ಲತಾ ಮಂಗೇಶ್ಕರ್ ಅವರ ಮಹಾನ್ ಪರಂಪರೆಯನ್ನು ಗೌರವಿಸಿದ ಶ್ರೀ ವಿಶಾಲ್ ಭಾರದ್ವಾಜ್ ಮತ್ತು ಬಿ. ಶ್ರೀ ಅಜನೀಶ್ ಲೋಕನಾಥ್: ಎರಡು ಲೋಕಗಳು, ಒಂದು ಲಯ
ಶ್ರೀ ವಿಶಾಲ್ ಭಾರದ್ವಾಜ್ ಅವರ ಸಂಗೀತದ ಲಘು ಉಪಾಖ್ಯಾನಗಳು ಮತ್ತು ಲತಾ ಅವರ ಕುರಿತು ಹೃದಯಸ್ಪರ್ಶಿ ನೆನಪುಗಳು ಪ್ರೇಕ್ಷಕರನ್ನು ಮೋಡಿ ಮಾಡಿದವು
ಜಾನಪದ ಸಂಗೀತದಲ್ಲಿನ ತಮ್ಮ ಅನುಭವಗಳೊಂದಿಗೆ ಶ್ರೀ ಅಜನೀಶ್ ಅವರು ಎಲ್ಲರನ್ನೂ ಆಕರ್ಷಿಸಿದರು
"ದಿ ರಿದಮ್ಸ್ ಆಫ್ ಇಂಡಿಯಾ: ಫ್ರಮ್ ದಿ ಹಿಮಾಲಯಸ್ ಟು ದಿ ಡೆಕ್ಕನ್" ಎಂಬ ಶೀರ್ಷಿಕೆಯಲ್ಲಿ ಐ.ಎಫ್.ಎಫ್.ಐ.ನಲ್ಲಿ ಜರುಗಿದ ವಾರ್ಷಿಕ ಲತಾ ಮಂಗೇಶ್ಕರ್ ಅವರ ಸ್ಮಾರಕ ಭಾಷಣವು ವಿಶೇಷ ಮಹತ್ವ ಪಡೆದುಕೊಂಡಿತು. ಹಳೆ ನೆನಪು, ಮಧುರ ಮತ್ತು ಸೃಷ್ಟಿಯ ಮಾಂತ್ರಿಕತೆಯನ್ನು ಒಟ್ಟಿಗೆ ಹೆಣೆಯುವ ರೋಮಾಂಚಕ ಸಂಗೀತ ಪ್ರಯಾಣದಂತೆ ಪ್ರೇಕ್ಷಕರ ಮನ ತೆರೆದುಕೊಂಡಿತು. ವಿಮರ್ಶಕ ಶ್ರೀ ಸುಧೀರ್ ಶ್ರೀನಿವಾಸ್ ಅವರು ಸಂಗೀತ ಸಂಯೋಜಕರಾದ ಶ್ರೀ ವಿಶಾಲ್ ಭಾರದ್ವಾಜ್ ಮತ್ತು ಶ್ರೀ ಬಿ. ಅಜನೀಶ್ ಲೋಕನಾಥ್ ಅವರುಗಳನ್ನು ತಮ್ಮ ಸಂಭಾಷಣೆಯಲ್ಲಿ ಮತ್ತು ಸಂವಾದವನ್ನು ಮುನ್ನಡೆಸುತ್ತಾ, ಅಧಿವೇಶನವು ಪ್ರೇಕ್ಷಕರಿಗೆ ಎರಡು ವಿಶಿಷ್ಟ ಸಂಗೀತ ಮನಸ್ಸುಗಳು ತಮ್ಮ ಸೃಜನಶೀಲ ಪ್ರಪಂಚಗಳನ್ನು ತೆರೆಯುವುದನ್ನು ವೀಕ್ಷಿಸುವ ಅಪರೂಪದ ಅವಕಾಶವನ್ನು ಮಾಡಿಕೊಟ್ಟಿತು.
ಚಲನಚಿತ್ರ ನಿರ್ಮಾಪಕ ಶ್ರೀ ರವಿ ಕೊಟ್ಟಾರಕ್ಕರ ಅವರು ಭಾಷಣಕಾರರನ್ನು ಸನ್ಮಾನಿಸುತ್ತಿದ್ದಂತೆ ಸಂಜೆ ಬೆಚ್ಚಗಿನ ಟಿಪ್ಪಣಿಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು, ಸಂಗೀತವು ನಮ್ಮನ್ನು ಪುಳಕಿತಗೊಳಿಸಿ ಮೇಲಕ್ಕೆತ್ತುವ ಮತ್ತು ಒಟ್ಟಿಗೆ ಬಂಧಿಸುವ ಶಕ್ತಿ ಹೊಂದಿದೆ ಎಂದು ಅವರು ಹೇಳಿದರು. ಅವರ ಮಾತುಗಳು ನಿಧಾನವಾಗಿ ವೇದಿಕೆಯ ಹಾಗೂ ಸಭಾಗೃಹದ ಸಮಾನ ಭಾಗಗಳಲ್ಲಿ ಚಿಂತನಶೀಲ, ಹಾಸ್ಯಮಯ ಮತ್ತು ಆಳವಾದ ಸಂಗೀತಮಯ ಸಂಭಾಷಣೆಗೆ ಕಾರ್ಯಕ್ರಮ ಪ್ರಾರಂಭವಾಗಲು ನಾಂದಿ ಹಾಡಿದವು.

ಮೆಚ್ಚುಗೆ, ಪ್ರಭಾವ ಮತ್ತು ಐಕಾನಿಕ್ ಥೀಮ್ ಗಳು
ಶ್ರೀ ಅಜನೀಶ್ ಅವರಿಂದು "'ಕಾಂತಾರ' ಸಂಯೋಜಕರಿಗಿಂತ ಹೆಚ್ಚಿನವರಾಗಿದ್ದಾರೆ" ಮತ್ತು ನನ್ನ ಮತ್ತು ಶ್ರೀ ವಿಶಾಲ್ ನಡುವಿನ ಸ್ಥಳದಲ್ಲಿ "ಭಾರತೀಯ ಸಂಗೀತದ ಭೂತ, ವರ್ತಮಾನ ಮತ್ತು ಭವಿಷ್ಯ" ಅಡಗಿದೆ ಎಂದು ವಿಮರ್ಶಕ ಶ್ರೀ ಸುಧೀರ್ ಶ್ರೀನಿವಾಸ್ ಅವರು ತಕ್ಷಣವೇ ಪೂರಕ ಧ್ವನಿಯನ್ನು ಹೊಂದಿಸಿ, ಪ್ರೇಕ್ಷಕರಿಗೆ ಹಿಂದಿ ಹಾಗೂ ಇಂದಿನ ಸಂಗೀತವನ್ನು ನೆನಪಿಸಿದರು. ಅಲ್ಲಿಂದ, ಚರ್ಚೆಯು ಮುಂದುವರಿದು, ದೀರ್ಘಕಾಲದಿಂದ ಪರಸ್ಪರರ ಕೆಲಸವನ್ನು ಮೆಚ್ಚಿಕೊಂಡಿರುವ ಇಬ್ಬರು ಕಲಾವಿದರ ನಡುವಿನ ಹೃತ್ಪೂರ್ವಕ ಸಂವಹನದ ವಿನಿಮಯವಾಗಿ ಅರಳಿತು.
