ತಂತ್ರಗಾರಿಕೆಯಿಂದ ಕಾಲಾತೀತ ಪಾತ್ರಗಳವರೆಗೆ: ತೆರೆಯ ಹಿಂದಿನ ಹಲವು ಪಾಠಗಳನ್ನು ಹಂಚಿಕೊಂಡ ಖುಷ್ಬೂ ಮತ್ತು ಸುಹಾಸಿನಿ
ಕಲಾವಿದರಿಗೆ ಮಾಸ್ಟರ್ ಕ್ಲಾಸ್ ಆಗಿ ರೂಪಾಂತರಗೊಂಡ ಐ.ಎಫ್.ಎಫ್.ಐನ ಸಂವಾದಾತ್ಮಕ ಕಾರ್ಯಾಗಾರ
ಶಕ್ತಿಶಾಲಿ, ಭಾವೋದ್ರೇಕದ ಸನ್ನಿವೇಶಗಳ ನೇರ ಪ್ರಸ್ತುತಿ ಮೂಲಕ ಜನರ ಹೃದಯ ಗೆದ್ದ ಖುಷ್ಬೂ ಮತ್ತು ಸುಹಾಸಿನಿ
ಐ.ಎಫ್.ಎಫ್.ಐಯಲ್ಲಿ ನಡೆದ ಸಂವಾದಾತ್ಮಕ ಕಾರ್ಯಾಗಾರವು ಕಲಾ ಅಕಾಡೆಮಿಯನ್ನು ಕರಕುಶಲತೆ, ಸಹಯೋಗ ಮತ್ತು ಸಿನಿಮಾ ಸ್ಮರಣೆಯ ಸಂಗಮ ಸ್ಥಳವನ್ನಾಗಿ ಪರಿವರ್ತಿಸಿತು. “ಪ್ರಜ್ವಲಿಸುವ ದಿಗ್ಗಜರು: ಸೃಜನಶೀಲ ಬಂಧಗಳು ಮತ್ತು ಭಾವೋದ್ರೇಕದ ಪ್ರದರ್ಶನ ("ದಿ ಲ್ಯುಮಿನರಿ ಐಕಾನ್ಸ್: ಕ್ರಿಯೇಟಿವ್ ಬಾಂಡ್ಸ್ ಅಂಡ್ ಫೈಯರ್ಸ್ ಪರ್ಫಾರ್ಮೆನ್ಸ್") ಎಂಬ ಶೀರ್ಷಿಕೆಯ ಈ ಕಾರ್ಯಕ್ರಮವು ದಶಕಗಳಿಂದ ಸಿನಿಮಾವನ್ನು ಜೀವಿಸಿ, ಉಸಿರಾಗಿಸಿ ಮತ್ತು ರೂಪಿಸಿದ ಇಬ್ಬರು ನೆಚ್ಚಿನ ನಟಿಯರಾದ ಸುಹಾಸಿನಿ ಮಣಿರತ್ನಂ ಮತ್ತು ಖುಷ್ಬೂ ಸುಂದರ್ ಅವರನ್ನು ನಿರಂತರ ಕಲಾ ಪ್ರದರ್ಶನದ ಕುರಿತಾದ ಚಿಂತನಶೀಲ, ಕ್ರಿಯಾತ್ಮಕ ಸಂವಾದಕ್ಕಾಗಿ ಒಂದುಗೂಡಿಸಿತು.
ಚಲನಚಿತ್ರ ನಿರ್ಮಾಪಕರಾದ ಶ್ರೀ ರವಿ ಕೊಟ್ಟಾರಕ್ಕರ ಅವರಿಂದ ಭಾಷಣಕಾರರಿಗೆ ಆತ್ಮೀಯ ಸನ್ಮಾನದೊಂದಿಗೆ ಕಾರ್ಯಕ್ರಮ ತೆರೆದುಕೊಂಡಿತು ಮತ್ತು ಕೆಲವೇ ಕ್ಷಣಗಳಲ್ಲಿ ವೇದಿಕೆಗೆ ಜೀವ ಕಳೆ ಬಂದಿತು. ಇಬ್ಬರು ಅನುಭವಿ ಪ್ರದರ್ಶಕರು ಮಾತ್ರ ನೀಡಬಹುದಾದ ಸಮ್ಮಿಳಿತದ ಪ್ರದರ್ಶನವು ಹಾಸ್ಯ, ಭಾವೋದ್ರೇಕತೆಯೊಂದಿಗೆ ವಿದ್ಯುತ್ ಪ್ರವಹಿಸಿದಂತೆ ಭಾಸವಾಯಿತು.

