ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ
azadi ka amrit mahotsav

ಸಣ್ಣ ಪ್ರಮಾಣದ ಮೀನುಗಾರಿಕೆ, ಮೀನುಗಾರಿಕಾ ಸಹಕಾರ ಸಂಘಗಳು ಮತ್ತು ಎಫ್.ಎಫ್.ಪಿ.ಒ ಗಳ ಬಲವರ್ಧನೆಯತ್ತ ಭಾರತ ಸರ್ಕಾರದಿಂದ ಮಹತ್ವದ ಹೆಜ್ಜೆ


"ಪ್ರತ್ಯೇಕ ಆರ್ಥಿಕ ವಲಯದಲ್ಲಿ (ಇ.ಇ.ಝೆಡ್) ಮೀನುಗಾರಿಕೆಯ ಸುಸ್ಥಿರ ಬಳಕೆ" ನಿಯಮಗಳ ಪ್ರಕಟ

Posted On: 08 NOV 2025 10:19AM by PIB Bengaluru

ಸಮೃದ್ಧ ಮತ್ತು ಎಲ್ಲರನ್ನೊಳಗೊಂಡ ನೀಲಿ ಆರ್ಥಿಕತೆಯ ಮುನ್ನೋಟದ ಸಾಕಾರದತ್ತ ಒಂದು ಪ್ರಮುಖ ಹೆಜ್ಜೆಯಾಗಿ, ಭಾರತ ಸರ್ಕಾರವು 04.11.2025 ರಂದು "ಪ್ರತ್ಯೇಕ ಆರ್ಥಿಕ ವಲಯ (ಇ.ಇ.ಝೆಡ್) ನಲ್ಲಿ ಸುಸ್ಥಿರ ಮೀನುಗಾರಿಕೆಗೆ ಸಜ್ಜುಗೊಳಿಸುವಿಕೆ" ನಿಯಮಗಳನ್ನು ಪ್ರಕಟಿಸಿದೆ. ಭಾರತದ ಕಡಲ ವಲಯದ ಅರಿಯದ ಸಾಮರ್ಥ್ಯವನ್ನು ತೆರೆಯುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಬದ್ಧತೆಯಿಂದ ಪ್ರೇರಿತವಾದ ಈ ಉಪಕ್ರಮವು, ಅಂಡಮಾನ್ ಮತ್ತು ನಿಕೋಬಾರ್ ಹಾಗೂ ಲಕ್ಷದ್ವೀಪ ದ್ವೀಪಗಳಿಗೆ ವಿಶೇಷ ಆದ್ಯತೆಯೊಂದಿಗೆ, ಭಾರತೀಯ ಇ.ಇ.ಝೆಡ್ ಮತ್ತು ಎತ್ತರದ ಸಮುದ್ರಗಳಿಂದ ಸುಸ್ಥಿರ ಮೀನುಗಾರಿಕೆಗೆ ಸಕ್ರಿಯಗೊಳಿಸುವ ಚೌಕಟ್ಟನ್ನು ಕಲ್ಪಿಸಿರುವ 2025–26ರ ಬಜೆಟ್ ಘೋಷಣೆಗೆ ಅನುಗುಣವಾಗಿದೆ.

