ಪ್ರಧಾನ ಮಂತ್ರಿಯವರ ಕಛೇರಿ 
                
                
                
                
                
                    
                    
                        ಪಾಟ್ನಾ ಸಾಹಿಬ್ ನ ತಖತ್ ಶ್ರೀ ಹರಿಮಂದಿರ ಜಿ ನಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಮಂತ್ರಿ
                    
                    
                        
                    
                
                
                    Posted On:
                02 NOV 2025 10:10PM by PIB Bengaluru
                
                
                
                
                
                
                ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂಜೆ ಪಾಟ್ನಾ ಸಾಹಿಬ್ ನ ತಖತ್ ಶ್ರೀ ಹರಿಮಂದಿರ ಜಿ ನಲ್ಲಿ ಪ್ರಾರ್ಥನೆ ಸಲ್ಲಿಸಿದರು.
ತಖತ್ ಶ್ರೀ ಹರಿಮಂದಿರ ಜಿ ಪಾಟ್ನಾ ಸಾಹಿಬ್ ನಲ್ಲಿ ಪ್ರಾರ್ಥನೆ ಸಲ್ಲಿಸುವುದು ಅತ್ಯಂತ ದೈವಿಕ ಅನುಭವ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಸಿಖ್ ಗುರುಗಳ ಉದಾತ್ತ ಬೋಧನೆಗಳು ಇಡೀ ಮನುಕುಲಕ್ಕೆ ಪ್ರೇರಣೆ ನೀಡುತ್ತವೆ ಎಂದು ಅವರು ಹೇಳಿದರು.
ಈ ಗುರುದ್ವಾರವು ಶ್ರೀ ಗುರು ಗೋವಿಂದ ಸಿಂಗ್ ಜೀ ಅವರೊಂದಿಗೆ ಬಹಳ ನಿಕಟ ಸಂಬಂಧವನ್ನು ಹೊಂದಿದೆ. ಅವರ ಧೈರ್ಯ ಮತ್ತು ನ್ಯಾಯದ ಬಗೆಗಿನ ಬದ್ಧತೆ ಬಹಳ ಪ್ರೇರಣಾದಾಯಕವಾಗಿದೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು.
ಪ್ರಧಾನಮಂತ್ರಿ ಅವರು ತಖತ್ ಶ್ರೀ ಹರಿಮಂದಿರ ಜಿ ಪಾಟ್ನಾ ಸಾಹಿಬ್ ನ ಇಣುಕುನೋಟಗಳನ್ನು ಸಹ ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿ ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಹೇಳಿದ್ದಾರೆ;
"ಇಂದು ಸಂಜೆ ತಖತ್ ಶ್ರೀ ಹರಿಮಂದಿರ ಜಿ ಪಾಟ್ನಾ ಸಾಹಿಬ್ ನಲ್ಲಿ ಪ್ರಾರ್ಥನೆ ಸಲ್ಲಿಸುವುದು ಬಹಳ ದೈವಿಕ ಅನುಭವವಾಗಿತ್ತು. ಸಿಖ್ ಗುರುಗಳ ಉದಾತ್ತ ಬೋಧನೆಗಳು ಇಡೀ ಮಾನವಕುಲಕ್ಕೆ ಸ್ಫೂರ್ತಿ ನೀಡುತ್ತವೆ. ಈ ಗುರುದ್ವಾರವು ಶ್ರೀ ಗುರು ಗೋವಿಂದ ಸಿಂಗ್ ಜೀ ಅವರೊಂದಿಗೆ ಬಹಳ ನಿಕಟ ಸಂಬಂಧವನ್ನು ಹೊಂದಿದೆ, ಅವರ ಧೈರ್ಯ ಮತ್ತು ನ್ಯಾಯದ ಬಗೆಗಿನ ಬದ್ಧತೆ ಬಹಳ ಪ್ರೇರಣಾದಾಯಕವಾಗಿದೆ."
"ತಖತ್ ಶ್ರೀ ಹರಿಮಂದಿರ ಜಿ ಪಾಟ್ನಾ ಸಾಹಿಬ್ ನ ಕೆಲವು ಇಣುಕುನೋಟಗಳು ಇಲ್ಲಿವೆ."
 
