಂಚಕ ಅಖಾಡವನ್ನಾಗಿ ಪರಿವರ್ತಿಸಿದವು.

ನಿರ್ಮಾಪಕರಾದ ಐವೊ ಫೆಲ್ಟ್ (ಫ್ರಾಂಕ್) ಮತ್ತು ಮಿಹೆಕ್ ಸೆರ್ನೆಕ್ (ಲಿಟಲ್ ಟ್ರಬಲ್ ಗರ್ಲ್ಸ್) ಪ್ರೇಕ್ಷಕರನ್ನು ಅವರು ಎಚ್ಚರಿಕೆಯಿಂದ ನಿರ್ಮಿಸಿರುವ ಪ್ರಪಂಚಗಳಿಗೆ ಆಳವಾಗಿ ಸೆಳೆದರು, ಒಂದು ಕಚ್ಚಾ ಮತ್ತು ನಿರ್ದಯ, ಇನ್ನೊಂದು ಕಾವ್ಯಾತ್ಮಕ ಮತ್ತು ಕಾಡುವ, ಆದರೆ ಎರಡೂ ನೋವು, ಸ್ವಯಂ-ಅನ್ವೇಷಣೆ, ಧೈರ್ಯ ಮತ್ತು ಮಾನವರ ಬೆಸುಗೆಯ ಸಾರ್ವತ್ರಿಕ ವಿಷಯಗಳೊಂದಿಗೆ ಜೀವಂತವಾಗಿವೆ.

ಫ್ರಾಂಕ್: ನೋವು, ಭರವಸೆ ಮತ್ತು ಮಾನವ ಬೆಸುಗೆಯಿಂದ ಕೆತ್ತಿದ ಕಥೆ

”ಪ್ರಾಂಕ್’’ 13 ವರ್ಷದ ಪಾಲ್‌ನ ಕಥೆಯಾಗಿದೆ, ಕೌಟುಂಬಿಕ ಹಿಂಸಾಚಾರದಿಂದ ನಲುಗಿ ಪರಿಚಯವಿಲ್ಲದ ಪಟ್ಟಣಕ್ಕೆ ಬಿದ್ದ ಹುಡುಗ, ಅಲ್ಲಿ ಅವನು ಜೀವನದಲ್ಲಿ ಎಡವಿ ಬೀಳುತ್ತಾನೆ. ವಿಚಿತ್ರ, ವಿಶೇಷ ಚೇತನ ವ್ಯಕ್ತಿಯು ತನಗೆ ಅಗತ್ಯವೆಂದು ತಿಳಿದಿರದ ಆಧಾರಸ್ತಂಭವಾಗುವವರೆಗೆ ಮಾಡುವ ಪ್ರತಿಯೊಂದು ಆಯ್ಕೆಯೂ ಅವನನ್ನು ಇನ್ನಷ್ಟು ಗೊಂದಲಕ್ಕೆ ತಳ್ಳುತ್ತದೆ.

ನಿರ್ಮಾಪಕ ಐವೊ ಫೆಲ್ಟ್ ಚಿತ್ರದ ಭಾವನಾತ್ಮಕ ಮೂಲವನ್ನು ನಿಶ್ಯಸ್ತ್ರ ಪ್ರಾಮಾಣಿಕತೆಯೊಂದಿಗೆ ಪ್ರತಿಬಿಂಬವಾಗುತ್ತಿರುವುದನ್ನು ಹಂಚಿಕೊಂಡರು. "ಈ ಕಲ್ಪನೆಯು ಸುಮಾರು ಇಪ್ಪತ್ತು ವರ್ಷಗಳ ಕಾಲ ನನ್ನೊಳಗೆ ನೆರಳಿನಂತೆ, ನೆನಪಿನಂತೆ ಇತ್ತು. ಒಂದು ದಿನ ಅದು ಸುಮ್ಮನಿರಲು ನಿರಾಕರಿಸಿತು. ಆಗ ಫ್ರಾಂಕ್ ಹುಟ್ಟಿಕೊಂಡಿತು,.

