ಪ್ರಧಾನ ಮಂತ್ರಿಯವರ ಕಛೇರಿ
ರಾಷ್ಟ್ರೀಯ ಗೀತೆ "ವಂದೇ ಮಾತರಂ" ನ 150ನೇ ವರ್ಷದ ಸ್ಮರಣಾರ್ಥ ವರ್ಷಪೂರ್ತಿ ವಿಶೇಷ ಆಚರಣೆಯನ್ನು ನವೆಂಬರ್ 7, 2025 ರಂದು ಪ್ರಧಾನಮಂತ್ರಿ ಅವರು ಉದ್ಘಾಟಿಸಲಿದ್ದಾರೆ
ದೇಶದಾದ್ಯಂತ ವಂದೇ ಮಾತರಂ ನ ಪೂರ್ಣ ಆವೃತ್ತಿಯ ಸಾಮೂಹಿಕ ಗಾಯನ ನಡೆಯಲಿದೆ
ಈ ವಿಶೇಷ ಸಂದರ್ಭದ ಸಂಕೇತವಾಗಿ ಅಂಚೆಚೀಟಿ ಮತ್ತು ನಾಣ್ಯವನ್ನು ಪ್ರಧಾನಮಂತ್ರಿ ಅವರು ಬಿಡುಗಡೆ ಮಾಡಲಿದ್ದಾರೆ
Posted On:
06 NOV 2025 2:47PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 7, 2025 ರಂದು ಬೆಳಿಗ್ಗೆ 9:30ರ ಸುಮಾರಿಗೆ ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಗೀತೆ "ವಂದೇ ಮಾತರಂ" ನ ವರ್ಷಪೂರ್ತಿ ಸ್ಮರಣಾರ್ಥ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ವಿಶೇಷ ಸ್ಮರಣಾರ್ಥ ಅಂಚೆಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಲಿದ್ದಾರೆ. ಈ ಕಾರ್ಯಕ್ರಮವು ಭಾರತದ ಸ್ವಾತಂತ್ರ್ಯ ಚಳವಳಿಗೆ ಸ್ಫೂರ್ತಿ ನೀಡಿದ ಮತ್ತು ರಾಷ್ಟ್ರೀಯ ಹೆಮ್ಮೆ ಮತ್ತು ಏಕತೆಯನ್ನು ಹುಟ್ಟುಹಾಕುತ್ತಿರುವ ಗಾಯನದ ಸಂಯೋಜನೆಯ 150 ವರ್ಷಗಳನ್ನು ಆಚರಿಸುವುದಾಗಿದೆ, ಹಾಗೂ ಈ ಮೂಲಕ 2025ರ ನವೆಂಬರ್ 7 ರಿಂದ 2026ರ ನವೆಂಬರ್ 7 ರವರೆಗೆ ವರ್ಷಪೂರ್ತಿ ರಾಷ್ಟ್ರವ್ಯಾಪಿ ಸ್ಮರಣಾರ್ಥ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಔಪಚಾರಿಕ ಚಾಲನೆಯನ್ನು ನೀಡುತ್ತದೆ.
ಈ ಆಚರಣೆಯ ಸಂದರ್ಭದಲ್ಲಿ ಬೆಳಿಗ್ಗೆ 9:50ರ ಸುಮಾರಿಗೆ ಸಾರ್ವಜನಿಕ ಸ್ಥಳಗಳಲ್ಲಿ "ವಂದೇ ಮಾತರಂ" ನ ಪೂರ್ಣ ಆವೃತ್ತಿಯ ಸಾಮೂಹಿಕ ಗಾಯನ ನಡೆಯಲಿದೆ, ಈ ಮುಖ್ಯ ಕಾರ್ಯಕ್ರಮದಲ್ಲಿ ಸಮಾಜದ ಎಲ್ಲಾ ವರ್ಗಗಳ ನಾಗರಿಕರು ಮುಕ್ತವಾಗಿ ಭಾಗವಹಿಸಲಿದ್ದಾರೆ.
2025ನೇ ವರ್ಷವು ವಂದೇ ಮಾತರಂನ 150 ವರ್ಷತುಂಬಿರುವುದನ್ನು ಸೂಚಿಸುತ್ತದೆ. ನಮ್ಮ ರಾಷ್ಟ್ರೀಯ ಗೀತೆ "ವಂದೇ ಮಾತರಂ" ಅನ್ನು 1875ರ ನವೆಂಬರ್ 7 ರಂದು ಅಕ್ಷಯ ನವಮಿಯ ಶುಭ ಸಂದರ್ಭದಲ್ಲಿ ಶ್ರೀ ಬಂಕಿಮಚಂದ್ರ ಚಟರ್ಜಿ ಅವರು ಬರೆದಿದ್ದಾರೆ. ಸಾಹಿತ್ಯ ಪತ್ರಿಕೆ “ಬಂಗದರ್ಶನ್” ನಲ್ಲಿ ಪ್ರಕಟವಾದ ಶ್ರೀ ಬಂಕಿಮಚಂದ್ರ ಚಟರ್ಜಿ ಅವರ ಕಾದಂಬರಿ “ಆನಂದಮಠ”ದ ಭಾಗವಾಗಿ ಮೊತ್ತಮೊದಲು "ವಂದೇ ಮಾತರಂ" ಕಾಣಿಸಿಕೊಂಡಿತು. ಶಕ್ತಿ, ಸಮೃದ್ಧಿ ಮತ್ತು ದೈವತ್ವದ ಸಾಕಾರವಾಗಿ ಮಾತೃಭೂಮಿಯನ್ನು ಆಹ್ವಾನಿಸುವ ಈ ಹಾಡು, ಭಾರತದ ಏಕತೆ ಮತ್ತು ಸ್ವಾಭಿಮಾನದ ಜಾಗೃತಿ ಮನೋಭಾವಕ್ಕೆ ಕಾವ್ಯಾತ್ಮಕ ಅಭಿವ್ಯಕ್ತಿಯನ್ನು ನೀಡಿತು. ಇದು ಶೀಘ್ರದಲ್ಲೇ ರಾಷ್ಟ್ರದ ಭಕ್ತಿಯ ಶಾಶ್ವತ ಸಂಕೇತವಾಯಿತು.
*****
(Release ID: 2186951)
Visitor Counter : 20
Read this release in:
Assamese
,
English
,
Khasi
,
Urdu
,
Marathi
,
हिन्दी
,
Bengali
,
Gujarati
,
Tamil
,
Telugu
,
Malayalam