“ਅੱਜ ਸ਼ਾਮ ਤਖ਼ਤ ਸ੍ਰੀ ਹਰਿਮੰਦਰ ਜੀ ਪਟਨਾ ਸਾਹਿਬ ਵਿਖੇ ਅਰਦਾਸ ਕਰਨਾ ਬਹੁਤ ਹੀ ਬ੍ਰਹਮ ਅਨੁਭਵ ਸੀ। ਸਿੱਖ ਗੁਰੂਆਂ ਦੀਆਂ ਮਹਾਨ ਸਿੱਖਿਆਵਾਂ ਸਮੁੱਚੀ ਮਨੁੱਖਤਾ ਨੂੰ ਪ੍ਰੇਰਿਤ ਕਰਦੀਆਂ ਹਨ। ਇਸ ਗੁਰਦੁਆਰੇ ਨਾਲ ਸ੍ਰੀ ਗੁਰੂ ਗੋਬਿੰਦ ਸਿੰਘ ਜੀ ਦਾ ਬਹੁਤ ਨੇੜਲਾ ਸਬੰਧ ਹੈ, ਜਿਨ੍ਹਾਂ ਦੀ ਹਿੰਮਤ ਅਤੇ ਨਿਆਂ ਪ੍ਰਤੀ ਵਚਨਬੱਧਤਾ ਬਹੁਤ ਪ੍ਰੇਰਨਾਦਾਇਕ ਹੈ।”
“ਪੇਸ਼ ਹਨ ਤਖਤ ਸ੍ਰੀ ਹਰਿਮੰਦਰ ਜੀ ਪਟਨਾ ਸਾਹਿਬ ਦੀਆਂ ਕੁਝ ਝਲਕੀਆਂ”
 
"ತಖತ್ ಶ್ರೀ ಹರಿಮಂದಿರ್ ಜಿ ಪಾಟ್ನಾ ಸಾಹಿಬ್‌ನಲ್ಲಿ, ಶ್ರೀ ಗುರು ಗೋಬಿಂದ್ ಸಿಂಗ್ ಜಿ ಮತ್ತು ಮಾತಾ ಸಾಹಿಬ್ ಕೌರ್ ಜಿ ಅವರ ಪವಿತ್ರ ಜೋರ್ ಸಾಹಿಬ್ ದರ್ಶನ ಪಡೆದೆ. ಅವರು ದೈವಿಕ ಗುರು ಚರಣ ಯಾತ್ರೆಯ ನಂತರ ಪಾಟ್ನಾಕ್ಕೆ ಬಂದಿದ್ದಾರೆ, ಇದರಲ್ಲಿ ಎಲ್ಲಾ ವರ್ಗದ ಜನರು ಸೇರಿಕೊಂಡರು. ಜನರು ಪಾಟ್ನಾಗೆ ಬಂದು ತಮ್ಮ ದರ್ಶನ ಪಡೆಯುವಂತೆ ಒತ್ತಾಯಿಸುತ್ತಿದ್ದಾರೆ."
““ਤਖ਼ਤ ਸ੍ਰੀ ਹਰਿਮੰਦਰ ਜੀ ਪਟਨਾ ਸਾਹਿਬ ਵਿਖੇ, ਸ੍ਰੀ ਗੁਰੂ ਗੋਬਿੰਦ ਸਿੰਘ ਜੀ ਅਤੇ ਮਾਤਾ ਸਾਹਿਬ ਕੌਰ ਜੀ ਦੇ ਪਵਿੱਤਰ ਜੋੜੇ ਸਾਹਿਬ ਦੇ ਦਰਸ਼ਨ ਕੀਤੇ। ਉਹ ਬ੍ਰਹਮ ਗੁਰੂ ਚਰਨ ਯਾਤਰਾ ਤੋਂ ਬਾਅਦ ਪਟਨਾ ਆਏ ਹਨ, ਜਿਸ ਵਿੱਚ ਹਰ ਵਰਗ ਦੇ ਲੋਕ ਸ਼ਾਮਲ ਹੋਏ ਸਨ। ਲੋਕਾਂ ਨੂੰ ਪਟਨਾ ਆਉਣ ਅਤੇ ਉਨ੍ਹਾਂ ਦੇ ਦਰਸ਼ਨ ਕਰਨ ਦੀ ਤਾਕੀਦ ਹੈ।” “
 
*****
                
                
                
                
                
                (Release ID: 2185827)
                Visitor Counter : 3
                
                
                
                    
                
                
                    
                
                Read this release in: 
                
                        
                        
                            Odia 
                    
                        ,
                    
                        
                        
                            English 
                    
                        ,
                    
                        
                        
                            Urdu 
                    
                        ,
                    
                        
                        
                            Marathi 
                    
                        ,
                    
                        
                        
                            हिन्दी 
                    
                        ,
                    
                        
                        
                            Bengali 
                    
                        ,
                    
                        
                        
                            Manipuri 
                    
                        ,
                    
                        
                        
                            Assamese 
                    
                        ,
                    
                        
                        
                            Gujarati 
                    
                        ,
                    
                        
                        
                            Telugu 
                    
                        ,
                    
                        
                        
                            Malayalam