ಪ್ರಧಾನ ಮಂತ್ರಿಯವರ ಕಛೇರಿ
ಜನ್ಮಜಾತ ಹೃದಯ ಕಾಯಿಲೆಗಳನ್ನು ಉತ್ತಮ ಚಿಕಿತ್ಸೆ ಮೂಲಕ ನಿವಾರಿಸಿಕೊಂಡ ಮಕ್ಕಳೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ
ಮಕ್ಕಳ ಅಸಾಧಾರಣ ಮನೋಭಾವ ಮತ್ತು ಧೈರ್ಯಕ್ಕಾಗಿ ಅವರನ್ನು ಶ್ಲಾಘಿಸಿದ ಪ್ರಧಾನಮಂತ್ರಿ
ಯೋಗ ಮತ್ತು ನಿಯಮಿತ ಅಭ್ಯಾಸಗಳ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಧಾನಮಂತ್ರಿ ಅವರು ಒತ್ತು ನೀಡಿದ್ದಾರೆ
ಭೂಮಿ ತಾಯಿಗೆ ಕೃತಜ್ಞತೆ ವ್ಯಕ್ತಪಡಿಸಲು 'ತಾಯಿಯ ಹೆಸರಲ್ಲಿ ಒಂದು ಗಿಡ(ಏಕ್ ಪೆಡ್ ಮಾ ಕೆ ನಾಮ್)' ಅಭಿಯಾನದಲ್ಲಿ ಭಾಗವಹಿಸಲು ಪ್ರಧಾನಮಂತ್ರಿ ಅವರು ಮಕ್ಕಳಿಗೆ ಕರೆ ನೀಡಿದ್ದಾರೆ
Posted On:
01 NOV 2025 7:22PM by PIB Bengaluru
'ಹೃದಯದ ಮಾತು (ದಿಲ್ ಕಿ ಬಾತ್)' ಕಾರ್ಯಕ್ರಮದ ಭಾಗವಾಗಿ, ಛತ್ತೀಸ್ ಗಢದ ನವ ರಾಯ್ ಪುರದ ಶ್ರೀ ಸತ್ಯ ಸಾಯಿ ಸಂಜೀವನಿ ಆಸ್ಪತ್ರೆಯಲ್ಲಿ ನಡೆದ 'ಜೀವನದ ಉಡುಗೊರೆ' ಸಮಾರಂಭದಲ್ಲಿ ಜನ್ಮಜಾತ ಹೃದಯ ಕಾಯಿಲೆಗಳಿಂದ ಯಶಸ್ವಿಯಾಗಿ ಚಿಕಿತ್ಸೆ ಪಡೆದ 2500 ಮಕ್ಕಳೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂವಾದ ನಡೆಸಿದರು.
ಯುವ ಹಾಕಿ ಚಾಂಪಿಯನ್ ಒಬ್ಬರು ತಾವು ಐದು ಪದಕಗಳನ್ನು ಗೆದ್ದಿರುವುದಾಗಿ ಮತ್ತು ಶಾಲಾ ತಪಾಸಣೆಯ ಸಮಯದಲ್ಲಿ ಹೃದಯ ಕಾಯಿಲೆ ಇರುವುದು ಪತ್ತೆಯಾಗಿರುವುದಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಅವರು ಆರು ತಿಂಗಳ ಹಿಂದೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಮತ್ತು ಈಗ ಹಾಕಿ ಆಡುವುದನ್ನು ಮುಂದುವರೆಸಿದ್ದಾರೆ. ಪ್ರಧಾನಮಂತ್ರಿಯವರು ತಮ್ಮ ಆಕಾಂಕ್ಷೆಗಳ ಬಗ್ಗೆ ಅವರನ್ನು ಕೇಳಿದಾಗ, ಅವರು "ವೈದ್ಯೆಯಾಗಲು ಮತ್ತು ಎಲ್ಲಾ ಮಕ್ಕಳಿಗೆ ಚಿಕಿತ್ಸೆ ನೀಡಲು ಬಯಸುತ್ತೇನೆ" ಎಂದು ಅವರು ಉತ್ತರಿಸಿದರು. ಹಿರಿಯರಿಗೂ ಚಿಕಿತ್ಸೆ ನೀಡುತ್ತೀರಾ ಎಂದು ಪ್ರಧಾನಮಂತ್ರಿ ಅವರು ಅವರನ್ನು ಕೇಳಿದಾಗ, ಅವರು ಆತ್ಮವಿಶ್ವಾಸದಿಂದ ಹೌದು ತಮ್ಮ ಮಾತನ್ನು ದೃಢಪಡಿಸಿದರು. ಪ್ರಧಾನಮಂತ್ರಿಯವರನ್ನು ಮೊದಲ ಬಾರಿಗೆ ಭೇಟಿಯಾದಾಗ ಅವರು ಅತೀವ ಸಂತೋಷ ವ್ಯಕ್ತಪಡಿಸಿದರು.
ಮತ್ತೊಂದು ಮಗು, ತನ್ನ ಶಸ್ತ್ರಚಿಕಿತ್ಸೆಯನ್ನು ಒಂದು ವರ್ಷದ ಹಿಂದೆ ಮಾಡಿಸಿಕೊಂಡಿದ್ದು, ಎಲ್ಲರಿಗೂ ಸೇವೆ ಸಲ್ಲಿಸಲು ವೈದ್ಯೆಯಾಗುವ ಆಕಾಂಕ್ಷೆಯನ್ನು ಹೊಂದಿದೆ ಎಂದು ಹಂಚಿಕೊಂಡಿದೆ. ಚಿಕಿತ್ಸೆಯ ಸಮಯದಲ್ಲಿ ತಾನು ಅಳುತ್ತಿದ್ದೆನಾ ಎಂದು ಶ್ರೀ ಮೋದಿ ಅವರು ಕೇಳಿದಾಗ, ಅಳಲಿಲ್ಲ ಎಂದು ಆ ಮಗು ಉತ್ತರಿಸಿದಳು. ಅವಳು ಪ್ರೇರಣಾದಾಯಕ ಕವಿತೆಯನ್ನು ಕೂಡ ಹಾಡಿದಳು, ಅದನ್ನು ಪ್ರಧಾನಮಂತ್ರಿ ಅವರು ಮೆಚ್ಚಿಕೊಂಡರು.
ಇನ್ನೊಬ್ಬ ಹುಡುಗ, 2014ರಲ್ಲಿ 14 ತಿಂಗಳ ವಯಸ್ಸಿನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದನು ಮತ್ತು ಈಗ ಆರೋಗ್ಯವಾಗಿದ್ದಾನೆ ಮತ್ತು ಕ್ರಿಕೆಟ್ ನಲ್ಲಿ ಸಕ್ರಿಯನಾಗಿದ್ದಾನೆ ಎಂದು ತನ್ನ ಅನುಭವವನ್ನು ಹಂಚಿಕೊಂಡನು. ಪ್ರಧಾನಮಂತ್ರಿಯವರು ನಿಯಮಿತವಾಗಿ ತಪಾಸಣೆಗೆ ಒಳಗಾಗುತ್ತಾನೆಯೇ ಎಂದು ಆ ಮಗುವನ್ನು ಕೇಳಿದರು ಮತ್ತು ತನಗೆ ಈಗ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ ಎಂದು ಮಗುವಿನಿಂದ ಮಾತು ಕೇಳಿ ಪ್ರಧಾನಮಂತ್ರಿ ಅವರಿಗೆ ಬಹಳಷ್ಟು ಸಂತೋಷವಾಯಿತು. ಅದು ಅಲ್ಲದೆ, ಮಗು ತಾನು ಕ್ರಿಕೆಟ್ ಆಡುವುದನ್ನು ಕೂಡ ಈ ಸಂದರ್ಭದಲ್ಲಿ ದೃಢಪಡಿಸಿತು. ಪ್ರಧಾನಮಂತ್ರಿಯವರನ್ನು ಹತ್ತಿರದಿಂದ ಭೇಟಿಯಾಗಲು ಮಗು ವಿನಂತಿಸಿಕೊಂಡಾಗ, ಪ್ರಧಾನಮಂತ್ರಿ ಅವರು ಸೇರಿದಂತೆ ಅದನ್ನು ಎಲ್ಲರೂ ಪ್ರೀತಿಯಿಂದ ಒಪ್ಪಿಕೊಂಡರು.
