ಪ್ರಧಾನ ಮಂತ್ರಿಯವರ ಕಛೇರಿ
ಅಂಧ ಮಹಿಳೆಯರ ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡಕ್ಕೆ ಪ್ರಧಾನಮಂತ್ರಿ ಅವರಿಂದ ಅಭಿನಂದನೆ
प्रविष्टि तिथि:
24 NOV 2025 12:07PM by PIB Bengaluru
ಅಂಧ ಮಹಿಳೆಯರ ಟಿ20 ವಿಶ್ವಕಪ್ ಗೆದ್ದ ಭಾರತೀಯ ಕ್ರಿಕೆಟ್ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದರು.
ಸರಣಿಯ ಉದ್ದಕ್ಕೂ ಅಜೇಯರಾಗಿ ಉಳಿದಿರುವ ತಂಡದ ಗಮನಾರ್ಹ ಸಾಧನೆಯನ್ನು ಪ್ರಧಾನಮಂತ್ರಿ ಅವರು ಶ್ಲಾಘಿಸಿದ್ದು, ಇದು ಕಠಿಣ ಪರಿಶ್ರಮ, ತಂಡದ ಕೆಲಸ ಮತ್ತು ದೃಢಸಂಕಲ್ಪದ ಉಜ್ವಲ ಉದಾಹರಣೆಯಾಗಿದೆ ಎಂದು ಬಣ್ಣಿಸಿದರು. ಪ್ರತಿಯೊಬ್ಬ ಆಟಗಾರರೂ ನಿಜವಾದ ಚಾಂಪಿಯನ್ ಆಗಿದ್ದಾರೆ, ಅವರ ಸಮರ್ಪಣೆ ದೇಶಕ್ಕೆ ಕೀರ್ತಿ ತಂದಿದೆ ಎಂದು ಅವರು ಒತ್ತಿ ಹೇಳಿದರು.
ಎಕ್ಸ್ ನಲ್ಲಿ ಪೋಸ್ಟ್ ಪ್ರಧಾನಮಂತ್ರಿ ಹೀಗೆ ಹೇಳಿದ್ದಾರೆ;
"ಅಂಧರ ಚೊಚ್ಚಲ ಮಹಿಳಾ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ ಭಾರತೀಯ ಅಂಧರ ಮಹಿಳಾ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು! ಸರಣಿಯಲ್ಲಿ ಅವರು ಅಜೇಯರಾಗಿ ಉಳಿದಿರುವುದು ಹೆಚ್ಚು ಶ್ಲಾಘನೀಯವಾಗಿದೆ. ಇದು ನಿಜಕ್ಕೂ ಐತಿಹಾಸಿಕ ಕ್ರೀಡಾ ಸಾಧನೆ, ಕಠಿಣ ಪರಿಶ್ರಮ, ತಂಡದ ಕೆಲಸ ಮತ್ತು ದೃಢಸಂಕಲ್ಪದ ಉಜ್ವಲ ಉದಾಹರಣೆ. ಪ್ರತಿಯೊಬ್ಬ ಆಟಗಾರರೂ ಚಾಂಪಿಯನ್ ಆಗಿದ್ದಾರೆ! ತಂಡದ ಭವಿಷ್ಯದ ಪ್ರಯತ್ನಗಳಿಗಾಗಿ ನನ್ನ ಶುಭಾಶಯಗಳು. ಈ ಸಾಧನೆಯು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ."
*****
(रिलीज़ आईडी: 2193504)
आगंतुक पटल : 51
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam