ಪ್ರಧಾನ ಮಂತ್ರಿಯವರ ಕಛೇರಿ
ಭಾರತದ ಮಾಜಿ ಕ್ರಿಕೆಟಿಗ ಸಲೀಂ ದುರಾನಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
प्रविष्टि तिथि:
02 APR 2023 10:30AM by PIB Bengaluru
ಮಾಜಿ ಭಾರತೀಯ ಕ್ರಿಕೆಟಿಗ ಸಲೀಂ ದುರಾನಿ ಅವರ ನಿಧನಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ರ್‌ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
"ಸಲೀಂ ದುರಾನಿ ಅವರು ಒಬ್ಬ ಕ್ರಿಕೆಟ್ ದಂತಕಥೆಯಾಗಿದ್ದರು, ಅವರೇ ಒಂದು ಸಂಸ್ಥೆಯಂತಿದ್ದರು. ಭಾರತವು ಕ್ರಿಕೆಟ್ ಜಗತ್ತಿನಲ್ಲಿ ಬೆಳೆಯಲು ಅವರು ಪ್ರಮುಖ ಕೊಡುಗೆ ನೀಡಿದರು. ಮೈದಾನದಲ್ಲಿ ಮತ್ತು ಹೊರಗೆ, ಅವರು ತಮ್ಮ ಶೈಲಿಗೆ ಹೆಸರುವಾಸಿಯಾಗಿದ್ದರು. ಅವರ ನಿಧನದಿಂದ ನೋವಾಗಿದೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ."
ಸಲೀಂ ದುರಾನಿ ಅವರು ಅವರಿಗೆ ಗುಜರಾತ್‌ನೊಂದಿಗೆ ಬಹಳ ಹಳೆಯ ಮತ್ತು ಬಲವಾದ ಸಂಬಂಧವಿತ್ತು. ಅವರು ಕೆಲವು ವರ್ಷಗಳ ಕಾಲ ಸೌರಾಷ್ಟ್ರ ಮತ್ತು ಗುಜರಾತ್‌ಗಾಗಿ ಆಡಿದ್ದರು. ಅವರು ಗುಜರಾತ್ ಅನ್ನು ತಮ್ಮ ಮನೆಯನ್ನಾಗಿ ಮಾಡಿಕೊಂಡಿದ್ದರು. ಅವರೊಂದಿಗೆ ಸಂವಹನ ನಡೆಸುವ ಅವಕಾಶ ನನಗೆ ದೊರೆತಿತ್ತು ಮತ್ತು ಅವರ ಬಹುಮುಖಿ ವ್ಯಕ್ತಿತ್ವದಿಂದ ನಾನು ಆಳವಾಗಿ ಪ್ರಭಾವಿತನಾಗಿದ್ದೆ. ಅವರ ಕೊರತೆಯನ್ನು ಖಂಡಿತವಾಗಿಯೂ ಅನುಭವಿಸಲಾಗುತ್ತದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಮಾಜಿ ಕ್ರಿಕೆಟಿಗ ಸಲೀಂ ದುರಾನಿ ಅವರೊಂದಿಗಿನ ಭೇಟಿಯ ಕ್ಷಣಗಳನ್ನು ಹಂಚಿಕೊಂಡರು.
*****
(रिलीज़ आईडी: 2188253)
आगंतुक पटल : 19
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam