ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಭಾರತದ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸದಸ್ಯರು


ನೀವು ರೋಲ್ ಮಾಡೆಲ್ ಆಗಿದ್ದೀರಿ; ಯುವ ಪೀಳಿಗೆ, ವಿಶೇಷವಾಗಿ ಬಾಲಕಿಯರು ಜೀವನದಲ್ಲಿ ಮುಂದುವರಿಯಲು ಸ್ಫೂರ್ತಿ ಪಡೆಯುತ್ತಾರೆ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸದಸ್ಯರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಂಸೆ

Posted On: 06 NOV 2025 2:17PM by PIB Bengaluru

ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ 2025 ಅನ್ನು ಗೆದ್ದ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸದಸ್ಯರು ಇಂದು (2025ರ ನವೆಂಬರ್ 6) ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು.

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪ್ರತಿಯೊಬ್ಬ ಸದಸ್ಯರನ್ನು ಅಭಿನಂದಿಸಿದ ರಾಷ್ಟ್ರಪತಿ ಅವರು, ಮಹಿಳಾ ತಂಡದ ಸದಸ್ಯರು ಕ್ರಿಕೆಟ್ ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರ. ದೇಶ ಮತ್ತು ವಿದೇಶಗಳ ಮೂಲೆ ಮೂಲೆಗಳಲ್ಲಿ ಲಕ್ಷಾಂತರ ಭಾರತೀಯರು ಈ ವಿಜಯವನ್ನು ಆಚರಿಸುತ್ತಿದ್ದಾರೆ ಎಂದು ಹೇಳಿದರು.

ಈ ತಂಡವು ಭಾರತವನ್ನು ಪ್ರತಿಬಿಂಬಿಸುತ್ತದೆ ಎಂದು ರಾಷ್ಟ್ರಪತಿ ಹೇಳಿದರು. ಅವರು ವಿಭಿನ್ನ ಪ್ರದೇಶಗಳನ್ನು, ವಿಭಿನ್ನ ಸಾಮಾಜಿಕ ಹಿನ್ನೆಲೆಗಳನ್ನು, ವಿಭಿನ್ನ ಸಂದರ್ಭಗಳನ್ನು ಪ್ರತಿನಿಧಿಸುತ್ತಾರೆ. ಆದರೆ ಅವರೊಲ್ಲರೂ ಒಂದೇ ತಂಡ - ಭಾರತ. ಈ ತಂಡವು ಭಾರತದ ಅತ್ಯುತ್ತಮ ಪ್ರದರ್ಶನವನ್ನು ತೋರಿಸಿದೆ.

ಏಳು ಬಾರಿಯ ವಿಶ್ವ ಚಾಂಪಿಯನ್ ಮತ್ತು ಈ ಬಾರಿ ಅಜೇಯ ದಾಖಲೆ ಹೊಂದಿದ್ದ ಆಸ್ಟ್ರೇಲಿಯಾ ತಂಡವನ್ನು ಸೋಲಿಸುವ ಮೂಲಕ ತಂಡವು ಎಲ್ಲಾ ಭಾರತೀಯರ ಸಾಮರ್ಥ್ಯದ ಮೇಲಿನ ನಂಬಿಕೆಯನ್ನು ಬಲಪಡಿಸಿದೆ ಎಂದು ರಾಷ್ಟ್ರಪತಿ ಹೇಳಿದರು. ಕಠಿಣ ಪಂದ್ಯದಲ್ಲಿ ಪ್ರಬಲ ತಂಡದ ವಿರುದ್ಧ ಫೈನಲ್ ಪಂದ್ಯವನ್ನು ದೊಡ್ಡ ಅಂತರದಿಂದ ಗೆದ್ದಿರುವುದು ಟೀಮ್ ಇಂಡಿಯಾದ ಶ್ರೇಷ್ಠತೆಗೆ ಸ್ಮರಣೀಯ ಉದಾಹರಣೆಯಾಗಿದೆ ಎಂದು ಅವರು ಹೇಳಿದರು.

ಅವರು (ಟೀಮ್ ಇಂಡಿಯಾ ಸದಸ್ಯರು) ರೋಲ್ ಮಾಡೆಲ್ ಆಗಿದ್ದಾರೆ ಎಂದು ರಾಷ್ಟ್ರಪತಿ ಹೇಳಿದರು. ಯುವ ಪೀಳಿಗೆ, ವಿಶೇಷವಾಗಿ ಹುಡುಗಿಯರು ಜೀವನದಲ್ಲಿ ಮುಂದೆ ಸಾಗಲು ಇದನ್ನು ಸ್ಫೂರ್ತಿ ಪಡೆಯುತ್ತಾರೆ. ಅವರು ಇತಿಹಾಸ ಬರೆದ ಅದೇ ಗುಣಗಳೊಂದಿಗೆ ಭವಿಷ್ಯದಲ್ಲಿಯೂ ಭಾರತೀಯ ಕ್ರಿಕೆಟ್ ಅನ್ನು ಅಗ್ರಸ್ಥಾನದಲ್ಲಿ ಇರಿಸುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ತಂಡದ ಸದಸ್ಯರು ಭರವಸೆ ಮತ್ತು ಹತಾಶೆಯ ಏರಿಳಿತಗಳನ್ನು ಅನುಭವಿಸಿರಬೇಕು ಎಂದು ರಾಷ್ಟ್ರಪತಿ ಅವರು ಹೇಳಿದರು. ಕೆಲವೊಮ್ಮೆ ಅವರು ನಿದ್ರೆಯನ್ನೂ ಕಳೆದುಕೊಂಡಿರುತ್ತಿದ್ದರು. ಆದರೆ ಅವರು ಎಲ್ಲಾ ಸವಾಲುಗಳನ್ನು ಜಯಿಸಿದರು. ನ್ಯೂಜಿಲೆಂಡ್ ವಿರುದ್ಧದ ಗೆಲುವಿನ ನಂತರ, ಪಂದ್ಯದಲ್ಲಿ ಏರಿಳಿತಗಳ ಹೊರತಾಗಿಯೂ, ನಮ್ಮ ಹೆಣ್ಣುಮಕ್ಕಳು ಮೇಲುಗೈ ಸಾಧಿಸುತ್ತಾರೆ ಎಂದು ಜನರು ಬಲವಾಗಿ ನಂಬಿದ್ದರು ಎಂದು ಅವರು ಹೇಳಿದರು.

ಅವರ ಕಠಿಣ ಪರಿಶ್ರಮ, ಅತ್ಯುತ್ತಮ ಆಟದ ಕೌಶಲ್ಯ, ದೃಢನಿಶ್ಚಯ ಮತ್ತು ಅವರ ಕುಟುಂಬಗಳು ಮತ್ತು ಕ್ರಿಕೆಟ್ ಪ್ರೇಮಿಗಳ ಪ್ರೀತಿ ಮತ್ತು ಆಶೀರ್ವಾದಗಳು ಅವರ ಯಶಸ್ಸಿನ ಹಿಂದೆ ಇವೆ ಎಂದು ರಾಷ್ಟ್ರಪತಿ ಒತ್ತಿ ಹೇಳಿದರು. ಕ್ರಿಕೆಟ್ ನಂತಹ ತಂಡದ ಆಟದಲ್ಲಿ, ಎಲ್ಲಾ ತಂಡದ ಸದಸ್ಯರು ಎಲ್ಲಾ ಸಮಯದಲ್ಲೂ ಸಂಪೂರ್ಣವಾಗಿ ಬದ್ಧರಾಗಿರಬೇಕು ಎಂದು ಅವರು ಹೇಳಿದರು. ಮುಖ್ಯ ತರಬೇತುದಾರ, ಬೌಲಿಂಗ್ ತರಬೇತುದಾರ, ಫೀಲ್ಡಿಂಗ್ ತರಬೇತುದಾರ ಮತ್ತು ಸಹಾಯಕ ಸಿಬ್ಬಂದಿ ಎಲ್ಲರನ್ನೂ ಅವರು ಶ್ಲಾಘಿಸಿದರು. ಅವರು ತಮ್ಮ ಪ್ರದರ್ಶನಗಳಿಂದ ಟೀಮ್ ಇಂಡಿಯಾಕ್ಕೆ ಯಶಸ್ಸಿನ ಹೊಸ ದಾಖಲೆಗಳನ್ನು ಸೃಷ್ಟಿಸುವುದನ್ನು ಮುಂದುವರಿಸಲಿ ಎಂದು ಅವರು ಹಾರೈಸಿದರು.

 

*****


(Release ID: 2186962) Visitor Counter : 11