ಪ್ರಧಾನ ಮಂತ್ರಿಯವರ ಕಛೇರಿ
ಭವಿಷ್ಯಕ್ಕೆ ಸಿದ್ಧವಾಗಿರುವ ಆರ್ಥಿಕತೆಯನ್ನು ರೂಪಿಸುವ ಪರಿವರ್ತನಾತ್ಮಕ ಕಾರ್ಮಿಕ ಸುಧಾರಣೆಗಳನ್ನು ವಿವರಿಸುವ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ
प्रविष्टि तिथि:
24 NOV 2025 2:33PM by PIB Bengaluru
ಭವಿಷ್ಯಕ್ಕೆ ಸಿದ್ಧವಾಗಿರುವ ಆರ್ಥಿಕತೆಯನ್ನು ರೂಪಿಸುತ್ತಿರುವ ಸರ್ಕಾರದ ಪರಿವರ್ತನಾತ್ಮಕ ಕಾರ್ಮಿಕ ಸುಧಾರಣೆಗಳನ್ನು ಉಲ್ಲೇಖಿಸುವ, ವಿಶ್ವಾಸಾರ್ಹ ಜಾಗತಿಕ ಪಾಲುದಾರನಾಗಿ ಭಾರತ ಹೊರಹೊಮ್ಮುವುದನ್ನು ಸ್ಪಷ್ಟವಾಗಿ ಪುನರುಚ್ಛರಿಸುವ ಲೇಖನವನ್ನು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹಂಚಿಕೊಂಡಿದ್ದಾರೆ.
ಇತ್ತೀಚಿನ ತಮ್ಮ ಲೇಖನವೊಂದರಲ್ಲಿ, ಕೇಂದ್ರ ಸಚಿವರಾದ ಶ್ರೀ ಡಾ. ಮನ್ಸುಖ್ ಮಾಂಡವಿಯಾ ಅವರು ಈ ಸುಧಾರಣೆಗಳ ದೂರಗಾಮಿ ಪರಿಣಾಮದ ಬಗ್ಗೆ ಪ್ರತಿಬಿಂಬಿಸಿದ್ದಾರೆ, ಇದು ಅನುಸರಣೆಯನ್ನು ಸರಳಗೊಳಿಸಿ, ಮಹಿಳಾ ಕಾರ್ಮಿಕರನ್ನು ಸಬಲೀಕರಣಗೊಳಿಸುತ್ತದೆ ಮತ್ತು ಜಾಗತಿಕ ಮೌಲ್ಯ ಸರಪಳಿಯಲ್ಲಿ ಭಾರತದ ಸ್ಥಾನವನ್ನು ಬಲಪಡಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ಪ್ರಧಾನ ಮಂತ್ರಿಯವರ ಕಛೇರಿಯು ಎಕ್ಸ್ ಖಾತೆಯಲ್ಲಿ ಹೀಗೆ ಪೋಸ್ಟ್ ಮಾಡಿದೆ:
"ವಿಶ್ವಾಸಾರ್ಹ ಜಾಗತಿಕ ಪಾಲುದಾರನಾಗಿ ಭಾರತದ ಬೆಳವಣಿಗೆಯನ್ನು ಜಗತ್ತು ಒಪ್ಪಿಕೊಂಡಿದೆ. ಸರ್ಕಾರದ ಹೊಸ ಕಾರ್ಮಿಕ ಸುಧಾರಣೆಗಳು ಭವಿಷ್ಯಕ್ಕೆ ಸಿದ್ಧವಾಗಿರುವ ಆರ್ಥಿಕತೆಗೆ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ, ಅನುಸರಣೆಯನ್ನು ಸರಳಗೊಳಿಸುವುದು, ಮಹಿಳಾ ಕಾರ್ಮಿಕರನ್ನು ಸಬಲೀಕರಣಗೊಳಿಸುವುದು ಮತ್ತು ಜಾಗತಿಕ ಮೌಲ್ಯ ಸರಪಳಿಯಲ್ಲಿ ಭಾರತದ ಸ್ಥಾನವನ್ನು ಬಲಪಡಿಸುತ್ತದೆ!''
''ಕೇಂದ್ರ ಸಚಿವರಾದ ಡಾ. @mansukhmandviya ಅವರ ಒಳನೋಟವುಳ್ಳ ಲೇಖನದ ಮೂಲಕ ಇದನ್ನು ಮನದಟ್ಟುಮಾಡಿಕೊಳ್ಳಿ."
****
(रिलीज़ आईडी: 2193803)
आगंतुक पटल : 4