ಸುಹಾಸಿನಿ ಅವರು ತಮ್ಮ ಸಿನಿ ಪಯಣದ ಆರಂಭಿಕ ದಿನಗಳ ಬಗ್ಗೆ ನಿಷ್ಕಪಟವಾಗಿ ಮಾತು ಆರಂಭಿಸಿದರು. ಕಮಲ್ ಹಾಸನ್ ಅವರೊಂದಿಗೆ ನಂಟು ಹೊಂದಿರುವ ಬಗ್ಗೆ ಜನರು ಅನುಮಾನ ವ್ಯಕ್ತಪಡಿಸಿದ್ದರು ಎಂದು ಅವರು ನಗುತ್ತಲೇ ನುಡಿದರು. ಉತ್ತಮ ತರಬೇತಿ ಪಡೆದ ಛಾಯಾಗ್ರಾಹಕರು ಹೇಗೆ ಲೆನ್ಸ್ ಮತ್ತು ಸ್ಪಾಟ್ಲೈಟ್ ನಡುವೆ ಸಲೀಸಾಗಿ ಬದಲಾಯಿಸಬಲ್ಲರೋ ಅಷ್ಟೇ ಸಲೀಸಾಗಿ ಸುಹಾಸಿನಿ ಅವರು ಖುಷ್ಬೂ ಅವರೊಂದಿಗೆ ಮಾತಿಗಿಳಿದರು. ಕಲಾತ್ಮಕ ಚಲನಚಿತ್ರ ಮತ್ತು ಮುಖ್ಯವಾಹಿನಿಯ ಸಿನಿಮಾಗಳ ಬಗೆಗಿನ ಖುಷ್ಬೂ ಅವರ ದೃಷ್ಟಿಕೋನದ ಬಗ್ಗೆ ಪ್ರಶ್ನಿಸುವ ಮೂಲಕ ಅವರು ಸಂಭಾಷಣೆಯ ಪ್ರಮುಖ ವಿಷಯವನ್ನು ಪ್ರಸ್ತಾಪಿಸಿದರು.
ಕಲಾತ್ಮಕ ಮತ್ತು ಮುಖ್ಯ ವಾಹಿನಿಯ ಚಿತ್ರಗಳ ನಡುವೆ ಯಾವುದೇ ತಾರತಮ್ಯ ಮಾಡುವುದಿಲ್ಲ ಎಂದು ಖುಷ್ಬೂ ಅವರು ದೃಢವಾಗಿ ಪ್ರತಿಕ್ರಿಯೆ ನೀಡಿದರು. ಕೆ.ಜಿ. ಜಾರ್ಜ್ ರಂತಹ ಪ್ರಸಿದ್ಧ ಸಮಾನಾಂತರ-ಸಿನಿಮಾ ನಿರ್ದೇಶಕರೊಂದಿಗೆ ಕೆಲಸ ಮಾಡುತ್ತಿರಲಿ ಅಥವಾ ಪಿ. ವಾಸು ಅವರಂತಹ ವಾಣಿಜ್ಯ ಚಲನಚಿತ್ರ ನಿರ್ಮಾಪಕರೊಂದಿಗೆ ಕೆಲಸ ಮಾಡುತ್ತಿರಲಿ, ಪ್ರತಿ ಯೋಜನೆಯಲ್ಲೂ "ಮೃದುವಾದ ಜೇಡಿಮಣ್ಣಿನಂತೆ" ನಿರ್ದೇಶಕರ ದೃಷ್ಟಿಕೋನವನ್ನು ಅರಿಯಲು ಸಿದ್ಧರಾಗಿರುವುದಾಗಿ ಹೇಳಿದರು. ನಿರ್ದೇಶಕರಾದ ಭಾರತಿ ರಾಜಾ ಅವರು, ಈಜುಗಾರ್ತಿ ಮತ್ತು ಕುದುರೆ ಸವಾರರಾಗಿ ತಮ್ಮ ನಿಜ ಜೀವನದ ಕೌಶಲ್ಯಗಳನ್ನು ಗಮನಿಸಿ, ಆ ಸಾಮರ್ಥ್ಯಗಳನ್ನು ತೆರೆಗೆ ತರಲು ಒಂದು ಪಾತ್ರವನ್ನು ಹೇಗೆ ರೂಪಿಸಿದರು ಎಂಬುದನ್ನು ಅವರು ನೆನಪಿಸಿಕೊಂಡರು, ಇದು ನಿರ್ದೇಶಕರು ಮತ್ತು ಕಲಾವಿದರ ನಡುವಿನ ನಂಬಿಕೆಗೆ ಉದಾಹರಣೆಯಾಗಿದೆ ಎಂದು ಅವರು ಹೇಳಿದರು.