ಸಹಕಾರಿ ಸಂಸ್ಥೆಗಳು ಮತ್ತು ಸಮುದಾಯ ನೇತೃತ್ವದ ಮಾದರಿಗಳ ಸಬಲೀಕರಣ 

ಆಳ ಸಮುದ್ರ ಮೀನುಗಾರಿಕೆ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಮತ್ತು ಆಧುನಿಕ ತಂತ್ರಜ್ಞಾನದ ಹಡಗುಗಳನ್ನು ನಿರ್ವಹಿಸಲು ಮೀನುಗಾರರ ಸಹಕಾರ ಸಂಘಗಳು ಮತ್ತು ಮೀನು ಕೃಷಿ ಉತ್ಪಾದಕ ಸಂಸ್ಥೆಗಳಿಗೆ (ಎಫ.ಎಫ.ಪಿ.ಒ ಗಳು) ನಿಯಮಗಳು ಆದ್ಯತೆ ನೀಡಿವೆ. ಇ.ಇ.ಝೆಡ್ ನಿಯಮಗಳು ಆಳ ಸಮುದ್ರ ಮೀನುಗಾರಿಕೆಯನ್ನು ಸುಗಮಗೊಳಿಸಿವೆಯಲ್ಲದೇ, ಮೌಲ್ಯವರ್ಧನೆ, ಪತ್ತೆಹಚ್ಚುವಿಕೆ ಮತ್ತು ಪ್ರಮಾಣೀಕರಣಕ್ಕೆ ಒತ್ತು ನೀಡುವ ಮೂಲಕ ಸಮುದ್ರಾಹಾರ ರಫ್ತು ವರ್ಧನೆಗೆ ಕೊಡುಗೆ ನೀಡಲಿವೆ. ಈ ಉಪಕ್ರಮವು ಆಧುನಿಕ ಮೂಲಸೌಕರ್ಯಗಳ ಸೃಷ್ಟಿ ಮತ್ತು ತಾಯಿ-ಮಗು ಹಡಗು ಪರಿಕಲ್ಪನೆಯ ಪರಿಚಯದ ಮೂಲಕ ಭಾರತೀಯ ಸಮುದ್ರ ಮೀನುಗಾರಿಕೆ ವಲಯಕ್ಕೆ ಹೊಸ ದಿಗಂತಗಳನ್ನು ತೆರೆಯುವ ನಿರೀಕ್ಷೆಯಿದೆ, ಇದು ಭಾರತೀಯ ರಿಸರ್ವ್ ಬ್ಯಾಂಕ್ (ಅರ್.ಬಿ.ಐ) ನಿಯಂತ್ರಣಗಳ ಪರಿಣಾಮಕಾರಿ ಮೇಲ್ವಿಚಾರಣಾ ಕಾರ್ಯವಿಧಾನದ ಅಡಿಯಲ್ಲಿ ಸಮುದ್ರ ಮಧ್ಯದ ವಾಹನ ಪರಿವರ್ತನೆ (ಟ್ರಾನ್ಸ್ಶಿಪ್ಮೆಂಟ್) ಗೆ ಅನುವು ಮಾಡಿಕೊಡಲಿದೆ. ಭಾರತದ ಇ.ಇ.ಝೆಡ್ ಪ್ರದೇಶದ ಶೇ.49 ರಷ್ಟಿರುವ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ಲಕ್ಷದ್ವೀಪದ ದ್ವೀಪ ಪ್ರದೇಶಗಳಲ್ಲಿ, ತಾಯಿ ಮತ್ತು ಮಗು ದೋಣಿಗಳ ಬಳಕೆಯು ಉತ್ತಮ ಗುಣಮಟ್ಟದ ಮೀನುಗಳ ರಫ್ತಿಗೆ ಉತ್ತೇಜನ ನೀಡಲಿದೆ.

ಸಮಗ್ರ ಬೆಂಬಲ ಮತ್ತು ಸಾಮರ್ಥ್ಯ ವೃದ್ಧಿ

ಸರ್ಕಾರವು ಮೀನುಗಾರರು ಮತ್ತು ಅವರ ಸಹಕಾರಿ ಸಂಸ್ಥೆಗಳು/ಎಫ.ಎಫ.ಪಿ.ಒ ಗಳಿಗೆ ತರಬೇತಿ ಕಾರ್ಯಕ್ರಮಗಳು, ಅಂತಾರಾಷ್ಟ್ರೀಯ ವಿಧಾನಗಳ ಪರಿಚಯ ಭೇಟಿ ಹಾಗೂ ಸಂಸ್ಕರಣೆ, ಮೌಲ್ಯವರ್ಧನೆ, ಮಾರುಕಟ್ಟೆ ಪ್ರವೇಶ, ಬ್ರ್ಯಾಂಡಿಂಗ್, ರಫ್ತು ಸೇರಿದಂತೆ ಮೌಲ್ಯ ಸರಪಳಿಯಲ್ಲಿ ಸಾಮರ್ಥ್ಯ ವೃದ್ಧಿ ಉಪಕ್ರಮಗಳ ಮೂಲಕ ಸಮಗ್ರ ಬೆಂಬಲವನ್ನು ಒದಗಿಸಲಿದೆ. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿ.ಎಮ್.ಎಮ್.ಎಸ್.ವೈ) ಹಾಗೂ ಮೀನುಗಾರಿಕೆ ಮತ್ತು ಜಲಚರ ಸಾಕಣೆ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಎಫ.ಐ.ಡಿ.ಎಫ) ನಂತಹ ಪ್ರಮುಖ ಯೋಜನೆಗಳಡಿಯಲ್ಲಿ ಸುಲಭವಾಗಿ ಮತ್ತು ಕೈಗೆಟುಕುವ ಸಾಲ ಸೌಲಭ್ಯ ದೊರೆಯಲಿದೆ.