ಶ್ರೀ ವಿಶಾಲ್ ಅವರು ಮೊದಲು ಮಾತನಾಡಿದರು. ಹಾಗೂ, 'ಕಾಂತಾರ' ಥೀಮ್ ಅನ್ನು "ಇದುವರೆಗೆ ಸಂಯೋಜಿಸಲಾದ ಅತ್ಯುತ್ತಮ ಚಲನಚಿತ್ರ ಥೀಮ್ ಗಳಲ್ಲಿ ಒಂದಾಗಿದೆ" ಎಂದು ಹೇಳಿದರು ಮತ್ತು ಅದನ್ನು ಮನಸಾರೆ ಒಪ್ಪಿಕೊಂಡರು. ಅದರ ಹಿಂದಿನ ಸಂಯೋಜಕನನ್ನು ಹುಡುಕಲು ಅವರನ್ನು ಒತ್ತಾಯಿಸಲಾಯಿತು. ಆಗ, ಶ್ರೀ ಅಜನೀಶ್ ಅವರು ಮುಗುಳು ನಗು ಮತ್ತು ನೆನಪಿನೊಂದಿಗೆ ಪ್ರತಿಕ್ರಿಯಿಸಿದರು: 'ಮಾಚಿಸ್,' ಚಪ್ಪಾ ಚಪ್ಪಾ, ಮತ್ತು ಬಾಲ್ಯದಿಂದಲೂ ಅವರನ್ನು ರೂಪಿಸಿದ ಶ್ರೀ ವಿಶಾಲ್ ಅವರ ಸಂಗೀತದ ಸ್ಪಷ್ಟವಾದ ಲಯಬದ್ಧ "ಸ್ವಿಂಗ್"… ಹಾಗೂ ಶ್ರೀ ಅಜನೀಶ್ ಅವರು ಸಂತೋಷಗೊಂಡ ಪ್ರೇಕ್ಷಕರಿಗೆ ಸ್ವಲ್ಪ ಶ್ರೀ ವಿಶಾಲ್ ಅವರ ಲಯವನ್ನು ಮನದಲ್ಲಿ ಗುನುಗಿದರು.
ಸಂಭಾಷಣೆ ಮುಂದುವರಿಯುತ್ತಾ, 'ಪಾನಿ ಪಾನಿ ರೇ'ಗೆ ಹೋದಾಗ, ವಿಷಯ ಶ್ರೀ ವಿಶಾಲ್ ಅವರ ಹತ್ತಿರ ಸರಿಯಿತು. ನೀರಿನ ಸದ್ದು ಮತ್ತು ನದಿ ದಂಡೆಯ ಮೌನವು ಹಾಡಿನ ಆತ್ಮವನ್ನು ಹೇಗೆ ವ್ಯಾಖ್ಯಾನಿಸುತ್ತದೆ ಎಂಬುದನ್ನು ಶ್ರೀ ವಿಶಾಲ್ ಅವರು ವಿವರಿಸಿದರು. ಲತಾ ಮಂಗೇಶ್ಕರ್ ಅವರ ಸಹಜ ಪರಿಪೂರ್ಣತೆಯನ್ನು, ಪ್ರತಿ ಸ್ವರವನ್ನು ಅವರು ನೆನಪಿಸಿಕೊಂಡರು, ಒಂದೇ ಟೇಕ್ ನಲ್ಲಿ ಹಾಡಿದರು ಮತ್ತು ನೀರಿನ ಹರಿವನ್ನು ಪ್ರತಿಬಿಂಬಿಸಲು ರಾಗದಲ್ಲಿ ಹೊಂದಾಣಿಕೆಗಳನ್ನು ಸಹ ಸೂಚಿಸಿದರು ಎಂದು ಅವರು ಲತಾಜಿ ಅವರನ್ನು ನೆನಪಿಸಿಕೊಂಡರು. "ಅವರು ಕೇವಲ ಗಾಯಕಿಯಾಗಿರಲಿಲ್ಲ" ಎಂದು ಅವರು ಹೇಳಿದರು. "ಅವರು ತಮ್ಮದೇ ಆದ ಹಕ್ಕಿನಲ್ಲಿ ಸ್ವಸಂಯೋಜಕರಾಗಿದ್ದರು."

