iffi banner

ಎ ಜರ್ನಿ ಥ್ರೂ ದಿ ಎಡಿಟ್ ಟೇಬಲ್: ಸಿನಿಮಾದ ಹಿಂದಿನ ನೈಜ ಕೌಶಲ್ಯವನ್ನು ಬಿಡಿಸಿಟ್ಟ ಶ್ರೀಕರ್ ಪ್ರಸಾದ್


ಸಂಪಾದಕರ ಆಯಾಮದಿಂದ ಭಾವನೆ, ನಿರೂಪಣೆ ಮತ್ತು ಕಥೆ ಹೇಳುವಿಕೆಯು ವ್ಯಾಖ್ಯಾನ

ಪ್ರದರ್ಶನ, ನಿರೂಪಣೆ ಮತ್ತು ದೃಶ್ಯವನ್ನು ರೂಪಿಸುವ ಕಲೆಯನ್ನು ಅನ್ವೇಷಿಸಿದ ಕಾರ್ಯಾಗಾರ

56ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ, ಸಂಪಾದಕ ಶ್ರೀಕರ್ ಪ್ರಸಾದ್ ಅವರು ’ಮನಸ್ಸಿನಿಂದ ಪರದೆಗೆ: ದೂರದೃಷ್ಟಿಯಿಂದ ಕಾರ್ಯಾಚರಣೆಗೆ - ಒಂದು ಸಂಪಾದನಾ ಕಾರ್ಯಾಗಾರ’’ ( From Mind to Screen: Vision to Execution - An Editing Workshop) ಎಂಬ ಶೀರ್ಷಿಕೆಯ ಕಾರ್ಯಾಗಾರವನ್ನು ಮುನ್ನಡೆಸಿದರು, ಇದು ಪ್ರೇಕ್ಷಕರನ್ನು ಸಿನೆಮಾದ ಅತ್ಯಂತ ಶಾಂತ ಮತ್ತು ನಿರ್ಣಾಯಕ ಸ್ಥಳವಾದ ಎಡಿಟಿಂಗ್ ಟೇಬಲ್‌ನತ್ತ ಸೆಳೆಯಿತು, ಅಲ್ಲಿ ದೃಶ್ಯಗಳು ಸಮತೋಲನವನ್ನು ಕಾಯ್ದುಕೊಳ್ಳುತ್ತವೆ ಮತ್ತು ಕಥೆಗಳು ಒಂದು ನಿರ್ದಿಷ್ಟ ರೂಪದಲ್ಲಿ ನೆಲೆಗೊಳ್ಳುತ್ತವೆ. 650 ಟೈಟಲ್ ಗಳು ಮತ್ತು 18 ಭಾಷೆಗಳಲ್ಲಿ ರೂಪುಗೊಂಡ ಫಿಲ್ಮೋಗ್ರಫಿಯ ಅನುಭವ ಹೊಂದಿರುವ ಅವರ ಉಪಸ್ಥಿತಿಯು ಸಮಯ, ಸಂಸ್ಕೃತಿಗಳು ಮತ್ತು ಲೆಕ್ಕವಿಲ್ಲದಷ್ಟು ಎಡಿಟಿಂಗ್ ಕೊಠಡಿಗಳಲ್ಲಿ ಕಥೆಗಳನ್ನು ರೂಪಿಸಿದ ವ್ಯಕ್ತಿಯ ಶಾಂತ ಬುದ್ಧಿವಂತಿಕೆಯನ್ನು ಅಭಿವ್ಯಕ್ತಗೊಳಿಸಿತು. ಸೈಕತ್ ಎಸ್ ರೇ ಅವರಿಂದ ನಿರ್ವಹಣೆ ಮಾಡಲ್ಪಟ್ಟ ಈ ಗೋಷ್ಠಿಯಲ್ಲಿ ಕಥೆಯನ್ನು ಅದರ ಮೊದಲು ಸೆರೆಹಿಡಿಯುವ ದೃಶ್ಯಗಳಿಂದ ಅಂತಿಮ ಕಟ್‌ವರೆಗೆ ಸಾಗಿಸುವ ಆಯ್ಕೆಗಳ ಬಗ್ಗೆ ಆಳವಾದ ಅನುಭವದ ಮೂಲಕ ತಿಳಿವಳಿಕೆ ನೀಡಲಾಯಿತು.