ಮತ್ತೊಬ್ಬ ಚಿಕ್ಕ ಹುಡುಗನೊಂದಿಗೆ ಸಂವಹನ ನಡೆಸಿದ ಶ್ರೀ ಮೋದಿಯವರು, ಆಸ್ಪತ್ರೆ ಭೇಟಿ ಮತ್ತು ಇಂಜೆಕ್ಷನ್ ಸಮಯದಲ್ಲಿ ತನಗೆ ಹೇಗನಿಸಿತು ಎಂದು ಆ ಮಗುವಿನಲ್ಲಿ ಕೇಳಿದರು, ಆಗಿ, ಆ ಮಗು ತಾನು ಹೆದರುವುದಿಲ್ಲ ಎಂದು ಉತ್ತರಿಸಿದನು, ಅದು ಅವನಿಗೆ ಚೆನ್ನಾಗಿ ಚೇತರಿಸಿಕೊಳ್ಳಲು ಸಹಾಯ ಮಾಡಿತು. ಶಿಕ್ಷಕರ ಸ್ಪಂದನೆ ಹಾಗೂ ಪ್ರತಿಕ್ರಿಯೆಯ ಬಗ್ಗೆ ಪ್ರಧಾನಮಂತ್ರಿಯವರು ಈ ಮಗುವಿನಲ್ಲಿ ಕೇಳಿದಾಗ, ಅವರು ನನ್ನ ಶೈಕ್ಷಣಿಕತೆಯನ್ನು ತುಂಬಾ ಹೊಗಳುತ್ತಾರೆ ಎಂದು ಈ ಪುಟ್ಟ ಮಗು ಉತ್ತರಿಸಿದ, ಈ ಸಂದರ್ಭದಲ್ಲಿ ಮಗುವಿನ. ಪ್ರಾಮಾಣಿಕತೆಯನ್ನು ಪ್ರಧಾನಮಂತ್ರಿ ಅವರು ಪ್ರೋತ್ಸಾಹಿಸಿದರು.
ಇನ್ನೊಬ್ಬಳು ಪುಟ್ಟ ಹುಡುಗಿ, ತಾನು 7ನೇ ತರಗತಿಯಲ್ಲಿದ್ದೇನೆ ಮತ್ತು ಶಿಕ್ಷಣವು ರಾಷ್ಟ್ರವನ್ನು ಮುನ್ನಡೆಸುತ್ತದೆ ಎಂದು ನಂಬಿ ಬಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುವ ಉದ್ದೇಶದಿಂದ ನಾನು ಶಿಕ್ಷಕಿಯಾಗಲು ಬಯಸುತ್ತೇನೆ ಎಂದು ತನ್ನ ಆಶಯ-ಅನುಭವಗಳನ್ನು ಹಂಚಿಕೊಂಡಳು.
ನಂತರ ಪ್ರಧಾನಮಂತ್ರಿಯವರು ಮಕ್ಕಳಿಗೆ , ಈ ವರ್ಷ ಯಾರ ಶತಮಾನೋತ್ಸವ ವರ್ಷ ಪ್ರಾರಂಭವಾಗಿದೆ ಎಂದು ತಿಳಿದಿದೆಯೇ ಎಂದು ಕೇಳಿದರು ಮತ್ತು ಅದು ಶ್ರೀ ಸತ್ಯ ಸಾಯಿ ಬಾಬಾ ಅವರ ಶತಮಾನೋತ್ಸವ ವರ್ಷ ಎಂದು ತಿಳಿಸಿದರು. ಪುಟ್ಟಪರ್ತಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಾಬಾ ಅವರು ತೀವ್ರ ನೀರಿನ ಕೊರತೆಯನ್ನು ಹೇಗೆ ನೀಗಿಸಿದ್ದಾರೆ, ಸುಮಾರು 400 ಹಳ್ಳಿಗಳಿಗೆ ಕುಡಿಯುವ ನೀರನ್ನು ಹೇಗೆ ಒದಗಿಸಿದ್ದಾರೆ ಎಂಬುದನ್ನು ಕೂಡ ಪ್ರಧಾನಮಂತ್ರಿ ಅವರು ವಿವರಿಸಿದರು. ಶ್ರೀ ಮೋದಿ ಅವರು ಜಲ ಸಂರಕ್ಷಣೆ ಮತ್ತು ಮರ ನೆಡುವಿಕೆಯ ಸಂದೇಶವನ್ನು ಮಕ್ಕಳಿಗೆ ಒತ್ತಿ ಹೇಳಿದರು, ತಮ್ಮ "ತಾಯಿಯವರ ಹೆಸರಲ್ಲಿ ಒಂದು ಗಿಡ(ಏಕ್ ಪೆಡ್ ಮಾ ಕೆ ನಾಮ್)" ಅಭಿಯಾನದ ಮಹತ್ವವನ್ನು ಮಕ್ಕಳಲ್ಲಿ ಹಂಚಿಕೊಂಡರು, ಮಾತೃ ಭೂಮಿ ಮತ್ತು ತಮ್ಮ ಸ್ವಂತ ತಾಯಂದಿರಿಗೆ ಗೌರವವಾಗಿ ಪ್ರತಿಯೊಬ್ಬರೂ ತಮ್ಮ ತಾಯಿಯ ಹೆಸರಿನಲ್ಲಿ ಸಸಿ -ಗಿಡಗಳನ್ನು ನೆಡಲು ಪ್ರಧಾನಮಂತ್ರಿ ಅವರು ಪ್ರೋತ್ಸಾಹಿಸಿದರು .
