ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

12ನೇ ಬಿಗ್ ಪಿಕ್ಚರ್ ಶೃಂಗಸಭೆ-2025ರಲ್ಲಿ ಭಾರತೀಯ ಕೈಗಾರಿಕಾ ಒಕ್ಕೂಟ (ಸಿ.ಐ.ಐ) ಸಂಸ್ಥೆಯು ವೇವ್ಸ್ ಬಜಾರ್ ಸಹಯೋಗದೊಂದಿಗೆ ಜಾಗತಿಕ ಎಂ&ಇ ಹೂಡಿಕೆದಾರರ ಸಭೆಯನ್ನು ನಡೆಸಲಿದೆ


ಭಾರತದ ಮಾಧ್ಯಮ ಮತ್ತು ಮನರಂಜನಾ (ಎಂ&ಇ) ವಲಯಕ್ಕೆ ಹೊಸ ಅವಕಾಶಗಳ ಅಲೆಯನ್ನು ಪ್ರಾರಂಭಿಸಲಿರುವ ಭಾರತೀಯ ಕೈಗಾರಿಕಾ ಒಕ್ಕೂಟ (ಸಿ.ಐ.ಐ) ಮತ್ತು ವೇವ್ಸ್ ಬಜಾರ್

Posted On: 07 NOV 2025 4:10PM by PIB Bengaluru

ಡಿಸೆಂಬರ್ 1-2, 2025 ರಂದು ಮುಂಬೈನಲ್ಲಿ ನಡೆಯಲಿರುವ 12ನೇ ವಾರ್ಷಿಕ ಸಿ.ಐ.ಐ ಬಿಗ್ ಪಿಕ್ಚರ್ ಶೃಂಗಸಭೆಯಲ್ಲಿ ಸಿಐಐ ಜಾಗತಿಕ ಎಂ&ಇ ಹೂಡಿಕೆದಾರರ ಸಭೆಯನ್ನು ಪ್ರಾರಂಭಿಸುವುದಾಗಿ ಭಾರತೀಯ ಕೈಗಾರಿಕಾ ಒಕ್ಕೂಟ (ಸಿ.ಐ.ಐ) ಘೋಷಿಸಿದೆ. ವೇವ್ಸ್ ಬಜಾರ್ ಸಹಯೋಗದೊಂದಿಗೆ ಭಾರತೀಯ ಕೈಗಾರಿಕಾ ಒಕ್ಕೂಟ (ಸಿ.ಐ.ಐ) ಮೂಲಕ ಪ್ರಾರಂಭಿಸಿದ ಈ ಉಪಕ್ರಮವು, ಮುಂದಿನ ಬೆಳವಣಿಗೆಯ ಹಾಗೂ ಭಾವಿ ಉದ್ಯಮದ ಅಲೆಗಳನ್ನು ಉತ್ತೇಜಿಸಲು ಸೂಕ್ತ ವಿವಿಧ ಕಂಪನಿಗಳೊಂದಿಗೆ ಹೂಡಿಕೆಯನ್ನು ಸಂಯೋಜಿಸುವ ಮೂಲಕ ಭಾರತದ ಮಾಧ್ಯಮ ಮತ್ತು ಮನರಂಜನಾ (ಎಂ&ಇ) ವಲಯದ ಸಂಪೂರ್ಣ ಸಾಮರ್ಥ್ಯವನ್ನು ನೂತನ ಆಯಾಮದತ್ತ ಸಾಗಿಸಿ, ಯಶಸ್ವೀ ಉದ್ಯಮ ಕ್ಷೇತ್ರವಾಗಿ ಮಾಡುವ ಗುರಿಯನ್ನು ಹೊಂದಿದೆ.

ಸಿ.ಐ.ಐ ಎಲಾರಾ ಕ್ಯಾಪಿಟಲ್ ಅನ್ನು ಹೂಡಿಕೆ ಪಾಲುದಾರರನ್ನಾಗಿ ಮತ್ತು ವಿಟ್ರಿನಾವನ್ನು ಹೂಡಿಕೆದಾರರ ಸಭೆಗೆ ಜಾಗತಿಕ ಹಣಕಾಸು ಪಾಲುದಾರರನ್ನಾಗಿ ಘೋಷಿಸಿದೆ. ಮಾಧ್ಯಮ ಮತ್ತು ಮನರಂಜನಾ (ಎಂ&ಇ) ವಲಯದಲ್ಲಿ ವ್ಯಾಪಾರ ಜಾಲ ಮತ್ತು ಯೋಜನಾ ಮಾತುಕತೆಗೆ ಪ್ರಮುಖ ವೇದಿಕೆಯಾದ ವೇವ್ಸ್ ಬಜಾರ್, ತನ್ನ ಯಶಸ್ವಿ ಬಿ2ಬಿ ಸಭೆ ಸ್ವರೂಪ ಮತ್ತು ಯೋಜನಾ ಪ್ರದರ್ಶನಗಳನ್ನು - ಅದರ ಅಸ್ತಿತ್ವದಲ್ಲಿರುವ ಯೋಜನೆಗಳು ಮತ್ತು ವೇವ್ಸ್ ಫಿಲ್ಮ್ ಬಜಾರ್‌ ನಿಂದ ವಿವಿಧ ಸಹ ಉಪಕ್ರಮಗಳನ್ನು ಒಳಗೊಂಡಂತೆ - ಶೃಂಗಸಭೆಯ ಸಂದರ್ಭದಲ್ಲಿ ಮಾರುಕಟ್ಟೆಗೆ ಸಂಯೋಜಿಸಲು ಭಾರತೀಯ ಕೈಗಾರಿಕಾ ಒಕ್ಕೂಟ (ಸಿ.ಐ.ಐ) ಪ್ರಯತ್ನಿಸುತ್ತಿದೆ.

