iffi banner

ಬರವಣಿಗೆ ಒಂದು ಕಲ್ಪಿತ ಭಾವನೆ, ಸಂಕಲನ ಒಂದು ಅನುಭವಿ ಭಾವನೆ: ರಾಜು ಹಿರಾನಿ


ವಿಷಯವು ಚಿತ್ರದ ಆತ್ಮವಾಗಿದ್ದರೆ, ಸಂಘರ್ಷವು ಕಥೆಯಲ್ಲಿ ಆಮ್ಲಜನಕವಾಗುತ್ತದೆ: ಹಿರಾನಿ

ಇಂದು ಐ.ಎಫ್‌.ಎಫ್‌.ಐ ನಲ್ಲಿ, ದೀಪಗಳು ಮಂದವಾದವು, ಮನಸ್ಸುಗಳು ತೆರೆದವು ಮತ್ತು ಸೃಜನಶೀಲತೆ ನರ್ತಿಸಿತು. ಏಕೆಂದರೆ ಜನಸಮೂಹವು ಕಾರ್ಯಾಗಾರವನ್ನು ಸಿನಿಮೀಯ ಶಕ್ತಿ-ವರ್ಧಕದಂತೆ ಭಾವಿಸಿತು. ರಾಜು ಹಿರಾನಿ ಒಳಗೆ ಬಂದ ಕೂಡಲೇ ಕಲಾ ಅಕಾಡೆಮಿ ಸಭಾಂಗಣವು ಸಾಮಾನ್ಯವಾಗಿ ಬ್ಲಾಕ್‌ಬಸ್ಟರ್ ಶುಕ್ರವಾರಗಳಿಗೆ ಮೀಸಲಾಗಿರುವ ಸದ್ದಿನಿಂದ ತುಂಬಿತ್ತು. ಅವರು ಮುಗಿಸುವ ಹೊತ್ತಿಗೆ, ಬರಹಗಾರರು ಆತುರದಿಂದ ಬರೆಯುತ್ತಿದ್ದರು, ಸಂಪಾದಕರು ಉದ್ದೇಶಪೂರ್ವಕವಾಗಿ ತಲೆಯಾಡಿಸುತ್ತಿದ್ದರು ಮತ್ತು ಸಿನಿಪ್ರಿಯರು ಸ್ಫೂರ್ತಿ ಮತ್ತು ವಿಸ್ಮಯದ ನಡುವೆ ಎಲ್ಲೋ ತೇಲುತ್ತಿದ್ದರು.

ಅತ್ಯಂತ ಯಶಸ್ವಿ ಮತ್ತು ಪ್ರಸಿದ್ಧ ಚಲನಚಿತ್ರ ನಿರ್ದೇಶಕರ ಪಂಚ್ ಸಾಲುಗಳು ಸಿನಿಪ್ರೇಮಿಗಳ ಹೃದಯ ಮತ್ತು ಮನಸ್ಸಿನಲ್ಲಿ ಅಚ್ಚೊತ್ತಿದವು. "ಬರವಣಿಗೆ ಎಂದರೆ ಕಲ್ಪಿತ ಭಾವನೆ, ಸಂಕಲನ ಎಂದರೆ ಅನುಭವಿ ಭಾವನೆ. ಬರಹಗಾರ ಮೊದಲ ಕರಡನ್ನು ಬರೆಯುತ್ತಾನೆ, ಸಂಕಲನಕಾರ ಕೊನೆಯದನ್ನು ಬರೆಯುತ್ತಾನೆ. ವಿಷಯ ಚಿತ್ರದ ಆತ್ಮ, ಆದರೆ ಕಥೆಯಲ್ಲಿನ ಸಂಘರ್ಷವು ಆಮ್ಲಜನಕವಾಗುತ್ತದೆ." ಎಂದು ರಾಜು ಹಿರಾನಿ ಹೇಳಿದರು.