ಪಶ್ಚಿಮ ಬಂಗಾಳದ ಅಭಿಕ್ ಎಂಬ ಪುಟ್ಟ ಮಗು ಸೈನ್ಯಕ್ಕೆ ಸೇರಿ ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ತನ್ನ ಕನಸನ್ನು ಹಂಚಿಕೊಂಡಿತು. ಪ್ರಧಾನಮಂತ್ರಿ ಅವರು ಏಕೆ ಎಂದು ಆ ಮಗುವನ್ನು ಕೇಳಿದಾಗ, ಸೈನಿಕರಂತೆ ದೇಶವನ್ನು ರಕ್ಷಿಸಬೇಕೆಂದು ಪುಟ್ಟ ಮಗು ಅಭಿಕ್ ಉತ್ತರಿಸಿದ. ಆ ಪುಟ್ಟ ಮಗುವಿನ ಮನೋಭಾವವನ್ನು ಪ್ರಧಾನಮಂತ್ರಿ ಅವರು ಮೆಚ್ಚಿಕೊಂಡರು.
ಒಬ್ಬ ಚಿಕ್ಕ ಹುಡುಗಿ ಪ್ರಧಾನಮಂತ್ರಿಯವರನ್ನು ಭೇಟಿಯಾಗುವ ತನ್ನ ದೀರ್ಘಕಾಲದ ಕನಸು ನನಸಾದ ಬಗ್ಗೆ ಸಂತಸ ವ್ಯಕ್ತಪಡಿಸಿದಳು ಮತ್ತು ಸುದ್ದಿಯಲ್ಲಿ ಪ್ರಧಾನಮಂತ್ರಿಯವರನ್ನು ನೋಡಿದ್ದೇನೆ ಎಂದು ಈ ಚಿಕ್ಕ ಹುಡುಗಿ ಅನುಭವ ಹಂಚಿಕೊಂಡಳು.
ಪ್ರಧಾನಮಂತ್ರಿ ಶ್ರೀ ಮೋದಿ ಅವರು ಮಕ್ಕಳೊಂದಿಗೆ ಸಂವಹನ ನಡೆಸುವಾಗ ಆಗುವ ಅನುಭವ ಕುರಿತು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು ಮತ್ತು ಯಾವುದೇ ಒಳ್ಳೆಯ ಕೆಲಸವನ್ನು ಸಾಧಿಸಲು ಆರೋಗ್ಯಕರ ದೇಹವು ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದರು. ಯೋಗ ಮತ್ತು ಶಿಸ್ತಿನ ನಿದ್ರೆಯ ದಿನಚರಿಗಳ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಧಾನಮಂತ್ರಿ ಅವರು ಮಕ್ಕಳಿಗೆ ಸಲಹೆ ನೀಡಿದರು. ಮಕ್ಕಳು ತಮ್ಮ ಯೋಗಕ್ಷೇಮದ ಬಗ್ಗೆ ಜಾಗರೂಕರಾಗಿರಲು ಪ್ರಧಾನಮಂತ್ರಿಯವರು ಅವರುಗಳನ್ನು ಒತ್ತಾಯಿಸಿದರು ಮತ್ತು ಈ ರೀತಿಯ ಜೀವನ ಅಭ್ಯಾಸಕ್ಕೆ ಅವರ ಬದ್ಧತೆಯನ್ನು ಕೂಡ ಕೋರಿದರು. ಸಂವಾದವನ್ನು ಮುಕ್ತಾಯಗೊಳಿಸಿದ ಪ್ರಧಾನಮಂತ್ರಿ ಅವರು, ಎಲ್ಲಾ ಮಕ್ಕಳಿಗೆ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು.
*****
(Release ID: 2185358)
Visitor Counter : 10