ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭೂತಾನ್ ನ ನಾಲ್ಕನೇ ರಾಜರೋಂದಿಗೆ ಸಭಿಕರು ಪ್ರಧಾನಮಂತ್ರಿ ಅವರನ್ನು ಬರಮಾಡಿಕೊಂಡರು ಮತ್ತು ಜಾಗತಿಕ ಶಾಂತಿ ಪ್ರಾರ್ಥನಾ ಉತ್ಸವದಲ್ಲಿ ಭಾಗವಹಿಸಿದರು

Posted On: 12 NOV 2025 9:54AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಥಿಂಪುವಿನಲ್ಲಿ ಭೂತಾನ್ ನ ನಾಲ್ಕನೇ ರಾಜ ಜಿಗ್ಮೆ ಸಿಂಗ್ಯೆ ವಾಂಗ್‌ಚುಕ್ ಅವರನ್ನು ಭೇಟಿಯಾದರು.

ಪ್ರಧಾನಮಂತ್ರಿ ಅವರು ಥಿಂಪುವಿನ ನಾಲ್ಕನೇ ರಾಜರಿಗೆ  ಅವರ 70ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಶುಭಾಶಯಗಳನ್ನು ತಿಳಿಸಿದರು ಮತ್ತು ಅವರಿಗೆ ನಿರಂತರ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಭಾರತ ಸರ್ಕಾರ ಮತ್ತು ಜನರ ಪರವಾಗಿ ಶುಭಾಶಯಗಳು ಹಾಗು ಹಾರೈಕೆಗಳನ್ನು ತಿಳಿಸಿದರು. ಭಾರತ-ಭೂತಾನ್ ಸ್ನೇಹವನ್ನು ಮತ್ತಷ್ಟು ಬಲಪಡಿಸುವಲ್ಲಿ ಅವರ ನಾಯಕತ್ವ, ಸಲಹೆ ಮತ್ತು ಮಾರ್ಗದರ್ಶನಕ್ಕಾಗಿ ಪ್ರಧಾನಮಂತ್ರಿ ಅವರು ಕೃತಜ್ಞತೆ ಸಲ್ಲಿಸಿದರು. ಇಬ್ಬರೂ ನಾಯಕರು ದ್ವಿಪಕ್ಷೀಯ ಸಂಬಂಧಗಳು ಮತ್ತು ಪರಸ್ಪರ ಆಸಕ್ತಿಯ ವಿಷಯಗಳ ಕುರಿತು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ, ಎರಡೂ ದೇಶಗಳ ಜನರನ್ನು ಹತ್ತಿರ ತರುವ ಪರಸ್ಪರ ಹಂಚಿಕೆಯ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಬಾಂಧವ್ಯಗಳನ್ನು ಅವರು ಒತ್ತಿ ಹೇಳಿದರು.

ಥಿಂಪುವಿನಲ್ಲಿ ನಡೆಯುತ್ತಿರುವ ಜಾಗತಿಕ ಶಾಂತಿ ಪ್ರಾರ್ಥನಾ ಉತ್ಸವದ ಭಾಗವಾಗಿ ಚಾಂಗ್ಲಿಮಿಥಾಂಗ್ ಕ್ರೀಡಾಂಗಣದಲ್ಲಿ ನಡೆದ ಕಾಲಚಕ್ರ ದೀಕ್ಷಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರು ಭಾಗವಹಿಸಿದರು. ಭೂತಾನ್‌ನ ಮುಖ್ಯ ಮಠಾಧೀಶರಾದ ಪೂಜ್ಯ ಜೆ ಖೆನ್ಪೋ ಅವರ ಅಧ್ಯಕ್ಷತೆಯಲ್ಲಿ ಪ್ರಾರ್ಥನೆಗಳು ನಡೆದವು.

 

*****

 

 


(Release ID: 2189152) Visitor Counter : 6