"ಚಲನಚಿತ್ರವನ್ನು ಎರಡು ಮೇಜುಗಳಲ್ಲಿ ತಯಾರಿಸಲಾಗುತ್ತದೆ - ಬರವಣಿಗೆ ಮತ್ತು ಸಂಕಲನ: ಒಂದು ದೃಷ್ಟಿಕೋನ" ಎಂಬ ವಿಷಯದ ಕುರಿತು ಮಾಸ್ಟರ್‌ ಕ್ಲಾಸ್-ಕಮ್-ಕಾರ್ಯಾಗಾರದಲ್ಲಿ ಮಾತನಾಡಿದ ಹಿರಾನಿ, ಬರವಣಿಗೆಯ ಪ್ರಕ್ರಿಯೆಯ ಸಾರವನ್ನು ಕಾವ್ಯಾತ್ಮಕ ಸರಳತೆಯೊಂದಿಗೆ ವಿವರಿಸುವ ಮೂಲಕ ಪ್ರಾರಂಭಿಸಿದರು: "ಬರವಣಿಗೆ ಕನಸು ಕಾಣುವ ಸ್ಥಳ" ಎಂದರು. ಬರಹಗಾರನು ಮಿತಿಯಿಲ್ಲದ ಸ್ವಾತಂತ್ರ್ಯವನ್ನು ಹೇಗೆ ಆನಂದಿಸುತ್ತಾನೆ ಎಂಬುದನ್ನು ಅವರು ವಿವರಿಸಿದರು - ಅಪರಿಮಿತ ಆಕಾಶಗಳು, ಪರಿಪೂರ್ಣ ಸೂರ್ಯೋದಯಗಳು, ದೋಷರಹಿತ ನಟರು, ಬಜೆಟ್‌ ಅಥವಾ ಯಾವುದೇ ನಿರ್ಬಂಧಗಳಿಲ್ಲದಿರುವುದು. ಆದರೆ ಈ ಕಲ್ಪಿತ ದೃಶ್ಯಗಳು ಸಂಕಲನಕಾರರ ಮೇಜನ್ನು ತಲುಪಿದ ಕ್ಷಣ, ವಾಸ್ತವವು ಅನಿವಾರ್ಯವಾಗಿ ಅವುಗಳನ್ನು ಪರಿವರ್ತಿಸುತ್ತದೆ. "ಒಂದು ಪಾತ್ರವು ನಿಜವಾಗಿಯೂ ಏನನ್ನಾದರೂ ಬಯಸಿದಾಗ ಮಾತ್ರ ಒಂದು ಚಲನಚಿತ್ರ ಪ್ರಾರಂಭವಾಗುತ್ತದೆ" ಎಂದು ಹಿರಾನಿ ಹೇಳಿದರು. ಆ ಬಯಕೆ ನಿರೂಪಣೆಯ ಹೃದಯ ಬಡಿತವಾಗುತ್ತದೆ ಮತ್ತು ಸಂಘರ್ಷವು ಆಮ್ಲಜನಕವಾಗುತ್ತದೆ, ಅದಿಲ್ಲದೆ, ಯಾವುದೂ ಉಸಿರಾಡುವುದಿಲ್ಲ" ಎಂದು ಅವರು ಹೇಳಿದರು.

ಅವರು ಬರಹಗಾರರು ಕಥೆಗಳನ್ನು ತಮ್ಮ ಅನುಭವಗಳ ಆಧಾರದ ಮೇಲೆ ನೆಲೆಗೊಳಿಸಬೇಕೆಂದು ಅವರು ಒತ್ತಾಯಿಸಿದರು. "ಒಬ್ಬ ಒಳ್ಳೆಯ ಬರಹಗಾರ ಜೀವನದಿಂದ ಸ್ಫೂರ್ತಿ ಪಡೆಯಬೇಕು. ನೈಜ ಅನುಭವಗಳು ಕಥೆಗಳನ್ನು ಶಕ್ತಿಯುತ, ವಿಶಿಷ್ಟ ಮತ್ತು ಆಸಕ್ತಿದಾಯಕವಾಗಿಸುತ್ತದೆ" ಎಂದು ಅವರು ಹೇಳಿದರು. ಕಥೆಯನ್ನು ನಾಟಕದಲ್ಲಿ ಅದೃಶ್ಯವಾಗಿರುವಂತೆ ಹೆಣೆಯಬೇಕು ಮತ್ತು ಚಿತ್ರದ ಆತ್ಮವಾದ ವಿಷಯವು ಪ್ರತಿ ದೃಶ್ಯದ ಕೆಳಗೆ ನಿರಂತರವಾಗಿ ಪಿಸುಗುಟ್ಟುತ್ತಿರಬೇಕು ಎಂದು ಅವರು ಪ್ರೇಕ್ಷಕರಿಗೆ ನೆನಪಿಸಿದರು.

