ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಾಷ್ಟ್ರೀಯ ಕಡಲ ದಿನದಂದು ಭಾರತದ ಕಡಲ ಜಗತ್ತಿನ ಪ್ರಗತಿಗೆ ಕೊಡುಗೆ ನೀಡಿದ ಎಲ್ಲರನ್ನೂ ಪ್ರಧಾನಮಂತ್ರಿ ಸ್ಮರಿಸಿದರು

प्रविष्टि तिथि: 05 APR 2023 2:28PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಷ್ಟ್ರೀಯ ಕಡಲ ದಿನದಂದು ಬಂದರು-ನೇತೃತ್ವದ ಅಭಿವೃದ್ಧಿಗೆ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.

ಕೇಂದ್ರ ಬಂದರು, ನೌಕಾಯಾನ ಮತ್ತು ಜಲಮಾರ್ಗಗಳ ಸಚಿವರಾದ ಶ್ರೀ ಸರ್ಬಾನಂದ ಸೋನೋವಾಲ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನಿ ಹೀಗೆ ಟ್ವೀಟ್ ಮಾಡಿದ್ದಾರೆ:

"ನಾವೆಲ್ಲರೂ ಭಾರತದಲ್ಲಿ ಸಮೃದ್ಧ ಕಡಲ ಪರಂಪರೆಯ ಆಶೀರ್ವಾದವನ್ನು ಪಡೆದಿದ್ದೇವೆ ಮತ್ತು ಅದರ ಬಗ್ಗೆ ನಮಗೆ ಹೆಮ್ಮೆಯಿದೆ.

ರಾಷ್ಟ್ರೀಯ ಕಡಲ ದಿನದಂದು, ಭಾರತದ ಕಡಲ ಜಗತ್ತಿನ ಪ್ರಗತಿಗೆ ಕೊಡುಗೆ ನೀಡಿದ ಎಲ್ಲರನ್ನೂ ನಾವು ಸ್ಮರಿಸುತ್ತೇವೆ ಮತ್ತು ಬಂದರು-ನೇತೃತ್ವದ ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ."

 

*****

 


(रिलीज़ आईडी: 2188664) आगंतुक पटल : 20
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Manipuri , Assamese , Punjabi , Gujarati , Odia , Tamil , Telugu , Malayalam