ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಗವಾನ್ ಬುದ್ಧನ ಪವಿತ್ರ ಅವಶೇಷಗಳಿಗೆ ನೀಡಿದ ಗೌರವಯುತ ಸ್ವಾಗತಕ್ಕೆ ಭೂತಾನಿನ ಜನರು ಮತ್ತು ದೊರೆಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಮಂತ್ರಿ

Posted On: 09 NOV 2025 3:43PM by PIB Bengaluru

ಭಾರತದಿಂದ ಭಗವಾನ್ ಬುದ್ಧನ ಪವಿತ್ರ ಅವಶೇಷಗಳಿಗೆ ನೀಡಿದ ಗೌರವಯುತ ಸ್ವಾಗತಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೂತಾನಿನ ಜನರು ಮತ್ತು ಅಲ್ಲಿನ ದೊರೆಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ. ಭಗವಾನ್ ಬುದ್ಧನ ಅವಶೇಷಗಳು ಶಾಂತಿ, ಕರುಣೆ ಮತ್ತು ಸಾಮರಸ್ಯದ ಕಾಲಾತೀತ ಸಂದೇಶವನ್ನು ಸಂಕೇತಿಸುತ್ತವೆ. "ಭಗವಾನ್ ಬುದ್ಧನ ಬೋಧನೆಗಳು ನಮ್ಮ ಎರಡೂ ರಾಷ್ಟ್ರಗಳ ಹಂಚಿಕೆಯ ಆಧ್ಯಾತ್ಮಿಕ ಪರಂಪರೆಯ ನಡುವಿನ ಪವಿತ್ರ ಕೊಂಡಿಯಾಗಿದೆ" ಎಂದು ಶ್ರೀ ಮೋದಿ ಹೇಳಿದ್ದಾರೆ.

ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

"ಭಾರತದಿಂದ ಹೋದ ಭಗವಾನ್ ಬುದ್ಧನ ಪವಿತ್ರ ಅವಶೇಷಗಳಿಗೆ ದೊರೆತ ಗೌರವಯುತ ಸ್ವಾಗತಕ್ಕಾಗಿ ಭೂತಾನಿನ ಜನರು ಮತ್ತು ದೊರೆಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳು.

ಈ ಅವಶೇಷಗಳು ಶಾಂತಿ, ಸಹಾನುಭೂತಿ ಮತ್ತು ಸಾಮರಸ್ಯದ ಕಾಲಾತೀತ ಸಂದೇಶವನ್ನು ಸಂಕೇತಿಸುತ್ತವೆ. ಭಗವಾನ್ ಬುದ್ಧನ ಬೋಧನೆಗಳು ನಮ್ಮ ಎರಡೂ ರಾಷ್ಟ್ರಗಳ ಹಂಚಿಕೆಯ ಆಧ್ಯಾತ್ಮಿಕ ಪರಂಪರೆಯ ನಡುವಿನ ಪವಿತ್ರ ಕೊಂಡಿಯಾಗಿದೆ."

https://facebook.com/share/p/16kev8w8rv/?mibextid=wwXIfr

@tsheringtobgay

 

*****


(Release ID: 2188100) Visitor Counter : 6