ಹಾನಿಕಾರಕ ಪದ್ಧತಿಗಳ ನಿಗ್ರಹ, ಸುಸ್ಥಿರ ಮೀನುಗಾರಿಕೆ ಮತ್ತು ಕಡಲಕೃಷಿ ಉತ್ತೇಜನ

ಸಮುದ್ರ ಪರಿಸರ ವ್ಯವಸ್ಥೆಯನ್ನು ರಕ್ಷಿಸಲು ಮತ್ತು ಸಮಾನ ಮೀನುಗಾರಿಕೆ ಅವಕಾಶಗಳನ್ನು ಖಚಿತಪಡಿಸಿಕೊಳ್ಳಲು ಎಲ್.ಇ.ಡಿ ಲೈಟ್ ಮೀನುಗಾರಿಕೆ, ಜೋಡಿ ಟ್ರಾಲಿಂಗ್ ಮತ್ತು ಬುಲ್ ಟ್ರಾಲಿಂಗ್ ನಂತಹ ಹಾನಿಕಾರಕ ಮೀನುಗಾರಿಕೆ ಪದ್ಧತಿಗಳ ವಿರುದ್ಧ ಇ.ಇ.ಝೆಡ್ ನಿಯಮಗಳು ದೃಢ ನಿಲುವು ಹೊಂದಿವೆ.

ಜೀವವೈವಿಧ್ಯತೆಯನ್ನು ಸಂರಕ್ಷಿಸಲು, ಮೀನು ಪ್ರಭೇದಗಳ ಕನಿಷ್ಠ ಕಾನೂನು ಗಾತ್ರವನ್ನು ಸಹ ನಿಗದಿಪಡಿಸಲಾಗುವುದು ಹಾಗೂ ಕ್ಷೀಣಿಸುತ್ತಿರುವ ಮೀನು ದಾಸ್ತಾನುಗಳನ್ನು ಹೆಚ್ಚಿಸಲು ರಾಜ್ಯ ಸರ್ಕಾರಗಳು ಸೇರಿದಂತೆ ಪಾಲುದಾರರೊಂದಿಗೆ ಸಮಾಲೋಚಿಸಿ ಮೀನುಗಾರಿಕೆ ನಿರ್ವಹಣಾ ಯೋಜನೆ ಗಳನ್ನು ಅಭಿವೃದ್ಧಿಪಡಿಸಲಾಗುವುದು. ಪರಿಸರದ ಸಮಗ್ರತೆಗೆ ಧಕ್ಕೆಯಾಗದಂತೆ ಉತ್ಪಾದನೆಯನ್ನು ಹೆಚ್ಚಿಸುವುದರ ಜೊತೆಗೆ ಸಮೀಪದ ಕರಾವಳಿ ಪ್ರದೇಶಗಳಲ್ಲಿ ಮೀನುಗಾರಿಕೆ ಒತ್ತಡವನ್ನು ಕಡಿಮೆ ಮಾಡಲು ಸಮುದ್ರ ಪಂಜರ ಕೃಷಿ ಮತ್ತು ಕಡಲಕಳೆ ಕೃಷಿಯಂತಹ ಸಮುದ್ರ ಸಾಕಣೆ ಪದ್ಧತಿ ಗಳನ್ನು ಪರ್ಯಾಯ ಜೀವನೋಪಾಯಗಳಾಗಿ ಉತ್ತೇಜಿಸಲಾಗುವುದು. ಈ ಕ್ರಮಗಳು ವಿಶೇಷವಾಗಿ ಸಣ್ಣ ಪ್ರಮಾಣದ ಮೀನುಗಾರರು ಮತ್ತು ಅವರ ಸಹಕಾರಿ ಸಂಸ್ಥೆಗಳಿಗೆ ಪ್ರಯೋಜನವನ್ನು ನೀಡಲಿದ್ದು, ಅವರಿಗೆ ಆಳ ಸಮುದ್ರದ ಸಂಪನ್ಮೂಲ ಲಭ್ಯವಾಗಿಸುತ್ತಾ, ಹೆಚ್ಚಿನ ಆದಾಯವನ್ನು ಗಳಿಸಲು ಮತ್ತು ಟ್ಯೂನಾ ಮೀನು ತಳಿಗಳಂತಹ ಹೆಚ್ಚಿನ ಮೌಲ್ಯದ ಮೀನುಗಳನ್ನು ಜಾಗತಿಕ ಮಾರುಕಟ್ಟೆಗಳಿಗೆ ರಫ್ತು ಮಾಡಲು ಅನುವು ಮಾಡಿಕೊಡಲಿದೆ.