ಗೋಷ್ಠಿ ಆರಂಭವಾಗುವ ಮೊದಲು, ರವಿ ಕೊಟ್ಟಾರಕರ ಅವರು ಮಾಸ್ಟರ್ ಎಡಿಟರನ್ನು ಸನ್ಮಾನಿಸಿದರು, ಅವರ ವ್ಯಾಪಕ ಕಾರ್ಯನಿರ್ವಹಣೆ ಮತ್ತು "ಏನು ಮಾಡಬಾರದು" ಎಂದು ತಿಳಿದುಕೊಳ್ಳುವ ಅವರ ವಿಶಿಷ್ಟ ಸಾಮರ್ಥ್ಯವನ್ನು ಶ್ಲಾಘಿಸಿದರು, ಈ ಗುಣವನ್ನು ಅವರು ಸಂಪಾದಕರ ಅಂತಃಪ್ರಜ್ಞೆಯ ನಿಜವಾದ ಸಾರ ಎಂದು ಬಣ್ಣಿಸಿದರು.

ತಮ್ಮ ನಾಲ್ಕು ದಶಕಗಳ ವೃತ್ತಿ ಪಯಣದ ಬಗ್ಗೆ ಮಾತನಾಡಿದ ಶ್ರೀಕರ್ ಪ್ರಸಾದ್, ಸಂಪಾದನೆಯನ್ನು ಕೇವಲ ತಾಂತ್ರಿಕ ಕೆಲಸ ಎಂಬ ಸಾಮಾನ್ಯ ತಿಳಿವಳಿಕೆಯನ್ನು ಪ್ರಶ್ನಿಸುವ ಮೂಲಕ ಆರಂಭಿಸಿದರು. ಸಂಪಾದನೆಯು ಭಾವನೆಯಲ್ಲಿ ಬೇರೂರಿದೆ ಮತ್ತು ಪ್ರತಿ ಕಟ್ ಪ್ರೇಕ್ಷಕರಿಗೆ ಏನನಿಸುತ್ತದೆ ಎಂಬುದನ್ನು ಮಾರ್ಗದರ್ಶನ ಮಾಡಬೇಕು ಎಂದು ಅವರು ಹೇಳಿದರು. ಸಂಪಾದಕರು ಆರಂಭಿಸುವ ಅಗಾಧ ಪ್ರಮಾಣದ ದೃಶ್ಯಗಳ ಬಗ್ಗೆ ಚರ್ಚಿಸುವಾಗ, ಕಥೆಯನ್ನು ಉದ್ದೇಶ ಮತ್ತು ಸ್ಪಷ್ಟತೆಯೊಂದಿಗೆ ಚಲಿಸುವಂತೆ ಮಾಡುವ ರೀತಿಯಲ್ಲಿ ಅದನ್ನು ರೂಪಿಸುವುದು ನಿಜವಾದ ಪರೀಕ್ಷೆ ಎಂದು ಅವರು ಒತ್ತಿ ಹೇಳಿದರು, ಏಕೆಂದರೆ ಕಥೆಯು ಒಟ್ಟಾರೆ ಚಲನಚಿತ್ರವನ್ನು ಹಿಡಿದಿಟ್ಟುಕೊಳ್ಳುತ್ತದೆ.

