iffi banner

56ನೇ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ.)ಕ್ಕಾಗಿ ಸಲ್ಲಿಕೆಯಾದ 500 ಚಲನಚಿತ್ರಗಳಲ್ಲಿ 20 ಚಲನಚಿತ್ರಗಳನ್ನು ಆಯ್ದ ಕಿರು ಪಟ್ಟಿ ತಯಾರು ಮಾಡಲಾಗಿದೆ, ಈ ಮೂಲಕ ಭಾರತೀಯ ಚಲನಚಿತ್ರದ ಕಥೇತರ(ನಾನ್-ಫೀಚರ್) ವರ್ಗದ ತೀರ್ಪುಗಾರರ ತಂಡಕ್ಕೆ ಕೆಲಸ ಕಠಿಣವಾದರೂ ಆನಂದದಾಯಕ ಅನುಭವವಾಯಿತು


"ನಾವು ವಿಷಯದ ಮೇಲೆ ಕೇಂದ್ರೀಕರಿಸಿದ್ದೇವೆ, ಅದು ಬೇರೆ ಯಾವುದಕ್ಕಿಂತ ಹೆಚ್ಚು ಮುಖ್ಯವಾಗಿದೆ" ಎಂದು ಭಾರತೀಯ ನಾನ್-ಫೀಚರ್ ವರ್ಗದ ತೀರ್ಪುಗಾರರ ತಂಡದ (ಇಂಡಿಯನ್ ಪನೋರಮಾ ನಾನ್-ಫೀಚರ್ ಜ್ಯೂರಿಯ ಜ್ಯೂರಿ) ಅಧ್ಯಕ್ಷರಾದ ಶ್ರೀ ಧರಮ್ ಗುಲಾಟಿ ಹೇಳಿದರು

ಚಲನಚಿತ್ರಗಳನ್ನು ಆಯ್ಕೆಗಾಗಿ ಕಿರುಪಟ್ಟಿ ಮಾಡುವ ಪ್ರಕ್ರಿಯೆಯ ಕುರಿತು "ನಾವು ಭಾರತವನ್ನು ಆಯ್ಕೆ ಮಾಡಿದ್ದೇವೆ" ಎಂದು ಭಾರತೀಯ ನಾನ್-ಫೀಚರ್ ವರ್ಗದ ತೀರ್ಪುಗಾರರ ತಂಡದ ಸದಸ್ಯರಾದ ಶ್ರೀ ಅಶೋಕ್ ಕಶ್ಯಪ್ ಅವರು ಹೇಳಿದರು

56ನೇ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ.)ದ ನಾನ್-ಫೀಚರ್ ವರ್ಗದ ಚಲನಚಿತ್ರಗಳ ಆಯ್ಕೆಯು ಭಾರತೀಯ ಚಲನಚಿತ್ರಗಳ ವೈವಿಧ್ಯತೆಯನ್ನು ಎತ್ತಿ ತೋರಿಸುತ್ತದೆ

"ಒಟ್ಟಾರೆ 500 ಚಲನಚಿತ್ರಗಳ ಸಲ್ಲಿಕೆಗಳಲ್ಲಿ ಕೇವಲ 20 ಚಲನಚಿತ್ರಗಳನ್ನು ಆಯ್ಕೆ ಮಾಡುವುದು ನಿಜವಾಗಿಯೂ ಕಠಿಣವಾಗಿತ್ತು!" ಎಂದು 56ನೇ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರೋತ್ಸವದ (ಐ.ಎಫ್.ಎಫ್.ಐ.) ಇಂಡಿಯನ್ ಪನೋರಮಾ (ಐ.ಪಿ.) ನಾನ್-ಫೀಚರ್ ಜ್ಯೂರಿಯ ಅಧ್ಯಕ್ಷರಾದ ಶ್ರೀ ಧರಮ್ ಗುಲಾಟಿ ಅವರು ಹೇಳಿದರು. ಅವರ ಅಭಿಪ್ರಾಯವನ್ನು ತೀರ್ಪುಗಾರರ ತಂಡದ ಎಲ್ಲಾ ಸದಸ್ಯರು ಪ್ರತಿಧ್ವನಿಸಿದರು! ತಂಡದ ಸಹ ತೀರ್ಪುಗಾರ ಸದಸ್ಯರಾದ ಶ್ರೀಮತಿ ಅಂಜಲಿ ಪಂಜಾಬಿ, ಶ್ರೀ ಅಶೋಕ್ ಕಶ್ಯಪ್, ಶ್ರೀಮತಿ ಬಾಬಿ ಶರ್ಮಾ ಬರುವಾ, ಶ್ರೀಮತಿ ರೇಖಾ ಗುಪ್ತಾ, ಶ್ರೀ ಎ. ಕಾರ್ತಿಕ್ ರಾಜ ಮತ್ತು ಶ್ರೀಮತಿ ಜ್ಯೋತ್ಸನಾ ಗಾರ್ಗ್ ಅವರೊಂದಿಗೆ ಅಧ್ಯಕ್ಷರಾದ ಶ್ರೀ ಧರಮ್ ಗುಲಾಟಿ ಅವರು ಇಂದು ಗೋವಾದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಎಲ್ಲಾ ಚಲನಚಿತ್ರಗಳನ್ನು ಸಂಪೂರ್ಣವಾಗಿ ವೀಕ್ಷಿಸುವುದನ್ನು ಎಲ್ಲ ತೀರ್ಪುಗಾರರೂ ಸರ್ವಾನುಮತದಿಂದ ಆನಂದಿಸಿದ್ದಾರೆ ಎಂದು ಅವರು ಹೇಳಿದರು.

ನಾವು ಆಯ್ಕೆ ಮಾಡಿದ ಯಾವುದೇ ಚಲನಚಿತ್ರಗಳಿಗೂ, ಎಲ್ಲಾ ತೀರ್ಪುಗಾರರ ಸದಸ್ಯರು ಒಂದೇ ಅಭಿಪ್ರಾಯದಲ್ಲಿದ್ದಾರೆ ಎಂದು ನಾನ್-ಫೀಚರ್ಸ್ ಜ್ಯೂರಿಯ ಅಧ್ಯಕ್ಷ ಶ್ರೀ ಧರಮ್ ಗುಲಾಟಿ ಅವರು ಹೇಳಿದರು. "ಮೂಲತಃ, ನಾವು ಚಲನಚಿತ್ರದ ವಿಷಯವನ್ನು ವೀಕ್ಷಿಸುತ್ತಿದ್ದೆವು, ಅದು ನಮಗೆ ಬೇರೆ ಎಲ್ಲಕ್ಕಿಂತ ಹೆಚ್ಚು ಮುಖ್ಯವಾಗಿದೆ" ಎಂದು ಅವರು ಹೇಳಿದರು. ಐಪಿ ನಾನ್-ಫೀಚರ್ಸ್ ಗೆ ಆಯ್ಕೆಯಾಗದ ಚಲನಚಿತ್ರ ನಿರ್ಮಾಪಕರು ತಮ್ಮ ಚಲನಚಿತ್ರಗಳನ್ನು ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಎಂ.ಐ.ಎಫ್.ಎಫ್.) ಮತ್ತು ಇತರ ಚಲನಚಿತ್ರೋತ್ಸವ ಉತ್ಸವಗಳಿಗೆ ಕಳುಹಿಸಬೇಕೆಂದು ಅವರು ಚಲನಚಿತ್ರ ನಿರ್ಮಾಪಕರನ್ನು ಈ ಮೂಲಕ ಒತ್ತಾಯಿಸಿದರು.

ಚಲನಚಿತ್ರಗಳನ್ನು ಆಯ್ಕೆ ಮಾಡುವಾಗ, ವಿವಿಧ ಪ್ರದೇಶಗಳು ಮತ್ತು ವಿಭಿನ್ನ ಭಾಷೆಗಳಿಂದ ಚಲನಚಿತ್ರಗಳನ್ನು ಆಯ್ಕೆ ಮಾಡಬೇಕೆಂದು ಎಲ್ಲಾ ತೀರ್ಪುಗಾರರು ಭಾವಿಸಿದ್ದರು ಎಂದು ಅವರು ಹೇಳಿದರು.

ಐಪಿ ನಾನ್-ಫೀಚರ್ಸ್ ವಿಭಾಗದಲ್ಲಿ ಪ್ರದರ್ಶಿಸಲಾಗುತ್ತಿರುವ ಒಟ್ಟಾರೆ 20 ಚಲನಚಿತ್ರಗಳ ಆಯ್ದ ಕಿರು ಪಟ್ಟಿ ತಯಾರಿ ಮಾಡುವಲ್ಲಿನ ತಮ್ಮ ಅನುಭವದ ಬಗ್ಗೆ ಅವರು ವಿವರಣೆ ನೀಡಿದರು ಮತ್ತು ಅವರು ಹೆಚ್ಚು ಇಷ್ಟಪಟ್ಟ ಯೋಜನೆಗಳ ಬಗ್ಗೆ ಇತರ ತೀರ್ಪುಗಾರರ ಸದಸ್ಯರು ಕೂಡಾ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಶ್ರೀ ಧರಮ್ ಗುಲಾಟಿ ಅವರು ಮಣಿಪುರದಲ್ಲಿ ಚಿತ್ರೀಕರಿಸಲಾದ 'ಬ್ಯಾಟಲ್ಫೀಲ್ಡ್' ಎಂಬ ಸಾಕ್ಷ್ಯಚಿತ್ರದ ಬಗ್ಗೆ ಈ ಸಂದರ್ಭದಲ್ಲಿ ಉಲ್ಲೇಖಿಸಿದರು. ಇದು 1944ರಲ್ಲಿ ಮಣಿಪುರವನ್ನು ಧ್ವಂಸಗೊಳಿಸಿದ ಎರಡನೇ ಮಹಾಯುದ್ಧದ ಅತ್ಯಂತ ರಕ್ತಸಿಕ್ತ ಯುದ್ಧಗಳಲ್ಲಿ ಒಂದಾದ ಇಂಫಾಲ್ ಕದನವನ್ನು ಆಧರಿಸಿ ತಯಾರಿಸಲಾದ ಚಲನಚಿತ್ರವಾಗಿದೆ, ಇದು ಅಲ್ಲಿನ ಜನರ ಮೇಲೆ ಆಳವಾದ ಕಷ್ಟ-ನಷ್ಟ--ಗಾಯ-ನೋವುಗಳನ್ನು ಮೂಡಿಸಿತ್ತು.

ತೀರ್ಪುಗಾರರ ಸದಸ್ಯೆ ಶ್ರೀಮತಿ ಅಂಜಲಿ ಪಂಜಾಬಿ ಅವರು ಭಾರತೀಯ ಪನೋರಮಾ ನಾನ್-ಫೀಚರ್ ವಿಭಾಗವು ಸಣ್ಣ ಕಾದಂಬರಿ ಆಧರಿತ ಚಲನಚಿತ್ರಗಳ ಗಮನಾರ್ಹ ನಿಧಿಯಾಗಿದೆ, "ಈ ವರ್ಷ, ನಾವು ಚಲನಚಿತ್ರಗಳ ಊಹಿಸಲಾಗದಷ್ಟು ಪ್ರಮಾಣದ ವೈವಿಧ್ಯತೆಯನ್ನು ವೀಕ್ಷಿಸುವ ಅದೃಷ್ಟಶಾಲಿಯಾಗಿದ್ದೇವೆ” ಎಂದು ಹೇಳಿದರು, ಹಾಗೂ, ಚಲನಚಿತ್ರ ನಿರ್ಮಾಣ ಮತ್ತು ಹಣಕಾಸಿನ ನಿರ್ಬಂಧಗಳನ್ನು ಮೀರಿ, ಸಣ್ಣ ಕಾದಂಬರಿಗಳು ನೀಡುವ ಸ್ವಾತಂತ್ರ್ಯವನ್ನು ಎತ್ತಿ ತೋರಿಸುತ್ತಾ, “ಅನುಭವಿ ಚಲನಚಿತ್ರ ನಿರ್ಮಾಪಕರು ಮತ್ತು ಉದಯೋನ್ಮುಖ ವಿದ್ಯಾರ್ಥಿ ಹಾಗೂ ಚಲನಚಿತ್ರ ನಿರ್ಮಾಪಕರು, ಚಿತ್ರ ಸೃಷ್ಟಿಕರ್ತರು - ಕಥೆ ಹೇಳುವ ಈ ಶ್ರೀಮಂತ ವ್ಯವಸ್ಥೆಗೆ (ಚಲನಚಿತ್ರ) ತುಂಬಾ ಕೊಡುಗೆ ನೀಡಿದ್ದಾರೆ” ಎಂದು ಹೇಳಿದರು. ಆರಂಭಿಕ ನಾನ್-ಫೀಚರ್, ಕಾಕೋರಿಯನ್ನು ಕಾದಂಬರಿ ಮತ್ತು ಕಾಲ್ಪನಿಕವಲ್ಲದ ವಿಶಿಷ್ಟ ಮಿಶ್ರಣ ಕಥೆಗಾಗಿ  ಶ್ರೀಮತಿ ಅಂಜಲಿ ಪಂಜಾಬಿ ಅವರು ವಿಶೇಷವಾಗಿ ಉಲ್ಲೇಖಿಸಿದರು.

ಸಿಕ್ಕಿಂ ಚಲನಚಿತ್ರ ಶಾಂಗ್ರಿಲಾ ಮತ್ತು ಅಸ್ಸಾಮಿ ಚಲನಚಿತ್ರ ಪತ್ರಲೇಖಾದಂತಹ ಯೋಜನೆಗಳನ್ನು ಅವುಗಳ ಸೃಜನಶೀಲತೆ ಮತ್ತು ಸಾಂಸ್ಕೃತಿಕ ಆಳಕ್ಕಾಗಿ ತೀರ್ಪುಗಾರರು ಶ್ಲಾಘಿಸಿದರು, ಶ್ರೀಮತಿ ಬಾಬಿ ಶರ್ಮಾ ಬರುವಾ ಅವರು ಭಾರತದ ಈಶಾನ್ಯ ಭಾಗದ ಪ್ರಾತಿನಿಧ್ಯದತ್ತ ವಿಶೇಷ ಗಮನ ಸೆಳೆದರು.

ಒಟ್ಟಾರೆ 505 ಚಲನಚಿತ್ರಗಳ ಸಲ್ಲಿಕೆಗಳಲ್ಲಿ, ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಕಾಕೋರಿ ಘಟನೆಯ ಶತಮಾನೋತ್ಸವದ ವರ್ಷಕ್ಕೆ ಹೊಂದಿಕೆಯಾಗುವ, ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಅಪ್ರಕಟಿತ ವೀರರ ಕಥೆಗಳನ್ನು ಆಚರಿಸುವ ಏಕೈಕ ಚಿತ್ರ ಇದಾಗಿದೆ ಎಂದು ಶ್ರೀಮತಿ ರೇಖಾ ಗುಪ್ತಾ ಅವರು ಹೇಳಿದರು. ಭೌಗೋಳಿಕ ಮತ್ತು ಆಧ್ಯಾತ್ಮಿಕ ಪರಿಶೋಧನೆಯನ್ನು ಪ್ರತಿಬಿಂಬಿಸುವ ಪವಿತ್ರ ಆದಿ ಕೈಲಾಶ್ ಸೇರಿದಂತೆ ಭಾರತದಿಂದ ಮನೋಸರೋವರಕ್ಕೆ ಹೋಗುವ ಮಾರ್ಗದಲ್ಲಿ ಪ್ರಯಾಣವನ್ನು ಸುಂದರವಾಗಿ ಸೆರೆಹಿಡಿಯುವ ಆದಿ ಕೈಲಾಶ್ ಚಿತ್ರವನ್ನು ಅವರು ಈ ಸಂದರ್ಭದಲ್ಲಿ ವಿಶೇಷ ರೀತಿಯಲ್ಲಿ ಹೈಲೈಟ್ ಮಾಡಿದರು.

ರಾಜಸ್ಥಾನದ ರಾಜಸಮುಂಡ್ ಜಿಲ್ಲೆಯ ದಾರ್ಶನಿಕ ಸರಪಂಚರೊಬ್ಬರ ಕಥೆಯನ್ನು ವಿವರಿಸುವ ಪಿಪ್ಲಾಂಟ್ರಿ ಚಿತ್ರವನ್ನು ಶ್ರೀಮತಿ ಜ್ಯೋಸ್ತಾನ ಗಾರ್ಗ್ ಅವರು ಎಲ್ಲರೂ ವೀಕ್ಷಿಸಲು ಶಿಫಾರಸು ಮಾಡಿದರು.  ಹೆಣ್ಣು ಭ್ರೂಣ ಹತ್ಯೆ, ನೀರಿನ ಮಟ್ಟ ಕುಸಿಯುವುದು ಮತ್ತು ಅರಣ್ಯನಾಶದ ಸಾಮಾಜಿಕ ಸಮಸ್ಯೆಗಳಿಗೆ ಅನನ್ಯವಾಗಿ ವ್ಯವಹರಿಸಿ ಪರಿಹಾರಗಳನ್ನು ಅವರು ವಾಸ್ತವಿಕವಾಗಿ ಅಳವಡಿಸಿದ್ದರು. 'ನೀಲಗಿರಿ' ಚಿತ್ರವನ್ನು ಅವರ ಉತ್ತಮ ಛಾಯಾಗ್ರಹಣಕ್ಕಾಗಿ ಶ್ರೀಮತಿ ಜ್ಯೋಸ್ತಾನ ಗಾರ್ಗ್ ಅವರು ಶ್ಲಾಘಿಸಿದರು.

ತೀರ್ಪುಗಾರರ ಸಮಿತಿಯು ಒಟ್ಟಾರೆ 500 ಚಲನಚಿತ್ರಗಳ ಸಲ್ಲಿಕೆಗಳಲ್ಲಿ 20 ಉತ್ತಮ ಚಲನಚಿತ್ರಗಳನ್ನು ಆಯ್ಕೆ ಮಾಡಿದೆ ಎಂದು ಶ್ರೀ ಕಾರ್ತಿಕ್ ರಾಜ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ನಾವು ಕೇವಲ ವಿಷಯ, ನಿರ್ಮಾಣ, ಪ್ರಸ್ತುತಿ ಮತ್ತು ಭಾಷೆಯನ್ನು ಮಾತ್ರ ನೋಡಬೇಕಾಗಿತ್ತು. ನಿರ್ಧಾರ ತೆಗೆದುಕೊಳ್ಳುವುದು ಕಠಿಣವಾಗಿತ್ತು. ಐ.ಎಫ್.ಎಫ್.ಐ.ಯ ಭಾರತೀಯ ಪನೋರಮಾ ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಆದ್ದರಿಂದ, ನಾವು ಭಾರತವನ್ನು ಆಯ್ಕೆ ಮಾಡಿದ್ದೇವೆ" ಎಂದು ಹೇಳುವ ಮೂಲಕ ಶ್ರೀ ಅಶೋಕ್ ಕಶ್ಯಪ್ ಅವರು ತೀರ್ಪುಗಾರರ ಕೆಲಸವನ್ನು ಒಟ್ಟಾರೆ ಸಂಕ್ಷೇಪಿಸಿದರು! 

ಐ.ಎಫ್.ಎಫ್.ಐ. ಬಗ್ಗೆ

1952ರಲ್ಲಿ ಪ್ರಾರಂಭವಾದ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ.) ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಆಚರಣೆಯಾಗಿ ಅತ್ಯಂತ ಗೌರವದಿಂದ ಹೆಮ್ಮೆಯಾಗಿ ನಿಂತಿದೆ. ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ , ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಭಾರತ ಸರ್ಕಾರ ಮತ್ತು ಗೋವಾ ರಾಜ್ಯ ಸರ್ಕಾರ, ಗೋವಾ ಮನರಂಜನಾ ಸೊಸೈಟಿ  ಜಂಟಿಯಾಗಿ ಆಯೋಜಿಸಿರುವ ಈ ಚಲನಚಿತ್ರ ಉತ್ಸವವು ಜಾಗತಿಕ ಸಿನಿಮೀಯ ಶಕ್ತಿ ಕೇಂದ್ರವಾಗಿ ಬೆಳೆದಿದೆ - ಅಲ್ಲಿ ಪುನಃಸ್ಥಾಪಿಸಲಾದ ಕ್ಲಾಸಿಕ್ಗಳು ದಿಟ್ಟ ಪ್ರಯೋಗಗಳನ್ನು ಎದುರಿಸುತ್ತವೆ ಮತ್ತು ಪೌರಾಣಿಕ ಕಲಾವಿದರು ನಿರ್ಭೀತ ಮೊದಲ ಬಾರಿಗೆ ಬರುವವರೊಂದಿಗೆ ಜಾಗವನ್ನು ಹಂಚಿಕೊಳ್ಳುತ್ತಾರೆ. ಐ.ಎಫ್.ಎಫ್.ಐ. ಅನ್ನು ನಿಜವಾಗಿಯೂ ಹೊಳೆಯುವಂತೆ ಮಾಡುವುದು ಅದರ ಸೃಜನಶೀಲ ಮಿಶ್ರಣ - ಅಂತಾರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್ಕ್ಲಾಸ್ಗಳು, ಗೌರವಗಳು ಮತ್ತು ಕಲ್ಪನೆಗಳು, ಒಪ್ಪಂದಗಳು ಮತ್ತು ಸಹಯೋಗಗಳು ಹಾರುವ ಉನ್ನತ-ಶಕ್ತಿಯ ವೇವ್ಸ್ ಫಿಲ್ಮ್ ಬಜಾರ್.  ನವೆಂಬರ್ 20 ರಿಂದ 28, 2025 ರವರೆಗೆ ಗೋವಾದ ಬೆರಗುಗೊಳಿಸುವ ಅತ್ಯಾಕರ್ಷಕ ಕರಾವಳಿ ಹಿನ್ನೆಲೆಯಲ್ಲಿ ಪ್ರದರ್ಶಿಸಲಾಗುವ 56 ನೇ ಆವೃತ್ತಿಯು ಭಾಷೆಗಳು, ಪ್ರಕಾರಗಳು, ನಾವೀನ್ಯತೆಗಳು ಮತ್ತು ಧ್ವನಿಗಳ ಅದ್ಭುತ ವರ್ಣಪಟಲವನ್ನು ಭರವಸೆ ನೀಡುತ್ತದೆ - ಇದು ವಿಶ್ವ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ತಲ್ಲೀನಗೊಳಿಸುವ ವಿಶೇಷ ಆಚರಣೆಯಾಗಿದೆ.

ಹೆಚ್ಚಿನ ಮಾಹಿತಿಗಾಗಿ:

IFFI Website: https://www.iffigoa.org/

PIB’s IFFI Microsite: https://www.pib.gov.in/iffi/56new/

PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F

X Handles: @IFFIGoa, @PIB_India, @PIB_Panaji

 

*****


Great films resonate through passionate voices. Share your love for cinema with #IFFI2025, #AnythingForFilms and #FilmsKeLiyeKuchBhi. Tag us @pib_goa on Instagram, and we'll help spread your passion! For journalists, bloggers, and vloggers wanting to connect with filmmakers for interviews/interactions, reach out to us at iffi.mediadesk@pib.gov.in with the subject line: Take One with PIB.


Release ID: 2192781   |   Visitor Counter: 3