ಅದೃಶ್ಯ ಗಾಯಗಳನ್ನು ಹೊತ್ತ ಮಕ್ಕಳು ಏನಾಗುತ್ತಾರೆ ಎಂಬುದರ ಶಾಂತ ಅನ್ವೇಷಣೆ ಎಂದು ಅವರು ಚಿತ್ರದ ಕುರಿತು ವಿವರಿಸಿದರು. ಎಸ್ಟೋನಿಯಾದಂತಹ ಸಣ್ಣ ದೇಶದಲ್ಲಿ ಚಲನಚಿತ್ರ ನಿರ್ಮಾಣದ ಸವಾಲುಗಳ ಬಗ್ಗೆ ಮಾತನಾಡುವಾಗ ಅವರು ತಮ್ಮ ಹಾಸ್ಯಭರಿತ ಮಾತುಗಳಿಂದ ಪ್ರೇಕ್ಷಕರನ್ನು ಸಂತೋಷಪಡಿಸಿದರು. "ನಾವು ಕೇವಲ ನಿಧಿಗಾಗಿ ಹೋರಾಡುವುದಿಲ್ಲ, ನಾವು ಅದನ್ನು ಒಲಿಂಪಿಕ್ ಕ್ರೀಡೆಯಂತೆ ಬೆನ್ನಟ್ಟುತ್ತೇವೆ! ತೆರಿಗೆದಾರರ ಬೆಂಬಲವಿಲ್ಲದೆ, ಫ್ರಾಂಕ್‌ನಂತಹ ಚಲನಚಿತ್ರವು ನಿರ್ಮಾಣವಾಗುವುದಿಲ್ಲ" ಎಂದು ಅವರು ಉಲ್ಲೇಖಿಸಿದರು.

ಪಾತ್ರವರ್ಗ ಮತ್ತು ಸಿಬ್ಬಂದಿಯೊಳಗೆ ಅಂತಹ ಕಥೆಗಳು ಹುಟ್ಟಿಕೊಳ್ಳುವ ಪರಿವರ್ತನೆಯ ಬಗ್ಗೆ ಮಾತನಾಡುತ್ತಾ, ಅವರು “ಒಂದು ಚಲನಚಿತ್ರವು ನಿಮ್ಮನ್ನು ಬದಲಾಯಿಸುತ್ತದೆ. ಅದು ನಿಮ್ಮ ಜೀವನವಾಗುತ್ತದೆ. ಅದು ನೀವು ನಂಬುವುದನ್ನು ರೂಪಿಸುತ್ತದೆ" ಎಂದು ಹೇಳಿದರು,

ಕಾಯಿರ್ ನೋಟ್ಸ್ ನಿಂದ ಧೈರ್ಯದವರೆಗೆ: ನಿರೀಕ್ಷೆ ಮತ್ತು ಗುರುತಿನ ನಡುವಿನ ಯುದ್ಧವನ್ನು ಅನ್ವೇಷಿಸುವುದೇ ಲಿಟಲ್ ಟ್ರಬಲ್ ಗರ್ಲ್ಸ್

ಕಾನ್ವೆಂಟ್‌ನಲ್ಲಿ ವಾರಾಂತ್ಯದ ಗಾಯಕವೃಂದದ ರಿಟ್ರೀಟ್‌  ಸಂದರ್ಭದಲ್ಲಿ ನಡೆದ 'ಲಿಟಲ್ ಟ್ರಬಲ್ ಗರ್ಲ್ಸ್' ಸ್ವಾತಂತ್ರ್ಯ, ಬಯಕೆ, ದಂಗೆ ಮತ್ತು ಸಂಪೂರ್ಣವಾಗಿ ತನ್ನದೇ ಆದ ಜಾಗತಿಕ ದೂರದೃಷ್ಟಿಯ ಮೊದಲ ಕಿಡಿಯನ್ನು ಸವಿಯುವ ನಾಚಿಕೆ ಸ್ವಭಾವದ ಹದಿಹರೆಯದ ಹುಡುಗಿಯ ಕಥೆಯಾಗಿದೆ. ಅವಳ ಜಾಗೃತಿ ಸ್ನೇಹ, ಸಂಪ್ರದಾಯಗಳು ಮತ್ತು ಅವಳ ಸುತ್ತಲಿನ ಕಠಿಣ ನಿರೀಕ್ಷೆಗಳನ್ನು ಬೆದರಿಸುತ್ತದೆ

ನಿರ್ಮಾಪಕ ಮಿಹೆಕ್ ಸೆರ್ನೆಕ್, “ಲಿಟಲ್ ಟ್ರಬಲ್ ಗರ್ಲ್ಸ್‌’’ನ ಸ್ವಯಂ-ಶೋಧನೆಯ ಮೂಲ ಪಯಣದ ಬಗ್ಗೆ ಮಾತನಾಡುತ್ತಾ ಅದರ ಹೃದಯಪೂರ್ವಕವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಜಾಗೃತಿ ಎಂದಿಗೂ ಪಿಸುಗುಟ್ಟುವುದಿಲ್ಲ, ಅದು ನೀವು ಕೇಳಲು ಸಾಧ್ಯವಾಗದ ಹಾಡಿನಂತೆ ಬರುತ್ತದೆ" ಎಂದು ಅವರು ಚಿತ್ರದ ಭಾವನಾತ್ಮಕ ಹೃದಯ ಮಿಡಿತವನ್ನು ವಿವರಿಸುತ್ತಾ ಹೇಳಿದರು.

ಚಿತ್ರದ ನಿರ್ಮಾಣವನ್ನು ಪರಿಶೀಲಿಸುತ್ತಾ, ಸೆರ್ನೆಕ್ ಅದರ ವಿಶಿಷ್ಟ ಸೃಜನಶೀಲ ಭೂ ಆಯಾಮದ ಎದ್ದುಕಾಣುವ ಚಿತ್ರವನ್ನು ಚಿತ್ರಿಸಿದರು. ತಂಡವು ಪವಿತ್ರ ಚರ್ಚುಗಳ ಒಳಗೆ ನಾಲ್ಕು ವಾರಗಳ ಚಿತ್ರೀಕರಣವನ್ನು ಕಳೆದರು, ಸೆಟ್‌ನಲ್ಲಿ ನೇರವಾಗಿ ರೆಕಾರ್ಡ್ ಮಾಡಲಾದ ಲೈವ್ ಕೋರಲ್ ಪ್ರದರ್ಶನಗಳೊಂದಿಗೆ ಗಾಯಕರ ಜೀವನದ ಅಲೌಕಿಕ ಶಿಸ್ತನ್ನು ಸೆರೆಹಿಡಿಯಿತು. ಗಮನಾರ್ಹ ಭಾವನಾತ್ಮಕ ಆಳದೊಂದಿಗೆ ಮುಗ್ಧತೆಯನ್ನು ಸಮತೋಲನಗೊಳಿಸಿದ 17 ವರ್ಷದ ಪ್ರಮುಖ ನಟಿಗೆ ಮಾರ್ಗದರ್ಶನ ನೀಡುತ್ತಾ, ಪ್ರಕ್ರಿಯೆಗೆ ಸೂಕ್ಷ್ಮತೆಯ ಮತ್ತೊಂದು ಪದರವನ್ನು ಸೇರಿಸಿದರು. ನಿರ್ಮಾಣವು ಅತೀಂದ್ರಿಯ ಗುಹೆಯೊಳಗೆ ಸಹ ಸಾಹಸ ಮಾಡಿತು, ಈ ಸ್ಥಳವನ್ನು ಸೆರ್ನೆಕ್ "ತನ್ನದೇ ಆದ ಒಂದು ವಿಶ್ವ" ಎಂದು ಬಣ್ಣಿಸಿದರು.