ಸಂಪಾದಕರು ತಮ್ಮ ಕೆಲಸ ಆರಂಭಿಸಲು ಉತ್ತಮ ಸ್ಥಳವೆಂದರೆ ಅದು ಸ್ಕ್ರಿಪ್ಟ್ (ಕಥೆ ರಚನಾ) ಹಂತದಲ್ಲಿ, ಅದು ಇಡೀ ಚಲನಚಿತ್ರ ನಿರ್ಮಾಣ ಪ್ರಕ್ರಿಯೆಯನ್ನು ರೂಪಿಸುವ ಒಳಗೊಳ್ಳುವಿಕೆ ಎಂದು ಅವರು ಒತ್ತಿ ಹೇಳಿದರು. ಆರಂಭಿಕ ವರ್ಷಗಳಲ್ಲಿ ಸಂಪಾದನೆಯು ಅವರಿಗೆ ಯಾಂತ್ರಿಕವೆನಿಸಿದರೂ, ವಿಭಿನ್ನ ನಿರ್ದೇಶಕರೊಂದಿಗೆ ಕೆಲಸ ಮಾಡುವುದರಿಂದ ಹೊಸ ಹೊಸ ದೃಷ್ಟಿಕೋನಗಳನ್ನು ತೆರೆದುಕೊಳ್ಳುತ್ತವೆ, ಎರಡು ದಿನಗಳು ಎಂದಿಗೂ ಒಂದೇ ಆಗಿರುವುದಿಲ್ಲ ಎಂದು ಅವರು ಹೇಳಿದರು. ವಿಷಯ ಮತ್ತು ಸೃಜನಶೀಲತೆಯಲ್ಲಿನ ಈ ನಿರಂತರ ಬದಲಾವಣೆಯು ನಿಧಾನವಾಗಿ ಸಂಪಾದಕರನ್ನು ಚಲನಚಿತ್ರ ನಿರ್ದೇಶಕರನ್ನಾಗಿ ಪರಿವರ್ತಿಸುತ್ತದೆ, ಯಾವಾಗ ಮಾಹಿತಿಯನ್ನು ತಡೆಹಿಡಿಯಬೇಕು, ಯಾವಾಗ ಅದನ್ನು ಬಹಿರಂಗಪಡಿಸಬೇಕು ಮತ್ತು ನಿರೂಪಣಾ ಒತ್ತಡವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ತಿಳಿದಿರುವ ವ್ಯಕ್ತಿಯಾಗಿ ರೂಪುಗೊಳ್ಳುತ್ತಾರೆ ಎಂದರು.

ತೀವ್ರ ಆಸಕ್ತಿಯನ್ನು ಸೆಳೆದ ಒಂದು ವಿಭಾಗದಲ್ಲಿ, ಚಲನಚಿತ್ರವನ್ನು ”ಎಡಿಟಿಂಗ್ ಟೇಬಲ್ ಮೇಲೆ ತಯಾರಿಸಲಾಗುತ್ತದೆ’’ ಎಂಬ ವ್ಯಾಪಕವಾಗಿ ಬಳಸಲಾಗುವ ನಂಬಿಕೆಯ ಬಗ್ಗೆ ಅವರು ಮಾತನಾಡಿದರು. ಚಲನಚಿತ್ರವನ್ನು ಜೋಡಿಸುವ ವಿಕಸನ ಹಂತಗಳನ್ನು ಅವರು ವಿವರಿಸಿದರು, ಅಂದರೆ ಪ್ರತ್ಯೇಕ ಅನುಕ್ರಮಗಳನ್ನು ರಚಿಸುವುದರಿಂದ ಹಿಡಿದು ಪರಿವರ್ತನೆಗಳನ್ನು ನ್ಯಾವಿಗೇಟ್ ಮಾಡುವವರೆಗೆ ಮತ್ತು ಅಂತಿಮವಾಗಿ ಪೂರ್ಣ-ಉದ್ದದ ನಿರೂಪಣೆಯನ್ನು ರೂಪಿಸುವವರೆಗೆ ವಿವರಿಸಿದರು. 1998 ರ ಚಲನಚಿತ್ರ 'ದಿ ಟೆರರಿಸ್ಟ್' ನ ತುಣುಕುಗಳ ಮೂಲಕ, ಮೌನವು ಹೇಗೆ ಕಥೆ ಹೇಳುವ ಸಾಧನವಾಯಿತು ಎಂಬುದನ್ನು ಅವರು ಪ್ರದರ್ಶಿಸಿದರು. ಇದು ನಂತರ 'ವಾನಪ್ರಸ್ಥಂ' ನಂತಹ ಚಲನಚಿತ್ರಗಳನ್ನು ರೂಪಿಸಿದ ಆವಿಷ್ಕಾರವಾಗಿದೆ. ಪ್ರತಿಯೊಂದು ದೃಶ್ಯವು ಎಷ್ಟು ಸರಾಗವಾಗಿ ಹರಿಯಬೇಕು ಎಂದರೆ ಪ್ರೇಕ್ಷಕರು ಎಂದಿಗೂ ದೃಶ್ಯಗಳ ಕಡಿತಗಳನ್ನು ಗಮನಿಸುವುದಿಲ್ಲ ಎಂದು ಅವರು ವಿವರಿಸಿದರು.

