ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಆರ್ಚರಿ ಚಾಂಪಿಯನ್‌ಶಿಪ್ 2025ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತೀಯ ಬಿಲ್ಲುಗಾರಿಕಾ ತಂಡವನ್ನು ಅಭಿನಂದಿಸಿದ ಪ್ರಧಾನಮಂತ್ರಿ

Posted On: 17 NOV 2025 5:59PM by PIB Bengaluru

2025ರ ಏಷ್ಯನ್ ಬಿಲ್ಲುಗಾರಿಕಾ ಚಾಂಪಿಯನ್‌ಶಿಪ್‌ನಲ್ಲಿ ಇದುವರೆಗೆ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತೀಯ ಬಿಲ್ಲುಗಾರಿಕೆ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡವು ತನ್ನ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದು, 6 ಚಿನ್ನ ಸೇರಿದಂತೆ ಒಟ್ಟು 10 ಪದಕಗಳನ್ನು ಗೆದ್ದಿದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ. 18 ವರ್ಷಗಳ ನಂತರ ಪಡೆದ ಐತಿಹಾಸಿಕ ರಿಕರ್ವ್ ಪುರುಷರ ಚಿನ್ನದ ಪದಕಕ್ಕೆ ಒತ್ತು ನೀಡ್ದಿದ ಪ್ರಧಾನಮಂತ್ರಿ ಅವರು, ವೈಯಕ್ತಿಕ ಸ್ಪರ್ಧೆಗಳಲ್ಲಿನ ಪ್ರಬಲ ಪ್ರದರ್ಶನ ಮತ್ತು ಯಶಸ್ವಿ ಸಂಯುಕ್ತ ಪ್ರಶಸ್ತಿ ರಕ್ಷಣೆಯನ್ನು ಅವರು ಶ್ಲಾಘಿಸಿದರು.

ಈ ಗಮನಾರ್ಹ ಸಾಧನೆಯು ದೇಶಾದ್ಯಂತ ಹಲವಾರು ಮಹತ್ವಾಕಾಂಕ್ಷಿ ಕ್ರೀಡಾಪಟುಗಳಿಗೆ ಸ್ಫೂರ್ತಿದಾಯಕವಾಗಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದ್ದಾರೆ.

ಪ್ರಧಾನಮಂತ್ರಿ ಅವರು ಹೇಳಿದ್ದಾರೆ;

“ಏಷ್ಯನ್ ಆರ್ಚರಿ ಚಾಂಪಿಯನ್‌ಶಿಪ್ 2025 ರಲ್ಲಿ ಇದುವರೆಗಿನ ಅತ್ಯುತ್ತಮ ಪ್ರದರ್ಶನ ನೀಡಿದ ನಮ್ಮ ಬಿಲ್ಲುಗಾರಿಕೆ ತಂಡಕ್ಕೆ ಅಭಿನಂದನೆಗಳು. ಅವರು 6 ಚಿನ್ನ ಸೇರಿದಂತೆ 10 ಪದಕಗಳನ್ನು ಗೆದ್ದಿದ್ದಾರೆ. ಇವುಗಳಲ್ಲಿ 18 ವರ್ಷಗಳ ನಂತರ ಐತಿಹಾಸಿಕ ರಿಕರ್ವ್ ಪುರುಷರ ಚಿನ್ನದ ಪದಕವು ಗಮನಾರ್ಹವಾಗಿದೆ. ಅಂತೆಯೇ, ವೈಯಕ್ತಿಕ ಈವೆಂಟ್‌ಗಳಲ್ಲಿ ಬಲವಾದ ಪ್ರದರ್ಶನ ಮತ್ತು ಯಶಸ್ವಿ ಸಂಯುಕ್ತ ಪ್ರಶಸ್ತಿ ರಕ್ಷಣೆಗಳು ಕೂಡಾ ಪ್ರಮುಖವಾಗಿವೆ. ಇದು ನಿಜಕ್ಕೂ ಬಹಳ ವಿಶೇಷವಾದ ಸಾಧನೆಯಾಗಿದ್ದು, ಮುಂಬರುವ ಅನೇಕ ಕ್ರೀಡಾಪಟುಗಳಿಗೆ ಪ್ರೇರಣೆ ನೀಡುತ್ತದೆ.”

****


(Release ID: 2190981) Visitor Counter : 9