ಸಂಯೋಜಕರ ಮನಸ್ಸಿನೊಳಗೆ
ನಂತರ ಶ್ರೀ ಅಜನೀಶ್ ಅವರು ತಮ್ಮದೇ ಆದ ವಿಲಕ್ಷಣ ಪ್ರಕ್ರಿಯೆಯ ಬಗ್ಗೆ ಒಂದು ನೋಟವನ್ನು ನೀಡಿದರು. 'ಅಯ್ಯಯ್ಯೋ' ಮತ್ತು 'ಅಬ್ಬಬ್ಬಾ' ನಂತಹ ಅಭಿವ್ಯಕ್ತಿಶೀಲ ಉಚ್ಚಾರಾಂಶಗಳ ಮೂಲಕ ಸಾಹಿತ್ಯ ಬರುವ ಮೊದಲು ಕಾಣಬಹುದಾದ ಭಾವನೆಗಳನ್ನು ತಿಳಿಸಲು ಅವರ ರಾಗಗಳಲ್ಲಿ ಹೇಗೆ ಸ್ವರ – ಲಯ ನುಸುಳುತ್ತವೆ ಎಂಬುದರ ಕುರಿತು ಶ್ರೀ ಅಜನೀಶ್ ಅವರು ಮಾತನಾಡಿದರು. ನಿರ್ದೇಶಕರು, ಯಾವಾಗಲೂ ಅವುಗಳನ್ನು ಉಳಿಸಿಕೊಳ್ಳಲು ಒತ್ತಾಯಿಸುತ್ತಾರೆ. ಬಿಡುಗಡೆಗೆ 20 ದಿನಗಳ ಮೊದಲು 'ವರಾಹರೂಪಂ' ಸಂಯೋಜನೆಯ ಒತ್ತಡದಿಂದ ತುಂಬಿದ ಕೊನೆಯ ದಿನಗಳ ಬಗ್ಗೆ ಅವರ ನೀಡಿದ ಉಪಾಖ್ಯಾನ ಪ್ರೇಕ್ಷಕರಿಂದ ಬಹಳಷ್ಟು ಮನರಂಜನಾತ್ಮಕ ಪ್ರತಿಕ್ರಿಯೆಗಳನ್ನು ಪಡೆಯಿತು.
ಶ್ರೀ ಸುಧೀರ್ ಅವರು ಸಂಗೀತಗಾರರು ಹೆಚ್ಚಾಗಿ ಸೃಜನಶೀಲತೆಯಲ್ಲಿ ಆಧ್ಯಾತ್ಮಿಕ ಶಕ್ತಿಯ ಬಗ್ಗೆ ಏಕೆ ಮಾತನಾಡುತ್ತಾರೆ ಎಂದು ಕೇಳಿದಾಗ, ಭಾಷಣವು ತಾತ್ವಿಕ ತಿರುವು ಪಡೆದುಕೊಂಡಿತು. ಈ ಸಂದರ್ಭದಲ್ಲಿ ಶ್ರೀ ವಿಶಾಲ್ ವಿಶಿಷ್ಟ ಸ್ಪಷ್ಟತೆಯೊಂದಿಗೆ ಉತ್ತರಿಸಿದರು: "ನಾವು, ಮೌನಕ್ಕೆ ಹತ್ತಿರವಾಗುವುದು ಸಂಗೀತ ಎಂದು ಭಾವಿಸಿದ್ದೇವೆ." ಶ್ರೀ ಸುಧೀರ್ ಅವರು ನಿಗೂಢವಾದ, ಬಹುತೇಕ ಪವಿತ್ರವಾದ ರಾಗದ ಆಗಮನದ ಬಗ್ಗೆ ಮಾತನಾಡಿದರು, ಅದು "ಬೇರೆ ಎಲ್ಲೋ" ಬರುತ್ತದೆ ಎಂದು ಅವರು ನಂಬುತ್ತಾರೆ ಎಂದು ಶ್ರೀ ವಿಶಾಲ್ ಅವರು ಹೇಳಿದರು. ಶ್ರೀ ಅಜನೀಶ್ ಅವರು ಕೂಡಾ ಇದನ್ನು ಒಪ್ಪಿಕೊಂಡರು. ಶ್ರೀ ಸುಧೀರ್ ಅವರು ಸೃಜನಶೀಲ ಸ್ಥಿತಿಗೆ ಹೇಗೆ ಪ್ರವೇಶಿಸುತ್ತಾರೆ ಎಂಬುದನ್ನು ಅವರು ಎಂದಿಗೂ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲಿಲ್ಲ ಮತ್ತು 'ಕಾಂತಾರ'ಕ್ಕೆ ತಮ್ಮನ್ನು ತಾವು ಎಂದಿಗೂ ಗೌರವಿಸಿಕೊಂಡಿಲ್ಲ ಎಂದು ಶ್ರೀ ವಿಶಾಲ್ ಹೇಳಿದರು.