ಸಭಾಂಗಣದಲ್ಲಿದ್ದ ಯುವ ಕಲಾವಿದರತ್ತ ಮಾತು ಮುಂದುವರಿಸಿದ ಸುಹಾಸಿನಿ ಅವರು, ವಾಣಿಜ್ಯ ಸಿನಿಮಾದ ಅನಿರೀಕ್ಷಿತ ಜಗತ್ತಿನೆಡೆಗೆ ಸಂಭಾಷಣೆಯ ವಿಷಯವನ್ನು ಬದಲಿಸಿದರು. ಖುಷ್ಬೂ ಅವರು ಕಥೆ ಕೇಳುವಾಗ ಆ ಚಿತ್ರ ಅನಿರೀಕ್ಷಿತ ಯಶಸ್ಸು ಸಾಧಿಸಲಿದೆ ಎಂಬ ಬಗ್ಗೆ ಊಹಿಸಿದ್ದು ಇದೆಯೇ ಎಂಬ ಪ್ರಶ್ನೆಗೆ ಖುಷ್ಬೂ ಅವರು, ತಮ್ಮ ಬ್ಲಾಕ್ಬಸ್ಟರ್ ಚಿನ್ನತಂಬಿ ಚಿತ್ರದ ಉದಾಹರಣೆ ನೀಡಿದರು. ಇದರ ಜೊತೆಗೆ ಮನಮುಟ್ಟುವ ಕಥಾವಸ್ತುಗಳಿರುವ ಚಿತ್ರಗಳಾದ ಕ್ಯಾಪ್ಟನ್ ಮಗಲ್ ಮತ್ತು ಜಾತಿ ಮಲ್ಲಿ ನಿರೀಕ್ಷೆಯಂತೆ ಪ್ರದರ್ಶನ ಕಾಣದ ಬಗ್ಗೆಯೂ ಅವರು ಸ್ಪಷ್ಟವಾಗಿ ಮಾತನಾಡಿದರು. ಪ್ರತಿಯೊಬ್ಬ ಕಲಾವಿದರೂ ಚಿತ್ರದ ಯಶಸ್ಸಿಗಾಗಿ ಆಶಿಸುವರು, ಆದರೆ ಬಾಕ್ಸ್ ಆಫೀಸ್ ನ ಅನಿರೀಕ್ಷಿತತೆಯು ಅವರು ವಿನಮ್ರರಾಗಿ ಉಳಿಯುವಂತೆ ಮಾಡಲಿದೆ ಎಂದು ಅವರು ಹೇಳಿದರು.

ಅಭಿನಯದ ಭಾವನಾತ್ಮಕ ಬೆನ್ನೆಲುಬಿನ ಬಗ್ಗೆ ಚರ್ಚಿಸುತ್ತಾ ಸುಹಾಸಿನಿ ಅವರು, ಕಲಾವಿದರು ತಮ್ಮ ಪಾತ್ರಗಳಲ್ಲಿ ತಮ್ಮ ನೈಜ ಸ್ವಭಾವವನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗದೇ ತೆರೆಗೆ ತರುವರು ಎಂದು ಸುಹಾಸಿನಿ ಅವರು ಒತ್ತಿ ಹೇಳಿದರು. "ಪ್ರತಿಯೊಂದು ದೃಶ್ಯವೂ ಮಹತ್ವದ್ದಾಗಿದೆ" ಎಂದು ಹೇಳಿದ ಅವರು, "ನೀವು ಹೊಸ ಚಿತ್ರವನ್ನು ಪ್ರಾರಂಭಿಸುತ್ತಿರುವಂತೆ ಪ್ರತಿಯೊಂದನ್ನು ಪ್ರಾರಂಭಿಸಿ ಎಂದು ಸಲಹೆ ನೀಡಿದರು." ಖುಷ್ಬೂ ಅವರ ಪ್ರಕ್ರಿಯೆಯು ಹೆಚ್ಚಾಗಿ ಪಾತ್ರದ ನೋಟ ಮತ್ತು ವಾಸ್ತವಿಕತೆಯನ್ನು ಕಲ್ಪಿಸಿಕೊಳ್ಳುವುದರೊಂದಿಗೆ ಪ್ರಾರಂಭವಾಗಲಿದೆ. ನಿರ್ದೇಶಕರ ದೃಷ್ಟಿಕೋನದ ನೈಜತೆಯನ್ನು ಕಾಪಾಡಲು ಚಿತ್ರೀಕರಣದ ಮೊದಲು ಎಲ್ಲಾ ಮೇಕ್ ಅಪ್ ಗಳನ್ನು ತೆಗೆಯಬೇಕು ಎಂಬ ಬಗ್ಗೆ ಅವರು ಒಂದು ಉಪಾಖ್ಯಾನವನ್ನು ಹಂಚಿಕೊಂಡಿದ್ದಾರೆ. ಪ್ರೇಕ್ಷಕರಲ್ಲಿರುವ ಮಹತ್ವಾಕಾಂಕ್ಷಿ ನಟರನ್ನುದ್ದೇಶಿಸಿ ಮಾತನಾಡಿದ ಸುಹಾಸಿನಿ ಅವರು, ಮಾತೃಭಾಷೆಯಲ್ಲಿ ಸಂಭಾಷಣೆಗಳನ್ನು ಬರೆದು ಅವುಗಳನ್ನು ಪದೇ ಪದೇ ಪರಿಶೀಲಿಸುವ ಮಹತ್ವದ ಬಗ್ಗೆ ಒತ್ತಿ ಹೇಳಿದರು. ಭಾಷೆ, ಕಲಾವಿದರು ಜಯಿಸಬೇಕಾದ ಮೊದಲ ತಡೆಗೋಡೆಯಾಗಿದೆ ಎಂದು ಅವರು ಗಮನಿಸಿದರು.
ನಂತರ ಈ ಕಾರ್ಯಾಗಾರದ ಅವಧಿಯು ವಿವಿಧ ಭಾಷೆಗಳು ಮತ್ತು ದಶಕಗಳ ಸೆಟ್ ಗಳೊಂದಿಗೆ ಅನುಭವಗಳ ಸಮೃದ್ಧ ವಿನಿಮಯಕ್ಕೆ ಕಾರಣವಾಯಿತು. ಖುಷ್ಬೂ ತಮ್ಮ ಮೊದಲ ತಮಿಳು ಚಿತ್ರದ ಸವಾಲುಗಳನ್ನು ವಿವರಿಸಿದರು. ಭಾಷಾ ಜ್ಞಾನವಿಲ್ಲದೇ ಇದ್ದಿದರಿಂದ ಉದ್ಭವಿಸಿದ ಹಾಸ್ಯ ಮತ್ತು ಒಂದೆರಡು ಮುಜುಗರದ ಸಂಗತಿಗಳನ್ನು ನೆನಪು ಮಾಡಿಕೊಂಡರು. ಅವರು ತಮ್ಮ ಸಂಭಾಷಣೆಗಳನ್ನು ಮತ್ತು ಸಹ-ನಟರ ಸಂಭಾಷಣೆಗಳನ್ನೂ ಹಿಂದಿಯಲ್ಲಿ ಬರೆದುಕೊಂಡು ಉತ್ತಮ ಅಭಿನಯ ನೀಡುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದ ಬಗೆಯನ್ನು ವಿವರಿಸಿದರು. ತಾವು ಎಷ್ಟೇ ಅನುಭವ ಹೊಂದಿದ್ದರೂ ಸಂಕೀರ್ಣ ಕನ್ನಡ ಸಂಭಾಷಣೆಯೊಂದರ ಚಿತ್ರೀಕರಣಕ್ಕೆ 29 ಟೇಕ್ ಗಳನ್ನು ತೆಗೆದುಕೊಂಡಿದ್ದನ್ನು ನೆನಪು ಮಾಡಿಕೊಂಡರು ಮತ್ತು ಆ ದೃಶ್ಯವನ್ನು ಪ್ರೇಕ್ಷಕರಿಗೆ ಪರದೆಯ ಮೇಲೆ ಪ್ರದರ್ಶಿಸಲಾಯಿತು.