ಇ.ಇ.ಝೆಡ್ ಕಾರ್ಯಾಚರಣೆಗಳಿಗಾಗಿ ಡಿಜಿಟಲ್ ಮತ್ತು ಪಾರದರ್ಶಕ ಪ್ರವೇಶ ಪಾಸ್ ಕಾರ್ಯವಿಧಾನ

ಇ.ಇ.ಝೆಡ್ ನಿಯಮಗಳ ಅಡಿಯಲ್ಲಿ, ಯಾಂತ್ರೀಕೃತ ಮತ್ತು ದೊಡ್ಡ ಗಾತ್ರದ ಮೋಟಾರು ಹಡಗುಗಳಿಗೆ ಪ್ರವೇಶ (ಆ್ಯಕ್ಸೆಸ್) ಪಾಸ್ ಅಗತ್ಯವಿದ್ದು, ಆನ್ಲೈನ್ ನಲ್ಲಿ ReALCRaft ಪೋರ್ಟಲ್ ಮೂಲಕ ಉಚಿತ ವಾಗಿ ಪಡೆಯಬಹುದು. ಮೋಟಾರು ಚಾಲಿತ ಅಥವಾ ಮೋಟಾರೀಕೃತವಲ್ಲದ ಮೀನುಗಾರಿಕೆ ದೋಣಿಗಳನ್ನು ನಿರ್ವಹಿಸುವ ಸಾಂಪ್ರದಾಯಿಕ ಮತ್ತು ಸಣ್ಣ ಪ್ರಮಾಣದ ಮೀನುಗಾರರಿಗೆ ಪ್ರವೇಶ ಪಾಸ್ ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ. ಈ ವ್ಯವಸ್ಥೆಯು ಸಂಪೂರ್ಣವಾಗಿ ಡಿಜಿಟಲ್ ಮತ್ತು ಸಮಯಪಾಲನೆಗೆ ವಿನ್ಯಾಸಗೊಳಿಸಲಾಗಿದ್ದು, ದೋಣಿ ಮಾಲೀಕರು ಕನಿಷ್ಠ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು, ಅರ್ಜಿಯ ಸ್ಥಿತಿಯನ್ನು ನೈಜ ಸಮಯಾಧಾರಿತವಾಗಿ ಟ್ರ್ಯಾಕ್ ಮಾಡಲು ಮತ್ತು ಯಾವುದೇ ಕಚೇರಿಗೆ ಭೇಟಿ ನೀಡದೆ ಪ್ರಕ್ರಿಯೆಯನ್ನು ಸುಗಮವಾಗಿ ಪೂರ್ಣಗೊಳಿಸಲು ಅನುವು ಮಾಡಿಕೊಡಲಿದೆ. ಇದು ಇಡೀ ಪ್ರಕ್ರಿಯೆಯನ್ನು ಕ್ಷಿಪ್ರ ಮತ್ತು ಪಾರದರ್ಶಕವಾಗಿಸುತ್ತಾ ಸಮಯದ ಉಳಿತಾಯ ಸಾಧ್ಯವಾಗಿಸಲಿದೆ. ಸಣ್ಣ ಪ್ರಮಾಣದ ಮೀನುಗಾರರ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ, ಯಾವುದೇ ವ್ಯವಸ್ಥೆಗಳ ಅಡಿಯಲ್ಲಿ, ವಿದೇಶಿ ಮೀನುಗಾರಿಕಾ ಹಡಗುಗಳು ಭಾರತದ ಇಇಝೆಡ್ ನಲ್ಲಿ ಕಾರ್ಯನಿರ್ವಹಿಸಲು ಪ್ರವೇಶ ಪಾಸ್ ಪಡೆಯಲು ಅನುಮತಿಸಲಾಗುವುದಿಲ್ಲ.

ಸಮುದ್ರಾಹಾರವನ್ನು ಪ್ರೀಮಿಯಂ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡಲು ಪ್ರಮುಖ ಅವಶ್ಯಕತೆಗಳಾದ ಮೀನು ಹಿಡಿಯುವಿಕೆ ಮತ್ತು ಆರೋಗ್ಯ ಪ್ರಮಾಣಪತ್ರ ಗಳ ವಿತರಣೆಗೆ ReALCRaft ಅನ್ನು ಸಾಗರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಮ್.ಪಿ.ಇ.ಡಿ.ಎ) ಮತ್ತು ರಫ್ತು ಪರಿಶೀಲನಾ ಮಂಡಳಿ (ಇ.ಐ.ಸಿ) ನೊಂದಿಗೆ ಸಂಯೋಜಿಸಲಾಗುತ್ತಿದೆ. ಈ ಸಂಯೋಜಿತ ಡಿಜಿಟಲ್ ವ್ಯವಸ್ಥೆಯು ಆರಂಭದಿಂದ ಅಂತ್ಯದವರೆಗಿನ ಎಲ್ಲಾ ಹಂತಗಳ ಜಾಡು, ನೈರ್ಮಲ್ಯ ಅನುಸರಣೆ ಮತ್ತು ಪರಿಸರ-ಲೇಬಲಿಂಗ್ ಅನ್ನು ಖಚಿತಪಡಿಸಲಿದ್ದು, ಈ ಮೂಲಕ ಭಾರತೀಯ ಸಾಗರ ಉತ್ಪನ್ನಗಳ ಜಾಗತಿಕ ಸ್ಪರ್ಧಾತ್ಮಕತೆಯನ್ನು ವರ್ಧಿಸಲಿದೆ.

ನಿಯಂತ್ರಕ ಸುಧಾರಣೆಗಳು, ಸಮುದ್ರ ಸುರಕ್ಷತೆ ಮತ್ತು ಕರಾವಳಿ ಭದ್ರತೆ

ಭಾರತೀಯ ಇ.ಇ.ಝೆಡ್ ಗೆ ಹೊಂದಿಕೊಂಡಂತಿರುವ ಪ್ರದೇಶಗಳ ಮೂಲಕ ಮೀನು ಸಂಪನ್ಮೂಲಗಳನ್ನು ಕಂದಾಯ ಮತ್ತು ಕಸ್ಟಮ್ಸ್ ಮಾನದಂಡಗಳ ಅಡಿಯಲ್ಲಿ 'ಭಾರತೀಯ ಮೂಲ' ಎಂದು ಪರಿಗಣಿಸಲು ನಿಯಮಗಳು ಮಹತ್ವದ ಸುಧಾರಣೆ ತರುತ್ತಿವೆ. ಇದರಿಂದಾಗಿ ಭಾರತೀಯ ಬಂದರಿನಲ್ಲಿ ಇಳಿಯುವಾಗ ಅದನ್ನು 'ಆಮದು' ಎಂದು ಪರಿಗಣಿಸದೇ ಇತರ ದೇಶಗಳಿಗೆ ರಫ್ತು ಮಾಡುವಾಗ ಅದನ್ನು ಭಾರತಕ್ಕೆ ಸೇರಿಸಿ ಲೆಕ್ಕ ಹಾಕಬಹುದು. ಹೆಚ್ಚುವರಿಯಾಗಿ, ಸಣ್ಣ ಪ್ರಮಾಣದ ಮೀನುಗಾರರ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ, ಭಾರತೀಯ ಇ.ಇ.ಝೆಡ್ ನಲ್ಲಿ ಅಕ್ರಮ ಮೀನುಗಾರಿಕೆ ಪದ್ಧತಿಗಳನ್ನು ನಿಗ್ರಹಿಸಲು ಕಾನೂನುಬಾಹಿರ, ವರದಿ ಮಾಡದ ಮತ್ತು ಅನಿಯಂತ್ರಿತ (ಐ.ಯು.ಯು) ಮೀನುಗಾರಿಕೆ ಕುರಿತಾದ ರಾಷ್ಟ್ರೀಯ ಕ್ರಿಯಾ ಯೋಜನೆ ಯನ್ನು ರೂಪಿಸಲು ನಿಯಮಗಳಲ್ಲಿ ಅವಕಾಶವಿದೆ. 

