ಪ್ರಧಾನ ಮಂತ್ರಿಯವರ ಕಛೇರಿ
ಜಾಗತಿಕ ಹವಾಮಾನ ಹಣಕಾಸನ್ನು ಮರುರೂಪಿಸಲು ಭಾರತ ಹೊಂದಿರುವ ಅವಕಾಶವನ್ನು ವಿವರಿಸುವ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ
Posted On:
18 NOV 2025 12:48PM by PIB Bengaluru
ಜಾಗತಿಕ ಹವಾಮಾನ ಹಣಕಾಸನ್ನು ಹೆಚ್ಚಿನ ಪಾರದರ್ಶಕತೆ ಮತ್ತು ಸಾಮಾನ್ಯ ಮಾನದಂಡಗಳೊಂದಿಗೆ ಮರುರೂಪಿಸಲು ಬಲವಾದ ಅವಕಾಶವಿದೆ ಎಂಬ ಮಾಹಿತಿಯನ್ನು ವಿವರಿಸುವ ಕೇಂದ್ರ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.
ಭವಿಷ್ಯಕ್ಕಾಗಿ ಹೆಚ್ಚು ಪರಿಣಾಮಕಾರಿ ರೀತಿಯಲ್ಲಿ ಜಾಗತಿಕ ವಾಸ್ತುಶಿಲ್ಪಕ್ಕೆ ಮಾರ್ಗದರ್ಶನ ನೀಡುವ ಪ್ರಾಯೋಗಿಕ ನಾಯಕತ್ವದ ಉದಾಹರಣೆಯಾಗಿ ಭಾರತದ ಕರಡು ಹವಾಮಾನ ಹಣಕಾಸು ವರ್ಗೀಕರಣ ಮತ್ತು ಬೆಳೆಯುತ್ತಿರುವ ದೇಶೀಯ ಹಸಿರು ಹಣಕಾಸು ವ್ಯವಸ್ಥೆಯನ್ನು ಈ ಲೇಖನವು ಉತ್ತಮ ರೀತಿಯಲ್ಲಿ ವಿವರಿಸುತ್ತದೆ.
ಕೇಂದ್ರ ಸಚಿವರು ಬರೆದ ಲೇಖನಕ್ಕೆ ಸ್ಪಂದಿಸಿ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಈ ರೀತಿ ಬರೆದಿದ್ದಾರೆ;
“ಹೆಚ್ಚಿನ ಪಾರದರ್ಶಕತೆ ಮತ್ತು ಸಾಮಾನ್ಯ ಮಾನದಂಡಗಳೊಂದಿಗೆ ಜಾಗತಿಕ ಹವಾಮಾನ ಹಣಕಾಸನ್ನು ಮರುರೂಪಿಸಲು ಬಲವಾದ ಅವಕಾಶವಿದೆ ಎಂದು ಕೇಂದ್ರ ಸಚಿವರಾದ @byadavbjp ಅವರು ವಿವರಿಸಿದ್ದಾರೆ.
ಭವಿಷ್ಯಕ್ಕಾಗಿ ಹೆಚ್ಚು ಪರಿಣಾಮಕಾರಿ ರೀತಿಯಲ್ಲಿ ಜಾಗತಿಕ ವಾಸ್ತುಶಿಲ್ಪಕ್ಕೆ ಮಾರ್ಗದರ್ಶನ ನೀಡುವ ಪ್ರಾಯೋಗಿಕ ನಾಯಕತ್ವದ ಉದಾಹರಣೆಗಳಾಗಿ, ಭಾರತದ ಕರಡು ಹವಾಮಾನ ಹಣಕಾಸು ವರ್ಗೀಕರಣ ಮತ್ತು ಬೆಳೆಯುತ್ತಿರುವ ದೇಶೀಯ ಹಸಿರು ಹಣಕಾಸು ವ್ಯವಸ್ಥೆಯನ್ನು ಅವರು ಲೇಖನದಲ್ಲಿ ತಿಳಿಸಿದ್ದಾರೆ.”
*****
(Release ID: 2191186)
Visitor Counter : 6