ಐತಿಹಾಸಿಕ ಭವ್ಯ ಪರೇಡ್ ನೊಂದಿಗೆ ಕಾರ್ನಿವಲ್ ಶೈಲಿಯಲ್ಲಿ ಪಣಜಿಯಲ್ಲಿ 56ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (ಐಎಫ್ಎಫ್ಐ) ಚಾಲನೆ
ಪಣಜಿಯಲ್ಲಿ 56ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಅದ್ಭುತ ಭವ್ಯ ಮೆರವಣಿಗೆಯೊಂದಿಗೆ ಪ್ರಾರಂಭವಾಗಿದ್ದು, ಇದೇ ಮೊದಲ ಬಾರಿಗೆ ಸಿನಿ ಉತ್ಸವಕ್ಕೆ ಇಂತಹ ಭವ್ಯ ಚಾಲನೆ ದೊರೆತಿದ್ದು, ಇದು ಐತಿಹಾಸಿಕ ಪ್ರಥಮವಾಗಿದೆ. ಚಲನಚಿತ್ರ ನಿರ್ಮಾಣ ಸಂಸ್ಥೆಗಳು, ಭಾಗಿದಾರ ರಾಜ್ಯಗಳು ಮತ್ತು ಸಾಂಸ್ಕೃತಿಕ ತಂಡಗಳ ಪರೇಡ್ ವಾಹನಗಳು ಹಳೆಯ ಗೋವಾ ವೈದ್ಯಕೀಯ ಕಾಲೇಜು ಕಟ್ಟಡದಿಂದ ಕಲಾ ಅಕಾಡೆಮಿಗೆ ಸ್ಥಳಾಂತರಗೊಳ್ಳುತ್ತಿದ್ದಂತೆ ನವೆಂಬರ್ 20ರ ಮೆರವಣಿಗೆಯು ನಗರದ ಡಿಬಿ ರಸ್ತೆಯನ್ನು ರೋಮಾಂಚಕ ಸಾಂಸ್ಕೃತಿಕ ಕಾರಿಡಾರ್ ಆಗಿ ಪರಿವರ್ತಿಸಿತು. ಗೋವಾ ಸರ್ಕಾರ ಪ್ರಸ್ತುತಪಡಿಸಿದ 12 ಸೇರಿದಂತೆ ಎರಡು ಡಜನ್ ಗಿಂತಲೂ ಹೆಚ್ಚಿನ ವಾಹನಗಳು ಭಾರತದ ಸಿನಿಮಾ ಪರಂಪರೆ, ಆ್ಯನಿಮೇಷನ್ ಮತ್ತು ಪ್ರಾದೇಶಿಕ ಮಹತ್ವಗಳನ್ನು ಸಂಭ್ರಮಿಸುವ ವಿಚಾರಗಳನ್ನು ಪ್ರದರ್ಶಿಸಿದವು. ಪ್ರಸಾರ ಮತ್ತು ಸಂವಹನ ಸಚಿವಾಲಯದ ಅಡಿಯಲ್ಲಿನ ಕೇಂದ್ರೀಯ ಸಂವಹನ ಬ್ಯೂರೋ ನಿರ್ಮಿಸಿದ ದೊಡ್ಡ ಜಾನಪದ ನಿರ್ಮಾಣವಾದ "ಭಾರತ್ ಏಕ್ ಸೂರ್" (ಭಾರತ ಒಂದು ನೆಲೆ) ಪ್ರಮುಖ ಆಕರ್ಷಣೆಯಾಗಿತ್ತು. ಇದರಲ್ಲಿ 100ಕ್ಕೂ ಹೆಚ್ಚು ಕಲಾವಿದರು ಸಾಂಪ್ರದಾಯಿಕ ನೃತ್ಯಗಳನ್ನು ಪ್ರಸ್ತುತಪಡಿಸಿದರು. ಇದರ ಜೊತೆಗೆ ಛೋಟಾ ಭೀಮ್, ಮೋಟು ಪಟ್ಲು ಮತ್ತು ಬಿಟ್ಟು ಬಹನೇಬಾಜ್ ನಂತಹ ನಲ್ಮೆಯ ಆ್ಯನಿಮೇಟೆಡ್ ಪಾತ್ರಗಳೂ ಇದ್ದು, ಪ್ರೇಕ್ಷಕರ ಉತ್ಸಾಹಭರಿತ ಪ್ರತಿಕ್ರಿಯೆಗಳನ್ನು ಸೆಳೆಯಿತು.
ಪಣಜಿಯಾದ್ಯಂತ ಉತ್ಸವ/ಜಾತ್ರೆಯಂತಹ ವಾತಾವರಣ ಸೃಷ್ಟಿಸಿದ ಮೆರವಣಿಗೆಯು ಸಿನಿ ಉತ್ಸವದ ಉದ್ಘಾಟನೆಯನ್ನು ಸಭಾಂಗಣದೊಳಗಿನ ಸಮಾರಂಭಕ್ಕಿಂತ ಭಿನ್ನವಾಗಿ ಎಲ್ಲರನ್ನೂ ಒಳಗೊಂಡ ಸಾರ್ವಜನಿಕ ಆಚರಣೆಯನ್ನಾಗಿ ಪರಿವರ್ತಿಸಿದೆ. ಫ್ಲೋಟ್ (ಸಾಂಸ್ಕೃತಿಕ ವಾಹನ ಪ್ರಸ್ತುತಿಗಳು), ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ನೇರ ಸಂಗೀತ ಕಾರ್ಯಕ್ರಮಗಳನ್ನು ವೀಕ್ಷಿಸಲು ಸಾವಿರಾರು ಸ್ಥಳೀಯರು, ಪ್ರವಾಸಿಗರು ಮತ್ತು ಪ್ರತಿನಿಧಿಗಳು ರಸ್ತೆಗಳಲ್ಲಿ ಸಾಲುಗಟ್ಟಿ ನಿಂತಿದ್ದು, ಇದು ಈವರೆಗಿನ ಅತ್ಯಂತ ಸ್ಮರಣೀಯ ಐಎಫ್‌ಎಫ್‌ಐ ಉದ್ಘಾಟನೆಗಳಲ್ಲಿ ಒಂದಾಗಿದೆ. ಈ ಕಾರ್ಯಕ್ರಮವು ಗೋವಾದ ಉತ್ಸವ ಉತ್ಸಾಹವನ್ನು ಸಿನಿಮಾದ ಭವ್ಯತೆಯೊಂದಿಗೆ ಯಶಸ್ವಿಯಾಗಿ ಸಮ್ಮಿಳಿತಗೊಳಿಸುತ್ತಾ, ಒಂಭತ್ತು ದಿನಗಳ ಸಂಭ್ರಮಾಚರಣೆಗೆ ಚೈತನ್ಯದ ನಾದ ಹೊಂದಿಸಿದೆ.

ಪಣಜಿಯಲ್ಲಿ ರೋಮಾಂಚಕ ಭವ್ಯ ಮೆರವಣಿಗೆಯೊಂದಿಗೆ ಐಎಫ್‌ಎಫ್‌ಐ 2025ಕ್ಕೆ ಗೋವಾ ಮುಖ್ಯಮಂತ್ರಿ ಶ್ರೀ ಪ್ರಮೋದ್ ಸಾವಂತ್ ಮತ್ತು ಗೋವಾ ರಾಜ್ಯಪಾಲರಾದ ಶ್ರೀ ಪುಷ್ಪಕ್ ಅಶೋಕ್ ಗಜಪತಿ ರಾಜು ಅವರಿಂದ ಚಾಲನೆ

ಪಣಜಿಯಲ್ಲಿ ನಡೆದಿರುವ ಐಎಫ್‌ಎಫ್‌ಐ 2025ರ ಭವ್ಯ ಪರೇಡ್ ನಲ್ಲಿ ಅನುಪಮ್ ಖೇರ್, ಶೇಖರ್ ಕಪೂರ್ ಮತ್ತು ನಂದಮೂರಿ ಬಾಲಕೃಷ್ಣ ಅವರ ಗಮನಾರ್ಹ ಉಪಸ್ಥಿತಿ

ಐಎಫ್‌ಎಫ್‌ಐ 2025ರ ಭವ್ಯ ಪೆರೇಡ್ ನಲ್ಲಿ ಉತ್ಸಾಹಭರಿತ ಪ್ರದರ್ಶನದ ಮೂಲಕ ಪ್ರೇಕ್ಷಕರನ್ನು ಸೆಳೆದ ಒಲವಿನ ಆ್ಯನಿಮೇಟೆಡ್ ಪಾತ್ರಗಳಾದ ಛೋಟಾ ಭೀಮ್ ಮತ್ತು ಚುಟ್ಕಿ

ಹರಿಯಾಣದ ರೋಮಾಂಚಕ ಸಾಂಸ್ಕೃತಿಕ ಪ್ರದರ್ಶನದ ಮೂಲಕ ಆ ರಾಜ್ಯದ ಶ್ರೀಮಂತ ಜಾನಪದ ಸಂಪ್ರದಾಯಗಳ ಪ್ರಸ್ತುತಿ

ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದಿಂದ ವಿಷಯಾಧಾರಿತ ವಾಹನಗಳ ಮೂಲಕ ತನ್ನ ಉಪಸ್ಥಿತಿಯ ಪ್ರದರ್ಶನ

ಪರೇಡ್ ನಲ್ಲಿ ಶ್ರೀ ಶಾಂತಾದುರ್ಗಾ ಬಾಬರೇಶ್ವರ ಯುವಕ ಸಂಘದ ಸಾಂಸ್ಕೃತಿಕ ಪ್ರಸ್ತುತಿ

ಐಎಫ್‌ಎಫ್‌ಐ 2025ರ ಭವ್ಯ ಮೆರವಣಿಗೆಗೆ ಕಾಶ್ಮೀರದ ಕಲಾವಿದರಿಂದ ಇನ್ನಷ್ಟು ರಂಗು ಮತ್ತು ಆಕರ್ಷಣೆ

ಉದ್ಘಾಟನಾ ಪರೇಡ್ ನಲ್ಲಿ ವೇವ್ಸ್ ಒಟಿಟಿ ಅಲೆ

ಪರೇಡ್ ನಲ್ಲಿ ಸಂಸ್ಕೃತಿ ಮತ್ತು ಸಿನಿಮಾದ ಸಮ್ಮಿಳಿತದ ಹೊಳಪು

ಉತ್ತರಾಖಂಡದ ಕಲಾವಿದರಿಂದ ಐಎಫ್ಎಫ್ಐ 2025ರ ಪರೇಡ್ ಗೆ ಮತ್ತಷ್ಟು ಮೆರುಗು
Release ID:
2192371
| Visitor Counter:
12