ಪ್ರಸಾರಕ (ಟ್ರಾನ್ಸ್ಪಾಂಡರ್) ಗಳ ಕಡ್ಡಾಯ ಬಳಕೆಯ ಮೂಲಕ, ಆಳ ಸಮುದ್ರದಲ್ಲಿ ಮೀನುಗಾರರು ಮತ್ತು ಮೀನುಗಾರಿಕಾ ಹಡಗುಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. QR ಕೋಡ್ ಇರುವ ಆಧಾರ್ ಕಾರ್ಡ್ / ಮೀನುಗಾರರ ಗುರುತಿನ ಚೀಟಿಯನ್ನು ಕಡ್ಡಾಯ ಬಳಕೆಯ ಮೂಲಕ ಮೀನುಗಾರರು ಮತ್ತು ಮೀನುಗಾರಿಕಾ ಹಡಗುಗಳ ಗುರುತನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ReALCraft ಅಪ್ಲಿಕೇಶನ್ ಅನ್ನು ಮೀನುಗಾರರು ಸುರಕ್ಷಿತ ಸಂಚಾರ ಮತ್ತು ಪ್ರಸಾರಕಗಳ ಕಾರ್ಯಾಚರಣೆಗಾಗಿ ಬಳಸುವ ನಭಮಿತ್ರ ಅಪ್ಲಿಕೇಷನ್‌ ನೊಂದಿಗೆ ಸಂಯೋಜಿಸಲಾಗಿದೆ. ಇದು ಭಾರತೀಯ ಕರಾವಳಿ ಪಡೆ ಮತ್ತು ಭಾರತೀಯ ನೌಕಾಪಡೆ ಸೇರಿದಂತೆ ಸಮುದ್ರ ಜಾರಿ ಏಜೆನ್ಸಿಗಳಿಗೆ ಕರಾವಳಿ ಭದ್ರತಾ ಅಂಶವನ್ನು ಬಲಪಡಿಸಲು ಪೂರಕವಾಗಿವೆ. ಒಟ್ಟಾರೆಯಾಗಿ, ಈ ಸುಧಾರಣೆಗಳು ಭಾರತದ ಸಾಗರ ಮೀನುಗಾರಿಕೆ ಆಡಳಿತವನ್ನು ಆಧುನೀಕರಿಸುವಲ್ಲಿ, ತಂತ್ರಜ್ಞಾನ, ಪಾರದರ್ಶಕತೆ ಮತ್ತು ಒಳಗೊಳ್ಳುವಿಕೆಯ ಮೂಲಕ ಕರಾವಳಿ ಸಮುದಾಯಗಳನ್ನು ಸಬಲಗೊಳಿಸುವಲ್ಲಿ ಪ್ರಮುಖ ಮೈಲಿಗಲ್ಲಾಗಿವೆ. ಸಮುದಾಯ ನೇತೃತ್ವದ ಮಾದರಿಗಳೊಂದಿಗೆ ಡಿಜಿಟಲ್ ನಾವಿನ್ಯತೆಯನ್ನು ಸಂಯೋಜಿಸುವ ಮೂಲಕ, ಈ ಚೌಕಟ್ಟು ಸುಸ್ಥಿರ ಮೀನುಗಾರಿಕೆ ಅಭ್ಯಾಸಗಳನ್ನು ಬಲಪಡಿಸುವುದಲ್ಲದೆ, ಜಾಗತಿಕ ಸಮುದ್ರಾಹಾರ ವ್ಯಾಪಾರದಲ್ಲಿ ಭಾರತದ ಸ್ಥಾನವನ್ನು ಉನ್ನತೀಕರಿಸಲಿದೆ. 

