ಪ್ರಧಾನ ಮಂತ್ರಿಯವರ ಕಛೇರಿ
ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (ಸಿ.ಎ.ಪಿ.ಎಫ್ ಗಳು) ಮತ್ತು ರಾಜ್ಯ ಪೊಲೀಸ್ ಪಡೆಗಳ ಕೌಶಲ್ಯ ಮತ್ತು ಧೈರ್ಯವನ್ನು ಪ್ರದರ್ಶಿಸುವ ಭವ್ಯವಾದ ಏಕತಾ ಪರೇಡ್ ಅನ್ನು ಶ್ಲಾಘಿಸಿದ ಪ್ರಧಾನಮಂತ್ರಿ
प्रविष्टि तिथि:
31 OCT 2025 7:32PM by PIB Bengaluru
ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (ಸಿ.ಎ.ಪಿ.ಎಫ್ ಗಳು) ಮತ್ತು ರಾಜ್ಯ ಪೊಲೀಸ್ ಪಡೆಗಳು ತಮ್ಮ ಕೌಶಲ್ಯ ಮತ್ತು ಧೈರ್ಯವನ್ನು ಪ್ರದರ್ಶಿಸಲು ಏಕತಾ ಪರೇಡ್ ಒಂದು ಅದ್ಭುತ ಸಂದರ್ಭವಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಸಮರ ಕಲೆಗಳು ಮತ್ತು ನಿರಾಯುಧ ಯುದ್ಧ ಕವಾಯತುಗಳಲ್ಲಿ ಮಹಿಳಾ ಸಿಬ್ಬಂದಿಯ ಪ್ರಭಾವಶಾಲಿ ಪ್ರದರ್ಶನಗಳನ್ನು ಗಮನಿಸುತ್ತಾ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾರಿ ಶಕ್ತಿಯ ಗಮನಾರ್ಹ ಭಾಗವಹಿಸುವಿಕೆಯನ್ನು ತಮ್ಮ ಸಂದೇಶದಲ್ಲಿ ಉಲ್ಲೇಖಿಸಿದರು.
ಎಕ್ಸ್ ಖಾತೆಯ ಸಂದೇಶದಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ:
"ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (ಸಿ.ಎ.ಪಿ.ಎಫ್ ಗಳು) ಮತ್ತು ರಾಜ್ಯ ಪೊಲೀಸ್ ಪಡೆಗಳು ತಮ್ಮ ಕೌಶಲ್ಯ ಮತ್ತು ಧೈರ್ಯವನ್ನು ಪ್ರದರ್ಶಿಸಲು ಏಕತಾ ಪರೇಡ್ ಒಂದು ಅದ್ಭುತ ಸಂದರ್ಭವಾಗಿದೆ. ನಮ್ಮ ನಾರಿ ಶಕ್ತಿಯ ವೈವಿದ್ಯಮಯ ಧೈರ್ಯಶಾಲಿ ಭಾಗವಹಿಸುವಿಕೆಯು ಅಷ್ಟೇ ಗಮನಾರ್ಹವಾಗಿದೆ. ಮಹಿಳಾ ಸಿಬ್ಬಂದಿ ಸಮರ ಕಲೆಗಳು ಮತ್ತು ನಿರಾಯುಧ ಯುದ್ಧ ಕವಾಯತುಗಳನ್ನು ಅತ್ಯಂತ ಯಶಸ್ವಿಯಾಗಿ ಪ್ರದರ್ಶಿಸಿದರು."
*****
(रिलीज़ आईडी: 2184958)
आगंतुक पटल : 16
इस विज्ञप्ति को इन भाषाओं में पढ़ें:
Malayalam
,
English
,
Urdu
,
Marathi
,
हिन्दी
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu