ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜಂಜಾತಿಯ ಗೌರವ್ ದಿವಸದಂದು ದೇವಮೊಗ್ರ ಮಾತಾ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಮಂತ್ರಿ ಮೋದಿ; ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ದಿನಾಚರಣೆಯಂದು ದೇಶದ ಯೋಗಕ್ಷೇಮಕ್ಕಾಗಿ ಪ್ರಾರ್ಥನೆ

Posted On: 15 NOV 2025 3:00PM by PIB Bengaluru

ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಆಚರಿಸುವ ಜಂಜಾತಿಯ ಗೌರವ್ ದಿವಸ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೇವಮೊಗ್ರ ಮಾತಾ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಭೇಟಿಯ ಸಮಯದಲ್ಲಿ, ಪ್ರಧಾನಮಂತ್ರಿ, ಎಲ್ಲಾ ನಾಗರಿಕರ ಉತ್ತಮ ಆರೋಗ್ಯ ಮತ್ತು ಪ್ರಗತಿಗಾಗಿ ದೇವಮೊಗ್ರ ಮಾತೆಗೆ ಪ್ರಾರ್ಥನೆ ಸಲ್ಲಿಸಿದರು. ತಮ್ಮ ಭೇಟಿಯ ಅನುಭವಗಳನ್ನು ಪವಿತ್ರವೆಂದು ಬಣ್ಣಿಸಿದ ಪ್ರಧಾನಮಂತ್ರಿ, ಈ ದೇವಾಲಯಕ್ಕೆ ಎಲ್ಲರೂ ಭೇಟಿ ನೀಡಿ ತಾಯಿಯ ಆಶೀರ್ವಾದ ಪಡೆಯಿರಿ ಎಂದು ಹೇಳಿದ್ದಾರೆ.

ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ;

"ದೇವಮೊಗ್ರ ಮಾತೆಗೆ ಜಯವಾಗಲಿ!

ಇಂದು, ಭಗವಾನ್ ಬಿರ್ಸಾ ಮುಂಡಾ ಅವರ 150 ನೇ ಜನ್ಮ ದಿನಾಚರಣೆಯ ಪವಿತ್ರ ಸಂದರ್ಭದಲ್ಲಿ, ಬುಡಕಟ್ಟು ಜನಾಂಗದವರ ಹೆಮ್ಮೆಯ ದಿನದಂದು, ದೇವಮೊಗ್ರ ಮಾತಾ ದೇವಸ್ಥಾನಕ್ಕೆ ಭೇಟಿ ನೀಡುವ ಸೌಭಾಗ್ಯ ನನಗೆ ಸಿಕ್ಕಿತು. ನನ್ನ ಎಲ್ಲಾ ದೇಶವಾಸಿಗಳ ಉತ್ತಮ ಆರೋಗ್ಯ ಮತ್ತು ಸಮೃದ್ಧಿಗಾಗಿ ನಾನು ದೇವಿಯನ್ನು ಪ್ರಾರ್ಥಿಸಿದೆ. ಈ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದವನ್ನು ಪಡೆಯಿರಿ ಎಂದು ನಾನು ನಿಮ್ಮನ್ನು ಕೇಳಿಕೊಳ್ಳುತ್ತೇನೆ”

 

“દેવમોગરા માતાની જય!

આજના જનજાતિય ગૌરવ દિવસ અને ભગવાન બિરસા મુંડાની દોઢસોમી જન્મજયંતિના પવિત્ર અવસરે દેવમોગરા માતાના મંદિરે દર્શન કરવાનું સૌભાગ્ય પ્રાપ્ત થયું. 

સૌ દેશવાસીઓના સ્વાસ્થ્ય, કલ્યાણ અને ઉન્નતિ માટે પ્રાર્થના કરી.”

 

****


(Release ID: 2190342) Visitor Counter : 9