ತಮ್ಮ ಮೊದಲ ಪ್ರೀತಿ - ಸಂಕಲನ - ಬಗ್ಗೆ ಪ್ರೀತಿಯಿಂದ ಮಾತನಾಡುತ್ತಾ, ಹಿರಾನಿ ಸಂಕಲನಕಾರರ ಆಳವಾದ ಗುಪ್ತ ಶಕ್ತಿಯ ಬಗ್ಗೆ ಮಾತನಾಡಿದರು. "ತುಣುಕುಗಳು ಸಂಕಲನದ ಮೇಜನ್ನು ತಲುಪಿದಾಗ, ಎಲ್ಲವೂ ಬದಲಾಗುತ್ತದೆ. ಸಂಕಲನಕಾರರು ಕಥೆಯನ್ನು ಹೊಸ ರೀತಿಯಲ್ಲಿ ಹೇಳುತ್ತಾರೆ. ಸಂಕಲನಕಾರ ತೆರೆಮರೆಯ ನಾಯಕ. ಅವರ ಕೆಲಸವು ಅದೃಶ್ಯವಾಗಿದೆ, ಆದರೆ ಅದು ಚಿತ್ರವನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುತ್ತದೆ" ಎಂದು ಅವರು ಹೇಳಿದರು.

ಸಂಕಲನಕಾರರ ಟೂಲ್‌ಕಿಟ್ ಅನ್ನು ವಿವರಿಸುತ್ತಾ, ಅವರು ಸಂಕಲನದ ಘಟಕವು ವಿಭಿನ್ನ ಸಂದರ್ಭದಲ್ಲಿ ಇರಿಸಲಾದ ಒಂದೇ ಶಾಟ್ ಅರ್ಥವನ್ನು ಸಂಪೂರ್ಣವಾಗಿ ಪರಿವರ್ತಿಸುತ್ತದೆ ಎಂದು ವಿವರಿಸಿದರು. "ಎಷ್ಟೊಂದು ಶಕ್ತಿಶಾಲಿ," ಎಂದು ಅವರು ಮುಗುಳ್ನಕ್ಕರು, "ಒಬ್ಬ ಸಂಕಲನಕಾರ ಕಥೆಯನ್ನು 180 ಡಿಗ್ರಿಗಳಷ್ಟು ತಿರುಗಿಸಬಹುದು." ಎಂದು ಹೇಳಿದರು.

ಸಿನಿಮಾದ ಆರಂಭಿಕ ಪ್ರವರ್ತಕರನ್ನು ಉಲ್ಲೇಖಿಸಿದ ಹಿರಾನಿ, ಡಿ.ಡಬ್ಲ್ಯೂ. ಗ್ರಿಫಿತ್ ಅವರ "ಒಬ್ಬ ಉತ್ತಮ ಸಂಕಲನಕಾರ ನಿಮ್ಮ ಭಾವನೆಗಳೊಂದಿಗೆ ಆಟವಾಡುತ್ತಾನೆ" ಎಂಬ ಪ್ರಸಿದ್ಧ ಚಿಂತನೆಯನ್ನು ನೆನಪಿಸಿಕೊಂಡರು. "ಬರಹಗಾರ ಮೊದಲ ಕರಡನ್ನು ಬರೆಯುತ್ತಾನೆ. ಸಂಕಲನಕಾರ ಕೊನೆಯದನ್ನು ಬರೆಯುತ್ತಾನೆ" ಎಂದು ಹೇಳಿದರು.

