"ಲೆಜೆಂಡ್ಸ್ ಆಫ್ ದಿ ಇಂಡಿಯನ್ ಸಿಲ್ವರ್ ಸ್ಕ್ರೀನ್" ಪುಸ್ತಕವನ್ನು 56ನೇ ಐ.ಎಫ್.ಎಫ್.ಐ ಯಲ್ಲಿ ಬಿಡುಗಡೆ ಮಾಡಲಾಯಿತು
ಈ ಪುಸ್ತಕವು ಚಲನಚಿತ್ರಗಳನ್ನು ಅವುಗಳ ಆಕರ್ಷಕ ಚಿತ್ರಣವನ್ನು ಮೀರಿ ಅರ್ಥಮಾಡಿಕೊಳ್ಳಲು ಬಯಸುವ ಎಲ್ಲರಿಗೂ ಮುಖ್ಯವಾಗಿದೆ: ಪ್ರಧಾನ ಮಹಾನಿರ್ದೇಶಕರು ಪ್ರಕಟಣಾ ವಿಭಾಗ
ಪ್ರಕಟಣೆ ವಿಭಾಗ ನಿರ್ದೇಶನಾಲಯದ (ಡಿಪಿಡಿ) ಇತ್ತೀಚಿನ ಪ್ರಕಟಣೆಯಾದ 'ಲೆಜೆಂಡ್ಸ್ ಆಫ್ ಇಂಡಿಯನ್ ಸಿಲ್ವರ್ ಸ್ಕ್ರೀನ್' ಅನ್ನು ಇಂದು ಸಂಜೆ ಡಿಪಿಡಿಯ ಪ್ರಧಾನ ಮಹಾನಿರ್ದೇಶಕ ಶ್ರೀ ಭೂಪೇಂದ್ರ ಕೈಂಥೋಲಾ ಮತ್ತು ಪ್ರಸಿದ್ಧ ಕೊಂಕಣಿ ಚಲನಚಿತ್ರ ನಿರ್ದೇಶಕ ರಾಜೇಂದ್ರ ತಾಲಕ್ ಅವರು ಗೋವಾದಲ್ಲಿ ನಡೆದ 56ನೇ ಐ.ಎಫ್.ಎಫ್.ಐನಲ್ಲಿ ನಡೆದ ಪಿಐಬಿ ಮಾಧ್ಯಮಗೋಷ್ಠಿ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು.

"ಭಾರತೀಯ ಸಿನಿಮಾದ ಅತ್ಯುನ್ನತ ಗೌರವವೆಂದು ಪರಿಗಣಿಸಲಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಗೆದ್ದ ದಿಗ್ಗಜರ ಪ್ರಯಾಣದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು" ಎಂದು ತಮ್ಮ ಆರಂಭಿಕ ನುಡಿಗಳಲ್ಲಿ ಶ್ರೀ ಕೈಂಥೋಲಾ ಪುಸ್ತಕದ ಮಹತ್ವವನ್ನು ವಿವರಿಸಿದರು. ಈ ಪುಸ್ತಕವು 1969 ರಿಂದ 1991 ರವರೆಗೆ ಪ್ರಶಸ್ತಿಯನ್ನು ಪಡೆದ ದೇವಿಕಾ ರಾಣಿ, ಸತ್ಯಜಿತ್ ರೇ, ವಿ. ಶಾಂತಾರಾಮ್, ಲತಾ ಮಂಗೇಶ್ಕರ್ ಮತ್ತು ಇತರ ದಿಗ್ಗಜರು ಸೇರಿದಂತೆ 23 ಪ್ರಶಸ್ತಿ ಪುರಸಕೃತರನ್ನು ಒಳಗೊಂಡಿದೆ" ಎಂದು ಅವರು ಹೇಳಿದರು.
"ಈ ಪುಸ್ತಕವು 17 ವಿಭಿನ್ನ ಲೇಖಕರು ಬರೆದ 23 ಲೇಖನಗಳ ಸಂಗ್ರಹವಾಗಿದ್ದು, ಇದನ್ನು ಸಂಜೀತ್ ನಾರ್ವೇಕರ್ ಸಂಪಾದಿಸಿದ್ದಾರೆ. ಈ ಪ್ರಕಟಣೆಯ ಒಂದು ಕುತೂಹಲಕಾರಿ ವೈಶಿಷ್ಟ್ಯವೆಂದರೆ ಇಬ್ಬರು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾದ ಮಿಥುನ್ ಚಕ್ರವರ್ತಿ ಮತ್ತು ಆಶಾ ಪರೇಖ್ ಈ ಪುಸ್ತಕಕ್ಕೆ ತಲಾ ಒಂದು ಮುನ್ನುಡಿ ಬರೆದಿದ್ದಾರೆ" ಎಂದು ಅವರು ಹೇಳಿದರು. ಪುಸ್ತಕದ ವಿಷಯಗಳ ಬಗ್ಗೆ ಪ್ರೇಕ್ಷಕರಿಗೆ ಒಂದು ನೋಟವನ್ನು ನೀಡಲು ಶ್ರೀ ಕೈಂಥೋಲಾ ಅವರು ಮುನ್ನುಡಿಯ ಆಯ್ದ ಭಾಗಗಳನ್ನು ಸಹ ಓದಿದರು.