ಅವರಿಗೆ, ಈ ಸ್ಥಳಗಳು ಅವುಗಳ ಭೌತಿಕತೆಯನ್ನು ಮೀರಿವೆ: "ಚರ್ಚ್, ಕಾಡು, ಗುಹೆ, ಅವು ಸ್ಥಳಗಳಾಗಿರಲಿಲ್ಲ. ಅವು ಪಾತ್ರಗಳಾಗಿದ್ದವು. ಈ ಸ್ಥಳಗಳು ಚಲನಚಿತ್ರಕ್ಕೆ ಮೆರುಗು ತಂದಿದದ್ದವು.

ಸೆರ್ನೆಕ್ ಸ್ಲೊವೇನಿಯಾದ ಸಾಂಸ್ಕೃತಿಕ ಚೌಕಟ್ಟಿನೊಳಗೆ ಚಿತ್ರವನ್ನು ಮತ್ತಷ್ಟು ಸಂದರ್ಭೋಚಿತಗೊಳಿಸಿದರು, ದೇಶದ ಆಳವಾಗಿ ಬೇರೂರಿರುವ ಗಾಯನ ಸಂಪ್ರದಾಯಗಳು ಮತ್ತು ಕ್ಯಾಥೋಲಿಕ್ ಪರಂಪರೆಯನ್ನು ಉಲ್ಲೇಖಿಸಿದರು. "ನಾವೆಲ್ಲರೂ ಹಾಡುತ್ತಾ ಬೆಳೆದೆವು. ಮತ್ತು ನಾವೆಲ್ಲರೂ ಶಿಸ್ತಿನಿಂದ ಬೆಳೆದೆವು" ಎಂದು ಅವರು ಹೇಳಿದರು.

ಚಿತ್ರದ ಸಾರ್ವತ್ರಿಕ ಅನುರಣನವನ್ನು ಪ್ರತಿಬಿಂಬಿಸುತ್ತಾ, ನಿರ್ಮಾಪಕರು "ಪ್ರತಿಯೊಬ್ಬ ಯುವಕನು ಜಗತ್ತು ತನ್ನಿಂದ ಏನನ್ನು ನಿರೀಕ್ಷಿಸುತ್ತದೆ ಮತ್ತು ತಾನು ನಿಜವಾಗಿಯೂ ಯಾರಾಗಲು ಬಯಸುತ್ತಾನೆ ಎಂಬುದರ ನಡುವೆ ಒಂದೇ ರೀತಿಯ ಯುದ್ಧದಲ್ಲಿ ಹೋರಾಡುತ್ತಾನೆ" ಎಂದು ಉಲ್ಲೇಸಿದರು. ಈ ಶಾಂತ ಆದರೆ ಆಳವಾದ ಹೋರಾಟವೇ 'ಲಿಟಲ್ ಟ್ರಬಲ್ ಗರ್ಲ್ಸ್' ಗೆ ಅದರ ಸ್ಪಷ್ಟ ಜಾಗತಿಕ ಹೃದಯ ಮಿಡಿತವನ್ನು ನೀಡುತ್ತದೆ ಎಂದು ಅವರು ಹೇಳಿದರು

ಟ್ರೈಲರ್ ಗಳಿಗಾಗಿ ಇಲ್ಲಿ ವೀಕ್ಷಿಸಿ:

ಪೂರ್ಣ ಸುದ್ದಿಗೋಷ್ಠಿಗಾಗಿ ಇಲ್ಲಿ ವೀಕ್ಷಿಸಿ:

