ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಾಜಸ್ಥಾನದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಏಪ್ರಿಲ್ 12 ರಂದು ಪ್ರಧಾನಮಂತ್ರಿ ಚಾಲನೆ


ಒಂದೇ ಮಾರ್ಗದಲ್ಲಿ ಚಲಿಸುವ ಶತಾಬ್ದಿ ಎಕ್ಸ್‌ಪ್ರೆಸ್‌ಗೆ ಹೋಲಿಸಿದರೆ ಈ ರೈಲು 60 ನಿಮಿಷಗಳಷ್ಟು ವೇಗವಾಗಿರುತ್ತದೆ

ಅಜ್ಮೀರ್-ದೆಹಲಿ ಕ್ಯಾಂಟ್ ವಂದೇ ಭಾರತ್ ಎಕ್ಸ್‌ಪ್ರೆಸ್, 'ಹೆಚ್ಚಿನ ಎತ್ತರದ ಓವರ್‌ಹೆಡ್ ಎಲೆಕ್ಟ್ರಿಕ್ (OHE)' ಮಾರ್ಗದಲ್ಲಿ ಚಲಿಸುವ ವಿಶ್ವದ ಮೊದಲ ಸೆಮಿ ಹೈ-ಸ್ಪೀಡ್ ಪ್ಯಾಸೆಂಜರ್ ರೈಲು ಆಗಲಿದೆ

प्रविष्टि तिथि: 10 APR 2023 7:41PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಏಪ್ರಿಲ್ 12, 2023 ರಂದು ಬೆಳಿಗ್ಗೆ 11 ಗಂಟೆಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ರಾಜಸ್ಥಾನದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಚಾಲನೆ ನೀಡಲಿದ್ದಾರೆ. ಉದ್ಘಾಟನಾ ರೈಲು ಜೈಪುರ ಮತ್ತು ದೆಹಲಿ ಕ್ಯಾಂಟ್ ರೈಲು ನಿಲ್ದಾಣದ ನಡುವೆ ಚಲಿಸಲಿದೆ. ವಂದೇ ಭಾರತ್ ಎಕ್ಸ್ಪ್ರೆಸ್ ನಿಯಮಿತ ಸೇವೆಯು ಏಪ್ರಿಲ್ 13, 2023 ರಿಂದ ಪ್ರಾರಂಭವಾಗಲಿದ್ದು, ಅಜ್ಮೀರ್ ಮತ್ತು ದೆಹಲಿ ಕ್ಯಾಂಟ್ ನಡುವೆ ಚಲಿಸಲಿದೆ, ಇದು ಜೈಪುರ, ಅಲ್ವಾರ್ ಮತ್ತು ಗುರ್ಗಾಂವ್ನಲ್ಲಿ ನಿಲುಗಡೆಗಳನ್ನು ಹೊಂದಿರುತ್ತದೆ.

ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ದೆಹಲಿ ಕ್ಯಾಂಟ್ ಮತ್ತು ಅಜ್ಮೀರ್ ನಡುವಿನ ದೂರವನ್ನು 5 ಗಂಟೆ 15 ನಿಮಿಷಗಳಲ್ಲಿ ಕ್ರಮಿಸಲಿದೆ. ಅದೇ ಮಾರ್ಗದಲ್ಲಿ ಪ್ರಸ್ತುತ ವೇಗವಾಗಿ ಚಲಿಸುವ ರೈಲಾದ ಶತಾಬ್ದಿ ಎಕ್ಸ್ಪ್ರೆಸ್ಗೆ ದೆಹಲಿ ಕ್ಯಾಂಟ್ನಿಂದ ಅಜ್ಮೀರ್ಗೆ 6 ಗಂಟೆ 15 ನಿಮಿಷಗಳು ಬೇಕಾಗುತ್ತದೆ. ಹೀಗಾಗಿ, ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ಅದೇ ಮಾರ್ಗದಲ್ಲಿ ಚಲಿಸುವ ಪ್ರಸ್ತುತ ವೇಗದ ರೈಲಿಗಿಂತ 60 ನಿಮಿಷಗಳಷ್ಟು ವೇಗವಾಗಿರುತ್ತದೆ.

ಅಜ್ಮೀರ್-ದೆಹಲಿ ಕ್ಯಾಂಟ್ ವಂದೇ ಭಾರತ್ ಎಕ್ಸ್ಪ್ರೆಸ್, ಹೆಚ್ಚಿನ ಎತ್ತರದ ಓವರ್ಹೆಡ್ ಎಲೆಕ್ಟ್ರಿಕ್ (OHE) ಮಾರ್ಗದಲ್ಲಿ ಚಲಿಸುವ ವಿಶ್ವದ ಮೊದಲ ಸೆಮಿ ಹೈ-ಸ್ಪೀಡ್ ಪ್ಯಾಸೆಂಜರ್ ರೈಲು ಆಗಲಿದೆ. ರೈಲು ಪುಷ್ಕರ್, ಅಜ್ಮೀರ್ ಷರೀಫ್ ದರ್ಗಾ ಮುಂತಾದ ರಾಜಸ್ಥಾನದ ಪ್ರಮುಖ ಪ್ರವಾಸಿ ತಾಣಗಳಿಗೆ ಸಂಪರ್ಕವನ್ನು ಸುಧಾರಿಸಲಿದೆ. ವರ್ಧಿತ ಸಂಪರ್ಕವು ಪ್ರದೇಶದಲ್ಲಿ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ.

 

*****

 


(रिलीज़ आईडी: 2188348) आगंतुक पटल : 22
इस विज्ञप्ति को इन भाषाओं में पढ़ें: Assamese , English , Urdu , Marathi , हिन्दी , Manipuri , Bengali , Punjabi , Gujarati , Odia , Tamil , Telugu , Malayalam