ಈ ಸಿ.ಐ.ಐ ಬಿಗ್ ಪಿಕ್ಚರ್ ಶೃಂಗಸಭೆಯ ಧ್ಯೇಯೋದ್ಧೇಶ ಮತ್ತು ವಿಷಯವು "ಇದು ಕೃತಕ ಬುದ್ಧಮತ್ತೆಯ ಯುಗ: ಸೃಜನಶೀಲತೆ ಮತ್ತು ವಾಣಿಜ್ಯವನ್ನು ಪರಸ್ಪರ ಜೊತೆಗೂಡಿಸುವುದು (ದಿ ಎಐ ಎರಾ: ಬ್ರಿಡ್ಜಿಂಗ್ ಕ್ರಿಏಟಿವಿಟಿ & ಕಾಮರ್ಸ್)" ಎಂದಾಗಿದೆ. ಇದು ಭಾರತದ ಮಾಧ್ಯಮ ಮತ್ತು ಮನರಂಜನೆ (ಎಂ&ಇ) ವಲಯದ ಬೆಳವಣಿಗೆ ಮತ್ತು ಪರಿವರ್ತನೆಗಾಗಿ ಒಂದು ಮಾರ್ಗಸೂಚಿಯನ್ನು ರೂಪಿಸಲು ಸರ್ಕಾರ ಮತ್ತು ಉದ್ಯಮದ ನಾಯಕರನ್ನು ಒಟ್ಟುಗೂಡಿಸುತ್ತದೆ. ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಹಯೋಗದೊಂದಿಗೆ ಶೃಂಗಸಭೆಯನ್ನು ಆಯೋಜಿಸಲಾಗುತ್ತಿದೆ.

ಈ ಸಿ.ಐ.ಐ ಬಿಗ್ ಪಿಕ್ಚರ್ ಶೃಂಗಸಭೆಯಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಮತ್ತು ಸೋನಿ ಪಿಕ್ಚರ್ಸ್ ನೆಟ್ವರ್ಕ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ & ಮುಖ್ಯಕಾರ್ಯನಿರ್ವಾಹಕ ಅಧಿಕಾರಿ(ಸಿ.ಇ.ಒ)  ಶ್ರೀ ಗೌರವ್ ಬ್ಯಾನರ್ಜಿ, ಜೆಟ್ ಸಿಂಥೆಸಿಸ್‌ ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ (ಸಿ.ಇ.ಒ) ಶ್ರೀ ರಾಜನ್ ನವನಿ, ಯೂಟ್ಯೂಬ್ ಇಂಡಿಯಾದ ಕಂಟ್ರಿ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀಮತಿ ಗುಂಜನ್ ಸೋನಿ ಹಾಗೂ ಸಿಐಐ ನ್ಯಾಷನಲ್ ಕೌನ್ಸಿಲ್ ಆಫ್ ಎಂ&ಇ ನ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

ಸಿ.ಐ.ಐ ಎಂ&ಇ ಜಾಗತಿಕ ಹೂಡಿಕೆದಾರರ ಸಭೆಯು ಅಂತರರಾಷ್ಟ್ರೀಯ ಹೂಡಿಕೆದಾರರನ್ನು ಭಾರತದ ಅತ್ಯಂತ ಭರವಸೆಯ ಉದ್ಯಮಗಳೊಂದಿಗೆ ಸಂಪರ್ಕಿಸುತ್ತದೆ. ಚಲನಚಿತ್ರ, ಸ್ಟ್ರೀಮಿಂಗ್, ಗೇಮಿಂಗ್, ಅನಿಮೇಷನ್, ವಿ.ಎಫ್.ಎಕ್ಸ್, ಲೈವ್ ಮನರಂಜನೆ ಮತ್ತು ಇನ್ನೂ ಹೆಚ್ಚಿನದನ್ನು ಒಳಗೊಂಡಂತೆ ಭಾರತದ ವೇಗವಾಗಿ ವಿಸ್ತರಿಸುತ್ತಿರುವ ಎಂ&ಇ ವಲಯಕ್ಕೆ ಜಾಗತಿಕ ಮತ್ತು ದೇಶೀಯ ಹೂಡಿಕೆಯನ್ನು ಹಾಗೂ ವೇಗವರ್ಧಿಸಲು ಈ ಉಪಕ್ರಮವು ಸರ್ವ ರೀತಿಯಲ್ಲಿ ಸಜ್ಜಾಗಿದೆ.

“ಭಾರತದ ಎಂ&ಇ ಉದ್ಯಮವು ತನ್ನ ಶ್ರೀಮಂತ ಇತಿಹಾಸದ ಹೊರತಾಗಿಯೂ, ಹೆಚ್ಚಾಗಿ ಖಾಸಗಿ ಉತ್ಸಾಹ ಮತ್ತು ಬಂಡವಾಳದ ಮೇಲೆ ಅಭಿವೃದ್ಧಿ ಹೊಂದಿದೆ. ಸಿ.ಐ.ಐ ಯ ಹೂಡಿಕೆದಾರರ ಸಭೆಯು ಅದನ್ನು ಬದಲಾಯಿಸಲು ಒಂದು ಪ್ರಮುಖ ಹೆಜ್ಜೆಯಾಗಿದೆ” ಎಂದು ಸಿ.ಐ.ಐ ಗ್ಲೋಬಲ್ ಎಂ&ಇ ಹೂಡಿಕೆದಾರರ ಶೃಂಗಸಭೆಯ ಅಧ್ಯಕ್ಷ, ರಿಲಯನ್ಸ್ ಎಂಟರ್ಟೈನ್ಮೆಂಟ್ ಇದರ ಗ್ರೂಪ್ ಸಿ.ಇ.ಒ ಮತ್ತು ಭಾರತದ ನಿರ್ಮಾಪಕರ ಸಂಘದ ಅಧ್ಯಕ್ಷ ಶ್ರೀ ಶಿಬಾಶಿಶ್ ಸರ್ಕಾರ್ ಅವರು ಹೇಳಿದರು. “ಮೊದಲ ಬಾರಿಗೆ, ನಾವು ಜಾಗತಿಕ ಹೂಡಿಕೆದಾರರು ಮತ್ತು ಭಾರತೀಯ ಎಂ&ಇ ಉದ್ಯಮಗಳನ್ನು ಕ್ಯುರೇಟೆಡ್, ಒನ್-ಆನ್-ಒನ್ ಸ್ವರೂಪದಲ್ಲಿ ಎಲ್ಲವ್ನೂ ಒಟ್ಟಿಗೆ ತರುತ್ತಿದ್ದೇವೆ. ಈ ಶೃಂಗಸಭೆಯು ಕೇವಲ ಒಂದು ಸಾಮಾನ್ಯ ಪ್ರದರ್ಶನವಲ್ಲ ಆದರೆ ಭಾರತೀಯ ಕಂಪನಿಗಳನ್ನು ಕಾರ್ಯಸಾಧ್ಯ, ರೋಮಾಂಚಕಾರಿ ಹೂಡಿಕೆಗಳಾಗಿ ಪ್ರದರ್ಶಿಸುವ ಗುರಿಯನ್ನು ಹೊಂದಿರುವ ನಿಜವಾದ ಹೊಂದಾಣಿಕೆಯ ಕಾರ್ಯಕ್ರಮವಾಗಿದೆ. ಇದನ್ನು ನಾನು ಉದ್ಯಮ ಕ್ಷೇತ್ರದ ವಿಸ್ತಾರದ ಹಾಗೂ ಪ್ರಯಾಣದ ಆರಂಭವೆಂದು ನೋಡುತ್ತೇನೆ.”

"ಸಿ.ಐ.ಐ ಎಂ&ಇ ಜಾಗತಿಕ ಹೂಡಿಕೆದಾರರ ಶೃಂಗಸಭೆಯೊಂದಿಗೆ ಪಾಲುದಾರಿಕೆ ಹೊಂದಲು ಎಲಾರಾ ಕ್ಯಾಪಿಟಲ್ ಸಂತೋಷಪಡುತ್ತದೆ. ಎಂ&ಇ ಕ್ಷೇತ್ರದಲ್ಲಿ ಹೂಡಿಕೆದಾರರ ಸಮುದಾಯ ಮತ್ತು ಕಾರ್ಪೊರೇಟ್ ಗಳನ್ನು ಒಟ್ಟುಗೂಡಿಸಲು ನಾವು ಎದುರು ನೋಡುತ್ತಿದ್ದೇವೆ, ಎರಡೂ ವಲಯಗಳಿಗೆ ಹೊಂದಿಕೆ(ಸಿನರ್ಜಿ)ಗಳನ್ನು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಚಾಲನೆ ಮಾಡುತ್ತೇವೆ" ಎಂದು ಎಲಾರಾ ಕ್ಯಾಪಿಟಲ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹರೇಂದ್ರ ಕುಮಾರ್ ಹೇಳಿದರು.

"ಈ ಮಹತ್ವದ ಉಪಕ್ರಮದಲ್ಲಿ ಸಿಐಐ ಮತ್ತು ಎಂ&ಇ ಹೂಡಿಕೆದಾರರ ಸಭೆಯೊಂದಿಗೆ ಪಾಲುದಾರಿಕೆ ಹೊಂದಲು ವಿಟ್ರಿನಾ ಹೆಮ್ಮೆಪಡುತ್ತದೆ" ಎಂದು ವಿಟ್ರಿನಾದ ಸಿ.ಇ.ಒ ಶ್ರೀ ಅತುಲ್ ಫಡ್ನಿಸ್ ಹೇಳಿದರು. "ಭಾರತದ ಎಂ&ಇ ಪರಿಸರ ವ್ಯವಸ್ಥೆಯು ವೇಗವಾಗಿ ವಿಕಸನಗೊಳ್ಳುತ್ತಿದೆ ಮತ್ತು ಜಾಗತಿಕ ವೇದಿಕೆಯಲ್ಲಿ ಭಾರತದ ಸಾಮರ್ಥ್ಯವನ್ನು ಎತ್ತಿ ತೋರಿಸುವುದು, ಸರಿಯಾದ ಹೂಡಿಕೆದಾರರನ್ನು ಸರಿಯಾದ ಅವಕಾಶಗಳಿಗೆ ಸಂಪರ್ಕಿಸುವುದು ನಮ್ಮ ಉದ್ದೇಶವಾಗಿದೆ."

ಸಿ.ಐ.ಐ ಬಿಗ್ ಪಿಕ್ಚರ್ ಶೃಂಗಸಭೆಯು ಭಾರತದ ಮಾಧ್ಯಮ ಮತ್ತು ಮನರಂಜನಾ ಉದ್ಯಮ ಕ್ಷೇತ್ರದ ಪ್ರಮುಖ ವಾರ್ಷಿಕ ಸಭೆಯಾಗಿದ್ದು, ನೀತಿ ನಿರೂಪಕರು, ಉದ್ಯಮದ ಪ್ರವರ್ತಕರು, ಹೂಡಿಕೆದಾರರು ಮತ್ತು ಸೃಜನಶೀಲ ನಾಯಕರನ್ನು ಸಭೆ ಸೇರಿ ವಲಯದ ಬೆಳವಣಿಗೆ ಮತ್ತು ನಾವೀನ್ಯತೆಯನ್ನು ಹೆಚ್ಚಿಸುತ್ತದೆ. ಶೃಂಗಸಭೆಯ ಭಾಗವಾಗಿ, ಸಿಐಐ ಮಾರುಕಟ್ಟೆ ಮತ್ತು ವೇವ್ಸ್ ಬಜಾರ್ ಜಂಟಿಯಾಗಿ ವಿಶೇಷ ಬಿ2ಬಿ ಸಭೆಗಳನ್ನು ಸುಗಮಗೊಳಿಸುತ್ತದೆ, ಉದ್ಯಮದ ನಾಯಕರು, ಖರೀದಿದಾರರು, ಮಾರಾಟಗಾರರು ಮತ್ತು ವಿಷಯ ರಚನೆಕಾರರನ್ನು ಸಹ-ಉತ್ಪಾದನಾ ಅವಕಾಶಗಳಿಗಾಗಿ ಒಟ್ಟುಗೂಡಿಸುತ್ತದೆ.

ಈ ಶೃಂಗಸಭೆಯಲ್ಲಿ ವೇವೆಕ್ಸ್ ಮತ್ತು ವೇವ್ಸ್ ಕ್ರಿಯೇಟೋಸ್ಫಿಯರ್ ಭಾಗವಹಿಸುವಿಕೆಯೂ ಇರುತ್ತದೆ, ಇದು ಸ್ಟಾರ್ಟ್-ಅಪ್ ಸಹಯೋಗ ಮತ್ತು ವ್ಯವಹಾರ ಬೆಳವಣಿಗೆಗೆ ಕ್ರಿಯಾತ್ಮಕ ಹಾಗೂ ಪೂರಕ ವಾತಾವರಣಕ್ಕೆ ಕೊಡುಗೆ ನೀಡುತ್ತದೆ.

ಪ್ರಮುಖ ಕೊಂಡಿಗಳು:

ವೇವ್ಸ್ ಬಜಾರ್: https://wavesbazaar.com/

****


(Release ID: 2187660) Visitor Counter : 6