ಸಮಾನಾಂತರ ನಿರೂಪಣೆಗಳು ಮತ್ತು ಬಹು-ಪಾತ್ರಗಳ ದೃಶ್ಯಗಳ ಕುರಿತು ಮಾತನಾಡಿದ ಅವರು ಭಾವನಾತ್ಮಕ ಸಮತೋಲನದ ಮಹತ್ವವನ್ನು ಒತ್ತಿ ಹೇಳಿದರು. ಪ್ರೇಕ್ಷಕರು ಮುಖ್ಯ ಕಥೆಯ ದೃಷ್ಟಿಯನ್ನು ಎಂದಿಗೂ ಕಳೆದುಕೊಳ್ಳಬಾರದು ಎಂದು ನೆನಪಿಸಿಕೊಟ್ಟರು. ಎಡಿಟರ್ ಆಗಾಗ್ಗೆ ಪ್ರದರ್ಶನಗಳನ್ನು ರಕ್ಷಿಸಿಕೊಳ್ಳಬೇಕು, ಆದರೆ ಆವುಗಳನ್ನು ಪ್ರದರ್ಶಿಸುವ ಮೂಲಕ ಅಲ್ಲ, ಆದರೆ ಕೆಲವೊಮ್ಮೆ ಕೆಟ್ಟ ಪ್ರದರ್ಶನಗಳನ್ನು ಎಚ್ಚರಿಕೆಯಿಂದ ಒಳಗೊಳ್ಳುವ ಮೂಲಕ ಅದನ್ನು ರಕ್ಷಿಸಬೇಕಾಗುತ್ತದೆ ಎಂದು ಅವರು ವಿವರಿಸಿದರು. ಒಂದು ಪಾತ್ರವು ಸತ್ಯವಾದ ನಡವಳಿಕೆಯಿಂದ ದೂರ ಸರಿದಾಗ ಅಥವಾ ನಕ್ಷತ್ರದಂತಹ ಸ್ಥಿತಿ ತಲುಪಿದಾಗ ಎಡಿಟಿಂಗ್ ನಲ್ಲಿ ಅದನ್ನು ನಿಧಾನವಾಗಿ ಸರಿಪಡಿಸಬೇಕು, ಪಾತ್ರದ ಸಮಗ್ರತೆಯನ್ನು ಹಾಗೆಯೇ ಉಳಿಸಿಕೊಳ್ಳುವ ರೀತಿಯಲ್ಲಿ ದೃಶ್ಯವನ್ನು ರೂಪಿಸಬೇಕು ಎಂದು ಅವರು ಹೇಳಿದರು

ವಿಕಸನಗೊಳ್ಳುತ್ತಿರುವ ಎಡಿಟಿಂಗ್ ಸಾಧನಗಳ ಕುರಿತು ಮಾತನಾಡುತ್ತಿದ್ದ  ಸೈಕತ್ ಸಂಭಾಷಣೆಯನ್ನುಮಾರ್ಡರೇಟರ್ ಕೃತಕ ಬುದ್ಧಿಮತ್ತೆ ಕಡೆಗೆ ತಿರುಗಿಸಿದರು, ಅಂತಹ ವ್ಯವಸ್ಥೆಯು ಮೊದಲು ಮಾಡಲು ಪ್ರಯತ್ನಿಸುವ ಕೆಲಸವೆಂದರೆ ಶ್ರೀಕರ್ ಪ್ರಸಾದ್ ಅವರ ‘ಶೈಲಿ’ ಯನ್ನು ನಕಲಿಸುವುದು ಎಂದರು. ಆಗ ಇಡೀ ಕೊಣೆ ನಗೆಯ ಅಲೆಯಲ್ಲಿ ತೇಲಿತು. ಮತ್ತು ಶ್ರೀಕರ್ ಸ್ಪಷ್ಟತೆಪಡಿಸುವ ಮೊದಲು ಸರಳ ನಗುವಿನೊಂದಿಗೆ ಪ್ರತಿಕ್ರಿಯಿಸಿದರು. ಕೃತಕ ಬುದ್ಧಿಮತ್ತೆ(ಎಐ) ಕೆಲಸದ ಯಾಂತ್ರಿಕ ಭಾಗಗಳನ್ನು ಖಂಡಿತವಾಗಿಯೂ ಸ್ವಾಧೀನಪಡಿಸಿಕೊಳ್ಳಬಹುದು, ಆದರೆ ಅದು ಭಾವನೆಯನ್ನು ಗ್ರಹಿಸಲು, ಬಡಿತವನ್ನು ಅನುಭವಿಸಲು ಅಥವಾ ಪ್ರವೃತ್ತಿಯಿಂದ ಕಡಿತವನ್ನು ನಿರ್ಧರಿಸಲು ಸಾಧ್ಯವಿಲ್ಲ. ತನಗೆ ಎಡಿಟಿಂಗ್  ಅಂತಃಪ್ರಜ್ಞೆಯಿಂದ ರೂಪುಗೊಂಡ ಕರಕುಶಲವಾಗಿ ಉಳಿದಿದೆ, ಯಾವುದೇ ಯಂತ್ರವು ಬದಲಾಯಿಸಲು ಸಾಧ್ಯವಿಲ್ಲ ಎಂದರು,

ತಾಳ್ಮೆ, ವಿಮರ್ಶೆಗೆ ಮುಕ್ತತೆ ಮತ್ತು ದೃಶ್ಯದ ಅಂತ್ಯವನ್ನು ರೂಪಿಸುವ ಜವಾಬ್ದಾರಿಯ ಕುರಿತು ಪ್ರತಿಬಿಂಬಗಳೊಂದಿಗೆ ಗೋಷ್ಠಿಯು ಮುಕ್ತಾಯಗೊಳ್ಳುವಾಗ ಶ್ರೀಕರ್ ಪ್ರಸಾದ್ ಸಿನಿಮಾವನ್ನು ಸಾಮಾಜಿಕ ಕಾಮೆಂಟ್, ಅಭಿವ್ಯಕ್ತಿ, ಹಿಂದೆ ಉಳಿದಿರುವ ಹೆಜ್ಜೆಗುರುತು ಎಂದು ವಿವರಿಸಿದರು. ಅವರಿಗೆ  ಕಥೆ ಹೇಳುವುದು ಕೇವಲ ಸೃಷ್ಟಿಯಲ್ಲ, ಅದು ಸಿದ್ಧಿಸಿದೆ.

ಕೊನೆಯಲ್ಲಿ, ಕಾರ್ಯಾಗಾರವು ಎಡಿಟಿಂಗ್ ಎಂದರೆ ಚಲನಚಿತ್ರವು ತನ್ನ ಸತ್ಯವನ್ನು ಕಂಡುಕೊಳ್ಳುವ ಸ್ಥಳ, ಏನನ್ನು ಸೇರಿಸಲಾಗುತ್ತದೆ ಎಂಬುದರ ಮೂಲಕ ಅಲ್ಲ, ಆದರೆ ಏನನ್ನು ಆಯ್ಕೆ ಮಾಡಲಾಗುತ್ತದೆ, ಸಂಸ್ಕರಿಸಲಾಗುತ್ತದೆ ಮತ್ತು ಸದ್ದಿಲ್ಲದೆ ಬಿಡಲಾಗುತ್ತದೆ ಎಂದು ತೋರಿಸಲಾಯಿತು.

ಐ ಎಫ್ ಎಫ್ ಕುರಿತು

1952 ರಲ್ಲಿ ಆರಂಭವಾದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ ಎಫ್ ಎಫ್ ಐ) ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಉತ್ಸವವಾಗಿ ಮುಂಚೂಣಿಯಲ್ಲಿ ನಿಂತಿದೆ. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯಡಿ ಬರುವ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್ ಎಫ್ ಡಿ ಸಿ) ಮತ್ತು ಗೋವಾ ರಾಜ್ಯ ಸರ್ಕಾರ, ಗೋವಾ ಮನರಂಜನಾ ಸೊಸೈಟಿ (ಇ ಎಸ್ ಜಿ) ಜಂಟಿಯಾಗಿ ಆಯೋಜಿಸಿರುವ ಈ ಉತ್ಸವವು ಜಾಗತಿಕ ಸಿನಿಮಾದ ಶಕ್ತಿ ಕೇಂದ್ರವಾಗಿ ಬೆಳೆದಿದೆ - ಅಲ್ಲಿ ಪುನಃಸ್ಥಾಪಿಸಲಾದ ಕ್ಲಾಸಿಕ್‌ಗಳು ದಿಟ್ಟ ಪ್ರಯೋಗಗಳನ್ನು ಒಳಗೊಂಡಿವೆ ಮತ್ತು ಕಲಾವಿದ ದಿಗ್ಗಜರು ಭಯವಿಲ್ಲದ ಮೊದಲ ಬಾರಿಗೆ ಬರುವವರೊಂದಿಗೆ ಜಾಗವನ್ನು ಹಂಚಿಕೊಳ್ಳುತ್ತಾರೆ. ಐಎಫ್ ಎಫ್ ಐ ನಿಜವಾಗಿಯೂ ಮಿಂಚುವಂತೆ ಮಾಡುವುದು ಅದರಲ್ಲಿನ ಅಂತಾರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್‌ಕ್ಲಾಸ್‌ಗಳು, ಗೌರವಗಳು ಮೊದಲಾದ ಅದ್ಭುತ ಸಮ್ಮಿಶ್ರಣಗಳು ಮತ್ತು ಅಧಿಕ ಶಕ್ತಿಯ ವೇವ್ಸ್ ಫಿಲ್ಮ್ ಬಜಾರ್, ಅಲ್ಲಿ ಕಲ್ಪನೆಗಳು, ಒಪ್ಪಂದಗಳು ಮತ್ತು ಸಹಯೋಗಗಳು ಹೊಸ ಎತ್ತರಕ್ಕೆ ಏರುತ್ತವೆ. ನವೆಂಬರ್ 20ರಿಂದ 28ರವರೆಗೆ ಗೋವಾದ ಬೆರಗುಗೊಳಿಸುವ ಕರಾವಳಿ ಹಿನ್ನೆಲೆಇರುವ ವೇದಿಕೆಯಲ್ಲಿ ಪ್ರದರ್ಶಿಸಲಾಗುತ್ತಿರುವ 56ನೇ ಆವೃತ್ತಿಯ ಚಲನಚಿತ್ರೋತ್ಸವದಲ್ಲಿ ನಾನಾ ಭಾಷೆಗಳ, ಪ್ರಕಾರಗಳ, ನಾವೀನ್ಯತೆಗಳ ಮತ್ತು ಧ್ವನಿಗಳ ಬೆರಗುಗೊಳಿಸುವ ವರ್ಣಪಟಲಕ್ಕೆ ಭರವಸೆ ನೀಡುವ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ- ಇದು ಜಾಗತಿಕ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ಸಂಭ್ರಮದ ಆಚರಣೆಯಾಗಿದೆ.

For more information, click on:

IFFI Website: https://www.iffigoa.org/

PIB’s IFFI Microsite: https://www.pib.gov.in/iffi/56/

PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F

X Handles: @IFFIGoa, @PIB_India, @PIB_Panaji

 

*****


Great films resonate through passionate voices. Share your love for cinema with #IFFI2025, #AnythingForFilms and #FilmsKeLiyeKuchBhi. Tag us @pib_goa on Instagram, and we'll help spread your passion! For journalists, bloggers, and vloggers wanting to connect with filmmakers for interviews/interactions, reach out to us at iffi.mediadesk@pib.gov.in with the subject line: Take One with PIB.


रिलीज़ आईडी: 2194068   |   Visitor Counter: 26