ಹಿನ್ನೆಲೆ

ಭಾರತದ 11,099 ಕಿ.ಮೀ.ಗಿಂತಲೂ ಹೆಚ್ಚು ಉದ್ದದ ಕರಾವಳಿ ಮತ್ತು 23 ಲಕ್ಷ ಚದರ ಕಿಲೋಮೀಟರ್ ಗಳಿಗಿಂತ ಹೆಚ್ಚು ವಿಸ್ತೀರ್ಣದ ವಿಶೇಷ ಆರ್ಥಿಕ ವಲಯ (ಇ.ಇ.ಝೆಡ್) ದ ವಿಶಾಲ ಪ್ರದೇಶವು 13 ಕಡಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 50 ಲಕ್ಷಕ್ಕೂ ಹೆಚ್ಚು ಮೀನುಗಾರ ಸಮುದಾಯಕ್ಕೆ ಜೀವನೋಪಾಯ ಒದಗಿಸುತ್ತಿದೆ. ಸಮುದ್ರ ಮೀನುಗಾರಿಕೆಯು ಸಮುದ್ರಾಹಾರ ರಫ್ತು ಮತ್ತು ಲಕ್ಷಾಂತರ ಜನರಿಗೆ ಪೌಷ್ಠಿಕಾಂಶದ ಬೆಂಬಲವನ್ನು ಒದಗಿಸುವ ಮೂಲಕ ದೇಶದ ನೀಲಿ ಆರ್ಥಿಕತೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಆದಾಗ್ಯೂ, ದೇಶದ ಇ.ಇ.ಝೆಡ್ ನ ಸಂಪೂರ್ಣ ಸಾಮರ್ಥ್ಯ, ವಿಶೇಷವಾಗಿ ಟ್ಯೂನ ಸಂಪನ್ಮೂಲ ಸೇರಿದಂತೆ ಆಳ ಸಮುದ್ರದಲ್ಲಿನ ಹೆಚ್ಚಿನ ಮೌಲ್ಯದ ಸಂಪನ್ಮೂಲಗಳು ಇಲ್ಲಿಯವರೆಗೆ ಬಳಕೆಯಾಗದೆ ಉಳಿದಿದ್ದವು. ಶ್ರೀಲಂಕಾ, ಮಾಲ್ಡೀವ್ಸ್, ಇಂಡೋನೇಷ್ಯಾ, ಇರಾನ್ ಮತ್ತು ಯುರೋಪಿಯನ್ ದೇಶಗಳು ಪ್ರಸ್ತುತ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಟ್ಯೂನ ಮೀನುಗಳನ್ನು ಹಿಡಿಯುತ್ತಿವೆ, ಆದರೆ ಭಾರತೀಯ ಮೀನುಗಾರಿಕಾ ಹಡಗುಗಳು ಹತ್ತಿರದ ತೀರಗಳಿಗೆ ಸೀಮಿತವಾಗಿದ್ದವು ಮತ್ತು ಮೀನುಗಾರಿಕೆಯ ಸುಸ್ಥಿರ ಬಳಕೆಯ ಕುರಿತ ಹೊಸ ಇ.ಇ.ಝೆಡ್ ನಿಯಮಗಳ ಅಧಿಸೂಚನೆ ಪ್ರಕಟವಾಗುವವರೆಗೆ ಹಿಂದೆ ಉಳಿದಿದ್ದವು.

ಬಜೆಟ್ ಘೋಷಣೆ (2025-26)

'ಮೀನು ಉತ್ಪಾದನೆ ಮತ್ತು ಜಲಚರ ಸಾಕಣೆಯಲ್ಲಿ ಭಾರತ ಜಾಗತಿಕವಾಗಿ ಎರಡನೇ ಅತಿದೊಡ್ಡ ಸ್ಥಾನದಲ್ಲಿದೆ ಎಂದು ಭಾರತ ಸರ್ಕಾರ ತನ್ನ ಬಜೆಟ್ ಘೋಷಣೆ ಯಲ್ಲಿ (2025-26) ಪ್ರಕಟಿಸಿತ್ತು. ಸಮುದ್ರಾಹಾರ ರಫ್ತು ಮೌಲ್ಯ 60 ಸಾವಿರ ಕೋಟಿ ರೂಪಾಯಿಯಷ್ಟಿದೆ.  ಸಾಗರ ವಲಯದ ಬಳಕೆಯಾಗದ ಸಾಮರ್ಥ್ಯವನ್ನು ಹೊರತರಲು ನಮ್ಮ ಸರ್ಕಾರವು ಅಂಡಮಾನ್ ಮತ್ತು ನಿಕೋಬಾರ್ ಹಾಗೂ ಲಕ್ಷದ್ವೀಪ ದ್ವೀಪಗಳಿಗೆ ವಿಶೇಷ ಆದ್ಯತೆ ನೀಡುತ್ತಾ, ಭಾರತೀಯ ಪ್ರತ್ಯೇಕ ಆರ್ಥಿಕ ವಲಯ ಮತ್ತು ಎತ್ತರದ ಸಮುದ್ರಗಳಿಂದ ಸುಸ್ಥಿರ ಮೀನುಗಾರಿಕೆಗೆ ಚೌಕಟ್ಟನ್ನು ರೂಪಿಸಲಿದೆ.'