"ಪ್ರತಿಯೊಂದು ಪಾತ್ರವೂ ನಾಯಕರಷ್ಟೇ ಬಲವಾದ ದೃಷ್ಟಿಕೋನವನ್ನು ಹೊಂದಿರಬೇಕು" ಎಂದು ಹಿರಾನಿ ಒತ್ತಿ ಹೇಳಿದರು. "ಪ್ರತಿಯೊಂದು ಪಾತ್ರವೂ ತಾವು ಸರಿ ಎಂದು ನಂಬುತ್ತದೆ. ಕಥೆಯ ಶಕ್ತಿ ಅಲ್ಲಿಂದ ಬರುತ್ತದೆ. ಈ ಸತ್ಯಗಳ ಘರ್ಷಣೆ, ದೃಷ್ಟಿಕೋನಗಳ ನಡುವಿನ ಈ ಉದ್ವಿಗ್ನತೆಯೇ ನಿರೂಪಣೆಗೆ ಮಿಡಿತವನ್ನು ನೀಡುತ್ತದೆ" ಎಂದು ಅವರು ಹೇಳಿದರು.

ಈ ಒಳನೋಟವುಳ್ಳ ಸಂವಾದದಲ್ಲಿ ಭಾಗವಹಿಸಿದ ಖ್ಯಾತ ಚಿತ್ರಕಥೆಗಾರ ಅಭಿಜತ್ ಜೋಶಿ, ಕಥೆ ಹೇಳುವಲ್ಲಿ ನಿಜ ಜೀವನದ ನೆನಪುಗಳ ಪ್ರಬಲ ಶಕ್ತಿಯ ಬಗ್ಗೆ ಮಾತನಾಡಿದರು. ಕೆಲವು ಕ್ಷಣಗಳು - ತಮಾಷೆಯಾಗಿರಬಹುದು, ಹೃದಯವಿದ್ರಾವಕವಾಗಿರಬಹುದು ಅಥವಾ ಆಘಾತಕಾರಿಯಾಗಿರಬಹುದು - ದಶಕಗಳವರೆಗೆ ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿರುತ್ತವೆ ಎಂದು ಅವರು ವಿವರಿಸಿದರು. ಈ ನೆನಪುಗಳಲ್ಲಿ ಹಲವು ನಂತರ 3 ಈಡಿಯಟ್ಸ್‌ ನಲ್ಲಿ ಕಾಣಿಸಿಕೊಂಡವು, ಇದರಲ್ಲಿ ಪ್ರಸಿದ್ಧ ವಿದ್ಯುತ್ ಆಘಾತದ ಜೋಕ್ ಮತ್ತು ಅನೇಕ ಪಾತ್ರಗಳ ಸಂಕೀರ್ಣ ವಿವರಗಳು ಹಲವಾರು ವರ್ಷಗಳು ಜನರನ್ನು ಗಮನಿಸಿ ಕಲಿತವುಗಳು ಎಂದು ಅವರು ಹೇಳಿದರು.

ಪ್ರತಿಯೊಂದು ಪಾತ್ರಕ್ಕೂ ಬಲವಾದ ಬಯಕೆ ಇರಬೇಕು, ಸಂಘರ್ಷವು ಸಿನೆಮಾದ ಆಮ್ಲಜನಕವಾಗಿದೆ ಮತ್ತು ಎರಡು ನಿಜವಾದ, ವಿಭಿನ್ನ ವಾಸ್ತವಗಳು ಡಿಕ್ಕಿ ಹೊಡೆದಾಗ ಅತ್ಯಂತ ಬಲಿಷ್ಠವಾದ ಡ್ರಾಮಾ ಸೃಷ್ಟಿಯಾಗುತ್ತದೆ ಎಂದು ಹೇಳಿದ ಜೋಶಿ ಚಿತ್ರಕಥೆಯ ಶಾಶ್ವತ ಸತ್ಯಗಳೊಂದಿಗೆ ಮುಕ್ತಾಯಗೊಳಿಸಿದರು.