ಡಿಪಿಡಿಯ ಧ್ಯೇಯವನ್ನು ವಿವರಿಸಿದ ಶ್ರೀ ಕೈಂಥೋಲಾ, "ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿರುವ ನಿರ್ದೇಶನಾಲಯಕ್ಕೆ ಇಂತಹ ಪ್ರಮುಖ ವಿಷಯಗಳನ್ನು ಕೈಗೆಟುಕುವ ಬೆಲೆಯಲ್ಲಿ ಪ್ರಕಟಿಸುವ ಜವಾಬ್ದಾರಿಯನ್ನು ವಹಿಸಲಾಗಿದೆ. ಈ ಪುಸ್ತಕವು ಸಂಶೋಧಕರಿಗೆ ಹಾಗೂ ಸಿನಿಮಾವನ್ನು ಅದರ ಆಕರ್ಷಕ ಚಿತ್ರಣವನ್ನು ಮೀರಿ ಅರ್ಥಮಾಡಿಕೊಳ್ಳಲು ಬಯಸುವ ಎಲ್ಲರಿಗೂ ಮುಖ್ಯವಾಗಿದೆ" ಎಂದು ಹೇಳಿದರು.
ಶ್ರೀ ಕೈಂಥೋಲಾ ಮಾತಿಗೆ ಸಮ್ಮತಿ ಸೂಚಿಸಿದ ಶ್ರೀ ರಾಜೇಂದ್ರ ತಾಲಕ್ ಅವರು, ಈ ಉಪಕ್ರಮವನ್ನು ಶ್ಲಾಘಿಸಿದರು. ಈ ಉಪಕ್ರಮಕ್ಕಾಗಿ ಅವರು ಡಿಪಿಡಿಯನ್ನು ಅಭಿನಂದಿಸಿದರು. "ಈ ದಿಗ್ಗಜರು ಇಂದಿನ ಪೀಳಿಗೆ ಊಹಿಸಲೂ ಸಾಧ್ಯವಾಗದಷ್ಟು ಕಷ್ಟಗಳ ನಡುವೆಯೂ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಚಲನಚಿತ್ರ ನಿರ್ಮಾಣದ ಕಲೆಯನ್ನು ಅರ್ಥಮಾಡಿಕೊಳ್ಳಲು ಆಸಕ್ತಿ ಹೊಂದಿರುವ ಯಾರಿಗಾದರೂ ಈ ಪುಸ್ತಕವು ಮೂಲ 'ಎಬಿಸಿ'ಯಂತೆ ಕಾರ್ಯನಿರ್ವಹಿಸುತ್ತದೆ" ಎಂದು ಅವರು ಹೇಳಿದರು.
ಯಶಸ್ಸು ಅಥವಾ ವೈಫಲ್ಯವನ್ನು ಲೆಕ್ಕಿಸದೆ ಕಠಿಣ ಪರಿಶ್ರಮದ ಮೇಲೆ ಗಮನಹರಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು, ಇದು ದಿಗ್ಗಜರ ವೃತ್ತಿಜೀವನದಿಂದ ಸಾಬೀತಾಗಿದೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶ್ರೀ ಕೈಂಥೋಲಾ, "ಖಂಡಿತ, ಸಿನಿಮಾ ಒಂದು ಮೃದು ಶಕ್ತಿ, ಆದರೆ ಅದು ಭಾರತದಲ್ಲಿ ಒಂದು ಪರಂಪರೆಯೂ ಆಗಿದೆ. ನಾವು ಆ ಪರಂಪರೆಯಿಂದ ಕಲಿಯಬೇಕು, ಗ್ಲಾಮರ್ ನ ಹೊರ ಪದರವನ್ನು ಮೀರಿ ನೋಡಬೇಕು" ಎಂದು ಹೇಳಿದರು. ಬರವಣಿಗೆಯಲ್ಲಿ ಸತ್ಯಾಸತ್ಯತೆಯ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು ಮತ್ತು ಪುಸ್ತಕದ ಭಾಷೆಯನ್ನು ಸರಳವಾಗಿರಿಸುವುದರಿಂದ ಹೆಚ್ಚಿನ ಜನರಿಗೆ ಸುಲಭವಾಗಿ ತಲುಪಬಹುದು ಎಂದು ಹೇಳಿದರು. ಪುಸ್ತಕವು ವಿವಿಧ ಆನ್‌ಲೈನ್ ಪ್ಲಾಟ್‌ಫಾರ್ಮ್ ಗಳಲ್ಲಿ ಹಾಗೂ ಐ ಎಫ್ ಎಫ್ ಐ ಸ್ಥಳದಲ್ಲಿರುವ ಡಿಪಿಡಿ ಮಳಿಗೆಯಲ್ಲಿ ಖರೀದಿಗೆ ಲಭ್ಯವಿದೆ ಎಂದು ಶ್ರೀ ಕೈಂಥೋಲಾ ಸಭಿಕರಿಗೆ ತಿಳಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ, ತಾಲಕ್ ಅವರು 1991 ರ ನಂತರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರ ಕಥೆಗಳನ್ನು ಒಳಗೊಂಡಂತೆ ಪುಸ್ತಕದ ಎರಡನೇ ಆವೃತ್ತಿಯನ್ನು ಪ್ರಕಟಿಸಬೇಕೆಂದು ವಿನಂತಿಸಿದರು. ಶ್ರೀ ಕೈಂಥೋಲಾ ಅವರು ಅದಕ್ಕೆ ಉತ್ಸಾಹದಿಂದ ಪ್ರತಿಕ್ರಿಯಿಸಿದರು,
ಮಾಧ್ಯಮಗೋಷ್ಠಿಯನ್ನು ವೀಕ್ಷಿಸಲು ಲಿಂಕ್:
ಐ.ಎಫ್.ಎಫ್.ಐ ಬಗ್ಗೆ
1952ರಲ್ಲಿ ಪ್ರಾರಂಭವಾದ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐ ಎಫ್ ಎಫ್ ಐ) ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಉತ್ಸವವಾಗಿದೆ. ಇದನ್ನು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್ ಎಫ್ ಡಿ ಸಿ), ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಮತ್ತು ಗೋವಾ ಸರ್ಕಾರದ ಗೋವಾ ಮನರಂಜನಾ ಸೊಸೈಟಿ ಜಂಟಿಯಾಗಿ ಆಯೋಜಿಸುತ್ತವೆ. ಈ ಉತ್ಸವವು ಜಾಗತಿಕ ಸಿನಿಮಾ ಶಕ್ತಿ ಕೇಂದ್ರವಾಗಿ ಬೆಳೆದಿದೆ - ಅಲ್ಲಿ ಪುನಃಸ್ಥಾಪಿಸಲಾದ ಕ್ಲಾಸಿಕ್ ಗಳು ದಿಟ್ಟ ಪ್ರಯೋಗಗಳನ್ನು ಸಂಧಿಸುತ್ತವೆ ಮತ್ತು ಹೆಸರಾಂತ ಕಲಾವಿದರು ಮೊದಲ ಬಾರಿಯ ಧೈರ್ಯಶಾಲಿಗಳೊಂದಿಗೆ ಜಾಗವನ್ನು ಹಂಚಿಕೊಳ್ಳುತ್ತಾರೆ. ಐ.ಎಫ್.ಎಫ್.ಐ ಅನ್ನು ನಿಜವಾಗಿಯೂ ಅದ್ಭುತವಾಗಿಸುವುದು ಅದರ ಅದ್ಭುತವಾದ ಸಮ್ಮಿಲನಗಳು - ಅಂತರರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್‌ಕ್ಲಾಸ್ ಗಳು, ಗೌರವಗಳು ಮತ್ತು ವೇವ್ಸ್ ಫಿಲ್ಮ್ ಬಜಾರ್, ಅಲ್ಲಿ ಕಲ್ಪನೆಗಳು, ವ್ಯವಹಾರಗಳು ಮತ್ತು ಸಹಯೋಗಗಳು ಹುಟ್ಟುತ್ತವೆ. ಗೋವಾದ ಬೆರಗುಗೊಳಿಸುವ ಕಡಲತೀರದ ಹಿನ್ನೆಲೆಯಲ್ಲಿ ನವೆಂಬರ್ 20 ರಿಂದ 28 ರವರೆಗೆ ನಡೆಯುವ 56 ನೇ ಆವೃತ್ತಿಯು ಬೆರಗುಗೊಳಿಸುವ ಭಾಷೆಗಳು, ಪ್ರಕಾರಗಳು, ನಾವೀನ್ಯತೆಗಳು ಮತ್ತು ಧ್ವನಿಗಳ ಒಂದು ಅದ್ಭುತ ಶ್ರೇಣಿಯನ್ನು ಆಚರಿಸುವ ಭರವಸೆ ನೀಡುತ್ತದೆ - ಇದು ವಿಶ್ವ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ತಲ್ಲೀನಗೊಳಿಸುವ ಆಚರಣೆಯಾಗಿದೆ.
ಹೆಚ್ಚಿನ ಮಾಹಿತಿಗಾಗಿ, ಕ್ಲಿಕ್ ಮಾಡಿ:
IFFI Website: https://www.iffigoa.org/
PIB’s IFFI Microsite: https://www.pib.gov.in/iffi/56new/
PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F
X Post Link: https://x.com/PIB_Panaji/status/1991438887512850647?s=20
X Handles: @IFFIGoa, @PIB_India, @PIB_Panaji
*****
रिलीज़ आईडी:
2193002
| Visitor Counter:
3