ಭಾಷೆ, ಜಾನಪದ ಸಂಪ್ರದಾಯಗಳು ಮತ್ತು ಭಾರತದ ಸೋನಿಕ್ ಲ್ಯಾಂಡ್ ಸ್ಕೇಪ್ ಗಳು
ನಂತರ ಅಧಿವೇಶನವು ಭಾಷೆ ಮತ್ತು ಸಂಗೀತದ ನಡುವಿನ ಸಂಕೀರ್ಣವಾದ ಪರಸ್ಪರ ಕ್ರಿಯೆಯನ್ನು ಅನ್ವೇಷಿಸಿತು. 'ಕರ್ಮ' ಹಾಡು ಸಾರ್ವತ್ರಿಕವಾಗಿ ಹೇಗೆ ಸಂಪರ್ಕ ಹೊಂದಿದೆ, ಆದರೆ ಸಾಂಸ್ಕೃತಿಕ ಸೂಕ್ಷ್ಮತೆಯಲ್ಲಿ ಬೇರೂರಿರುವ ಇತರ ಹಾಡುಗಳು ಯಾವಾಗಲೂ ಒಂದೇ ರೀತಿಯಲ್ಲಿ ಪ್ರಯಾಣಿಸುವುದಿಲ್ಲ ಮಲಯಾಳಂನಲ್ಲಿ ಸಂಗೀತ ಸಂಯೋಜನೆ, ಶ್ರೀ ಎಂಟಿ ವಾಸುದೇವನ್ ನಾಯರ್ ಮತ್ತು ಶ್ರೀ ಒಎನ್ವಿ ಕುರುಪ್ ಅವರೊಂದಿಗೆ ಕೆಲಸ ಮಾಡಿದ ಅನುಭವಗಳನ್ನು ಶ್ರೀ ಅಜನೀಶ್ ಅವರು ಮಾತನಾಡುತ್ತಾ ಹೇಳಿದರು. ಆಗ, ಶ್ರೀ ಅಜನೀಶ್ ಅವರು ಸಂಪೂರ್ಣವಾಗಿ ತಿಳಿದಿಲ್ಲದ ಭಾಷೆಯಲ್ಲಿ ಮಾಡಿದ ಸಂಗೀತ ಸಂಯೋಜನೆಯ ಆಕರ್ಷಕ ಸವಾಲುಗಳನ್ನು ಶ್ರೀ ವಿಶಾಲ್ ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.
ಜಾನಪದ ಸಂಗೀತವು ಮುಂದೆ ಕೇಂದ್ರ ಹಂತವನ್ನು ಪಡೆದುಕೊಂಡಿತು. ಶ್ರೀ ಅಜನೀಶ್ ಅವರು ಜಾನಪದವನ್ನು "ಮುಗ್ಧತೆಯಿಂದ ಹುಟ್ಟಿದ್ದು" ಎಂದು ವಿವರಿಸಿದರು, 'ಕಾಂತಾರ'ವು ಅದರ ಪರಾಕಾಷ್ಠೆಯ ಸಮ್ಮಿಳನದವರೆಗೆ ಬುಡಕಟ್ಟು ವಾದ್ಯಗಳ ಮೇಲೆ ಸಂಪೂರ್ಣವಾಗಿ ಹೇಗೆ ಅವಲಂಬಿತವಾಗಿದೆ ಎಂಬುದನ್ನು ವಿವರಿಸಿದರು. ವಿಭಿನ್ನ ಡೋಲ್ ಮಾದರಿಗಳ ಮೂಲಕ ಸಂವಹನ ನಡೆಸುವ ಕೊರಗ ಸಮುದಾಯಗಳ ಉದಾಹರಣೆಯೊಂದಿಗೆ ಅವರು ಭಾರತದ ಲಯಬದ್ಧ ವೈವಿಧ್ಯತೆಯನ್ನು ವಿವರಿಸಿದರು. ಭಾರತವು "ಹಲವು ಸಂಸ್ಕೃತಿಗಳನ್ನು" ಹೊಂದಿದೆ, ಪ್ರತಿಯೊಂದೂ ತನ್ನದೇ ಆದ ಉಪಭಾಷೆಗಳು, ವಿನ್ಯಾಸಗಳು, ಜಾನಪದ ಸಂಪ್ರದಾಯಗಳು ಮತ್ತು ಸಂಗೀತ ಸಹಿಗಳನ್ನು ಹೊಂದಿದೆ ಎಂದು ಶ್ರೀ ವಿಶಾಲ್ ಅವರು ಹೇಳಿದರು.
ಸಂಗೀತದ ಭವಿಷ್ಯ: ಕೃತಕ ಬುದ್ದಿಮತ್ತೆ(ಎಐ), ಸಾಹಿತ್ಯ ಮತ್ತು ಕಥೆ ಹೇಳುವಿಕೆ
ಸಭಿಕರ ಪ್ರಶ್ನೆಗಳಿಗಾಗಿ ಅಧಿವೇಶನ ಪ್ರಾರಂಭವಾದಾಗ, ಸಾಹಿತ್ಯ ಮತ್ತು ಕಥೆ ಹೇಳುವಿಕೆಯಿಂದ ಕೃತಕ ಬುದ್ದಿಮತ್ತೆ(ಎಐ) ಮತ್ತು ಸಂಗೀತದ ಭವಿಷ್ಯದವರೆಗೆ ಚರ್ಚೆಗಳು ನಡೆದವು. ಕೆಲವು ಸಂದರ್ಭಗಳಲ್ಲಿ ಕೃತಕ ಬುದ್ದಿಮತ್ತೆ(ಎಐ) ಸಹಾಯ ಮಾಡಬಹುದು ಎಂದು ಶ್ರೀ ಅಜನೀಶ್ ಅವರು ಹೇಳಿದರು, ಆದರೆ ಶ್ರೀ ವಿಶಾಲ್ ಅವರು ತಂತ್ರಜ್ಞಾನದ ಬಗ್ಗೆ ಭಯಪಡಬಾರದು ಎಂದು ಪ್ರೇಕ್ಷಕರಿಗೆ ನೆನಪಿಸಿದರು: ಹಾಗೂ, "ನಾವು ಏನು ಬಳಸಬೇಕು ಮತ್ತು ಏನು ಬಿಡಬೇಕು ಎಂಬುದನ್ನು ಕಲಿಯುತ್ತೇವೆ." ಎಂದು ಹೇಳಿದರು
ಕೊನೆಯಲ್ಲಿ, ಸ್ಮಾರಕ ಭಾಷಣವು ಭಾರತದ ನೈಟಿಂಗೇಲ್ ಲತಾ ಮಂಗೇಶ್ಕರ್ ಜಿ ಅವರನ್ನು ಗೌರವಿಸುವುದಾಗಿತ್ತು. ಇದು ಶಾಸ್ತ್ರೀಯ ಸಂಗೀತದಿಂದ ಜಾನಪದದವರೆಗೆ, ವೈಯಕ್ತಿಕ ನೆನಪುಗಳಿಂದ ಆಧ್ಯಾತ್ಮಿಕ ಪ್ರತಿಬಿಂಬಗಳವರೆಗೆ ಭಾರತೀಯ ಸಂಗೀತದ ವ್ಯಾಪಕ ಭೂಚೌಕಟ್ಟನ್ನು ಪತ್ತೆಹಚ್ಚಿತು ಮತ್ತು ಪ್ರೇಕ್ಷಕರು ಸೃಜನಶೀಲತೆಯನ್ನು ಅದರ ಅತ್ಯಂತ ಪ್ರಾಮಾಣಿಕ ರೂಪದಲ್ಲಿ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿತು. ಇದು ಹೆಸರಿನಲ್ಲಿ ಮಾತ್ರವಲ್ಲ, ಉತ್ಸಾಹದಲ್ಲಿಯೂ ಗೌರವವಾಗಿತ್ತು: ಲಯ, ಸಂಸ್ಕೃತಿ, ಸ್ಮರಣೆ ಮತ್ತು ಭಾರತೀಯ ಕಲ್ಪನೆಯನ್ನು ರೂಪಿಸುವ ಅಂತ್ಯವಿಲ್ಲದ ಮಧುರಗಳ ಆಚರಣೆಯಾಗಿ ಪರಿವರ್ತಿತವಾಯಿತು
ಐ.ಎಫ್.ಎಫ್.ಐ. ಬಗ್ಗೆ
1952 ರಲ್ಲಿ ಪ್ರಾರಂಭವಾದ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ.) ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಆಚರಣೆಯಾಗಿ ಅತ್ಯಂತ ಗೌರವದಿಂದ ಹೆಮ್ಮೆಯಾಗಿ ನಿಂತಿದೆ. ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ , ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಭಾರತ ಸರ್ಕಾರ ಮತ್ತು ಗೋವಾ ರಾಜ್ಯ ಸರ್ಕಾರ, ಗೋವಾ ಮನರಂಜನಾ ಸೊಸೈಟಿ ಜಂಟಿಯಾಗಿ ಆಯೋಜಿಸಿರುವ ಈ ಚಲನಚಿತ್ರ ಉತ್ಸವವು ಜಾಗತಿಕ ಸಿನಿಮೀಯ ಶಕ್ತಿ ಕೇಂದ್ರವಾಗಿ ಬೆಳೆದಿದೆ - ಅಲ್ಲಿ ಪುನಃಸ್ಥಾಪಿಸಲಾದ ಕ್ಲಾಸಿಕ್ ಗಳು ದಿಟ್ಟ ಪ್ರಯೋಗಗಳನ್ನು ಎದುರಿಸುತ್ತವೆ ಮತ್ತು ಪೌರಾಣಿಕ ಕಲಾವಿದರು ನಿರ್ಭೀತ ಮೊದಲ ಬಾರಿಗೆ ಬರುವವರೊಂದಿಗೆ ಜಾಗವನ್ನು ಹಂಚಿಕೊಳ್ಳುತ್ತಾರೆ. ಐ.ಎಫ್.ಎಫ್.ಐ. ಅನ್ನು ನಿಜವಾಗಿಯೂ ಹೊಳೆಯುವಂತೆ ಮಾಡುವುದು ಅದರ ಸೃಜನಶೀಲ ಮಿಶ್ರಣ - ಅಂತಾರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್‌ಕ್ಲಾಸ್ ಗಳು, ಗೌರವಗಳು ಮತ್ತು ಕಲ್ಪನೆಗಳು, ಒಪ್ಪಂದಗಳು ಮತ್ತು ಸಹಯೋಗಗಳು ಹಾರುವ ಉನ್ನತ-ಶಕ್ತಿಯ ವೇವ್ಸ್ ಫಿಲ್ಮ್ ಬಜಾರ್. ನವೆಂಬರ್ 20 ರಿಂದ 28, 2025 ರವರೆಗೆ ಗೋವಾದ ಬೆರಗುಗೊಳಿಸುವ ಅತ್ಯಾಕರ್ಷಕ ಕರಾವಳಿ ಹಿನ್ನೆಲೆಯಲ್ಲಿ ಪ್ರದರ್ಶಿಸಲಾಗುವ 56 ನೇ ಆವೃತ್ತಿಯು ಭಾಷೆಗಳು, ಪ್ರಕಾರಗಳು, ನಾವೀನ್ಯತೆಗಳು ಮತ್ತು ಧ್ವನಿಗಳ ಅದ್ಭುತ ವರ್ಣಪಟಲವನ್ನು ಭರವಸೆ ನೀಡುತ್ತದೆ - ಇದು ವಿಶ್ವ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ತಲ್ಲೀನಗೊಳಿಸುವ ವಿಶೇಷ ಆಚರಣೆಯಾಗಿದೆ.
ಹೆಚ್ಚಿನ ಮಾಹಿತಿಗಾಗಿ, ಕ್ಲಿಕ್ ಮಾಡಿ
IFFI Website: https://www.iffigoa.org/
PIB’s IFFI Microsite: https://www.pib.gov.in/iffi/56/
PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F
X Handles: @IFFIGoa, @PIB_India, @PIB_Panaji
*****
Release ID:
2193637
| Visitor Counter:
3