ದೊಡ್ಡ ಸೆಟ್ ಗಳ ಮುಂದೆ ಸ್ಥೈರ್ಯದಿಂದ ನಿಂತ ಬಗ್ಗೆ, ನಟ ಮಮ್ಮುಟ್ಟಿ ಅವರೆದುರು ಸಾಲುಗಳನ್ನು ಮರೆತ ಬಗ್ಗೆ ಮತ್ತು ಪ್ರತಿಯೊಬ್ಬ ಕಲಾವಿದರೂ ಸದ್ದಿಲ್ಲದೆ ಅನುಭವಿಸುವ ಆರಂಭಿಕ ಹೋರಾಟದ ಬಗ್ಗೆ ಉಭಯರು ಅಭಿಪ್ರಾಯ ವಿನಿಮಯ ಮಾಡಿಕೊಂಡರು. ನಟರಾದ ಚಿರಂಜೀವಿ ಮತ್ತು ವಿಷ್ಣುವರ್ಧನ್ ಅವರಂತಹ ಮಾರ್ಗದರ್ಶಕರ ನಿಖರತೆಯ ಬಗ್ಗೆಯೂ ಸುಹಾಸಿನಿ ಮಾತನಾಡಿದರು, ಅವರ ಸ್ಪಷ್ಟ ಮೌಲ್ಯಮಾಪನಗಳು ಕಲೆಯನ್ನು ಬಲಪಡಿಸಿದವು. ಅಭಿನಯದ ಸೂಕ್ಷ್ಮತೆಯನ್ನು ವಿವರಿಸುತ್ತಾ ಮೋಹನ್ ಲಾಲ್ ಅವರೊಂದಿಗಿನ ವಾನಪ್ರಸ್ತಂ ಚಿತ್ರದ ದೃಶ್ಯವನ್ನು ಉಲ್ಲೇಖಿಸಿ ಮೌಖಿಕವಲ್ಲದ ಕಥೆಯ ನಿರೂಪಣಾ ಶಕ್ತಿಯನ್ನು ವಿವರಿಸಿದರು.
ನಂತರ ಸುಹಾಸಿನಿ ಅವರು ಆಘಾತವನ್ನು ತಿಳಿಸುವ ತಂತ್ರಗಾರಿಕೆಯ ಪ್ರಾತ್ಯಕ್ಷಿಕೆ ನೀಡಿದರು. ಚಿತ್ರೀಕರಣದ ಸಮಯದಲ್ಲಿ "ಗುರಿಯನ್ನು ತಲುಪುವ" ಪ್ರಾಮುಖ್ಯತೆಯನ್ನು ಮತ್ತು ಸೂಕ್ಷ್ಮ ಚಲನೆಗಳು ನಿರೂಪಣೆಯ ಸ್ಪಷ್ಟತೆಯನ್ನು ಹೇಗೆ ರೂಪಿಸುತ್ತವೆ ಎಂಬ ಬಗ್ಗೆ ಪ್ರದರ್ಶಿಸಿದರು, ಇದು ಸಂಕ್ಷಿಪ್ತ ಆದಾಗ್ಯೂ ಒಳನೋಟವುಳ್ಳ ವೇದಿಕೆಯ ಮಾಸ್ಟರ್ ಕ್ಲಾಸ್ ಆಯಿತು.
ಕಾರ್ಯಕ್ರಮದಲ್ಲಿ ಎರಡು ಭಾವ ಪ್ರಚೋದಕ ಸನ್ನಿವೇಶಗಳ ಪ್ರದರ್ಶನ:
ಚಿನ್ನತಂಬಿ ಚಿತ್ರದಲ್ಲಿನ ವಿಶಿಷ್ಟ ಸನ್ನಿವೇಶವನ್ನು ಖುಷ್ಬೂ ಅವರು ಪ್ರದರ್ಶಿಸುತ್ತಾ ಅವರ ಕಣ್ಣಾಲಿಗಳು ತುಂಬಿ ಬರುತ್ತಿದ್ದಂತೆ ಪ್ರೇಕ್ಷಕರ ಕರತಾಡನ ಜೋರಾಯಿತು.
ಕಣ್ಣಕಿ ಚಿತ್ರದ ಒಂದು ದೃಶ್ಯವನ್ನು ಸುಹಾಸಿನಿ ಅವರು ಪ್ರಸ್ತುತಪಡಿಸುತ್ತಿರುವಂತೆ ಡ್ಯಾನ್ಸ್ ಮಾಸ್ಟರ್ ಕಲಾ ಅವರು ಸ್ವಯಂಪ್ರೇರಿತರಾಗಿ ವೇದಿಕೆಯತ್ತ ಬಂದು ಮುಂದಿನ ಹೆಜ್ಜೆಗಳಿಗೆ ಮಾರ್ಗದರ್ಶನ ನೀಡಲು, ಪ್ರೇಕ್ಷಕರು ಸಂತಸಗೊಂಡರು.
ಭಾರತೀಯ ಸಿನಿಮಾವನ್ನು ರೂಪಿಸುತ್ತಿರುವ ಇಬ್ಬರು ಕಲಾವಿದರ ಮಾರ್ಗದರ್ಶನ, ಸ್ಮರಣಶಕ್ತಿ, ತಂತ್ರಗಾರಿಕೆ ಮತ್ತು ಜೀವಂತ ಜ್ಞಾನ ಸಂಯೋಜನೆಯ ಸಂವಾದ ಕಾರ್ಯಕ್ರಮವು ಸಂವಾದಾತ್ಮಕ ಪ್ರಶ್ನೋತ್ತರಗಳೊಂದಿಗೆ ಮುಕ್ತಾಯಗೊಂಡಿತು.
ಐ.ಎಫ್.ಎಫ್.ಐ ಬಗ್ಗೆ
1952 ರಲ್ಲಿ ಜನಿಸಿದ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (ಐ.ಎಫ್.ಎಫ್.ಐ) ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನೆಮಾ ಆಚರಣೆಯಾಗಿದೆ. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್‌ಎಫ್‌ಡಿಸಿ) ಮತ್ತು ಗೋವಾ ರಾಜ್ಯ ಸರ್ಕಾರದ ಎಂಟರ್ಟೈನ್ಮೆಂಟ್ ಸೊಸೈಟಿ ಆಫ್ ಗೋವಾ (ಇಎಸ್‌ಜಿ ) ಜಂಟಿಯಾಗಿ ಆಯೋಜಿಸಿರುವ ಈ ಉತ್ಸವವು ಜಾಗತಿಕ ಸಿನಿಮೀಯ ಶಕ್ತಿ ಕೇಂದ್ರವಾಗಿ ಬೆಳೆದಿದೆ-ಅಲ್ಲಿ ಪುನಃಸ್ಥಾಪಿಸಲಾದ ಕ್ಲಾಸಿಕ್‌ಗಳು ದಿಟ್ಟ ಪ್ರಯೋಗಗಳನ್ನು ಎದುರಿಸುತ್ತವೆ ಮತ್ತು ಪೌರಾಣಿಕ ಮಾಂತ್ರಿಕರು ನಿರ್ಭೀತ ಮೊದಲ ಬಾರಿಗೆ ಆಟಗಾರರೊಂದಿಗೆ ಸ್ಥಳವನ್ನು ಹಂಚಿಕೊಳ್ಳುತ್ತಾರೆ. ಐ.ಎಫ್.ಎಫ್.ಐಅನ್ನು ನಿಜವಾಗಿಯೂ ಹೊಳೆಯುವಂತೆ ಮಾಡುವುದು ಅದರ ಎಲೆಕ್ಟ್ರಿಕ್ ಮಿಶ್ರಣ-ಅಂತಾರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್ ಕ್ಲಾಸ್‌ಗಳು, ಗೌರವ ನಮನಗಳು ಮತ್ತು ಆಲೋಚನೆಗಳು, ಒಪ್ಪಂದಗಳು ಮತ್ತು ಸಹಯೋಗಗಳು ಹಾರಾಟ ನಡೆಸುವ ಹೈ-ಎನರ್ಜಿ ವೇವ್ಸ್ ಫಿಲ್ಮ್ ಬಜಾರ್. ನವೆಂಬರ್ 20-28 ರವರೆಗೆ ಗೋವಾದ ಬೆರಗುಗೊಳಿಸುವ ಕರಾವಳಿ ಹಿನ್ನೆಲೆಯಲ್ಲಿ ಪ್ರದರ್ಶನಗೊಂಡ 56ನೇ ಆವೃತ್ತಿಯು ಭಾಷೆಗಳು, ಪ್ರಕಾರಗಳು, ಆವಿಷ್ಕಾರಗಳು ಮತ್ತು ಧ್ವನಿಗಳ ಬೆರಗುಗೊಳಿಸುವ ವರ್ಣಪಟಲವನ್ನು ಭರವಸೆ ನೀಡುತ್ತದೆ. ಇದು ವಿಶ್ವ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ತಲ್ಲೀನಗೊಳಿಸುವ ಆಚರಣೆಯಾಗಿದೆ.
For more information, click on:
IFFI Website: https://www.iffigoa.org/
PIB’s IFFI Microsite: https://www.pib.gov.in/iffi/56new/
PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F
X Handles: @IFFIGoa, @PIB_India, @PIB_Panaji
*****
Release ID:
2192785
| Visitor Counter:
5