ಐ.ಎಫ್.ಎಫ್. ಕುರಿತು

1952 ರಲ್ಲಿ ಆರಂಭವಾದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ) ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಉತ್ಸವವಾಗಿ ಮುಂಚೂಣಿಯಲ್ಲಿ ನಿಂತಿದೆ. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯಡಿ ಬರುವ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್ ಎಫ್ ಡಿ ಸಿ) ಮತ್ತು ಗೋವಾ ರಾಜ್ಯ ಸರ್ಕಾರ, ಗೋವಾ ಮನರಂಜನಾ ಸೊಸೈಟಿ (ಇ ಎಸ್ ಜಿ) ಜಂಟಿಯಾಗಿ ಆಯೋಜಿಸಿರುವ ಈ ಉತ್ಸವವು ಜಾಗತಿಕ ಸಿನಿಮಾದ ಶಕ್ತಿ ಕೇಂದ್ರವಾಗಿ ಬೆಳೆದಿದೆ - ಅಲ್ಲಿ ಪುನಃಸ್ಥಾಪಿಸಲಾದ ಕ್ಲಾಸಿಕ್‌ಗಳು ದಿಟ್ಟ ಪ್ರಯೋಗಗಳನ್ನು ಒಳಗೊಂಡಿವೆ ಮತ್ತು ಕಲಾವಿದ ದಿಗ್ಗಜರು ಭಯವಿಲ್ಲದ ಮೊದಲ ಬಾರಿಗೆ ಬರುವವರೊಂದಿಗೆ ಜಾಗವನ್ನು ಹಂಚಿಕೊಳ್ಳುತ್ತಾರೆ. ಐ.ಎಫ್.ಎಫ್.ಐ ನಿಜವಾಗಿಯೂ ಮಿಂಚುವಂತೆ ಮಾಡುವುದು ಅದರಲ್ಲಿನ ಅಂತಾರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್‌ಕ್ಲಾಸ್‌ಗಳು, ಗೌರವಗಳು ಮೊದಲಾದ ಅದ್ಭುತ ಸಮ್ಮಿಶ್ರಣಗಳು ಮತ್ತು ಅಧಿಕ ಶಕ್ತಿಯ ವೇವ್ಸ್ ಫಿಲ್ಮ್ ಬಜಾರ್, ಅಲ್ಲಿ ಕಲ್ಪನೆಗಳು, ಒಪ್ಪಂದಗಳು ಮತ್ತು ಸಹಯೋಗಗಳು ಹೊಸ ಎತ್ತರಕ್ಕೆ ಏರುತ್ತವೆ. ನವೆಂಬರ್ 20ರಿಂದ 28ರವರೆಗೆ ಗೋವಾದ ಬೆರಗುಗೊಳಿಸುವ ಕರಾವಳಿ ಹಿನ್ನೆಲೆಇರುವ ವೇದಿಕೆಯಲ್ಲಿ ಪ್ರದರ್ಶಿಸಲಾಗುತ್ತಿರುವ 56ನೇ ಆವೃತ್ತಿಯ ಚಲನಚಿತ್ರೋತ್ಸವದಲ್ಲಿ ನಾನಾ ಭಾಷೆಗಳ, ಪ್ರಕಾರಗಳ, ನಾವೀನ್ಯತೆಗಳ ಮತ್ತು ಧ್ವನಿಗಳ ಬೆರಗುಗೊಳಿಸುವ ವರ್ಣಪಟಲಕ್ಕೆ ಭರವಸೆ ನೀಡುವ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ- ಇದು ಜಾಗತಿಕ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ಸಂಭ್ರಮದ ಆಚರಣೆಯಾಗಿದೆ.

For more information, Click on:

IFFI Website: https://www.iffigoa.org/

PIB’s IFFI Microsite: https://www.pib.gov.in/iffi/56/

PIB IFFIWood Broadcast Channel:  https://whatsapp.com/channel/0029VaEiBaML2AU6gnzWOm3F

X Handles: @IFFIGoa, @PIB_India, @PIB_Panaji

 

*****


Great films resonate through passionate voices. Share your love for cinema with #IFFI2025, #AnythingForFilms and #FilmsKeLiyeKuchBhi. Tag us @pib_goa on Instagram, and we'll help spread your passion! For journalists, bloggers, and vloggers wanting to connect with filmmakers for interviews/interactions, reach out to us at iffi.mediadesk@pib.gov.in with the subject line: Take One with PIB.


Release ID: 2194151   |   Visitor Counter: 6