ReALCRaft ಪೋರ್ಟಲ್ ಬಗ್ಗೆ

ಮೀನುಗಾರಿಕೆ ಇಲಾಖೆಯು ReALCRaft ಪೋರ್ಟಲ್ ಅನ್ನು ರಾಷ್ಟ್ರೀಯ ಆನ್ಲೈನ್ ವೇದಿಕೆಯಾಗಿ ಅಭಿವೃದ್ಧಿಪಡಿಸಿದ್ದು, ಕಡಲ ಮೀನುಗಾರರು ಮತ್ತು ಕರಾವಳಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಮೀನುಗಾರಿಕಾ ಹಡಗುಗಳ ನೋಂದಣಿ ಮತ್ತು ಪರವಾನಗಿ, ಮಾಲೀಕತ್ವದ ವರ್ಗಾವಣೆ ಮತ್ತು ಸಂಬಂಧಿತ ಪ್ರಕ್ರಿಯೆಗಳಿಗಾಗಿ ವೆಬ್ ಆಧಾರಿತ, ನಾಗರಿಕ ಕೇಂದ್ರಿತ ಸೇವೆಗಳನ್ನು ಇದು ಒದಗಿಸಲಿದ್ದು, ವ್ಯವಹಾರ ಪ್ರಕ್ರಿಯೆಯನ್ನು ಸುಲಲಿತಗೊಳಿಸಿದೆ. ಪ್ರಸ್ತುತ, 13 ಕರಾವಳಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸುಮಾರು 2.38 ಲಕ್ಷ ಮೀನುಗಾರಿಕಾ ಹಡಗುಗಳು ಪೋರ್ಟಲ್ ನಲ್ಲಿ ನೋಂದಾಯಿಸಲ್ಪಟ್ಟಿವೆ, ಈ ಪೈಕಿ ಸುಮಾರು 1.32 ಲಕ್ಷ ಯಾಂತ್ರೀಕೃತ ದೋಣಿಗಳು ಮತ್ತು 40,461 ಯಾಂತ್ರೀಕೃತವಲ್ಲದ ಸಾಂಪ್ರದಾಯಿಕ ದೋಣಿಗಳು ಸೇರಿವೆ. ಈಗ ಈ ಮೀನುಗಾರಿಕಾ ಹಡಗುಗಳಿಗೆ ಭಾರತದ ಪ್ರತ್ಯೇಕ ವಿಶೇಷ ಆರ್ಥಿಕ ವಲಯ (ಇ.ಇ.ಝೆಡ್) ನಲ್ಲಿ ಮೀನುಗಾರಿಕೆಗಾಗಿ ಪ್ರವೇಶ (ಆ್ಯಕ್ಸೆಸ್) ಪಾಸ್‌ ಗಳನ್ನು ಪಡೆಯುವುದರಿಂದ ವಿನಾಯಿತಿ ನೀಡಲಾಗುವುದು. ಆದಾಗ್ಯೂ, ಒಟ್ಟು 64,187 ಯಾಂತ್ರೀಕೃತ ಮೀನುಗಾರಿಕಾ ಹಡಗುಗಳು ಇಇಝೆಡ್ ಕಾರ್ಯಾಚರಣೆಗಳಿಗಾಗಿ ಪ್ರವೇಶ ಪಾಸ್‌ ಗಳನ್ನು ಪಡೆಯಬೇಕಾಗಿದೆ.

 

*****


(Release ID: 2187749) Visitor Counter : 13