ಐ.ಎಫ್.ಎಫ್.ಐ ಬಗ್ಗೆ

1952ರಲ್ಲಿ ಪ್ರಾರಂಭವಾದ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ ಎಫ್ ಎಫ್ ಐ) ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಉತ್ಸವವಾಗಿದೆ. ಇದನ್ನು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್‌ ಎಫ್‌ ಡಿ ಸಿ), ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಮತ್ತು ಗೋವಾ ಸರ್ಕಾರದ ಗೋವಾ ಮನರಂಜನಾ ಸೊಸೈಟಿ ಜಂಟಿಯಾಗಿ ಆಯೋಜಿಸುತ್ತವೆ. ಈ ಉತ್ಸವವು ಜಾಗತಿಕ ಸಿನಿಮಾ ಶಕ್ತಿ ಕೇಂದ್ರವಾಗಿ ಬೆಳೆದಿದೆ - ಅಲ್ಲಿ ಪುನಃಸ್ಥಾಪಿಸಲಾದ ಕ್ಲಾಸಿಕ್‌ ಗಳು ದಿಟ್ಟ ಪ್ರಯೋಗಗಳನ್ನು ಸಂಧಿಸುತ್ತವೆ ಮತ್ತು ಹೆಸರಾಂತ ಕಲಾವಿದರು ಮೊದಲ ಬಾರಿಯ ಧೈರ್ಯಶಾಲಿಗಳೊಂದಿಗೆ ಜಾಗವನ್ನು ಹಂಚಿಕೊಳ್ಳುತ್ತಾರೆ. ಐ.ಎಫ್.ಎಫ್.ಐ ಅನ್ನು ನಿಜವಾಗಿಯೂ ಅದ್ಭುತವಾಗಿಸುವುದು ಅದರ ಅದ್ಭುತವಾದ ಸಮ್ಮಿಲನಗಳು - ಅಂತಾರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್‌ಕ್ಲಾಸ್‌ ಗಳು, ಗೌರವಗಳು ಮತ್ತು ವೇವ್ಸ್‌ ಫಿಲ್ಮ್ ಬಜಾರ್, ಅಲ್ಲಿ ಕಲ್ಪನೆಗಳು, ವ್ಯವಹಾರಗಳು ಮತ್ತು ಸಹಯೋಗಗಳು ಹುಟ್ಟುತ್ತವೆ. ಗೋವಾದ ಬೆರಗುಗೊಳಿಸುವ ಕಡಲತೀರದ ಹಿನ್ನೆಲೆಯಲ್ಲಿ ನವೆಂಬರ್ 20 ರಿಂದ 28 ರವರೆಗೆ ನಡೆಯುವ 56ನೇ ಆವೃತ್ತಿಯು ಬೆರಗುಗೊಳಿಸುವ ಭಾಷೆಗಳು, ಪ್ರಕಾರಗಳು, ನಾವೀನ್ಯತೆಗಳು ಮತ್ತು ಧ್ವನಿಗಳ ಒಂದು ಅದ್ಭುತ ಶ್ರೇಣಿಯನ್ನು ಆಚರಿಸುವ ಭರವಸೆ ನೀಡುತ್ತದೆ - ಇದು ವಿಶ್ವ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ತಲ್ಲೀನಗೊಳಿಸುವ ಆಚರಣೆಯಾಗಿದೆ.

ಹೆಚ್ಚಿನ ಮಾಹಿತಿಗಾಗಿ, ಕ್ಲಿಕ್ ಮಾಡಿ:

IFFI Website: https://www.iffigoa.org/

PIB’s IFFI Microsite: https://www.pib.gov.in/iffi/56/

PIB IFFIWood Broadcast Channel:  https://whatsapp.com/channel/0029VaEiBaML2AU6gnzWOm3F

X Handles: @IFFIGoa, @PIB_India, @PIB_Panaji

 

*****


Great films resonate through passionate voices. Share your love for cinema with #IFFI2025, #AnythingForFilms and #FilmsKeLiyeKuchBhi. Tag us @pib_goa on Instagram, and we'll help spread your passion! For journalists, bloggers, and vloggers wanting to connect with filmmakers for interviews/interactions, reach out to us at iffi.mediadesk@pib.gov.in with the subject line: Take One with PIB.


Release ID: 2193887   |   Visitor Counter: 2